ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಕಾಲಲ್ಲಿ ರಕ್ತ ಸೋರುತ್ತಿದ್ದರೂ ಬೌಲಿಂಗ್ ಮಾಡಿದ ಜೇಮ್ಸ್ ಆಂಡರ್ಸನ್

ENG vs IND: England pacer James Anderson bowls despite wounded knee

ಇಂಗ್ಲೆಂಡ್ ತಂಡದ ಅನುಭವಿ ಬೌಲರ್ ಜೇಮ್ಸ್ ಆಂಡರ್ಸನ್ ಓವಲ್ ಟೆಸ್ಟ್‌ನ ಮೊದಲ ದಿನ ಬೌಲಿಂಗ್ ಸಂದರ್ಭದಲ್ಲಿ ಮೊಣ ಕಾಲಿನ ಭಾಗದಲ್ಲಿ ಗಾಯಗೊಂಡು ರಕ್ತ ಸೋರುತ್ತಿರುವುದು ಕಂಡುಬಂದಿದೆ.ಜೇಮ್ಸ್ ಆಂಡರ್ಸನ್ ಟ್ರೌಶರ್‌ನ ಮೊಣಕಾಲಿನ ಭಾಗದಲ್ಲಿ ರಕ್ತ ಸೋರುತ್ತಿರುವುದು ಸ್ಪಷ್ಟವಾಗಿ ಕಾಣಿಸಿದೆ. ಈ ಮಧ್ಯೆಯೂ ಆಂಡರ್ಸನ್ ತಮ್ಮ ಬೌಲಿಂಗ್ ದಾಳಿಯನ್ನು ಮುಂದುವರಿಸಿದ್ದಾರೆ.

39ರ ಹರೆಯದ ಜೇಮ್ಸ್ ಆಂಡರ್ಸನ್ ಅವರ ಬಲಗಾಲಿನ ಮೊಣಕಾಲಿನ ಭಾಗದಲ್ಲಿ ಗಾಯವಾಗಿತ್ತು. ಈ ಸಂದರ್ಭದಲ್ಲಿ ನಾಯಕ ಜೋ ರೂಟ್ ಆಂಡರ್ಸನ್ ಗಾಯದ ಬಗ್ಗೆ ವಿಚಾರಿಸಿದ್ದಾರೆ. ಬಳಿಕ ಆಂಡರ್ಸನ್ ತಮ್ಮ ಬೌಲಿಂಗ್ ಮುಂದುವರಿಸಿದ್ದಾರೆ. ಬೌಲಿಂಗ್ ಸಂದರ್ಭದಲ್ಲಿ ಜೇಮ್ಸ್ ಆಂಡರ್ಸನ್ ಬಿದ್ದ ಪರಿಣಾಮವಾಗಿ ತರಚಿದಂತಾ ಗಾಯವಾಗಿದ್ದು ಹೀಗಾಗಿ ಆ ಭಾಗದಲ್ಲಿ ರಕ್ತಸುರಿದಿರುವ ಸಾಧ್ಯತೆಯಿದೆ.

