ಭಾರತದ ಅತ್ಯುತ್ತಮ ODI 11ರ ಬಳಗ ಆಯ್ಕೆ ಮಾಡಿದ ಆಕಾಶ್ ಚೋಪ್ರಾ; ಸ್ಟಾರ್ ಬ್ಯಾಟರ್‌ಗಿಲ್ಲ ಸ್ಥಾನ!

ಸದ್ಯ ಬಾಂಗ್ಲಾದೇಶ ಪ್ರವಾಸದಲ್ಲಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಿಂದ ಸೋತು ಮುಖಭಂಗ ಅನುಭವಿಸಿದರು. ಆದರೆ ಮೂರನೇ ಪಂದ್ಯದಲ್ಲಿನ ಅದ್ಭುತ ಗೆಲುವು ವೈಟ್‌ವಾಶ್ ಅವಮಾನದಿಂದ ತಪ್ಪಿಸಿಕೊಳ್ಳುವಂತೆ ಮಾಡಿತು.

ಇದೀಗ ಭಾರತ ಕ್ರಿಕೆಟ್ ತಂಡದ ಆಟಗಾರರ ಪ್ರಸ್ತುತ ಫಾರ್ಮ್ ಮತ್ತು ಪ್ರದರ್ಶನಗಳ ಆಧಾರದ ಮೇಲೆ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಅವರು ಅತ್ಯುತ್ತಮ ಭಾರತದ ಏಕದಿನ ಆಡುವ 11ರ ಬಳಗವನ್ನು ಆಯ್ಕೆ ಮಾಡಿದ್ದಾರೆ.

ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಮತ್ತು ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರು ಆಕಾಶ್ ಚೋಪ್ರಾ ಅವರ ಆದರ್ಶ ತಂಡದಲ್ಲಿ ಕಾಣಿಸಿಕೊಳ್ಳಲು ವಿಫಲವಾದ ಎರಡು ಪ್ರಮುಖ ಹೆಸರುಗಳು.

Sanju Samson: ಭಾರತ ತಂಡದಿಂದ ನಿರಂತರ ನಿರ್ಲಕ್ಷ್ಯ; ಐರ್ಲೆಂಡ್ ಪರ ಆಡಲಿದ್ದಾರಾ ಸಂಜು ಸ್ಯಾಮ್ಸನ್?Sanju Samson: ಭಾರತ ತಂಡದಿಂದ ನಿರಂತರ ನಿರ್ಲಕ್ಷ್ಯ; ಐರ್ಲೆಂಡ್ ಪರ ಆಡಲಿದ್ದಾರಾ ಸಂಜು ಸ್ಯಾಮ್ಸನ್?

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಭಾರತ 2-1ರಲ್ಲಿ ಸೋಲು ಅನುಭವಿಸಿದ ವೇಳೆ, ಎಲ್ಲಾ ಮೂರು ಪಂದ್ಯಗಳಲ್ಲಿ ಶಿಖರ್ ಧವನ್ ವಿಫಲರಾಗಿದ್ದರೆ, ಸೂರ್ಯಕುಮಾರ್ ಯಾದವ್ ಅವರಿಗೆ ಸರಣಿಯಿಂದ ವಿಶ್ರಾಂತಿ ನೀಡಲಾಗಿತ್ತು.

ಇಶಾನ್ ಕಿಶನ್ ಆರಂಭಿಕ ಆಟಗಾರನಾಗಲಿದ್ದಾರೆ

ಇಶಾನ್ ಕಿಶನ್ ಆರಂಭಿಕ ಆಟಗಾರನಾಗಲಿದ್ದಾರೆ

ಭಾರತದ ಮಾಜಿ ಬ್ಯಾಟರ್ ಆಕಾಶ್ ಚೋಪ್ರಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಇಶಾನ್ ಕಿಶನ್ ಅವರನ್ನು ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ತೆರೆಯಲು ಆಯ್ಕೆ ಮಾಡಿಕೊಂಡಿದ್ದಾರೆ.

"ರೋಹಿತ್ ಶರ್ಮಾ ಜೊತೆಗೆ ಆರಂಭಿಕ ಆಟಗಾರ ಯಾರು ಎಂದು ಸದ್ಯಕ್ಕೆ ನನಗೆ ಗೊತ್ತಿಲ್ಲ. ಆದರೆ ಇಶಾನ್ ಕಿಶನ್ ಇದೀಗ ಆ ಸ್ಥಾನವನ್ನು ಕದಿಯುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರ ಅದ್ಭುತ ದ್ವಿಶತಕದ ನಂತರ ಇಶಾನ್ ಕಿಶನ್‌ರನ್ನು ಡ್ರಾಪ್ ಮಾಡಲು ಸಾಧ್ಯವಿಲ್ಲ. ಆದ್ದರಿಂದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಇನ್ನಿಂಗ್ಸ್ ತೆರೆಯಲಿದ್ದಾರೆ".

ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್

ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್

"ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ ಮತ್ತು ಶ್ರೇಯಸ್ ಅಯ್ಯರ್ ಅವರಿಗೆ 4ನೇ ಕ್ರಮಾಂಕ ನೀಡಿದ್ದಾರೆ. ನಾನು ಖಂಡಿತವಾಗಿಯೂ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಡುವುದಿಲ್ಲ," ಎಂದು ಆಕಾಶ್ ಚೋಪ್ರಾ ತಿಳಿಸಿದ್ದಾರೆ.

ಇನ್ನು ಆಕಾಶ್ ಚೋಪ್ರಾ ಅವರು ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರ ಬದಲಾಗಿ ಉಪನಾಯಕ ಕೆಎಲ್ ರಾಹುಲ್ ಅವರನ್ನು 5ನೇ ಕ್ರಮಾಂಕಕ್ಕಾಗಿ ಆಯ್ಕೆ ಮಾಡಿದರು.

ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ

ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ

"ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 6ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಆದರೆ ಕೆಎಲ್ ರಾಹುಲ್ ಅವರು ಸೂರ್ಯಕುಮಾರ್ ಯಾದವ್‌ಗಿಂತ ಮುಂದೆ ಆಡುತ್ತಾರೆ. ಕ್ಷಮಿಸಿ ಸೂರ್ಯಕುಮಾರ್ ಮತ್ತು ಶಿಖರ್ ಧವನ್. ಇಬ್ಬರೂ ನನ್ನ ತಂಡದಲ್ಲಿರುತ್ತಾರೆ. ಆದರೆ, ಆಡುವ ಬಳಗದಲ್ಲಿ ಇರುವುದಿಲ್ಲ," ಎಂದು ಹೇಳಿದರು.

ಏಕದಿನ ಪಂದ್ಯಗಳಲ್ಲಿ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಪ್ರದರ್ಶನ ಟಿ20 ಕ್ರಿಕೆಟ್‌ನಲ್ಲಿದ್ದಷ್ಟು ಇಲ್ಲ. ಭಾರತದ ಮಿ.360 15 ಏಕದಿನ ಇನ್ನಿಂಗ್ಸ್‌ಗಳಲ್ಲಿ 32.00ಕ್ಕಿಂತ ಸ್ವಲ್ಪ ಕಡಿಮೆ ಸರಾಸರಿಯಲ್ಲಿ 384 ರನ್‌ಗಳನ್ನು ಬಾರಿಸಿದ್ದಾರೆ. ಏಕದಿನ ಪಂದ್ಯಗಳಲ್ಲಿ ಮಧ್ಯಮ ಕ್ರಮಾಂಕದಲ್ಲಿ ಸ್ಥಾನವನ್ನು ಖಾತರಿಪಡಿಸಿಕೊಳ್ಳಲು ಇನ್ನೂ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ.

ಕುಲದೀಪ್ ಮತ್ತು ಚಹಾಲ್ ನಡುವೆ ಒಬ್ಬರಿಗೆ ಸ್ಥಾನ

ಕುಲದೀಪ್ ಮತ್ತು ಚಹಾಲ್ ನಡುವೆ ಒಬ್ಬರಿಗೆ ಸ್ಥಾನ

ಆಕಾಶ್ ಚೋಪ್ರಾ ಅವರ ಭಾರತ ತಂಡದ ಮಾದರಿ ಏಕದಿನ ಆಡುವ ಹನ್ನೊಂದರ ಬಳಗದಲ್ಲಿ ಮೂರು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಲಾಗಿದೆ.

"ವಾಷಿಂಗ್ಟನ್ ಸುಂದರ್ ಖಂಡಿತವಾಗಿ ಸ್ಥಾನ ಪಡೆಯಲಿದ್ದಾರೆ. ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ನಡುವೆ ಯಾರು ಫಿಟ್ ಆಗಿರುತ್ತಾರೋ ಅವರು ಸ್ಥಾನ ಪಡೆಯುತ್ತಾರೆ. ನಂತರ ನಾನು ಖಂಡಿತವಾಗಿಯೂ ಕುಲದೀಪ್ ಯಾದವ್ ಅಥವಾ ಯುಜ್ವೇಂದ್ರ ಚಹಾಲ್ ಅವರಲ್ಲಿ ಒಬ್ಬರನ್ನು ಉಳಿಸಿಕೊಳ್ಳುತ್ತೇನೆ," ಎಂದು ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ತಿಳಿಸಿದರು.

ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್

ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್

ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ತನ್ನ ಇಬ್ಬರು ಸ್ಪೆಷಲಿಸ್ಟ್ ವೇಗಿಗಳಾಗಿ ಆಯ್ಕೆ ಮಾಡುವ ಮೂಲಕ ಆಕಾಶ್ ಚೋಪ್ರಾ ಮಾದರಿ ತಂಡದ ಆಯ್ಕೆಯನ್ನು ಮುಕ್ತಾಯಗೊಳಿಸಿದರು.

"ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಸಿರಾಜ್ ನನ್ನ ತಂಡದಲ್ಲಿ ಇರುತ್ತಾರೆ. ಹಾಗಾಗಿ ನನ್ನ ಬಳಿ ಮೂರು ವೇಗದ ಬೌಲಿಂಗ್ ಆಯ್ಕೆಗಳು ಮತ್ತು ಮೂರು ಸ್ಪಿನ್ ಬೌಲಿಂಗ್ ಆಯ್ಕೆಗಳಿವೆ. ಇದು ನಾನು ಊಹಿಸಿದ ರೀತಿಯ ಆಡುವ 11ರ ಬಳಗ ನೀವು ಎಲ್ಲಾ ಬೇಸ್‌ಗಳನ್ನು ಒಳಗೊಂಡಿದೆ," ಎಂದರು.

ಆಕಾಶ್ ಚೋಪ್ರಾ ಆಯ್ಕೆ ಮಾಡಿದ ಭಾರತ ಏಕದಿನ ಆಡುವ 11ರ ಬಳಗ

ಆಕಾಶ್ ಚೋಪ್ರಾ ಆಯ್ಕೆ ಮಾಡಿದ ಭಾರತ ಏಕದಿನ ಆಡುವ 11ರ ಬಳಗ

ರೋಹಿತ್ ಶರ್ಮಾ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್/ ರವೀಂದ್ರ ಜಡೇಜಾ, ಕುಲದೀಪ್ ಯಾದವ್/ ಯುಜ್ವೇಂದ್ರ ಚಾಹಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Monday, December 12, 2022, 15:16 [IST]
Other articles published on Dec 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X