ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಇಂಗ್ಲೆಂಡ್: ಆಕ್ರಮಣಕಾರಿ ಆಟದಲ್ಲಿ ಯಶಸ್ಸಿಗೆ ಬೆನ್ ಸ್ಟೋಕ್ಸ್ ಹರ್ಷ

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿಯು ಇಂಗ್ಲೆಂಡ್ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ತಂಡ 2-1 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಈ ಗೆಲುವಿನಿಂದಾಗಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಹರ್ಷಗೊಂಡಿದ್ದು ತಮ್ಮ ಆಕ್ರಮಣಕಾರಿ ಆಟದ ನಿಲುವಿನಲ್ಲಿ ಮತ್ತೊಮ್ಮೆ ಯಶಸ್ಸು ಸಾಧಿಸಿರುವುದು ಖುಷಿ ನೀಡಿದೆ ಎಂದಿದ್ದಾರೆ.

ಲಂಡನ್‌ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಈ ಪಂದ್ಯದ ಮೊದಲ ಎರಡು ದಿನಗಳ ಆಟ ಸಂಪೂರ್ಣವಾಗಿ ರದ್ದಾಗಿತ್ತು. ಮೊದಲ ದಿನದಾಟ ಮಳೆಗೆ ಆಹುತಿಯಾದರೆ ರಾಣಿ ಎಲಿಜಬೆತ್ ಅವರ ನಿಧನದ ಕಾರಣದಿಂದಾಗಿ ಎರಡನೇ ದಿನದಾಟವನ್ನು ರದ್ದುಗೊಳಿಸಲಾಗಿತ್ತು. ಹೀಗಾಗಿ ಕೇವಲ ಮೂರು ದಿನದಾಟ ಮಾತ್ರವೇ ಉಳಿದಿತ್ತು. ಆದರೆ ಅಂತಿಮ ದಿನದಾಟದ ಆರಂಭಿಕ ಸೆಶನ್‌ನಲ್ಲಿಯೇ ಇಂಗ್ಲೆಂಡ್ ತಂಡ ಗೆಲುವು ಸಾಧಿಸುವ ಮೂಲಕ ಸರಣಿ ವಶಕ್ಕೆ ಪಡೆದುಕೊಂಡಿದೆ.

Asia Cup 2022 Final: ಪಾಕಿಸ್ತಾನ ಮಣಿಸಿ 6ನೇ ಬಾರಿ ಚಾಂಪಿಯನ್ ಆದ ಶ್ರೀಲಂಕಾAsia Cup 2022 Final: ಪಾಕಿಸ್ತಾನ ಮಣಿಸಿ 6ನೇ ಬಾರಿ ಚಾಂಪಿಯನ್ ಆದ ಶ್ರೀಲಂಕಾ

ದಕ್ಷಿಣ ಆಫ್ರಿಕಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಅಂತಿಮ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡಕ್ಕೆ ಅಗತ್ಯವಿದ್ದಿದ್ದು ಕೇವಲ 130 ರನ್‌ಗಳು ಮಾತ್ರ. ಕೆನ್ನಿಂಗ್ಸನ್ ಓವಲ್‌ನಲ್ಲಿ ಮೊದಲ ಮೂರು ಇನ್ನಿಂಗ್ಸ್‌ನಲ್ಲಿಯೂ ಬೌಲಿಂಗ್ ವಿಭಾಗ ಮೇಲುಗೈ ಸಾಧಿಸಿದ್ದ ಕಾರಣ ಅಂತಿಮ ಇನ್ನಿಂಗ್ಸ್‌ನಲ್ಲಿಯೂ ಇಂಗ್ಲೆಂಡ್‌ಗೆ ದಕ್ಷಿಣ ಆಫ್ರಿಕಾ ವೇಗಿಗಳು ಕಠಿಣ ಸವಾಲೊಡ್ಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇಂಗ್ಲೆಂಡ್‌ನ ಆರಂಭಿಕರಾದ ಅಲೆಕ್ಸ್ ಲೀಸ್ ಹಾಗೂ ಜಾಕ್ ಕ್ರಾವ್ಲೆ ಭರ್ಜರಿ ಆರಂಭವನ್ನು ಒದಗಿಸುವ ಮೂಲಕ ಈ ಸವಾಲನ್ನು ಸುಲಭಗೊಳಿಸಿದರು. ಮೊದಲ ವಿಕೆಟ್‌ಗೆ 108 ರ್‌ಗಳ ಜೊತೆಯಾಟ ಈ ಜೋಡಿಯಿಂದ ಬಂದಿತ್ತು. ಜಾಕ್ ಕ್ರಾವ್ಲೆ 69 ರನ್‌ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ 9 ವಿಕೆಟ್‌ಗಳ ಭರ್ಜರಿ ಅಂತರದಿಂದ ಇಂಗ್ಲೆಂಡ್ ಗೆಲುವು ಸಾಧಿಸಿದೆ.

