ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ CEO ಸ್ಥಾನದಿಂದ ಕೆಳಗಿಳಿದ ಟಾಮ್ ಹ್ಯಾರಿಸನ್

ECB CEO Tom Harrison

ಇಂಗ್ಲೆಂಡ್ ಮತ್ತು ವೇಲ್ಸ್‌ ಕ್ರಿಕೆಟ್ ಬೋರ್ಡ್ ಸಿಇಒ ಆಗಿ ದೀರ್ಘಕಾಲದಿಂದ ಸೇವೆ ಸಲ್ಲಿಸಿದ್ದ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ಟಾಮ್ ಹ್ಯಾರಿಸನ್ ತನ್ನ ಸ್ಥಾನದಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.

ಸುಮಾರು ಏಳು ವರ್ಷಗಳ ಕಾಲ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ನ ಸಿಇಒ ಆಗಿದ್ದ ಟಾಮ್ ಹ್ಯಾರಿಸನ್ ಜೂನ್ ತಿಂಗಳಿನಲ್ಲಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಇಂಗ್ಲೆಂಡನ್‌ ಮಾಜಿ ಕ್ರಿಕೆಟ್ ನಾಯಕ ಕ್ಲೇರ್ ಕಾನರ್ ಮುಂದಿನ ಸಿಇಒ ಆಯ್ಕೆಯಾಗುವವರೆಗೂ ಹಂಗಾಮಿ ಸಿಇಒ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ: ಟೀಂ ಇಂಡಿಯಾಗೆ ದಿನೇಶ್ ಕಾರ್ತಿಕ್, ತಿಲಕ್ ವರ್ಮಾ ಆಯ್ಕೆ ಸಾಧ್ಯತೆದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿ: ಟೀಂ ಇಂಡಿಯಾಗೆ ದಿನೇಶ್ ಕಾರ್ತಿಕ್, ತಿಲಕ್ ವರ್ಮಾ ಆಯ್ಕೆ ಸಾಧ್ಯತೆ

45 ವರ್ಷದ ಕ್ಲೇನ್ ಕಾನರ್ ಇಂಗ್ಲೆಂಡ್ ಪರ 16 ಟೆಸ್ಟ್ ಪಂದ್ಯ, 93 ಏಕದಿನ ಪಂದ್ಯಗಳು ಮತ್ತು ಎರಡು ಮಹಿಳಾ ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 1995 ರಿಂದ 2005ರವರೆಗೆ ಒಂದು ದಶಕಗಳ ಕಾಲ ಕ್ರಿಕೆಟ್‌ ವೃತ್ತಿ ಜೀವನವನ್ನು ಹೊಂದಿದ್ದಾರೆ.

ಪ್ರಸ್ತುತ ಕಾನರ್ ಮಹಿಳಾ ಕ್ರಿಕೆಟ್‌ನ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಕಳೆದ ವರ್ಷ ಎಂಸಿಸಿಯ ಮೊದಲ ಮಹಿಳಾ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.

ಇಸಿಬಿ ಪ್ರಮುಖ ನಾಯಕತ್ವದ ಬದಲಾವಣೆ ಒಳಗಾಗುವುದರ ಜೊತೆಗೆ ಈಗ, ಸಿಇಒ ಹ್ಯಾರಿಸನ್ ಕೆಳಗಿಳಿಯುವ ನಿರ್ಧಾರವು ಆಶ್ಚರ್ಯಕ್ಕೆ ಕಾರಣವಾಗಿದೆ. ಕಳೆದ ವರ್ಷ ಪಾಕಿಸ್ತಾನ ಪ್ರವಾಸದಿಂದ ಹಿಂದೆ ಸರಿಯುವ ಇಂಗ್ಲೆಂಡ್ ತಂಡದ ನಿರ್ಧಾರದ ಸಮಯದಲ್ಲಿ ಯಾರ್ಕ್‌ಷೈರ್ ವರ್ಣಭೇದ ನೀತಿ ವಿವಾದದಲ್ಲಿ ಅವರ ಪಾತ್ರವು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಸ್ಕ್ಯಾನರ್‌ಗೆ ಒಳಪಟ್ಟಿತ್ತು.

Rohit Sharma ಬೇಜಾರಾಗಿದ್ದು ಇದೇ ಕಾರಣಕ್ಕೆ | Oneindia Kannada

ಜನವರಿ 2015 ರಲ್ಲಿ CEO ಆದ ನಂತರ, ಹ್ಯಾರಿಸನ್ ಎಲ್ಲಾ ಹಂತಗಳಲ್ಲಿ ಆಟದಾದ್ಯಂತ ದಾಖಲೆ ಮಟ್ಟದ ಹೂಡಿಕೆಯನ್ನು ಮೇಲ್ವಿಚಾರಣೆ ಮಾಡಿದ್ದಾರೆ. ಆದ್ರೀಗ ಹ್ಯಾರಿಸನ್ ನಿರ್ಗಮನದಿಂದಾಗಿ ಇಸಿಬಿ ಹೊಸ ಸಿಇಒ ಹುಡುಕಾಟಕ್ಕಿಳಿಯಬೇಕಿದೆ.

Story first published: Wednesday, May 18, 2022, 10:27 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X