ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಿಮುತ್ ಕರುಣರತ್ನೆ ದಾಖಲೆ: ಜಯಸೂರ್ಯ ದಾಖಲೆ ಮುರಿಯಲು ಇನ್ನೊಂದೇ ಹೆಜ್ಜೆ!

Dimuth karunaratne

ಶ್ರೀಲಂಕಾದ ಟೆಸ್ಟ್ ಕ್ರಿಕೆಟ್ ತಂಡದ ನಾಯಕ, ಆರಂಭಿಕ ಬ್ಯಾಟ್ಸ್‌ಮನ್ ದಿಮುತ್ ಕರುಣರತ್ನೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಶ್ರೀಲಂಕಾದ ಪರ ಹೊಸ ದಾಖಲೆ ಮಾಡಿದ್ದು, ಲಂಕಾ ಪರ ಅತಿ ಹೆಚ್ಚು ಕಲೆಹಾಕಿದ ಎರಡನೇ ಓಪನರ್ ಎಂಬ ಸಾಧನೆ ಮಾಡಿದ್ದಾರೆ. ಈ ಮೂಲಕ ಶ್ರೀಲಂಕಾದ ಮಾಜಿ ಆಟಗಾರ ಮಾರ್ವನ್ ಅಟಪಟ್ಟು ದಾಖಲೆಯನ್ನ ಮುರಿದಿದ್ದಾರೆ.

ಕರುಣರತ್ನೆ ಲಂಕಾದ ದಿಗ್ಗಜ ಬ್ಯಾಟ್ಸ್‌ಮನ್ ಸನತ್ ಜಯಸೂರ್ಯರ ದಾಖಲೆಯನ್ನ ಮುರಿಯಲು ಕೇವಲ 558 ರನ್‌ಗಳಷ್ಟೇ ಬಾಕಿ ಇದೆ. ಸದ್ಯ ಸನತ್ ಜಯಸೂರ್ಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

2012 ರಲ್ಲಿ ತನ್ನ ಚೊಚ್ಚಲ ಟೆಸ್ಟ್‌ ಪಂದ್ಯವನ್ನಾಡಿದ ದಿಮುತ್ ಟೆಸ್ಟ್ ಮ್ಯಾಚ್ ಸ್ಪೆಷಲಿಸ್ಟ್ ಬ್ಯಾಟರ್ ಆಗಿ ಕಾಣಿಸಿಕೊಂಡರು. ಕರುಣರತ್ನೆ ಇದುವರೆಗೂ 13 ಶತಕಗಳನ್ನು ದಾಖಲಿಸಿದ್ದು, ಒಟ್ಟಾರೆ ಶತಕ ಗಳಿಸಿದ ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದ್ದಾರೆ. ಸನತ್ ಜಯಸೂರ್ಯ ಮತ್ತು ತಿಲನ್ ಸಮರವೀರ ಅವರ 14 ಬಾರಿ ಶತಕ ಸಿಡಿಸಿದ್ದು, ಆ ಮೊತ್ತವನ್ನು ಹಿಂದಿಕ್ಕಲು ಅವರು ಎರಡು ಶತಕದಿಂದ ದೂರದಲ್ಲಿದ್ದಾರೆ.

ದಿಮುತ್ ತನ್ನ ಎಲ್ಲಾ 13 ಶತಕಗಳನ್ನು ಆರಂಭಿಕರಾಗಿ ಸಿಡಿಸಿದ್ದು, ಜಯಸೂರ್ಯ ಅವರೊಂದಿಗಿನ ದಾಖಲೆ ಸರಿಗಟ್ಟಿದ್ದಾರೆ ಮತ್ತುಪಟ್ಟಿಯಲ್ಲಿನ ನಂಬರ್ ಒನ್ ಬ್ಯಾಟರ್ ಮಾರ್ವನ್ ಅಟಪಟ್ಟು ಅವರ ಹೆಸರಿನಲ್ಲಿರುವ 16 ಶತಕಗಳಿಗಿಂತ ಕೇವಲ 4 ಸ್ಥಾನ ಹಿಂದಿದ್ದಾರೆ.

ಶ್ರೀಲಂಕಾ ಪರ ಓಪನರ್ ಆಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರು

ಶ್ರೀಲಂಕಾ ಪರ ಓಪನರ್ ಆಗಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರರು

1) ಸನತ್ ಜಯಸೂರ್ಯ 90 ಪಂದ್ಯಗಳು 152 ಇನ್ನಿಂಗ್ಸ್‌ನಲ್ಲಿ 41.48 ಬ್ಯಾಟಿಂಗ್ ಸರಾಸರಿಯಲ್ಲಿ 5932 ರನ್‌ ಗಳಿಸಿದ್ದು, 13 ಶತಕ ಮತ್ತು 25 ಅರ್ಧಶತಕ ದಾಖಲಿಸಿದ್ದಾರೆ.

