For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್‌ನ ಈ ಸಹೋದರರಿಗೆ ಜೊತೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಾಸೆ

England’s Curran brothers hope to play Test match together

ಲಂಡನ್ ಏಪ್ರಿಲ್ 15: ಇಂಗ್ಲೆಂಡ್‌ನ ಮಧ್ಯಮ ವೇಗಿ ಟಾಮ್ ಕರನ್ ಮತ್ತು ಆಲ್ ರೌಂಡರ್ ಸ್ಯಾಮ್ ಕರನ್ ಜೊತೆಯಾಗಿ ಟೆಸ್ಟ್ ಕ್ರಿಕೆಟ್‌ ಪಂದ್ಯವನ್ನಾಡುವ ಆಸೆಯನ್ನಿಟ್ಟುಕೊಂಡಿದ್ದಾರೆ. ಲಿಮಿಟೆಟ್ ಓವರ್ ಕ್ರಿಕೆಟ್‌ನಲ್ಲಿ ಆಡಿದ ಅನುಭವವಿರುವ ಇಬ್ಬರಿಗೂ ಟೆಸ್ಟ್ ಕ್ರಿಕೆಟ್‌ನಲ್ಲಿ ಜೊತೆಯಾಗಿ ಮೈದಾನಕ್ಕಿಳಿಯುವ ಆಸೆಯಿದೆ.

ಹೆಚ್ಚಾಗಿ ಇಂಗ್ಲೆಂಡ್‌ ಪರ ಏಕದಿನ ಪಂದ್ಯವನ್ನಾಡುವ, ಕಳೆದ ವರ್ಷ ಇಂಗ್ಲೆಂಡ್‌ನಲ್ಲೇ ನಡೆದಿದ್ದ ಐಸಿಸಿ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟ ಗೆದ್ದ ಇಂಗ್ಲೆಂಡ್ ತಂಡದಲ್ಲಿದ್ದ ಟಾಮ್ ಕರನ್, 2017-18ರಲ್ಲಿ ಆ್ಯಷಸ್ ಪ್ರವಾಸ ಸರಣಿಯ ಎರಡೂ ಪಂದ್ಯಗಳನ್ನು ಆಡಿದ್ದರು. ಇತ್ತ ಸ್ಯಾಮ್ 2018ರ ಜೂನ್‌ನಲ್ಲಿ ಪಾಕಿಸ್ತಾನ ವಿರುದ್ಧ ಪಾದಾರ್ಪಣೆ ಮಾಡಿದ ಬಳಿಕ ಈವರೆಗೆ ಒಟ್ಟು 17 ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ.

'ನಾವು ಬರೀ ಕೆಲವೇ ಕೆಲವು ಟೆಸ್ಟ್ ಪಂದ್ಯಗಳನ್ನಾಡಿದ್ದೇವೆ. ಆದರೆ ನಮ್ಮಲ್ಲಿ ಈಗಲೂ ಟೆಸ್ಟ್ ಬಗ್ಗೆ ಮಹತ್ವಾಕಾಂಕ್ಷೆಯಿದೆ. ಇನ್ನು ಕೌಶಲ ಅಭಿವೃದ್ಧಿ ಮತ್ತು ಅವಕಾಶಕ್ಕಾಗಿ ಕಾಯುವ ವಿಚಾರದಲ್ಲಿ ಸಮತೋಲನ ಕಾಪಾಡಬೇಕಿದೆ,' ಎಂದು ತನ್ನ ಸಹೋದರನ ಜೊತೆ ವೀಡಿಯೋ ಚಾಟ್‌ನಲ್ಲಿ ಪಾಲ್ಗೊಂಡಿದ್ದ ಟಾಮ್ ಹೇಳಿಕೊಂಡಿದ್ದಾರೆ.

'ಸ್ಯಾಮ್ ಜೊತೆಗೆ ಟೆಸ್ಟ್ ಪಂದ್ಯವನ್ನಾಡೋದು ಅದ್ಭುತ ಅನುಭವ ತರಬಹುದು. ಅದು ಖಂಡಿತಾ ನಮ್ಮಿಬ್ಬರ ಮಹತ್ವಾಕಾಂಕ್ಷೆ,' ಎಂದು ಟಾಮ್ ಹೇಳಿದ್ದಾರೆ. ಟಾಮ್ ಮತ್ತು ಸ್ಯಾಮ್ ಕರನ್ ಇಬ್ಬರೂ 3 ಏಕದಿನ ಪಂದ್ಯಗಳಲ್ಲಿ ಮತ್ತು 4 ಟಿ20 ಪಂದ್ಯಗಳಲ್ಲಿ ಜೊತೆಯಾಗಿ ಆಡಿದ್ದಾರೆ.

ನಾನು ಟೆಸ್ಟ್‌ನಲ್ಲಿ ಆಡುವಾಗ ಈತ (ಟಾಮ್) ಏಕದಿನದಲ್ಲಿ ಆಡುತ್ತಿರುತ್ತಾನೆ. ನಮಗೆ ಮೂರೂ ಕ್ರಿಕೆಟ್‌ ಮಾದರಿಗಳಲ್ಲಿ ಇಂಗ್ಲೆಂಡ್ ಪರ ಜೊತೆಯಾಗಿ ಆಡೋ ಹೆಬ್ಬಯಕೆಯಿದೆ,' ಎಂದು ಸ್ಯಾಮ್ ವಿವರಿಸಿದರು. ಇಂಗ್ಲೆಂಡ್ ತಂಡದ ಪರ ಟೆಸ್ಟ್ ಆಡಿದ ಕಡೇಯ ಸಹೋದರರ ಜೋಡಿಯೆಂದರೆ ಆ್ಯಡಮ್ ಮತ್ತು ಬೆನ್ ಹಾಲಿಯೋಕ್. ಇಬ್ಬರೂ 1997ರಲ್ಲಿ ಆಡಿದ್ದರು.

Story first published: Wednesday, April 15, 2020, 15:43 [IST]
Other articles published on Apr 15, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+