ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಟ್ಲಾದ ಅಂಗಳದಲ್ಲಿ ಮಳೆ ಮತ್ತು ರನ್ ಹೊಳೆ

ನವದೆಹಲಿ, ಮೇ 3: ದೆಹಲಿಯ ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣ ಬುಧವಾರ ರಾತ್ರಿ ಎರಡೆರಡು ಬಗೆಯ ಮಳೆಗೆ ಸಾಕ್ಷಿಯಾಯಿತು.

ಒಂದೆಡೆ ವರುಣರಾಯನ ಅಬ್ಬರದಲ್ಲಿ ಮೈದಾನ ಮತ್ತು ಪ್ರೇಕ್ಷಕರು ತೋಯ್ದು ತೊಪ್ಪೆಯಾಗಿ ನಡುಗಿದರೆ, ಇನ್ನೊಂದೆಡೆ ಬ್ಯಾಟ್ಸ್‌ಮನ್‌ಗಳು ಸುರಿಸಿದ ಬೌಂಡರಿ, ಸಿಕ್ಸರ್‌ಗಳ ಮಳೆಯಲ್ಲಿ ಮಿಂದು ಪುಳಕಿತರಾದರು. ಎರಡೂ ಮಳೆಯ ತೀವ್ರತೆ ಕೋಟ್ಲಾ ಮೈದಾನವನ್ನು ರೋಮಾಂಚನಗೊಳಿಸಿತು.

ಐಪಿಎಲ್ 2018: ರಾಜಸ್ಥಾನ್ ವಿರುದ್ಧ ಡೆಲ್ಲಿಗೆ 4 ರನ್ ಗೆಲುವು ಐಪಿಎಲ್ 2018: ರಾಜಸ್ಥಾನ್ ವಿರುದ್ಧ ಡೆಲ್ಲಿಗೆ 4 ರನ್ ಗೆಲುವು

ಈ ಪಂದ್ಯದಲ್ಲಿ ಗೆದ್ದಿದ್ದರೆ ರಾಜಸ್ಥಾನ ರಾಯಲ್ಸ್ ತಂಡದ ಪ್ಲೇ ಆಫ್ ಕನಸು ಬಲಗೊಳ್ಳುತ್ತಿತ್ತು. ಆದರೆ, ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದಡಿ ಅಚ್ಚರಿಯ ಪ್ರದರ್ಶನ ನೀಡುತ್ತಿರುವ ಡೆಲ್ಲಿ ಡೇರ್ ಡೆವಿಲ್ಸ್ ಫೀನಿಕ್ಸ್ ಹಕ್ಕಿಯಂತೆ ಎದ್ದುಬರುವ ಸೂಚನೆ ನೀಡಿದೆ. ಪಾಯಿಂಟ್ ಟೇಬಲ್‌ನಲ್ಲಿ ತಳಭಾಗದಲ್ಲಿದ್ದ ತಂಡ, ಎರಡು ಸ್ಥಾನ ಮೇಲಕ್ಕೇರಿದೆ. ಇನ್ನುಳಿದ ಪಂದ್ಯಗಳಲ್ಲಿ ಗೆದ್ದು ಪ್ಲೇ ಆಫ್ ಪ್ರವೇಶಿಸುವ ಹೋರಾಟದ ಛಲವನ್ನೂ ತೋರಿದೆ.

ಸೋಲಿನ ಸರಪಳಿ ಕಳಚಿದ ಡೆಲ್ಲಿ

ಸೋಲಿನ ಸರಪಳಿ ಕಳಚಿದ ಡೆಲ್ಲಿ

ಇತ್ತೀಚಿನ ಡೆಲ್ಲಿ ಮತ್ತು ರಾಜಸ್ಥಾನ ಮುಖಾಮುಖಿಗಳಲ್ಲಿ ಯಾವಾಗಲೂ ರಾಜಸ್ಥಾನದ ತಂಡವೇ ಗೆದ್ದು ಬೀಗುತ್ತಿತ್ತು. ಸತತ ಏಳು ಪಂದ್ಯಗಳಲ್ಲಿ ರಾಜಸ್ಥಾನ ರಾಯಲ್ಸ್ ಡೆಲ್ಲಿ ವಿರುದ್ಧ ಜಯಗಳಿಸಿದೆ. ಈ ಗೆಲುವಿನ ನಾಗಾಲೋಟಕ್ಕೆ ಕೊನೆಗೂ ಬ್ರೇಕ್ ಹಾಕುವಲ್ಲಿ ಡೆಲ್ಲಿ ತಂಡ ಸಫಲವಾಗಿದೆ.

