ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫಿಕ್ಸಿಂಗ್‌: ಜಿಂಬಾಬ್ವೆ ಕ್ರಿಕೆಟ್ ಮಾಜಿ ನಿರ್ದೇಶಕನಿಗೆ ನಿಷೇಧ ಹೇರಿದ ಐಸಿಸಿ

Ex Zimbabwe cricket director banned over West Indies fix attempt

ನವದೆಹಲಿ, ಮಾರ್ಚ್ 5: ಜಿಂಬಾಬ್ವೆ ಕ್ರಿಕೆಟ್‌ನ ಮಾಜಿ ನಿರ್ದೇಶಕ ಎನಾಕ್ ಇಕೋಪೆ ಅವರು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ 10 ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದಾರೆ. ಮ್ಯಾಚ್ ಫಿಕ್ಸಿಂಗ್‌ಗೆ ಯತ್ನ ಆರೋಪದಡಿಯಲ್ಲಿ ಇಕೋಪೆ ನಿಷೇಧಕ್ಕೆ ಒಳಗಾಗಿದ್ದಾರೆ.

ವಿಜಯ್ ಶಂಕರ್‌ಗೆ ವಿಶೇಷ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ: ವಿಡಿಯೋವಿಜಯ್ ಶಂಕರ್‌ಗೆ ವಿಶೇಷ ಅಭಿನಂದನೆ ಸಲ್ಲಿಸಿದ ವಿರಾಟ್ ಕೊಹ್ಲಿ: ವಿಡಿಯೋ

2017ರಲ್ಲಿ ವೆಸ್ಟ್ ಇಂಡೀಸ್ ತಂಡ ಜಿಂಬಾಬ್ವೆಗೆ ಪ್ರವಾಸ ಕೈಗೊಂಡಿತ್ತು. ಈ ವೇಳೆ ಟೆಸ್ಟ್ ಸರಣಿಯಲ್ಲಿ ವೆಸ್ಟ್ ಇಂಡೀಸ್ 1-0ಯಿಂದ ಗೆದ್ದಿತ್ತು. ಇದರಲ್ಲಿ ಫಿಕ್ಸಿಂಗ್ ನಡೆದಿರುವ ಆರೋಪ ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ 2018 ಮಾರ್ಚ್ ನಲ್ಲಿ ಜಿಂಬಾಬ್ವೆ ಕ್ರಿಕೆಟ್ ಅಧಿಕಾರಿ ರಾಜನ್ ನಾಯಕರ್ ಐಸಿಸಿಯಿಂದ 20 ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದರು.

ಈ ಫಿಕ್ಸ್ ಪ್ರಕರಣದಲ್ಲಿ ಎನಾಕ್ ಇಕೋಪೆ ಕೂಡ ಪಾಲ್ಗೊಂಡಿರುವುದಾಗಿ ಕಂಡುಬಂದಿದ್ದರಿಂದ ಅವರಿಗೂ ನಿಷೇಧ ಹೇರಲಾಗಿದೆ. ಪ್ರಕರಣದ ವಿಚಾರಣೆ ವೇಳೆ ಇಕೋಪೆ ಮೂರು ವಿಧಗಳಲ್ಲಿ ಐಸಿಸಿ ಭ್ರಷ್ಟಾಚಾರ ವಿರೋಧಿ ನೀತಿ ಉಲ್ಲಂಘಿಸಿರುವುದು ಕಂಡುಬಂದಿದೆ ಎಂದು ಐಸಿಸಿ ಭ್ರಷ್ಟಾಚಾರ ವಿರೋಧಿ ಸಮಿತಿ ಬುಧವಾರ (ಮಾರ್ಚ್ 6) ತಿಳಿಸಿದೆ.

Story first published: Wednesday, March 6, 2019, 17:55 [IST]
Other articles published on Mar 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X