ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆಯಾದ ರಮೀಜ್ ರಾಜಾ

Former cricketer Ramiz Raja Formally Elected as Chairman of PCB

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ರಮೀಜ್ ರಾಜ ಅಧಿಕೃತವಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಮುಂದಿನ ಮೂರು ವರ್ಷಗಳ ಕಾಲ ರಮೀಜ್ ರಾಜ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥನಾಗಿ ಸೇವೆ ಸಲ್ಲಿಸಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಎಲೆಕ್ಷನ್ ಕಮಿಶನರ್ ಹಾಗೂ ಮಾಜಿ ನ್ಯಾಯಾಧೀಶರಾದ ಶೇಕ್ ಅಜ್ಮತ್ ಅಧ್ಯಕ್ಷತೆಯಲ್ಲಿ ನ್ಯಾಶನಲ್ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ವಿಶೇಷ ಸಭೆಯನ್ನು ನಡೆಸಿದ ಬಳಿಕ ರಮೀಜ್ ರಾಜಾ ಪಿಸಿಬಿ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.

ಪಿಸಿಬಿಯ ಮುಖ್ಯ ಪೋಷಕರೂ ಆಗಿರುವ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪಿಸಿಬಿ ಅಧ್ಯಕ್ಷ ಹುದ್ದೆಗೆ ರಮೀಜಾ ರಾಜಾ ಜೊತೆಗೆ ಬೋರ್ಡ್ ಆಫ್ ಗವರ್ನೆನ್ಸ್‌ಗೆ ಹೊಸ ಸದಸ್ಯರನ್ನಾಗಿ ಅಸದ್ ಅಲಿ ಖಾನ್ ಅವರನ್ನು ಕೂಡ ನಾಮನಿರ್ದೇಶನ ಮಾಡಿದ್ದರು. ಹೀಗಾಗಿ ಸ್ವತಂತ್ರ ಸದಸ್ಯರಾದ ಆಸೀಂ ವಾಜಿದ್ ಜವಾದ್, ಆಲಿಯಾ ಜಾಫರ್, ಆರಿಫ್ ಸಯೀದ್, ಜಾವೇದ್ ಕುರಿಶಿ ಮತ್ತು ಮುಖ್ಯ ಕಾರ್ಯನಿರ್ವಾಹಕ ವಾಸೀಮ್ ಖಾನ್ ಅವರೊಂದಿಗೆ ಆಡಳಿತ ಮಂಡಳಿಯನ್ನು ಸೇರಿಕೊಂಡಿದ್ದಾರೆ.

5ನೇ ಟೆಸ್ಟ್‌ ಬದಲು ಹೆಚ್ಚುವರಿ ಟಿ20 ಆಡುವಂತೆ ಭಾರತದಿಂದ ಇಂಗ್ಲೆಂಡ್‌ಗೆ ಆಫರ್?!5ನೇ ಟೆಸ್ಟ್‌ ಬದಲು ಹೆಚ್ಚುವರಿ ಟಿ20 ಆಡುವಂತೆ ಭಾರತದಿಂದ ಇಂಗ್ಲೆಂಡ್‌ಗೆ ಆಫರ್?!

ಇನ್ನು ಅಧಿಕಾರವನ್ನು ವಹಿಸಿಕೊಂಡ ನಂತರ ರಮೀಜ್ ರಾಜಾ ಪ್ರತಿಕ್ರಿಯೆ ನೀಡಿದ್ದಾರೆ. "ನನ್ನನ್ನು ಪಿಸಿಬಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ನಾನು ಎಲ್ಲರಿಗೂ ಕೃತಜ್ಞನಾಗಿದ್ದೇನೆ. ಪಾಕಿಸ್ತಾನ ಕ್ರಿಕೆಟ್‌ನ ಬೆಳವಣಿಗೆ ಮತ್ತು ಬಲವರ್ಧನೆಗಾಗಿ ಕರ್ತವ್ಯ ನಿರ್ವಹಿಸಲು ಎದುರು ನೋಡುತ್ತಿದ್ದೇನೆ. ಮಾಜಿ ಕ್ರಿಕೆಟಿಗನಾಗಿ ಹಾಲಿ ಹಾಗೂ ಮಾಜಿ ಕ್ರಿಕೆಟಿಗರ ಯೋಗಕ್ಷೇಮವನ್ನು ನೋಡುವುದು ನಿಸ್ಸಂಶಯವಾಗಿಯೂ ನನ್ನ ಆದ್ಯತೆಯಲ್ಲಿರುತ್ತದೆ. ಈ ಕ್ರೀಡೆ ಕ್ರಿಕೆಟಿಗರ ಬಗ್ಗೆಯೇ ಇರುತ್ತದೆ ಹೀಗಾಗಿ ಎಲ್ಲಾ ಕ್ರಿಕೆಟ್ ಆಟಗಾರರು ಕೂಡ ಗೌರವಕ್ಕೆ ಅರ್ಹರಾಗಿದ್ದಾರೆ" ಎಂದು ರಮೀಜ್ ರಾಜಾ ಹೇಳಿಕೆ ನೀಡಿದ್ದಾರೆ.