ಐಪಿಎಲ್‌ನಲ್ಲಿ ತಂಡವೊಂದರ ವಿರುದ್ಧ ಇನ್ನೊಂದು ತಂಡ ಸತತ ಜಯ ದಾಖಲಿಸಿದ ಮಾಹಿತಿ ಇಲ್ಲಿದೆ
8 ಆರ್‌ಸಿಬಿ v ಡೆಲ್ಲಿ (2011-15)
8 ಕೆಕೆಆರ್ v ಪಂಜಾಬ್ (2014-17)
7 ಸಿಎಸ್‌ಕೆ v ಡೆಲ್ಲಿ (2012-15)
7 ರಾಜಸ್ಥಾನ v ಡೆಲ್ಲಿ (2013-2018)
ರೋಚಕ ಗೆಲುವು

ರೋಚಕ ಗೆಲುವು

ಮಳೆ ಕಾರಣ ಓವರ್‌ಗಳ ಸಂಖ್ಯೆಯನ್ನು 18ಕ್ಕೆ ಕಡಿತ ಮಾಡಲಾಗಿತ್ತು. ಡೆಲ್ಲಿ ತಂಡದ ಇನ್ನಿಂಗ್ಸ್ ಪೂರ್ಣಗೊಳ್ಳುವ ಮೊದಲೇ ಮಳೆ ಮತ್ತೆ ಕಾಟ ಕೊಟ್ಟಿದ್ದರಿಂದ ರಾಜಸ್ಥಾನ ತಂಡಕ್ಕೆ 12 ಓವರ್‌ಗಳಲ್ಲಿ 151 ರನ್‌ ಗುರಿ ನಿಡಲಾಗಿತ್ತು. ಬೃಹತ್ ಗುರಿಯನ್ನು ಬೆನ್ನಟ್ಟಿದ್ದ ರಾಜಸ್ಥಾನ ತಂಡ ಭರ್ಜರಿ ಆರಂಭವನ್ನೇ ಪಡೆದುಕೊಂಡಿತ್ತು. ಕೊನೆಯ ಎಸೆತದಲ್ಲಿ ಸಿಕ್ಸರ್ ಬಾರಿಸುವಲ್ಲಿ ಕೆ. ಗೌತಮ್ ವಿಫಲರಾದರು. ಹೀಗಾಗಿ ಗೆಲುವು ದೆಹಲಿ ಪಾಲಿಗೆ ಒಲಿಯಿತು.
ಡೆಲ್ಲಿ ತಂಡ ಅತಿ ಕಡಿಮೆ ಅಂತರದಿಂದ ಸೋತ ಪಂದ್ಯಗಳ ಮಾಹಿತಿ
1 v ರಾಜಸ್ಥಾನ, ದೆಹಲಿ, 2012
4 v ಹೈದರಾಬಾದ್, ವಿಶಾಖಪಟ್ಟಣ, 2015
4 v ರಾಜಸ್ಥಾನ, ದೆಹಲಿ, 2018 (ಬುಧವಾರದ ಪಂದ್ಯದಲ್ಲಿ)
7 v ಪುಣೆ ಸೂಪರ್ ಜೈಂಟ್ಸ್, ದೆಹಲಿ, 2017

