ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಐನಲ್ಲಿ ವಿಶ್ವದಾಖಲೆ ಬರೆದ ಕನ್ನಡತಿ ಅನುರಾಧಾ ದೊಡ್ಡಬಳ್ಳಾಪುರ!

Four wickets in 4 balls: Germanys Anuradha Doddaballapur created a world record

ಬೆಂಗಳೂರು: ಸ್ವಾತಂತ್ರ್ಯ ದಿನದಂದೇ ಭಾರತೀಯರ ಪಾಲಿಗೆ ಹೆಮ್ಮೆಯ ವಿಚಾರವೊಂದು ಕೇಳಿ ಬಂದಿದೆ. ದೇಶಕ್ಕೆ ಕೀರ್ತಿ ತಂದಿರುವ ಈ ಪ್ರತಿಭಾನ್ವಿತೆ ಕರ್ನಾಟಕದವರು ಅನ್ನೋದು ಮತ್ತೊಂದು ವಿಶೇಷ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿಶ್ವ ದಾಖಲೆ ಬರೆದಿರುವ ಕನ್ನಡತಿ ಅನುರಾಧಾ ದೊಡ್ಡಬಳ್ಳಾಪುರ ಇತಿಹಾಸ ಪುಸ್ತಕದಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ. ಟಿ20ಐ ಕ್ರಿಕೆಟ್‌ನಲ್ಲಿ ಅನುರಾಧ ಈ ಸಾಧನೆ ತೋರಿದ್ದಾರೆ.

ಸ್ವಾತಂತ್ರ್ಯೋತ್ಸವ: ಹೆಮ್ಮೆಯೆನಿಸುವ ಭಾರತದ 5 ಸಕ್ರಿಯ ಕ್ರೀಡಾಪಟುಗಳುಸ್ವಾತಂತ್ರ್ಯೋತ್ಸವ: ಹೆಮ್ಮೆಯೆನಿಸುವ ಭಾರತದ 5 ಸಕ್ರಿಯ ಕ್ರೀಡಾಪಟುಗಳು

ಕರ್ನಾಟಕ ಮಾಜಿ ಮಧ್ಯಮ ವೇಗಿಯಾಗಿರುವ ಅನುರಾಧಾ ದೊಡ್ಡಬಳ್ಳಾಪುರ ಅವರು ಆಸ್ಟ್ರಿಯಾದಲ್ಲಿ ಶುಕ್ರವಾರ (ಆಗಸ್ಟ್ 14) ನಡೆದ ಟಿ20ಐ ಪಂದ್ಯದಲ್ಲಿ ಆತಿಥೇಯ ಆಸ್ಟ್ರಿಯಾ ವಿರುದ್ಧ 4 ಎಸೆತಗಳಲ್ಲಿ 4 ವಿಕೆಟ್ ಉರುಳಿಸಿದ್ದಾರೆ. ಇದರೊಂದಿಗೆ 4 ಎಸೆತಗಳಲ್ಲಿ 4 ವಿಕೆಟ್ ಪಡೆದ ವಿಶ್ವದ ಮೊದಲ ಆಟಗಾರ್ತಿಯಾಗಿ ಅನುರಾಧಾ ಗುರುತಿಸಿಕೊಂಡಿದ್ದಾರೆ.

ಈ ಐಪಿಎಲ್ ಸೀಸನ್‌ ಆರಂಭದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರು ಆಡಲ್ಲ!ಈ ಐಪಿಎಲ್ ಸೀಸನ್‌ ಆರಂಭದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಆಟಗಾರರು ಆಡಲ್ಲ!

ಅನುರಾಧ ನಿರ್ಮಿಸಿರುವ ದಾಖಲೆ, ಇದೇ ದಾಖಲೆ ನಿರ್ಮಿಸಿದ ಬೇರೆ ಆಟಗಾರರು, ಪಂದ್ಯ ಫಲಿತಾಂಶ ಇತ್ಯಾದಿ ಸಂಪೂರ್ಣ ಮಾಹಿತಿ ಇಲ್ಲಿದೆ.

ನಾಲ್ಕು ಎಸೆತಗಳಲ್ಲಿ 4 ವಿಕೆಟ್

ನಾಲ್ಕು ಎಸೆತಗಳಲ್ಲಿ 4 ವಿಕೆಟ್

ಆಸ್ಟ್ರಿಯಾ ಪ್ರವಾಸದಲ್ಲಿರುವ ಜರ್ಮನಿ ಮಹಿಳಾ ಕ್ರಿಕೆಟ್ ತಂಡ ಅಲ್ಲಿ 5 ಪಂದ್ಯಗಳ ಟಿ20ಐ ಸರಣಿ ಆಡಿತ್ತು. ಈ ವೇಳೆ ನಾಲ್ಕನೇ ಪಂದ್ಯದಲ್ಲಿ ಜರ್ಮನಿ ತಂಡದ ನಾಯಕಿ ಅನುರಾಧಾ ದೊಡ್ಡಬಳ್ಳಾಪುರ ಅವರು ದಾಖಲೆ ನಿರ್ಮಿಸಿದ್ದಾರೆ. ಒಂದು ಓವರ್‌ನಲ್ಲಿ ಅನುರಾಧಾ ಸತತ ನಾಲ್ಕು ಎಸೆತಗಳಲ್ಲಿ 4 ವಿಕೆಟ್ ಪಡೆದಿದ್ದರಿಂದ ಈ ವಿಶ್ವದಾಖಲೆ ನಿರ್ಮಾಣವಾಗಿದೆ.