ಈ ಹಿಂದಿನ ಪಿಸಿಬಿ ಅಧ್ಯಕ್ಷರಾಗಿದ್ದ ಎಹ್ಸಾನ್ ಮನಿ ಹುದ್ದೆಯಿಂದ ಕೆಳಗಿಳಿದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜಾ ನೆಚ್ಚಿನ ಅಭ್ಯರ್ಥಿಯಾಗಿದ್ದರು. ಈಗ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ 36ನೇ ಪಿಸಿಬಿ ಮುಖ್ಯಸ್ಥನಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಸ್ಥಾನಕ್ಕೇರಿದ ಕೇವಲ ನಾಲ್ಕನೇ ಕ್ರಿಕೆಟಿಗನೂ ಆಗಿದ್ದಾರೆ ರಮೀಜ್ ರಾಜಾ. ಇಜಾಜ್ ಬಟ್ (2008-11), ಜಾವೇದ್ ಬುರ್ಕಿ (1994-95) ಮತ್ತು ಅಬ್ದುಲ್ ಹಫೀಜ್ ಕರ್ದಾರ್ (1972-77) ಇದಕ್ಕೂ ಮುನ್ನ ಈ ಪಿಸಿಬಿ ಮುಖ್ಯಸ್ಥ ಸ್ಥಾನಕ್ಕೇರಿದ ಮಾಜಿ ಕ್ರಿಕೆಟಿಗರಾಗಿದ್ದಾರೆ.

"ಒಂದು ಕಾಲದಲ್ಲಿ ಕ್ರಿಕೆಟ್ ಆಡುತ್ತಿದ್ದ ದೇಶಗಳು ಪೈಕಿ ಪಾಕಿಸ್ತಾನ ತಂಡವನ್ನು ನೋಡಿ ಭಯಗೊಳ್ಳುತ್ತಿದ್ದರು. ಅದೇ ರೀತಿಯ ಸಂಸ್ಕೃತಿ, ಮನಸ್ಥಿತಿ, ಮನೋಪ್ರವೃತ್ತಿ ಮತ್ತು ಆಟದ ವಿಧಾನವನ್ನು ಈಗಿನ ಪುರುಷರ ಕ್ರಿಕೆಟ್ ತಂಡಕ್ಕೆ ಪರಿಚಯಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಒಂದು ಸಂಸ್ಥೆಯಾಗಿ ರಾಷ್ಟ್ರೀಯ ತಂಡಕ್ಕೆ ಬೆಂಬಲವಾಗಿ ನಿಲ್ಲಬೇಕು ಮತ್ತು ಅದಕ್ಕೆ ಪೂರಕವಾಗಿ ಅಗತ್ಯವಿರುವ ನೆರವನ್ನು ನೀಡಬೇಕಿದೆ. ಹಾಗಿದ್ದಾಗ ಮಾತ್ರವೇ ಕ್ರಿಕೆಟ್‌ನ ಅತ್ಯುತ್ಕೃಷ್ಟ ಆಟವನ್ನು ಪ್ರದರ್ಶಿಸಲು ಸಾಧ್ಯವಾಗುತ್ತದೆ. ಕ್ರಿಕೆಟ್ ಅಭಿಮಾನಿಗಳು ಕೂಡ ತಂಡದಿಂದ ಇದನ್ನೇ ನಿರೀಕ್ಷಿಸುತ್ತಾರೆ" ಎಂದು ರಮೀಜ್ ರಾಜಾ ತಮ್ಮ ಮುಂದಿರುವ ಗುರಿಯನ್ನು ಹೇಳಿಕೊಂಡಿದ್ದಾರೆ.

ರಮೀಜ್ ರಾಜಾ ಒಟ್ಟು 255 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕನಾಗಿಯೂ ಜವಾಬ್ಧಾರಿ ವಹಿಸಿಕೊಂಡಿದ್ದರು. 1984ರಿಂದ 1997ರವರೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡಿದ್ದ ರಾಜಾ ಒಟ್ಟಾರೆಯಾಗಿ 8,674 ರನ್‌ಗಳಿಸಿದ್ದಾರೆ. ಇದಕ್ಕೂ ಮುನ್ನ 2003-04ರ ಅವಧಿಯಲ್ಲಿ ರಮೀಜ್ ರಾಜಾ ಪಿಸಿಬಿಯ ಐಸಿಸಿಯ ಮುಖ್ಯ ಕಾ್ಯನಿರ್ವಹಣಾಧಿಕಾರಿಗಳ ಸಮಿತಿಯನ್ನು ಪ್ರತಿನಿಧಿಸಿದ್ದರು. ಈಗ ಎಂಸಿಸಿ ವಿಶ್ವ ಕ್ರಿಕೆಟ್ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ.

RCB ಜೆರ್ಸಿ ಚೇಂಜಾಗಿರೋದು ಯಾಕೆ ಅಂತಾ ಗೊತ್ತಾದ್ರೆ ನೀವು ಚಪ್ಪಾಳೆ ತಟ್ತೀರಾ? | Oneindia Kannada

ಇನ್ನು ರಮೀಜ್ ರಾಜಾ ಕ್ರಿಕೆಟ್ ಕಾಮೆಂಟೇಟರ್ ಆಗಿಯೂ ಸಾಕಷ್ಟು ಖ್ಯಾತರಾಗಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡ ಭಾಗವಹಿಸುವ ಸರಣಿಗಳಲ್ಲಿ ಹಾಗೂ ಐಸಿಸಿ ಟೂರ್ನಮೆಂಟ್‌ಗಳಲ್ಲಿ ವೀಕ್ಷಕವಿವರಣೆಕಾರನಾಗಿ ಮಿಂಚಿದ್ದಾರೆ. ಈಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥನಾಗಿ ಅಧಿಕಾರವನ್ನು ವಹಿಸಿಕೊಂಡಿದ್ದಾರೆ.

Story first published: Monday, September 13, 2021, 18:08 [IST]
Other articles published on Sep 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X