ಬಟ್ಲರ್‌ಗೆ ಕೊನೆಗೂ ಸಿಕ್ಕಿದ ಬಡ್ತಿ

ಬಟ್ಲರ್‌ಗೆ ಕೊನೆಗೂ ಸಿಕ್ಕಿದ ಬಡ್ತಿ

ಕಳೆದ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡಿದ್ದ ಜೋಸ್ ಬಟ್ಲರ್, 153.67ರ ಸ್ಟ್ರೈಕ್‌ರೇಟ್‌ನಲ್ಲಿ 272 ರನ್‌ ಗಳಿಸಿದ್ದರು. ಆದರೆ, ರಾಜಸ್ಥಾನ ತಂಡದಲ್ಲಿ ಆರಂಭಿಕ ಆಟಗಾರರ ದಂಡೇ ಇದೆ. ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್, ರಾಹುಲ್ ತ್ರಿಪಾಠಿ, ಡಿ ಆರ್ಸಿ ಶಾರ್ಟ್ ನಡುವೆ ಪೈಪೋಟಿ ಇದೆ. ಆದರೆ ಮಧ್ಯಮ ಕ್ರಮಾಂಕದಲ್ಲಿ ಅಂತಹ ಸಮರ್ಥ ಬ್ಯಾಟ್ಸ್‌ಮನ್‌ಗಳಿಲ್ಲ. ಬೆನ್ ಸ್ಟೋಕ್ಸ್ ಮಾತ್ರ ಇದ್ದಾರೆ. ಬಟ್ಲರ್ ಮಧ್ಯಮ ಕ್ರಮಾಂಕದಲ್ಲೇ ಹೆಚ್ಚು ಆಡಿರುವುದರಿಂದ ಆ ಸ್ಥಾನದಲ್ಲಿ ಅವರ ಆಟ ಅಗತ್ಯವಾಗಿತ್ತು. ಆದರೆ, ಬಟ್ಲರ್ ಐಪಿಎಲ್‌ನ ಇದುವರೆಗಿನ ಪಂದ್ಯಗಳಲ್ಲಿ ಅಬ್ಬರಿಸಿರಲಿಲ್ಲ. ಡೆಲ್ಲಿ ವಿರುದ್ಧ ಅವರನ್ನು ಆರಂಭಿಕರಾಗಿ ಕಳುಹಿಸಿದ್ದು ಯಶಸ್ವಿಯಾಯಿತು.

ಕೈಕೊಟ್ಟ ಮ್ಯಾಕ್ಸ್‌ವೆಲ್‌

ಕೈಕೊಟ್ಟ ಮ್ಯಾಕ್ಸ್‌ವೆಲ್‌

ರಾಜಸ್ಥಾನ ತಂಡಕ್ಕೆ 18 ಎಸೆತಗಳಲ್ಲಿ 52 ರನ್ ಬೇಕಿದ್ದಾಗ ಡೆಲ್ಲಿ ನಾಯಕ ಶ್ರೇಯಸ್ ಅಯ್ಯರ್‌, ಚೆಂಡನ್ನು ಪಾರ್ಟ್‌ ಟೈಮ್‌ ಬೌಲರ್ ಮ್ಯಾಕ್ಸ್‌ವೆಲ್ ಕೈಗಿತ್ತರು. ಶಹಬಾಜ್ ನದೀಮ್, ವಿಜಯ್ ಶಂಕರ್‌ ಅವರ ಬೌಲಿಂಗ್ ಆಯ್ಕೆಗಳಿದ್ದರೂ ಶ್ರೇಯಸ್ ಎಡವಿದ್ದರು. ಮ್ಯಾಕ್ಸ್‌ವೆಲ್‌ ಎಸೆದ ಮೊದಲ ಮೂರೂ ಎಸೆತಗಳನ್ನು ಶಾರ್ಟ್ ಸಿಕ್ಸರ್ ಬಾರಿಸಿದರು. ನಾಲ್ಕನೆಯ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಆರಂಭದಲ್ಲಿ ಸ್ಪಿನ್ನರ್‌ಗಳನ್ನು ಎದುರಿಸಲು ತಿಣುಕಾಡಿದ ಶಾರ್ಟ್ ಕೊನೆಯಲ್ಲಿ ರನ್ ಗಳಿಸಿದರು. ಬಟ್ಲರ್‌ಗೆ ಜತೆಯಾಗಿ ಅವರೂ ವೇಗದಿಂದ ರನ್ ಗಳಿಸಿದ್ದರೆ ರಾಜಸ್ಥಾನಕ್ಕೆ ಗೆಲುವು ಸಾಧ್ಯವಿತ್ತು.

