ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಶೇನ್‌ ವಾರ್ನ್‌ಗೆ ಗೌರವ: ENG vs NZ ಟೆಸ್ಟ್‌ನ 23ನೇ ಓವರ್‌ನಲ್ಲಿ 23 ಸೆಕೆಂಡ್‌ಗಳ ಕಾಲ ಪಂದ್ಯಕ್ಕೆ ವಿರಾಮ

Shane warne

ಲಂಡನ್‌ನ ಐತಿಹಾಸಿಕ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸಿಸ್ ಕ್ರಿಕೆಟ್ ದಿಗ್ಗಜ ಶೇನ್‌ ವಾರ್ನ್‌ಗೆ ಗೌರವ ಸಲ್ಲಿಸಲಾಗಿದೆ. ಇದೇ ವರ್ಷ ದಿಢೀರನೆ ಇಹಲೋಕ ತ್ಯಜಿಸಿದ ಸ್ಪಿನ್ ಮಾಂತ್ರಿಕನಿಗೆ ಪಂದ್ಯವನ್ನೇ ಸ್ಥಗಿತಗೊಳಿಸಿ ಚಪ್ಪಾಳೆಯ ಮೂಲಕ ಗೌರವ ಸೂಚಿಸಲಾಗಿದೆ.

ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್‌ನಲ್ಲಿ ಟಾಸ್ ಗೆದ್ದ ಕಿವೀಸ್ ಪಡೆ ಮೊದಲು ಬೌಲಿಂಗ್ ಆಯ್ದುಕೊಂಡಿತು. ಈ ಪಂದ್ಯದಲ್ಲಿಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ನ 23ನೇ ಓವರ್‌ನಲ್ಲಿ ದಿವಂಗತ ಶೇನ್ ವಾರ್ನ್‌ಗೆ ಲಾರ್ಡ್ಸ್‌ ಕ್ರಿಕೆಟ್ ಸ್ಟೇಡಿಯಂನಲ್ಲಿ ಚಪ್ಪಾಳೆಯ ಮೂಲಕ ನಮನ ಸಲ್ಲಿಸಲಾಯಿತು.

23 ಸೆಕೆಂಡ್‌ಗಳ ಕಾಲ ಚಪ್ಪಾಳೆಯ ಗೌರವ

23ನೇ ಸಂಖ್ಯೆಯ ಜೆರ್ಸಿ ತೊಡುತ್ತಿದ್ದ ಶೇನ್‌ ವಾರ್ನ್‌ಗೆ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳೆಲ್ಲಾ ಎದ್ದು ನಿಂತು 23 ಸೆಕೆಂಡ್‌ಗಳ ಕಾಲ ಚಪ್ಪಾಳೆ ತಟ್ಟುವ ಮೂಲಕ ಆತನನ್ನು ಸ್ಮರಿಸಲಾಯಿತು. ಕಿವೀಸ್ ಮತ್ತು ಇಂಗ್ಲೆಂಡ್ ಆಟಗಾರರು ಸಾಲಾಗಿ ನಿಂತು ಚಪ್ಪಾಳೆ ಬಾರಿಸಿದ್ದು ವಿಶೇಷವಾಗಿತ್ತು.

IPL ಮುಂದಿನ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಬೀಳಬಲ್ಲ ನಾಲ್ವರು ಆಟಗಾರರು