2) ದಿಮುತ್ ಕರುಣರತ್ನೆ 72 ಪಂದ್ಯಗಳು 137 ಇನ್ನಿಂಗ್ಸ್‌ನಲ್ಲಿ 40.71ರ ಬ್ಯಾಟಿಂಗ್ ಸರಾಸರಿಯಲ್ಲಿ 5374 ರನ್‌ಗಳಿಸಿದ್ದು, 13 ಶತಕ ಮತ್ತು 27 ಅರ್ಧಶತಕ ದಾಖಲಿಸಿದ್ದಾರೆ.

3) ಮಾರ್ವನ್ ಅಟಪಟ್ಟು 79 ಪಂದ್ಯಗಳು 136 ಇನ್ನಿಂಗ್ಸ್‌ನಲ್ಲಿ 43.22ರ ಬ್ಯಾಟಿಂಗ್ ಸರಾಸರಿಯಲ್ಲಿ 5317 ರನ್‌ಗಳಿಸಿದ್ದು, 16 ಶತಕ ಮತ್ತು 17 ಅರ್ಧಶತಕ ದಾಖಲಿಸಿದ್ದಾರೆ.

2021ರ ಕ್ಯಾಲೆಂಡರ್ ಇಯರ್‌ನಲ್ಲಿ ಅತಿ ಹೆಚ್ಚು ರನ್

2021ರ ಕ್ಯಾಲೆಂಡರ್ ಇಯರ್‌ನಲ್ಲಿ ಅತಿ ಹೆಚ್ಚು ರನ್

ಪ್ರಸಕ್ತ ಕ್ಯಾಲೆಂಡರ್ ವರ್ಷದಲ್ಲಿ ದಿಮುತ್ ಕರುಣರತ್ನೆ ಅದ್ಭುತವಾಗಿ ಬ್ಯಾಟ್ ಬೀಸಿದ್ದಾರೆ. ಅವರು ಈ ವರ್ಷ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ಕಲೆಹಾಕರಿಉವ ಜೋ ರೂಟ್ (1455) ಮತ್ತು ಭಾರತದ ರೋಹಿತ್ ಶರ್ಮಾ (906) ನಂತರ 854 ರನ್‌ಗಳೊಂದಿಗೆ ಕೇವಲ ಮೂರನೇ ಸ್ಥಾನದಲ್ಲಿದ್ದಾರೆ.

ಈ ವರ್ಷ ಶತಕಗಳ ಬಗ್ಗೆ ನೋಡುವುದಾದ್ರೆ, ಜೋ ರೂಟ್ 6 ಬಾರಿ ಮೂರಂಕಿ ದಾಟಿದ್ರೆ, ಕರುಣರತ್ನೆ 4 ಬಾರಿ ಶತಕ ಗಳಿಸಿದ್ದಾರೆ ಮತ್ತು ಇಂಗ್ಲೆಂಡ್ ನಾಯಕನ ನಂತರ ಎರಡನೇ ಸ್ಥಾನದಲ್ಲಿದ್ದಾರೆ. 2021 ರಲ್ಲಿ ಟೆಸ್ಟ್ ಪಂದ್ಯಗಳಲ್ಲಿ ಏಳು ಬಾರಿ 50+ ಸ್ಕೋರ್‌ಗಳನ್ನು ಸಿಡಿಸಿದ್ದಕ್ಕಾಗಿ ದಿಮುತ್, ಜೋ ರೂಟ್ ಜೊತೆ ಜಂಟಿ ಅಗ್ರಸ್ಥಾನದಲ್ಲಿದ್ದಾರೆ.

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್: ಶುಭ್ಮನ್, ಶ್ರೇಯಸ್, ಜಡ್ಡು ಅರ್ಧಶತಕ, ಮೊದಲ ದಿನಕ್ಕೆ ಭಾರತ 258/4

2021ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 50+ ರನ್‌ಗಳಿಸಿದ ಆಟಗಾರರು

2021ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು 50+ ರನ್‌ಗಳಿಸಿದ ಆಟಗಾರರು

1) ದಿಮುತ್ ಕರುಣರತ್ನೆ 6 ಪಂದ್ಯ 11 ಇನ್ನಿಂಗ್ಸ್‌ನಲ್ಲಿ 77.63ರ ಬ್ಯಾಟಿಂಗ್ ಸರಾಸರಿಯಲ್ಲಿ 854ರನ್ ಕಲೆಹಾಕಿದ್ದು, 4 ಶತಕ ಮತ್ತು 7 ಬಾರಿ 50ಕ್ಕೂ ಅಧಿಕ ರನ್‌ಗಳಿಸಿದ್ದಾರೆ.

