ಆತನ ಅರ್ಹತೆಗೆ ತಕ್ಕ ಗೌರವ ಸಿಗಲಿಲ್ಲ: ಬೇಸರ ವ್ಯಕ್ತಪಡಿಸಿದ ಪಾಕ್ ಕ್ರಿಕೆಟರ್ ಮೊಹಮ್ಮದ್ ಹಫೀಜ್

ಮುಂಬರುವ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡವನ್ನು ಪ್ರಕಟಿಸಿದೆ. ಪಾಕಿಸ್ತಾನ ತಂಡದ ಆಯ್ಕೆ ಬಗ್ಗೆ ಅಂದಿನಿಂದಲೂ ಟೀಕೆ ವ್ಯಕ್ತವಾಗುತ್ತಲೇ ಇದೆ, ಹಿರಿಯ ಆಲ್‌ರೌಂಡರ್ ಶೋಯೆಬ್ ಮಲಿಕ್‌ಗೆ ತಂಡದಲ್ಲಿ ಸ್ಥಾನ ಸಿಗದೇ ಇರುವ ಬಗ್ಗೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಾಕಿಸ್ತಾನ ತಂಡದ ಮಾಜಿ ಆಲ್‌ರೌಂಡರ್ ಆಟಗಾರ ಮೊಹಮ್ಮದ್ ಹಫೀಜ್ ಕೂಡ ಶೋಯೆಬ್ ಮಲಿಕ್‌ ಬಗ್ಗೆ ಮಾತನಾಡಿದ್ದಾರೆ. ಆತನಿಗೆ ಅರ್ಹವಾದ ಗೌರವ ಸಿಗುವುದಿಲ್ಲ ಎಂದು ತಿಳಿದಿತ್ತು ಎಂದಿದ್ದಾರೆ. ತನ್ನ ಜೊತೆ ನೀನು ಕೂಡ ನಿವೃತ್ತಿಯಾಗು ಎಂದು ಶೋಯೆಬ್ ಮಲಿಕ್‌ಗೆ ಸಲಹೆ ನೀಡಿದ್ದೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ಮಾಜಿ ನಾಯಕ ಮೊಹಮ್ಮದ್ ಹಫೀಜ್ ಶೋಯೆಬ್ ಮಲಿಕ್‌ರನ್ನು ತನ್ನ ಸ್ನೇಹಿತ ಮತ್ತು ಸಹೋದರ ಎಂದು ಕರೆದಿದ್ದು. ಆತನ ಅರ್ಹತೆಗೆ ತಕ್ಕಂತೆ ಇಲ್ಲಿ ಗೌರವ ಸಿಗುವುದಿಲ್ಲ ಎಂದು ಹೇಳಿದರು. 41 ವರ್ಷದ ಹಫೀಜ್ ವರ್ಷದ ಆರಂಭದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

ಈ ಆಟಗಾರನನ್ನು ಮೈದಾನದಲ್ಲಿ ನೋಡಲು ಕಾತರನಾಗಿದ್ದೇನೆ ಎಂದ ಪಾಟ್ ಕಮಿನ್ಸ್ಈ ಆಟಗಾರನನ್ನು ಮೈದಾನದಲ್ಲಿ ನೋಡಲು ಕಾತರನಾಗಿದ್ದೇನೆ ಎಂದ ಪಾಟ್ ಕಮಿನ್ಸ್

ಮತ್ತೊಂದೆಡೆ, ಶೋಯೆಬ್ ಮಲಿಕ್ ಕೂಡ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಆದರೆ, ಶೋಯೆಬ್ ಮಲಿಕ್ ಟಿ20 ಕ್ರಿಕೆಟ್‌ನಲ್ಲಿ ಮುಂದುವರೆಯುವ ಆಸಕ್ತಿ ಹೊಂದಿದ್ದರು, ಈ ಬಾರಿಯ ವಿಶ್ವಕಪ್‌ ಟೂರ್ನಿಗೆ ತಂಡಕ್ಕೆ ಆಯ್ಕೆಯಾಗುವ ಭರವಸೆ ಹೊಂದಿದ್ದರು. ಆದಾಗ್ಯೂ, ಇತ್ತೀಚೆಗೆ ಪ್ರಕಟಿಸಲಾದ 15 ಸದಸ್ಯರ ತಂಡದಲ್ಲಿ ಆಯ್ಕೆಗಾರರು ಅವರನ್ನು ಆಯ್ಕೆ ಮಾಡಲಿಲ್ಲ.