ಈ ಪಂದ್ಯದಲ್ಲಿ ಎರಡು ತಂಡದ ವೇಗಿಗಳು ಕೂಡ ಅದ್ಭುತ ಪ್ರದರ್ಶನ ನೀಡುವ ಮೂಲಕ ಮಿಂಚಿದ್ದಾರೆ. ಮೊದಲಿಗೆ ಬ್ಯಾಟಿಂಗ್ ನಡೆಸಿದ ದಕ್ಷಿಣ ಆಪ್ರಿಕಾ ತಂಡಕ್ಕೆ ಇಂಗ್ಲೆಂಡ್ ವೇಗಿಗಳಾದ ರಾಬಿನ್ಸನ್ ಹಾಗೂ ಸ್ಟುವರ್ಟ್ ಬ್ರಾಡ್ ಆಘಾತ ನೀಡಿದರು. ರಾಬಿನ್ಸನ್ 5 ವಿಕೆಟ್‌ಗಳ ಗೊಂಚಲು ಪಡೆದರೆ ಬ್ರಾಡ್ ನಾಲ್ಕು ವಿಕೆಟ್ ಸಂಪಾದಿಸಿದರು. ಹೀಗಾಗಿ ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 118 ರನ್‌ಗಳಿಗೆ ಆಲೌಟ್ ಆಯಿತು. ನಂತರ ಇಂಗ್ಲೆಂಡ್ ತಂಡವನ್ನು ಮಾರ್ಕೋ ಜಾನ್ಸನ್ ಹಾಗೂ ಕಗಿಸೋ ರಬಡಾ ಜೋಡಿ 158 ರನ್‌ಗಳಿಗೆ ಕಟ್ಟಿ ಹಾಕಿದರು. ಜಾನ್ಸನ್ 5 ವಿಕೆಟ್ ಸಂಪಾದಿಸಿದರೆ ರಬಡಾ 4 ವಿಕೆಟ್ ಸಂಪಾದಿಸಿದರು. ದಕ್ಷಿಣ ಆಪ್ರಿಕಾದ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ವೇಗಿಗಳು ಸಾಂಘಿಕ ಪ್ರದರ್ಶನ ನೀಡಿ ಮಿಂಚಿದ್ದು 169 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ಶ್ರೀಲಂಕಾ ಏಷ್ಯಾ ಕಪ್ ಚಾಂಪಿಯನ್: ಫೈನಲ್‌ನಲ್ಲಿ ಲಂಕಾ ಕ್ರಿಕೆಟ್‌ಗೆ ಹೊಸ ರಂಗು ತುಂಬಿದ ಹಸರಂಗ!
ಮೂರು ಪಂದ್ಯಗಳ ಈ ಸರಣಿಯಲ್ಲಿ ಈ ಪಂದ್ಯಕ್ಕೂ ಮುನ್ನ ಎರಡೂ ತಂಡಗಳು ತಲಾ ಒಂದೊಂದು ಪಂದ್ಯ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಿದ್ದವು. ಮೊದಲ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ಭರ್ಜರಿ ಗೆಲುವು ಸಾಧಿಸಿದ್ದರೆ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಅಮೋಘ ಜಯ ಸಾಧಿಸಿದೆ. ಹೀಗಾಗಿ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆದ ಈ ಪಂದ್ಯದ ಮೇಲೆ ಕುತೂಹಲ ಹೆಚ್ಚಾಗಿತ್ತು. ಈ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ.

ಇತ್ತಂಡಗಳ ಆಡುವ ಬಳಗ

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲ್ಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಆಲಿ ರಾಬಿನ್ಸನ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್
ಬೆಂಚ್: ಬೆನ್ ಡಕೆಟ್, ಕ್ರೇಗ್ ಓವರ್ಟನ್, ಮ್ಯಾಟಿ ಪಾಟ್ಸ್
ದಕ್ಷಿಣ ಆಫ್ರಿಕಾ ಆಡುವ ಬಳಗ
ದಕ್ಷಿಣ ಆಫ್ರಿಕಾ: ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಕೀಗನ್ ಪೀಟರ್ಸನ್, ರಿಯಾನ್ ರಿಕೆಲ್ಟನ್, ಖಯಾ ಜೊಂಡೋ, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ವಿಯಾನ್ ಮುಲ್ಡರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ
ಬೆಂಚ್: ಐಡೆನ್ ಮಾರ್ಕ್ರಾಮ್, ಸೈಮನ್ ಹಾರ್ಮರ್, ಲುಂಗಿ ಎನ್ಗಿಡಿ, ಲುಥೋ ಸಿಪಾಮ್ಲಾ, ಗ್ಲೆಂಟನ್ ಸ್ಟೌರ್ಮನ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, September 12, 2022, 23:53 [IST]
Other articles published on Sep 12, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X