ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ಯಾರಿ ಜರ್ಮನ್ ನಿಧನ

Former Australia captain Barry Jarman dies aged 84

ಸಿಡ್ನಿ, ಜುಲೈ 18: ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್ ತಂಡದ ಮಾಜಿ ನಾಯಕ ಬ್ಯಾರಿ ಜರ್ಮನ್ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಬ್ಯಾರಿ ಜುಲೈ 16ರ ಗುರುವಾರ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ. ಅವರಿಗೆ 84 ವರ್ಷ ವಯಸ್ಸಾಗಿತ್ತು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಹಿಟ್-ವಿಕೆಟ್ ಆದ ಎಲ್ಲಾ ಭಾರತೀಯರ ಸಂಪೂರ್ಣ ಪಟ್ಟಿಟೆಸ್ಟ್‌ ಕ್ರಿಕೆಟ್‌ನಲ್ಲಿ ಹಿಟ್-ವಿಕೆಟ್ ಆದ ಎಲ್ಲಾ ಭಾರತೀಯರ ಸಂಪೂರ್ಣ ಪಟ್ಟಿ

ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಆಗಿದ್ದ ಬ್ಯಾರಿ ಜರ್ಮನ್ ಅವರು 1959ರಿಂದ 1969ರ ವರೆಗೆ ಆಸ್ಟ್ರೇಲಿಯಾ ಪರ 19 ಟೆಸ್ಟ್ ಪಂದ್ಯಗಳನ್ನಾಡಿದ್ದರು. ಟೆಸ್ಟ್‌ನಲ್ಲಿ 400 ರನ್ ದಾಖಲೆ ಜರ್ಮನ್ ಹೆಸರಿನಲ್ಲಿದೆ. ಅಲ್ಲದೆ 13 ಸೀಸನ್‌ಗಳಲ್ಲಿ 191 ಪ್ರಥಮದರ್ಜೆ ಪಂದ್ಯಗಳನ್ನಾಡಿದ ಅನುಭವ ಬ್ಯಾರಿ ಅವರದ್ದಾಗಿತ್ತು.

ತಂಡದಲ್ಲಿ ತಾನೆದುರಿಸಿದ ವರ್ಣಬೇಧ ನೀತಿಯ ಘೋರ ಸತ್ಯ ಹೇಳಿದ ಮಖಾಯ ಎನ್‌ಟಿನಿತಂಡದಲ್ಲಿ ತಾನೆದುರಿಸಿದ ವರ್ಣಬೇಧ ನೀತಿಯ ಘೋರ ಸತ್ಯ ಹೇಳಿದ ಮಖಾಯ ಎನ್‌ಟಿನಿ

1959ರಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಆಸ್ಟ್ರೇಲಿಯಾ ತಂಡ ಕಾನ್ಪುರದಲ್ಲಿ ಟೆಸ್ಟ್ ಪಂದ್ಯವನ್ನಾಡಿತ್ತು. ಈ ಪಂದ್ಯದಲ್ಲಿ ಬ್ಯಾರಿ ಜರ್ಮನ್ ಪಾದರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಜರ್ಮನ್ ಕೇವಲ 1 ರನ್‌ಗೆ ಎಲ್‌ಬಿಡಬ್ಲ್ಯೂ ಆಗಿದ್ದರು. ಪಂದ್ಯದಲ್ಲಿ ಭಾರತ 119 ರನ್ ಗೆಲುವನ್ನಾಚರಿಸಿತ್ತು.

ಹೆಚ್ಚು ರನ್ ಗಳಿಸಿದ್ದರೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು: ಗಂಗೂಲಿಹೆಚ್ಚು ರನ್ ಗಳಿಸಿದ್ದರೂ ನನ್ನನ್ನು ತಂಡದಿಂದ ಹೊರಗಿಡಲಾಗಿತ್ತು: ಗಂಗೂಲಿ

ಬ್ಯಾರಿ ಜರ್ಮನ್ ಕೊನೇಯ ಟೆಸ್ಟ್ ಪಂದ್ಯವನ್ನಾಡಿದ್ದು 1969ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ. ಈ ಪಂದ್ಯ ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಜರ್ಮನ್ 3 ರನ್ ಗಳಿಸಿದ್ದರು. ಪಂದ್ಯ ಡ್ರಾ ಗೊಂಡಿತ್ತು. ಕ್ರಿಕೆಟ್ ನಿವೃತ್ತಿ ಬಳಿಕ ಮ್ಯಾಚ್ ರೆಫರೀಯಾಗಿ 25 ಟೆಸ್ಟ್, 28 ಏಕದಿನ ಪಂದ್ಯಗಳಲ್ಲಿ ಜರ್ಮನ್ ಕರ್ತವ್ಯ ನಿರ್ವಹಿಸಿದ್ದರು.

Story first published: Saturday, July 18, 2020, 16:14 [IST]
Other articles published on Jul 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X