15ನೇ ಓವರ್‌ನಲ್ಲಿ ವಿಶ್ವದಾಖಲೆ

15ನೇ ಓವರ್‌ನಲ್ಲಿ ವಿಶ್ವದಾಖಲೆ

ಜರ್ಮನಿ ನೀಡಿದ್ದ 198 ರನ್ ಗುರಿಯನ್ನು ಬೆನ್ನಟ್ಟಿದ ಆಸ್ಟ್ರಿಯಾ ಮಹಿಳೆಯರು 20 ಓವರ್‌ಗಳಲ್ಲಿ ಕೇವಲ 61 ರನ್ ಪೇರಿಸಲಷ್ಟೇ ಶಕ್ತರಾದರು. ಈ ವೇಳೆ 15ನೇ ಓವರ್‌ನಲ್ಲಿ ಅಂದರೆ 14.2, 14.3, 14.4 ಮತ್ತು 14.5ನೇ ಓವರ್‌ ಎಸೆತದ ವೇಳೆ ಅನುರಾಧಾ ಅವರಿಗೆ ಎದುರಾಳಿ ತಂಡದ ಜೋ-ಆಂಟೊನೆಟ್ ಸ್ಟಿಗ್ಲಿಟ್ಜ್ (1 ರನ್), ಟಗ್ಸ್ ಕಜಾಂಸಿ (0), ಅನಿಷಾ ನೂಕಲಾ (0) ಮತ್ತು ಪ್ರಿಯಾ ಸಾಬು (0) ವಿಕೆಟ್‌ಗಳು ಲಭಿಸಿದವು.ಪಂದ್ಯದಲ್ಲಿ 3 ಓವರ್ ಎಸೆದ ಅನು, 2 ಮೇಡ್‌ ಇನ್‌ನೊಂದಿಗೆ ಕೇವಲ 1 ರನ್ ನೀಡಿ 5 ವಿಕೆಟ್ ಉರುಳಿಸಿದ್ದಾರೆ.

ಮೂವರ ಹೆಸರಲ್ಲಿ ದಾಖಲೆ

ಮೂವರ ಹೆಸರಲ್ಲಿ ದಾಖಲೆ

33ನೇ ಹರೆಯದ ಅನುರಾಧಾ ಅವರೀಗ ಈ ಅಪರೂಪದ ವಿಶ್ವದಾಖಲೆಯೊಂದಿಗೆ ಶ್ರೀಲಂಕಾದ ಲಸಿತ್ ಮಾಲಿಂಗ ಮತ್ತು ಅಫ್ಘಾನಿಸ್ತಾನದ ರಶೀದ್ ಖಾನ್ ಅವರೊಂದಿಗೆ ಸೇರಿಕೊಂಡಿದ್ದಾರೆ. 2007ರಲ್ಲಿ ಪ್ರಾವಿಡೆನ್ಸ್‌ನಲ್ಲಿ ನಡೆದಿದ್ದ ಐಸಿಸಿ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಮಾಲಿಂಗ 4 ಎಸೆತಗಳಲ್ಲಿ 4 ವಿಕೆಟ್ ಪಡೆದಿದ್ದರೆ, ರಶೀದ್ ಅವರು 2019ರಲ್ಲಿ ಡೆಹ್ರಾಡೂನ್‌ನಲ್ಲಿ ನಡೆದಿದ್ದ ಟಿ20ಐ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಈ ಮೈಲಿಗಲ್ಲು ಸ್ಥಾಪಿಸಿದ್ದರು.

ಫಲಿತಾಂಶ, ಸ್ಕೋರ್‌ಕಾರ್ಡ್

ಫಲಿತಾಂಶ, ಸ್ಕೋರ್‌ಕಾರ್ಡ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಜರ್ಮನಿ ಮಹಿಳಾ ತಂಡ, ಆರಂಭಿಕ ಆಟಗಾರ್ತಿಯರಾದ ಜಾನೆಟ್ ರೊನಾಲ್ಡ್ಸ್ 68, ಕ್ರಿಸ್ಟೀನಾ ಗೌಫ್ ಅವರ 101 ಅಜೇಯ ರನ್‌ನೊಂದಿಗೆ 20 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 198 ರನ್ ಗಳಿಸಿತ್ತು. ಆಸ್ಟ್ರಿಯಾ ಮಹಿಳೆಯರು 20 ಓವರ್‌ಗಳಲ್ಲಿ 61 ರನ್ ಬಾರಿಸಿ 137 ರನ್ ಸೋಲೊಪ್ಪಿಕೊಂಡರು. ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅನುರಾಧಾ ದೊಡ್ಡ ಬಳ್ಳಾಪುರ ನಾಯಕತ್ವದ ಜರ್ಮನಿ ತಂಡ 5-0ಯ ಜಯ ಗಳಿಸಿದೆ.

Story first published: Saturday, August 22, 2020, 13:49 [IST]
Other articles published on Aug 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X