ಮಡದಿಗಾಗಿ ಡಾನ್ಸ್ ಮಾಡಿದ ಮಹೇಂದ್ರ ಸಿಂಗ್ ಧೋನಿ

Posted By:

ನವೆಂಬರ್ 10 : ಮಹೇಂದ್ರ ಸಿಂಗ್ ಧೋನಿ ತಮ್ಮ ವಿಕೇಟ್ ಕೀಪಿಂಗ್, ಬ್ಯಾಂಟಿಂಗ್ ನಿಂದ ಚಿರಪರಿಚಿತರು. ಆದರೆ ಅವರಿಗೆ ಡಾನ್ಸ್ ಮಾಡಲೂ ಬರುತ್ತದೆಂದರೆ ನಂಬುತ್ತೀರಾ, ಇಲ್ಲವಾದರೆ ಈ ವಿಡಿಯೋ ನೋಡಿ.

ಕ್ರಿಕೆಟಿಗ ಧೋನಿ ಮಡದಿ ಸಾಕ್ಷಿ ಸಿಂಗ್ ಗಾಗಿ ಡಾನ್ಸ್ ಮಾಡಿರುವ ವಿಡಿಯೊ ಟ್ವಿಟರ್ ನಲ್ಲಿ ಹರಿದಾಡುತ್ತಿದ್ದೆ. ಹಿಂದಿ ಹಾಡಿಗೆ ಕ್ಯೂಟ್ ಆಗಿ ಹೆಜ್ಜೆ ಹಾಕಿರುವ ಧೋನಿ. ಮಡದಿ ಸಾಕ್ಷಿಯನ್ನು ನಕ್ಕು ನಗಿಸಿದ್ದಾರೆ.

ನ್ಯೂಜಿಲೆಂಡ್ ಆಟಗಾರರೊಂದಿಗೆ ಧೋನಿ 'ಲೆಗ್ ವಾಲಿಬಾಲ್'

Dhoni dance for his wife Sakshi

ವಿಡಿಯೋದಲ್ಲಿ ಧೋನಿ "ಝಕ್ ಮಾರ್ ಕೆ' ಎಂಬ ಹಾಡಿಗೆ ಧೊನಿ ಕುಣಿಯುತ್ತಿದ್ದಾರೆ. ಇದು 2012 ರಲ್ಲಿ ಬಿಡುಗಡೆ ಆಗಿದ್ದ 'ದೇಸಿ ಬಾಯ್ಸ್' ಸಿನಿಮಾದ ಹಾಡು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ದೀಪಿಕಾ ಪಡುಕೋಣೆ, ಜಾನ್ ಅಬ್ರಹಾಂ, ಚಿತ್ರಾಂಗದಾ ಅಭಿನಯಿಸಿದ್ದರು. ಚಿತ್ರವನ್ನು ರೋಹಿತ್ ದವನ್ ನಿರ್ದೇಶಿಸಿದ್ದರು.

ಕ್ರಿಕೆಟ್ ಅಂಗಳದಲ್ಲಿ ಸದಾ ಗಂಭೀರವಾಗಿರುವ ಧೋನಿ ಅಂಗಳದ ಹೊರಗೆ ಫನ್ನಿ ವ್ಯಕ್ತಿ ಎಂಬುದನ್ನು ಈ ವಿಡಿಯೊ ಸಾರಿ ಹೇಳುತ್ತಿದೆ. ಅದಷ್ಟೆ ಅಲ್ಲ ಸಾಕ್ಷಿಗಾಗಿ ಡಾನ್ಸ್ ಮಾಡಿರುವ ಧೋನಿ ಪತ್ನಿಯನ್ನು ಪ್ರೀತಿಸುವ ಗಂಡ ಎಂಬುದನ್ನು ಸಾಬೀತು ಮಾಡಿದ್ದಾರೆ ಕೂಡ.

ಎರಡು ನಿಮಿಷದ ಈ ವಿಡಿಯೋನಲ್ಲಿ ಸಾಕ್ಷಿ ಅವರನ್ನು ಮುಂದೆ ಕುಡಿಸಿಕೊಂಡು ಧೋನಿ ಕುಣಿದಿದ್ದಾರೆ. ಧೋನಿ ಡಾನ್ಸ್ ನೋಡಿ ಸಾಕ್ಷಿ ಬಿದ್ದು ಬಿದ್ದು ನಗುತ್ತಾರೆ.
ಧೋನಿ ಡಾನ್ಸ್ ಮಾಡಿರುವುದು ಇದೇ ಮೊದಲಲ್ಲ. ಈ ಮುಂಚೆ ಶಾರುಖ್ ಖಾನ್ ನಿರೂಪಿಸುತಿದ್ದ ಕಾರ್ಯಕ್ರಮವೊಂದರಲ್ಲಿ ಧೋನಿ ಅವರು ಕುಣಿಯಲು ಪ್ರಯತ್ನಿಸಿದ್ದರು. ಇತ್ತೀಚೆಗೆ ಪ್ರಸಾರವಾದ ಜಾಹಿರಾತೊಂದರಲ್ಲಿ ಧೋನಿ ಅವರು ಭಾರತದ ಮೈಕೆಲ್ ಜಾಕ್ಸನ್ ಎಂದೇ ಕರೆಸಿಕೊಳ್ಳುವ ಪ್ರಭುದೇವಾ ಅವರೊಂದಿಗೆ ಹೆಜ್ಜೆ ಹಾಕಿದ್ದರು.

Story first published: Friday, November 10, 2017, 13:53 [IST]
Other articles published on Nov 10, 2017
Please Wait while comments are loading...