ಆತನ ಅರ್ಹತೆಗೆ ತಕ್ಕ ಗೌರವ ಸಿಗಲಿಲ್ಲ

ಆತನ ಅರ್ಹತೆಗೆ ತಕ್ಕ ಗೌರವ ಸಿಗಲಿಲ್ಲ

ಮಲಿಕ್ ಜೊತೆಗಿನ ಬಾಂಧವ್ಯದ ಬಗ್ಗೆ ಮಾತನಾಡಿರುವ ಹಫೀಜ್, ತನ್ನ ನಿವೃತ್ತಿಯನ್ನು ಘೋಷಿಸಲು ಶೋಯೆಬ್ ಮಲಿಕ್‌ಗೆ ಏಕೆ ಒತ್ತಾಯಿಸಿದ್ದೇನೆ ಎಂದು ವಿವರಿಸಿದರು. ಕ್ರಿಕೆಟ್ ಪಾಕಿಸ್ತಾನಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

"ಮಲಿಕ್ ಪ್ರಸ್ತುತ ಸನ್ನಿವೇಶವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ನಾನು ಭಾವಿಸುತ್ತೇನೆ. ಒಬ್ಬ ಸಹೋದರ ಮತ್ತು ಸ್ನೇಹಿತನಾಗಿ ನಾನು ನಿವೃತ್ತಿ ಘೋಷಿಸಿದಾಗ ಅವರೂ ನಿವೃತ್ತಿಯಾಗಬೇಕೆಂದು ವಿನಂತಿಸಿದ್ದೆ. ಆತ ಅರ್ಹವಾದ ಗೌರವವನ್ನು ಪಡೆಯುವುದಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದೆ. ನನ್ನ ವಿಷಯದಲ್ಲೂ ಅದು ಸ್ಪಷ್ಟವಾಗಿತ್ತು. ನನ್ನ ತಿಳುವಳಿಕೆ ಏನೆಂದರೆ, ಅವರು ಕೊನೆಯ ಅವಕಾಶವನ್ನು ಬಯಸಿದ್ದರು, ಆದರೆ ಕ್ರಿಕೆಟ್ ಅದಕ್ಕೆ ಅವಕಾಶ ಕೊಡಲಿಲ್ಲ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ 2022: ಕೊಹ್ಲಿ- ರಾಹುಲ್ ನಡುವೆ ಇನ್ನಿಂಗ್ಸ್ ಆರಂಭಿಕರನ್ನು ಬಹಿರಂಗಪಡಿಸಿದ ರೋಹಿತ್ ಶರ್ಮಾ

ಆತನನ್ನು ಆಯ್ಕೆ ಮಾಡಿದ್ದರೆ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು

ಆತನನ್ನು ಆಯ್ಕೆ ಮಾಡಿದ್ದರೆ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು

ಟಿ 20 ವಿಶ್ವಕಪ್‌ಗಾಗಿ ಪಾಕಿಸ್ತಾನದ ತಂಡದಲ್ಲಿ ಮಲಿಕ್ ಅವರನ್ನು ಆಯ್ಕೆ ಮಾಡಬೇಕಿತ್ತು ಎಂದು ನೀವು ಭಾವಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿ ಹಫೀಜ್, ಆಲ್‌ರೌಂಡರ್ ಶೋಯೆಬ್ ಮಲಿಕ್ ಉಪಸ್ಥಿತಿಯು ತಂಡಕ್ಕೆ ಲಾಭದಾಯಕವಾಗಬಹುದು ಎಂದು ಉತ್ತರಿಸಿದರು.

"ಅವರನ್ನು ಆಯ್ಕೆ ಮಾಡಿದ್ದರೆ, ಅದು ಎರಡೂ ರೀತಿಯಲ್ಲಿ ಗೆಲುವಿನ ಪರಿಸ್ಥಿತಿಯಾಗುತ್ತಿತ್ತು ಎಂದು ನಾನು ಭಾವಿಸುತ್ತೇನೆ. ಪಾಕಿಸ್ತಾನಕ್ಕೆ ಸಾಕಷ್ಟು ಅಂತಾರಾಷ್ಟ್ರೀಯ ಅನುಭವವಿರುವ ಫಿಟ್, ಹಿರಿಯ ಆಟಗಾರ ಸಿಗಬೇಕಿತ್ತು. ಅವರು ಕಟ್ ಅಥವಾ ಪುಲ್ ಆಡಲು ಸಾಧ್ಯವಿಲ್ಲ ಎಂದು ಜನರು ಹೇಳುತ್ತಿದ್ದಾರೆ. 22 ವರ್ಷ ಕ್ರಿಕೆಟ್ ಆಡಿದ್ದಾನೆ, ಈ ಶಾಟ್‌ಗಳನ್ನು ಆಡಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಸರಿಯಾಗಿ ಆಡುವಾಗ ವಯಸ್ಸು ಮುಖ್ಯವಲ್ಲ