ಈ ದೃಶ್ಯಗಳು ನೇರಪ್ರಸಾರದಲ್ಲಿಯೂ ಪ್ರಸಾರವಾಗಿತ್ತು. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಆಂಡರ್ಸನ್ ರಕ್ತದ ಕಲೆಗಳೊಂದಿಗೆ ಆಡುತ್ತಿರುವ ಫೋಟೋಗಳು ವೈರಲ್ ಆಗಿದೆ. ಗಾಯದ ಮಧ್ಯೆಯೂ ಜೇಮ್ಸ್ ಆಂಡರ್ಸನ್ ಆಟದ ಮೇಲೆ ತೋರಿದ ಬದ್ಧತೆಗೆ ಕ್ರಿಕೆಟ್ ಪ್ರೇಮಿಗಳು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಓವಲ್ ಅಂಗಳದಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಜೋ ರೂಟ್ ಟಾಸ್ ಗೆದ್ದು ಮೊದಲಿಗೆ ಟೀಮ್ ಇಂಡಿಯಾವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಂತೆ ಬೌಲಿಂಗ್ ದಾಳಿ ನಡೆಸಿದ ಇಂಗ್ಲೆಂಡ್ ವೇಗಿಗಳು ಭಾರತೀಯ ಬ್ಯಾಟ್ಸ್‌ಮನ್‌ಗಳ ವಿರುದ್ಧ ಭರ್ಜರಿ ಯಶಸ್ಸು ಸಾಧಿಸಿದ್ದಾರೆ. ಟೀಮ್ ಇಂಡಿಯಾ ಪರವಾಗಿ ನಾಯಕ ವಿರಾಟ್ ಕೊಹ್ಲಿ ಮತ್ತು ಶಾರ್ದೂಲ್ ಠಾಕೂರ್ ಮಾತ್ರವೇ ಪ್ರತಿರೋಧವನ್ನು ಒಡ್ಡುವಲ್ಲಿ ಯಶಸ್ವಿಯಾದರು. ಈ ಇಬ್ಬರು ಆಟಗಾರರ ಅರ್ಧ ಶತಕ ಗಳಿಸಿದ ಪರಿಣಾಮವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 191 ರನ್‌ಗಳನ್ನು ಗಳಿಸಿ ಆಲೌಟ್ ಆಯಿತು.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸರಣಿಯಲ್ಲಿ ಎರಡನೇ ಅರ್ಧ ಶತಕ ದಾಖಲಿಸಿದ್ದಾರೆ. ಆದರೆ ಸುದೀರ್ಘ ಕಾಲದಿಂದ ಕೊಹ್ಲಿ ಪಾಲಿಗೆ ಗಗನ ಕುಸುಮವಾಗಿರುವ ಶತಕಗಡಿಗೆ ಬಹುದೂರವೇ ಉಳಿದರು ಕೊಹ್ಲಿ. 96 ಎಸೆತಗಳನ್ನು ಎದುರಿಸಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 50 ರನ್‌ಗಳಿಸಿ ಔಟಾದರು. ನಂತರ ಕೆಲ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಶಾರ್ದೂಲ್ ಠಾಕೂರ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಮೊತ್ತ ಹೆಚ್ಚಲು ಕಾರಣವಾದರು. ಕೇವಲ 36 ಎಎಸೆತಗಳನ್ನು ಎದುರಿಸಿದ ಶಾರ್ದೂಲ್ ಠಾಕೂರ್ 57 ರನ್‌ಗಳ ಕೊಡುಗೆಯನ್ನು ತಂಡಕ್ಕೆ ನೀಡುವಲ್ಲಿ ಯಶಸ್ವಿಯಾದರು. 158.33 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಶಾರ್ದೂಲ್ ಏಳು ಬೌಂಡರಿ ಹಾಗೂ ಮೂರು ಭರ್ಜರಿ ಸಿಕ್ಸರ್ ಸಿಡಿಸಿ ಮಿಂಚಿದರು. ಈ ಮೂಲಕ 8ನೇ ವಿಕೆಟ್‌ಗೆ ಉಮೇಶ್ ಯಾದವ್ ಜೊತೆಗೆ ಅರ್ಧ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಉಮೇಶ್ ಯಾದವ್ 20 ಎಸೆತಗಳನ್ನು ಎದುರಿಸಿ 10 ರನ್‌ಗಳಿಸಿ ಠಾಕೂರ್‌ಗೆ ಸಾಥ್ ನೀಡಿದರು.

ಇನ್ನು ಇಂಗ್ಲೆಂಡ್ ತಂಡದ ವೇಗಿಗಳು ಈ ಪಂದ್ಯದಲ್ಲಿಯೂ ಮಿಂಚುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರಿಸ್ ವೋಕ್ಸ್ ನಾಲ್ಕು ವಿಕೆಟ್ ಪಡೆದು ಟೀಮ್ ಇಂಡಿಯಾಗೆ ಆಘಾತ ನೀಡದರೆ ರಾಬಿನ್ಸನ್ 3 ವಿಕೆಟ್ ಹಾಗೂ ಜೇಮ್ಸ್ ಆಂಡರ್ಸನ್ ಹಾಗೂ ಕ್ರೆಗ್ ಓವರ್ಟನ್ ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.

ಟೀಮ್ ಇಂಡಿಯಾ ಆಡುವ ಬಳಗ: ಕೆಎಲ್ ರಾಹುಲ್, ರೋಹಿತ್ ಶರ್ಮಾ, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ಉಮೇಶ್ ಯಾದವ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಸಿರಾಜ್.

ಗಾಯದಿಂದ ಗುಣಮುಖರಾಗಿ ಟೀಮ್ ಇಂಡಿಯಾಗೆ ಕಂಬ್ಯಾಕ್ ಮಾಡಿದ ಆಲ್-ರೌಂಡರ್ | Oneindia Kannada

ಇಂಗ್ಲೆಂಡ್ ಆಡುವ ಬಳಗ: ಹಸೀಬ್ ಹಮೀದ್, ರೋರಿ ಬರ್ನ್ಸ್ ಡೇವಿಡ್ ಮಲನ್, ಜೋ ರೂಟ್ (ನಾಯಕ), ಒಲ್ಲಿ ಪೋಪ್, ಜಾನಿ ಬೈರ್‌ಸ್ಟೊವ್ (ವಿಕೆಟ್ ಕೀಪರ್), ಮೊಯೀನ್ ಅಲಿ, ಕ್ರಿಸ್ ವೋಕ್ಸ್, ಕ್ರೇಗ್ ಓವರ್‌ಟನ್, ಜೇಮ್ಸ್ ಆಂಡರ್ಸನ್, ಒಲ್ಲಿ ರಾಬಿನ್ಸನ್

Story first published: Friday, September 3, 2021, 10:01 [IST]
Other articles published on Sep 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X