ಟಿ20 ತಜ್ಞ ಎಂದೇ ಹೆಸರಾಗಿರುವ ಶಾರ್ಟ್, ಬಿಗ್‌ಬ್ಯಾಶ್ ಲೀಗ್‌ನಲ್ಲಿ 148.57ರ ಸ್ಟ್ರೈಕ್‌ ರೇಟ್‌ ಹೊಂದಿರುವವರು. ಮಾತ್ರವಲ್ಲ, ಆಸ್ಟ್ರೇಲಿಯಾ ಪರ ಆಡಿದ ಟಿ20 ಕ್ರಿಕೆಟ್‌ನಲ್ಲಿ 5 ಪಂದ್ಯಗಳಲ್ಲಿ 2 ಅರ್ಧಶತಕ 2 ಥರ್ಟಿಗಳನ್ನು ಸಿಡಿಸಿದ್ದಾರೆ. ಆದರೆ, ರಾಜಸ್ಥಾನದ ಪರ ಆಡಿದ ಮೊದಲ 5 ಪಂದ್ಯದಲ್ಲಿ ಗಳಿಸಿದ್ದು ಕೇವಲ 40ರನ್. ಅದೂ 75.80ರ ಸ್ಟ್ರೈಕ್‌ ರೇಟ್‌ನಲ್ಲಿ.

ಭರವಸೆಯ ಯುವ ಆಟಗಾರರು

ಭರವಸೆಯ ಯುವ ಆಟಗಾರರು

ಅಂಡರ್ 19 ತಂಡದಲ್ಲಿ ಆಡುತ್ತಿದ್ದಾಗಿನಿಂದಲೂ ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿರುವ ವಿಕೆಟ್ ಕೀಪರ್ ರಿಷಬ್ ಪಂತ್ ಬ್ಯಾಟಿಂಗ್ ಕ್ರಿಕೆಟ್ ಪ್ರಿಯರನ್ನು ಮೋಡಿ ಮಾಡಿದೆ. ಹಿರಿಯರ ತಂಡ ಸೇರಿಕೊಳ್ಳಲು ಇದಕ್ಕಿಂತ ಇನ್ನೇನು ಪ್ರದರ್ಶನ ನೀಡಬೇಕು ಎಂಬಂತೆ ಆಡುತ್ತಿದ್ದಾರೆ. ರಣಜಿಯಲ್ಲೀ ಪಂತ್ ಆಟ ಗಮನ ಸೆಳೆದಿತ್ತು. ಭಾರತ ತಂಡದಲ್ಲಿ ಈಗಾಗಲೇ ಕೆಲವು ಪಂದ್ಯಗಳನ್ನು ಆಡಿರುವ ಶ್ರೇಯಸ್ ಅಯ್ಯರ್ ಕೂಡ ಅಬ್ಬರಿಸುತ್ತಿದ್ದಾರೆ. ಭಾರತಕ್ಕೆ ಕಿರಿಯರ ವಿಶ್ವಕಪ್ ಟ್ರೋಫಿ ತಂದುಕೊಟ್ಟ ನಾಯಕ ಪೃಥ್ವಿ ಶಾ ಯಾವ ರೀತಿ ಬ್ಯಾಟ್ ಬೀಸಬಲ್ಲೆ ಎಂಬುದನ್ನು ತೋರಿಸಿದ್ದಾರೆ. ಈ ಮೂರು ಆಟಗಾರರ ಶಕ್ತಿ ಡೆಲ್ಲಿ ತಂಡಕ್ಕೆ ಬಲ ತುಂಬಿರುವುದು ನಿಜ.

Story first published: Thursday, May 3, 2018, 10:46 [IST]
Other articles published on May 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X