ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Eng vs Ned: ಡೇವಿಡ್ ಮಲಾನ್ 3 ಮಾದರಿಗಳಲ್ಲಿ ಶತಕ ಬಾರಿಸಿದ 2ನೇ ಇಂಗ್ಲೆಂಡ್ ಬ್ಯಾಟರ್

Eng vs Ned: Dawid Malan is The 2nd England Batter to Score Centuries In All 3 Formats

ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡ ಕ್ರಿಕೆಟ್ ಜಗತ್ತಿನಲ್ಲಿ ಮುಂಬರುವ ಎರಡು ವಿಶ್ವಕಪ್‌ಗಳಿಗೆ ಸಿದ್ಧವಾಗುತ್ತಿದೆ. ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅತ್ಯಂತ ಕ್ರಾಂತಿಕಾರಿ ತಂಡಗಳಲ್ಲಿ ಒಂದೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಆಂಗ್ಲರ ತಂಡ, 50-ಓವರ್‌ಗಳ ಸ್ವರೂಪದ ಇತಿಹಾಸದಲ್ಲಿ ಯಾವುದೇ ತಂಡದ ವಿರುದ್ಧ 498 ರನ್‌ಗಳನ್ನು ಬಾರಿಸಿ ದಾಖಲೆ ನಿರ್ಮಿಸಿದೆ.

ನೆದರ್‌ಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಇನ್ನಿಂಗ್ಸ್‌ನ ಆರಂಭದಲ್ಲಿ ಜೇಸನ್ ರಾಯ್ ಅವರನ್ನು ಕಳೆದುಕೊಂಡ ನಂತರ ಡೇವಿಡ್ ಮಲಾನ್ ಮತ್ತು ಫಿಲ್ ಸಾಲ್ಟ್ ಅವಳಿ ಶತಕಗಳನ್ನು ಗಳಿಸುವ ಮೂಲಕ ದಾಖಲೆ ಮೊತ್ತಕ್ಕೆ ಆಧಾರ ಒದಗಿಸಿದರು.

ಏಕದಿನ ಕ್ರಿಕೆಟ್‌ನಲ್ಲಿ 498 ರನ್: ಮುಂದುವರಿದ ಬಟ್ಲರ್ ಅಬ್ಬರ, ತನ್ನದೇ ವಿಶ್ವದಾಖಲೆ ಮುರಿದ ಇಂಗ್ಲೆಂಡ್ಏಕದಿನ ಕ್ರಿಕೆಟ್‌ನಲ್ಲಿ 498 ರನ್: ಮುಂದುವರಿದ ಬಟ್ಲರ್ ಅಬ್ಬರ, ತನ್ನದೇ ವಿಶ್ವದಾಖಲೆ ಮುರಿದ ಇಂಗ್ಲೆಂಡ್

ಇವರಿಬ್ಬರು ಮೊದಲ ವಿಕೆಟ್ ನಷ್ಟದ ನಂತರ ಮೂರನೇ ವಿಕೆಟ್ ಜೊತೆಯಾಟಕ್ಕೆ 222 ರನ್ ಕಲೆಹಾಕಿ ಇಂಗ್ಲೆಂಡ್ ಅನ್ನು ಸುಸ್ಥಿರ ಹಂತಕ್ಕೆ ಏರಿಸಿದರು. ಸಾಲ್ಟ್ ಔಟಾದ ನಂತರ ಬಂದ ಸ್ಫೋಟಕ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಕೂಡ ಅಬ್ಬರದ ಶತಕ ಬಾರಿಸಿದರು. ಕೇವಲ 70 ಎಸೆತಗಳಲ್ಲಿ 162 ರನ್‌ಗಳನ್ನು ಬಾರಿಸಿದ ಅವರು ಏಕದಿನದಲ್ಲಿ ಅತೀ ವೇಗದ 150 ರನ್ ಬಾರಿಸುವ ಅವಕಾಶವನ್ನು ಸ್ವಲ್ಪದರಲ್ಲೇ ಮಿಸ್ ಮಾಡಿಕೊಂಡರು.

Eng vs Ned: Dawid Malan is The 2nd England Batter to Score Centuries In All 3 Formats

ಇಂಗ್ಲೆಂಡ್ ಬೃಹತ್ ಮೊತ್ತಕ್ಕೆ ದಾಖಲಿಸುವ ಹಾದಿಯಲ್ಲಿಯೇ ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಮೂಲಕ ಇಂಗ್ಲೆಂಡ್ ತಂಡವನ್ನು 500 ರನ್‌ಗಳ ಗಡಿ ತಂದು ನಿಲ್ಲಿಸಿದರು. ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 22 ಎಸೆತಗಳಲ್ಲಿ ಆರು ಬೌಂಡರಿ ಮತ್ತು ಆರು ಸಿಕ್ಸರ್‌ಗಳ ನೆರವಿನಿಂದ 66 ರನ್ ಗಳಿಸಿ, ಎದುರಾಳಿ ನೆದರ್‌ಲ್ಯಾಂಡ್ ತಂಡಕ್ಕೆ ಬೃಹತ್ ಗುರಿ ನೀಡಿದರು.

