ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಶಾಂತ್ ಶರ್ಮಾ ಮೇಲೆ ಹಗೆಯಿಲ್ಲ, ಆತ ನನ್ನ ಸಹೋದರನಂತೆ: ಸಾಮಿ

Dont hold a grudge against Ishant Sharma: Daren Sammy

ಚೆನ್ನೈ: ಟೀಮ್ ಇಂಡಿಯಾದ ವೇಗಿ ಇಶಾಂತ್ ಶರ್ಮಾ ಮೇಲೆ ನನಗೆ ಹಗೆಯಿಲ್ಲ. ಆತ ನನ್ನ ಸಹೋದರನಿದ್ದಂತೆ ಎಂದು ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರೆನ್ ಸಾಮಿ ಹೇಳಿದ್ದಾರೆ. ತನ್ನ ವಿರುದ್ಧ ಇಶಾಂತ್ ಜನಾಂಗೀಯ ನಿಂದನೆ ಮಾಡಿದ್ದರು ಎಂದು ಆರೋಪಿಸಿದ್ದ ಸಾಮಿ ಈಗ ಈ ಹೇಳಿಕೆ ನೀಡಿದ್ದಾರೆ.

 ಐಪಿಎಲ್: ಎಲ್ಲಾ ಆವೃತ್ತಿಗಳಲ್ಲಿ ಆರೆಂಜ್‌ ಕ್ಯಾಪ್ ಗೆದ್ದವರ ಸಂಪೂರ್ಣ ಪಟ್ಟಿ ಐಪಿಎಲ್: ಎಲ್ಲಾ ಆವೃತ್ತಿಗಳಲ್ಲಿ ಆರೆಂಜ್‌ ಕ್ಯಾಪ್ ಗೆದ್ದವರ ಸಂಪೂರ್ಣ ಪಟ್ಟಿ

ಕುತ್ತಿಗೆಗೆ ಕಾಲಿನಿಂದ ಒತ್ತಿ ಹಿಡಿಯುವ ಮೂಲಕ ಜಾರ್ಜ್ ಫ್ಲಾಯ್ಡ್ ಎನ್ನುವ ಕರಿಯ ವ್ಯಕ್ತಿಯ ಸಾವಿಗೆ ಅಮೆರಿಕಾದ ಬಿಳಿಯ ಪೊಲೀಸ್ ಒಬ್ಬ ಕಾರಣನಾಗಿದ್ದ. ಈ ಘಟನೆ ನಡೆದ ಬಳಿಕ ವಿಶ್ವದಾದ್ಯಂತ ಜನಾಂಗೀಯ ನಿಂದನೆ, ವರ್ಣಭೇದ ನೀತಿಯ ವಿರುದ್ಧ ಪ್ರತಿಭಟನೆ ವ್ಯಕ್ತವಾಗಿತ್ತು.

ಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆಮತ್ತೆ ಕ್ರಿಕೆಟ್ ಅಂಗಳಕ್ಕೆ ಸಿಕ್ಸರ್ ಕಿಂಗ್ ಯುವಿ! : ಬಿಗ್‌ಬ್ಯಾಷ್ ಲೀಗ್‌ನಲ್ಲಿ ಪಾಲ್ಗೊಳ್ಳುವ ಸಾಧ್ಯತೆ

#BlackLivesMatter ಎನ್ನುವ ಹ್ಯಾಷ್ ಟ್ಯಾಗ್ ಅಡಿಯಲ್ಲಿ ವರ್ಣಭೇದದ ವಿರುದ್ಧ ಕೂಗು ಕೇಳಿಬಂದಿತ್ತು. ಈ ವೇಳೆ ಡ್ಯಾರೆನ್ ಸಾಮಿ ಕೂಡ ತಾನೂ ವರ್ಣಭೇದ ನೀತಿಯನ್ನು ಎದುರಿಸಿದ್ದಾಗಿ ಹೇಳಿಕೊಂಡಿದ್ದರು. 2013-14ರ ಐಪಿಎಲ್‌ನಲ್ಲಿ ಸನ್ ರೈಸರ್ಸ್ ಪರ ಆಡುವಾಗ ಸಹ ಆಟಗಾರ ಇಶಾಂತ್ ಶರ್ಮಾ ನನ್ನನ್ನು ಕಾಲು (ಕರಿಯ) ಎಂದಿದ್ದ ಎಂದು ಸಾಮಿ ಆರೋಪಿಸಿದ್ದರು.

ಐಪಿಎಲ್ 2020: ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ!ಐಪಿಎಲ್ 2020: ಎಲ್ಲಾ ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಪ್ರಕಟ!

'ನಾನು ಇಶಾಂತ್ ಜೊತೆ ಮಾತನಾಡಿದ್ದೇನೆ. ಆತನ ಮೇಲೆ ನಾನು ಯಾವುದೇ ಹಗೆ ಇಟ್ಟುಕೊಳ್ಳಲಾರೆ. ಆತ ನನ್ನ ಸಹೋದರನಿದ್ದಂತೆ. ಆದರೆ ಮುಂದೆ ನನ್ನ ಅಥವಾ ಬೇರೆಯವರ ವಿರುದ್ಧ ಇಂಥದ್ದೇ ಜನಾಂಗೀಯ ಕಾಮೆಂಟ್‌ಗಳು ಬಂದರೆ ಎದುರು ಬಂದು ಅದಕ್ಕೆ ಸ್ಪಷ್ಟನೆ ಕೇಳೋದು ಬುದ್ಧಿವಂತಿಕೆ ಎನ್ನುತ್ತೇನೆ,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡಿದ ಸ್ಯಾಮಿ ಹೇಳಿದ್ದಾರೆ.

Story first published: Wednesday, September 9, 2020, 14:19 [IST]
Other articles published on Sep 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X