ಶೇನ್ ವಾರ್ನ್ ಕಾಮೆಂಟರಿ ಬಾಕ್ಸ್

ಇನ್ನು ವಿವಿಧ ಕ್ರಿಕೆಟ್ ಕ್ಷೇತ್ರಗಳಲ್ಲಿ ವಾರ್ನ್ ಅವರ ಸಾಧನೆಗಳನ್ನು ಗೌರವಿಸಲು ದಿ ಸ್ಕೈ ಸ್ಪೋರ್ಟ್ಸ್ ಕಾಮೆಂಟರಿ ಬಾಕ್ಸ್ ಅನ್ನು ಶೇನ್ ವಾರ್ನ್ ಕಾಮೆಂಟರಿ ಬಾಕ್ಸ್ ಎಂದು ಮರುನಾಮಕರಣ ಮಾಡಲಾಗಿದೆ. ಸ್ಟೇಡಿಯಂನಲ್ಲಿ ಕಾಮೆಂಟೇಟರ್‌ ರೂಂಗೆ ಶೇನ್ ವಾರ್ನ್ ಹೆಸರಿಡಲಾಗಿದ್ದು, ಮೊದಲ ಟೆಸ್ಟ್‌ನ ಮೊದಲ ದಿನವೇ ಉದ್ಘಾಟನೆ ಮಾಡಲಾಗಿದೆ.

ಕನ್ನಡಿಗನನ್ನು ವಿಶೇಷ ಆಟಗಾರ ಎಂದ ಪಾಕ್ ಮಾಜಿ ನಾಯಕ: ಕೊಹ್ಲಿ, ರೋಹಿತ್ ರೀತಿಯ ಆಟಗಾರನಲ್ಲ ಎಂದಿದ್ಯಾಕೆ?

T20 ಕ್ರಿಕೆಟ್ ನಲ್ಲಿ ಭಾರತದ ವಿಶ್ವದಾಖಲೆಯನ್ನು ತಪ್ಪಿಸೋದೇ ದಕ್ಷಿಣ ಆಫ್ರಿಕಾ ಗುರಿ | Oneindia Kannada
ಥಾಯ್ಲೆಂಡ್ ಪ್ರವಾಸದಲ್ಲಿ ಶೇನ್ ವಾರ್ನ್ ಸಾವು

ಥಾಯ್ಲೆಂಡ್ ಪ್ರವಾಸದಲ್ಲಿ ಶೇನ್ ವಾರ್ನ್ ಸಾವು

ಮಾರ್ಚ್ 4 ರಂದು, ರಜೆಗಾಗಿ ಥಾಯ್ಲೆಂಡ್‌ಗೆ ಭೇಟಿ ನೀಡಿದಾಗ ಶಂಕಿತ ಹೃದಯಾಘಾತದಿಂದ ವಾರ್ನ್ ನಿಧನರಾದಾಗ ಇಡೀ ಕ್ರಿಕೆಟ್ ಲೋಕವೇ ಆಘಾತಕ್ಕೊಳಗಾಯಿತು. ಆಸ್ಟ್ರೇಲಿಯಾದ ಮಾಜಿ ವಿಶ್ವಕಪ್ ವಿಜೇತ, ವಾರ್ನ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅನೇಕ ಸಾಧನೆ ಮಾಡಿದ್ದಾರೆ. ಕೆಲವು ಅದ್ಭುತ ಆ್ಯಶಸ್ ಸರಣಿ ಗೆಲುವಿನಲ್ಲಿ ತನ್ನ ವಿಶೇಷ ಕೊಡುಗೆ ವಹಿಸಿದ್ರು.

ಅದ್ರಲ್ಲೂ ವಿಶೇಷವಾಗಿ 2005 ರ ಸರಣಿಯಲ್ಲಿ, ಅವರು ಕೆಲವು ಅತ್ಯುತ್ತಮ ಎಸೆತಗಳೊಂದಿಗೆ ವಿನೋದಕ್ಕಾಗಿ ವಿಕೆಟ್‌ಗಳನ್ನು ತೆಗೆದುಕೊಂಡಿದ್ದಾರೆ. ಅವರು 145 ಟೆಸ್ಟ್‌ಗಳಲ್ಲಿ 708 ವಿಕೆಟ್‌ಗಳೊಂದಿಗೆ ಟೆಸ್ಟ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದವರ ದಾಖಲೆಯನ್ನು ಹೊಂದಿದ್ದಾರೆ ಮತ್ತು 700 ಟೆಸ್ಟ್ ವಿಕೆಟ್‌ಗಳ ಹೆಗ್ಗುರುತನ್ನು ತಲುಪಿದ ಮೊದಲಿಗರಾಗಿದ್ದಾರೆ.

Story first published: Thursday, June 2, 2022, 22:55 [IST]
Other articles published on Jun 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X