ಸ್ವಲ್ಪದರಲ್ಲೇ ವಿಶ್ವದಾಖಲೆ ಮಿಸ್ ಮಾಡಿಕೊಂಡ ಜಾಸ್ ಬಟ್ಲರ್‌: ABD ರೆಕಾರ್ಡ್‌ ಸೇಫ್!ಸ್ವಲ್ಪದರಲ್ಲೇ ವಿಶ್ವದಾಖಲೆ ಮಿಸ್ ಮಾಡಿಕೊಂಡ ಜಾಸ್ ಬಟ್ಲರ್‌: ABD ರೆಕಾರ್ಡ್‌ ಸೇಫ್!

ಈ ಪಂದ್ಯದಲ್ಲಿ ಜೋಸ್ ಬಟ್ಲರ್ ಮತ್ತು ಲಿವಿಂಗ್‌ಸ್ಟೋನ್ ಅವರು ಕೊನೆಯಲ್ಲಿ ನೆದರ್‌ಲ್ಯಾಂಡ್ ಬೌಲರ್‌ಗಳ ಬೆವರಿಳಿಸಿದರು. ಮುರಿಯದ ಯದನೇ ವಿಕೆಟ್ ಜೊತೆಯಾಡದಲ್ಲಿ ಕೊನೆಯ ಕೇವಲ 32 ಎಸೆತಗಳಲ್ಲಿ 91 ರನ್ ಗಳಿಸಿದರು. ಆದರೆ ಇದಕ್ಕೂ ಮುನ್ನ ಆರಂಭದಲ್ಲಿ ಡೇವಿಡ್ ಮಲಾನ್ ಮತ್ತು ಫಿಲ್ ಸಾಲ್ಟ್ ಅವರ ದ್ವಿಶತಕದಾಟ ಉತ್ತಮ ಮೊತ್ತ ಗಳಿಸಲು ಅಡಿಪಾಯ ಹಾಕಿತು ಎಂಬುದು ಗಮನಿಸಬೇಕಾದ ಅಂಶವಾಗಿದೆ.

ನೆದರ್‌ಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಡೇವಿಡ್ ಮಲಾನ್ ಶತಕದ ಸಿಡಿಸುತ್ತಿದ್ದಂತೆಯೇ ಇಂಗ್ಲೆಂಡ್‌ ತಂಡದ ಪರವಾಗಿ ಕ್ರಿಕೆಟ್‌ ಆಟದ ಎಲ್ಲಾ ಅಂತಾರಾಷ್ಟ್ರೀಯ ಸ್ವರೂಪಗಳಲ್ಲಿ ಶತಕ ಗಳಿಸಿದ ಜೋಸ್ ಬಟ್ಲರ್ ನಂತರ ಎರಡನೇ ಪುರುಷರ ಕ್ರಿಕೆಟಿಗರಾದರು.

Eng vs Ned: Dawid Malan is The 2nd England Batter to Score Centuries In All 3 Formats

ಡೇವಿಡ್ ಮಲಾನ್ ಅವರು ಟಿ20 ಮತ್ತು ಟೆಸ್ಟ್‌ನಲ್ಲಿ ಒಂದು ಶತಕವನ್ನು ಗಳಿಸಿದ್ದರು ಮತ್ತು ಇಂದು ನೆದರ್‌ಲ್ಯಾಂಡ್ಸ್ ವಿರುದ್ಧ ತಮ್ಮ ಚೊಚ್ಚಲ ಏಕದಿನ ಶತಕ ಗಳಿಸಿದರು. ಡೇವಿಡ್ ಮಲಾನ್ ಅವರ ಟೆಸ್ಟ್ ಶತಕವು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಪರ್ತ್‌ನಲ್ಲಿ 140 ರನ್ ಗಳಿಸಿದರು, ಆದರೂ ತಂಡ ಸೋತಿತ್ತು.

ಎಷ್ಟೇ ಪರ್ಫಾಮ್ ಮಾಡಿದ್ರು ಬಿಸಿಸಿಐ ಕಣ್ಣಿಗೆ ಬೀಳೋದು ಕಷ್ಟ | *Cricket | OneIndia Kannada

ನ್ಯೂಜಿಲೆಂಡ್ ವಿರುದ್ಧ ಡೇವಿಡ್ ಮಲಾನ್ ಟಿ20 ಶತಕವನ್ನು ಗಳಿಸಿದ್ದರು, ಅದು ಕೇವಲ 51 ಎಸೆತಗಳಲ್ಲಿ 103 ರನ್. ನ್ಯೂಜಿಲೆಂಡ್ ವಿರುದ್ಧ ತಮ್ಮ ಬ್ಯಾಟಿಂಗ್ ರಕ್ಷಾ ಕವಚವಾಗಿ ಆಡಿದ್ದರು. ಇದೀಗ ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಜೋಸ್ ಬಟ್ಲರ್ ನಂತರ ಇಂಗ್ಲೆಂಡ್ ಪರವಾಗಿ ಶತಕ ಬಾರಿಸಿದ ಕೇವಲ ಎರಡನೇ ಬ್ಯಾಟ್ಸ್‌ಮನ್ ಆಗಿದ್ದಾರೆ.

Story first published: Friday, June 17, 2022, 21:32 [IST]
Other articles published on Jun 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X