ಸರಿಯಾಗಿ ಆಡುವಾಗ ವಯಸ್ಸು ಮುಖ್ಯವಲ್ಲ

ನಮಗೆ ಸರಿಯಾದ ಕ್ರಿಕೆಟಿಗರು ಬೇಕು ಅವರೊಂದಿಗೆ ನಾವು ಗೆಲುವಿನ ಸಂಯೋಜನೆಯನ್ನು ರೂಪಿಸಬಹುದು. ಅವರ ವಯಸ್ಸು 40 ಅಥವಾ 20 ಆಗಿದ್ದರೂ ಪರವಾಗಿಲ್ಲ ಎಂದು ಹಫೀಜ್ ಹೇಳಿದರು.

2019 ರ ವಿಶ್ವಕಪ್‌ನ ಘಟನೆಯನ್ನು ಹಫೀಜ್ ನೆನಪಿಸಿಕೊಂಡರು, ಅವರು ಏಕದಿನ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರೂ ಮಲಿಕ್ ಅವರಿಗೆ ವಿದಾಯ ಪಂದ್ಯವನ್ನು ನೀಡಲಿಲ್ಲ. "2019 ರಲ್ಲಿ ಅವರಿಗೆ ವಿದಾಯ ಏಕದಿನ ಪಂದ್ಯ ನೀಡದಿದ್ದಾಗ ನನಗೆ ಬೇಸರವಾಯಿತು. ನಾವು ಬಾಂಗ್ಲಾದೇಶದ ವಿರುದ್ಧ ಲಾರ್ಡ್ಸ್‌ನಲ್ಲಿ ಆಡುತ್ತಿದ್ದೆವು ಮತ್ತು ಯಾವುದೇ ಅರ್ಹತೆಯ ಅಪಾಯವಿರಲಿಲ್ಲ. ಅವರನ್ನು ಆ ಪಂದ್ಯದಲ್ಲಿ ಆಡಿಸಬೇಕಿತ್ತು, ಆದರೆ ಆ ಕಾಲದ ಆಡಳಿತ ಅದನ್ನು ಮಾಡಲಿಲ್ಲ." ಎಂದು ಹಫೀಜ್ ಹೇಳಿದ್ದಾರೆ.

ಟ್ವೀಟ್ ಮಾಡಿದ್ದಕ್ಕೆ ಅವಕಾಶ ಕೈ ತಪ್ಪಿತಾ

ಟ್ವೀಟ್ ಮಾಡಿದ್ದಕ್ಕೆ ಅವಕಾಶ ಕೈ ತಪ್ಪಿತಾ

ಏಷ್ಯಾಕಪ್‌ 2022ರಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ ತಂಡ ಸೋಲನ್ನಪ್ಪಿದ ನಂತರ ಶೊಯೆಬ್ ಮಲಿಕ್ ಮಾಡಿದ್ದ ಒಂದು ಟ್ವೀಟ್ ಅವರ ಅವಕಾಶ ಕೈ ತಪ್ಪಲು ಕಾರಣ ಎನ್ನಲಾಗಿದೆ. ಮಲಿಕ್, ತಂಡದಲ್ಲಿನ ಸ್ನೇಹ, ಇಷ್ಟ ಮತ್ತು ಇಷ್ಟಪಡದಿರುವಿಕೆಯನ್ನು ಎತ್ತಿ ತೋರಿಸುವ ಟ್ವೀಟ್ ಅನ್ನು ಹಾಕಿದರು.

ಶೋಯೆಬ್ ಮಲಿಕ್ ಕೊನೆಯದಾಗಿ ನವೆಂಬರ್ 2021 ರಲ್ಲಿ ಮಿರ್‌ಪುರದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನವನ್ನು ಪ್ರತಿನಿಧಿಸಿದ್ದರು. 124 ಟಿ20 ಪಂದ್ಯಗಳಲ್ಲಿ, ಅವರು 125.64 ಸ್ಟ್ರೈಕ್ ರೇಟ್‌ನಲ್ಲಿ 2435 ರನ್ ಗಳಿಸಿದ್ದಾರೆ. ಅವರು ತಮ್ಮ ಆಫ್ ಸ್ಪಿನ್‌ನೊಂದಿಗೆ 28 ​​ವಿಕೆಟ್‌ಗಳನ್ನು ಪಡೆದರು.

For Quick Alerts
ALLOW NOTIFICATIONS
For Daily Alerts
Story first published: Sunday, September 18, 2022, 17:47 [IST]
Other articles published on Sep 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X