ಡಿಕಾಕ್‌ ಜೊತೆ ಜಗಳ ಡೇವಿಡ್ ವಾರ್ನರ್‌ಗೆ ದಂಡ

Posted By:
David Warner fined 75 percent of match fee for fight with co player

ಡರ್ಬನ್, ಮಾರ್ಚ್‌ 07: ದಕ್ಷಿಣ ಆಫ್ರಿಕಾದ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿಕಾಕ್ ಮೇಲೆ ಜಗಳ ಮಾಡಿ ಹಲ್ಲೆ ಮಾಡಲು ಮುಂದಾದ ಆಸ್ಟ್ರೇಲಿಯಾ ಟೆಸ್ಟ್ ತಂಡದ ಉಪನಾಯಕ ಡೇವಿಡ್‌ ವಾರ್ನರ್‌ಗೆ ಪಂದ್ಯದ 75% ಹಣವನ್ನು ದಂಡ ವಿಧಿಸಲಾಗಿದೆ.

ಇತ್ತೀಚೆಗೆ ಮುಕ್ತಾಯಗೊಂಡ ದ.ಆಫ್ರಿಕಾ, ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಂದು ಚಹಾ ವಿರಾಮದ ಸಮಯದಲ್ಲಿ ಆಸ್ಟ್ರೇಲಿಯಾದ ಉಪನಾಯಕ ಡೇವಿಡ್ ವಾರ್ನರ್‌ ಅವರು ದ.ಆಫ್ರಿಕಾದ ಬ್ಯಾಟ್ಸ್‌ಮನ್‌ ಕ್ವಿಂಟನ್ ಡಿಕಾಕ್ ಅವರನ್ನು ತೀವ್ರವಾಗಿ ಮೂದಲಿಸಿದರಲ್ಲದೆ ಅವರ ಮೇಲೆ ಹಲ್ಲೆ ನಡೆಸಲು ಮುಂದಾದರು. ಆದರೆ ಸಹ ಆಟಗಾರರು ಅವರನ್ನು ತಡೆದರು.

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು, ಆ ನಂತರ ಇಬ್ಬರು ಆಟಗಾರರ ವರ್ತನೆಗೆ ಹಿರಿಯ ಕ್ರಿಕೆಟ್ ಆಟಗಾರರಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಮ್ಯಾಚ್ ರೆಫರಿ ಕೂಡ ಘಟನೆ ಕುರಿತು ತನಿಖೆಗೆ ಆದೇಶ ನಿಡಿದ್ದರು. ಈಗ ಡೇವಿಡ್ ವಾರ್ನರ್‌ ಅವರ ತಪ್ಪಿ ಸಾಬೀತಾಗಿರುವ ಕಾರಣ ಅವರಿಗೆ ಪಂದ್ಯದ 75% ಮೊತ್ತವನ್ನು ದಂಡ ಹಾಕಲಾಗಿದೆ. ಇದರ ಜೊತೆಗೆ ಡೇವಿಡ್ ವಾರ್ನರ್‌ ಮೂರು ರೇಟಿಂಗ್ ಪಾಯಿಂಟ್‌ ಗಳನ್ನೂ ಕಳೆದುಕೊಳ್ಳಲಿದ್ದಾರೆ.

ಡಿಕಾಕ್ ಮೇಲೆ ಹಲ್ಲೆಗೆ ಮುಂದಾದ ಡೇವಿಡ್ ವಾರ್ನರ್‌

ಡೇವಿಡ್ ವಾರ್ನರ್‌ ಅವರು ತನಿಖಾ ತಂಡದ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡ ಕಾರಣ ಪಂದ್ಯದಿಂದ ಹೊರಹಾಕುವ ಶಿಕ್ಷೆಯನ್ನು ಕೈಬಿಡಲಾಗಿದೆ. ವಾರ್ನರ್‌ ಅವರು ಐಸಿಸಿಯ ಶಿಸ್ತು ನಿಯಮದ ಎರಡನೇ ಹಂತವನ್ನು ಮೀರಿದ್ದಾರೆ.

ಜಗಳದಲ್ಲಿ ಶಾಮೀಲಾಗಿದ್ದ ಮತ್ತೊಬ್ಬ ಆಟಗಾರ ದ.ಆಫ್ರಿಕಾದ ಕ್ವೆಂಟನ್ ಡಿಕಾಕ್ ಕೂಡ ಉದ್ರೇಕಕಾರಿಯಾಗಿ ಮಾತನಾಡಿರುವುದು ಕಂಡು ಬಂದಿದ್ದು, ಅವರು ಐಸಿಸಿ ಶಿಸ್ತು ನಿಯಮದ ಮೊದಲ ಮಹಂತವನ್ನು ಮೀರಿರುವ ಕಾರಣ ಅವರಿಗೆ ಎಚ್ಚರಿಕೆ ಮಾತ್ರವನ್ನೇ ನೀಡಲಾಗಿದೆ.

Story first published: Wednesday, March 7, 2018, 18:14 [IST]
Other articles published on Mar 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