2) ಜೋ ರೂಟ್ 12 ಪಂದ್ಯ 23 ಇನ್ನಿಂಗ್ಸ್‌ನಲ್ಲಿ 66.13ರ ಬ್ಯಾಟಿಂಗ್ ಸರಾಸರಿಯಲ್ಲಿ 1455ರನ್ ಕಲೆಹಾಕಿದ್ದು, 6 ಶತಕ ಮತ್ತು 7 ಬಾರಿ 50ಕ್ಕೂ ಅಧಿಕ ರನ್‌ಗಳಿಸಿದ್ದಾರೆ.

3) ರಿಷಭ್ ಪಂತ್ 11 ಪಂದ್ಯ 19 ಇನ್ನಿಂಗ್ಸ್‌ನಲ್ಲಿ 41.52ರ ಬ್ಯಾಟಿಂಗ್ ಸರಾಸರಿಯಲ್ಲಿ 706 ರನ್ ಕಲೆಹಾಕಿದ್ದು, 1 ಶತಕ ಮತ್ತು 6 ಬಾರಿ 50ಕ್ಕೂ ಅಧಿಕ ರನ್‌ ದಾಖಲಿಸಿದ್ದಾರೆ.

4) ಚೇತೇಶ್ವರ ಪೂಜಾರ 12 ಪಂದ್ಯ 21 ಇನ್ನಿಂಗ್ಸ್‌ನಲ್ಲಿ 30.85ರ ಬ್ಯಾಟಿಂಗ್ ಸರಾಸರಿಯಲ್ಲಿ 612 ರನ್ ಕಲೆಹಾಕಿದ್ದು, 6 ಬಾರಿ 50ಕ್ಕೂ ಅಧಿಕ ರನ್‌ ದಾಖಲಿಸಿದ್ದಾರೆ.

5) ರೋಹಿತ್ ಶರ್ಮಾ 11 ಪಂದ್ಯ 21 ಇನ್ನಿಂಗ್ಸ್‌ನಲ್ಲಿ 47.68ರ ಬ್ಯಾಟಿಂಗ್ ಸರಾಸರಿಯಲ್ಲಿ 906 ರನ್ ಕಲೆಹಾಕಿದ್ದು, 2 ಶತಕ ಮತ್ತು 6 ಬಾರಿ 50ಕ್ಕೂ ಅಧಿಕ ರನ್‌ಗಳಿಸಿದ್ದಾರೆ.

Team India ಮೊದಲನೇ ದಿನದಾಟದಲ್ಲಿ ಹೆಚ್ಚು ಸದ್ದು ಮಾಡಿದ್ದು ಈತನೇ | Oneindia Kannada
 ಓಪನರ್ ಆಗಿ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿರುವ ಕರುಣರತ್ನೆ

ಓಪನರ್ ಆಗಿ ಉತ್ತಮ ಬ್ಯಾಟಿಂಗ್ ಸರಾಸರಿ ಹೊಂದಿರುವ ಕರುಣರತ್ನೆ

ಆರಂಭಿಕರಾಗಿ ದಿಮುತ್ ಕರುಣರತ್ನೆ ಅವರು ಕನಿಷ್ಠ 30 ಟೆಸ್ಟ್‌ಗಳನ್ನು ಆಡಿರುವ ಬ್ಯಾಟ್ಸ್‌ಮನ್‌ಗಳ ಪೈಕಿಯ್ಲಿ ಮೂರನೇ ಅತ್ಯುತ್ತಮ ಬ್ಯಾಟಿಂಗ್ ಸರಾಸರಿ (40.71) ಹೊಂದಿದ್ದಾರೆ. ಲಂಕಾದ ಶ್ರೇಷ್ಠರಾದ ಸನತ್ ಜಯಸೂರ್ಯ ಮತ್ತು ಮರ್ವನ್ ಅಟಪಟ್ಟು ಅವರ ನಂತರ ಉತ್ತಮ ಬ್ಯಾಟಿಂಗ್ ಸರಾಸರಿ ಇದೆ.

ಶ್ರೀಲಂಕಾದ ನಾಯಕ ಕೆರಿಬಿಯನ್ ತಂಡದ ವಿರುದ್ಧದ ಎರಡನೇ ಟೆಸ್ಟ್‌ನಲ್ಲೂ ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಲು ಎದುರು ನೋಡುತ್ತಿದ್ದು, ಈ ವರ್ಷವನ್ನ ಉನ್ನತ ಮಟ್ಟದಲ್ಲಿ ಮುಗಿಸಲು ಬಯಸುತ್ತಿದ್ದಾರೆ. ಶ್ರೀಲಂಕಾದ ವೆಸ್ಟ್‌ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 187 ರನ್‌ಗಳಿಂದ ಜಯಗಳಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

Story first published: Thursday, November 25, 2021, 18:49 [IST]
Other articles published on Nov 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X