ಧೋನಿ ಅಲ್ಲ, ವಿರಾಟ್ ಅಲ್ವೇ ಅಲ್ಲ, ಗಂಭೀರ್ ಹೆಸರಿಸಿದ ಐಪಿಎಲ್ ಬೆಸ್ಟ್ ಕ್ಯಾಪ್ಟನ್!

ಟೀಮ್ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಯಾರು? ಇದು ಸಾಮಾನ್ಯವಾಗಿ ಕೇಲುವ ಪ್ರಶ್ನೆ. ಈ ಪ್ರಸ್ನೆಗೆ ಪ್ರಮುಖವಾಗಿ ಮೂರು ಉತ್ತರಗಳು ಬರುತ್ತವೆ, ಒಂದು ಬಿಸಿಸಿಐ ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ, ಟೀಮ್ ಇಂಡಿಯಾ ಮಾಜಿ ನಾಯಕ ಎಂಎ್ ಧೊನಿ ಮತ್ತು ವಿರಾಟ್ ಕೊಹ್ಲಿ. ನಾಯಕನಾಗಿ ಸಾಧನೆ ಮತ್ತು ಅವರ ವರ್ತನೆಗಳು ಇದಕ್ಕೆ ಸಾಮಾನ್ಯವಾಗಿ ಮಾನದಂಡವಾಗಿರುತ್ತದೆ.

ಇನ್ನು ಈ ಸಂದರ್ಭದಲ್ಲಿ ಐಪಿಎಲ್‌ನಲ್ಲಿ ಯಾರು ಬೆಸ್ಟ್ ಕ್ಯಾಪ್ಟನ್‌ ಎಂಬ ಚರ್ಚೆಗಳು ಜೋರಾಗುತ್ತಿದೆ. ಒಂದೊಂದು ಕಾರಣಕ್ಕೆ ಅವರದ್ದೇ ಆದ ನಾಯಕನನ್ನು ಹೆಸರಿಸುತ್ತಿದ್ದಾರೆ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು.

ಟೀಮ್ ಇಂಡಿಯಾದ ಮಾಜಿ ನಾಯಕ ಗೌತಮ್ ಗಂಭೀರ್ ತಮ್ಮ ಪ್ರಕಾರ ಟೀಮ್ ಇಂಡಿಯಾದ ಬೆಸ್ಟ್ ಕ್ಯಾಪ್ಟನ್ ಯಾರು ಎಂದು ಹೆಸರಿಸಿದ್ದಾರೆ.

ಧೋನಿ ಅಲ್ಲ ಕೊಹ್ಲಿ ಅಲ್ವೇ ಅಲ್ಲ

ಧೋನಿ ಅಲ್ಲ ಕೊಹ್ಲಿ ಅಲ್ವೇ ಅಲ್ಲ

ಗಂಭೀರ್ ಐಪಿಎಲ್‌ನಲ್ಲಿ ತಮ್ಮ ಪ್ರಕಾರ ಬೆಸ್ಟ್ ನಾಯಕ ಯಾರು ಎಂಬುದನ್ನು ಹೆಸರಿಸಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾದ ಮಾಜಿ ನಾಯಕ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಹೆಸರನ್ನು ಗಂಭೀರ್ ಆಯ್ಕೆ ಮಾಡಿಲ್ಲ, ಐಪಿಎಲ್‌ನಲ್ಲಿ ಅಷ್ಟೇನು ಉತ್ತಮ ದಾಖಲೆ ಹೊಂದಿಲ್ಲದ ವಿರಾಟ್ ಕೊಹ್ಲಿ ಹೆಸರನ್ನೂ ಆಯ್ದುಕೊಂಡಿಲ್ಲ.

ಮುಂಬೈ ಇಂಡಿಯನ್ಸ್ ನಾಯಕನ ರೋಹಿತ್ ಶರ್ಮಾ ಬೆಸ್ಟ್

ಮುಂಬೈ ಇಂಡಿಯನ್ಸ್ ನಾಯಕನ ರೋಹಿತ್ ಶರ್ಮಾ ಬೆಸ್ಟ್

ಗೌತಮ್ ಗಂಭೀರ್ ಉತ್ತಮ ನಾಯಕ ಎಂದು ಹೆಸರಿಸಿದ್ದು ಟೀಮ್ ಇಂಡಿಯಾದ ಉಪನಾಯಕ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹೆಸರನ್ನು. ರೋಹಿತ್ ಶರ್ಮಾ ಐಪಿಎಲ್‌ನ ಬೆಸ್ಟ್ ಕ್ಯಾಪ್ಟನ್ ಎಂದು ಗಂಭೀರ್ ನೇರವಾಗಿ ಹೇಳಿದ್ದಾರೆ.

ನಾಲ್ಕು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿಸಿದ ಶರ್ಮಾ

ನಾಲ್ಕು ಬಾರಿ ಚಾಂಪಿಯನ್ಸ್ ಪಟ್ಟಕ್ಕೇರಿಸಿದ ಶರ್ಮಾ

ರೋಹಿತ್ ಶರ್ಮಾ ಐಪಿಎಲ್ ದಾಖಲೆಗಳೇ ಗಂಭೀರ್ ಈ ಉತ್ತರವನ್ನು ನಿಡಲು ಕಾರಣ. 2013ರಿಂದ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಇಲ್ಲಿಯವರೆಗೆ ನಾಲ್ಕು ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ್ದಾರೆ. ನಾಯಕನಾಗಿ ಚೊಚ್ಚಲ ಟೂರ್ನಿಯಿಂದ ಆರಂಭಿಸಿ ಕಡೆಯ 2019ರ ಟೂರ್ನಿಯಲ್ಲೂ ಮುಂಬೈ ಚಾಂಪಿಯನ್ಸ್ ಎನಿಸಿದೆ.

6-7 ಐಪಿಎಲ್ ಗೆಲ್ಲಬಹುದು

6-7 ಐಪಿಎಲ್ ಗೆಲ್ಲಬಹುದು

ಗೌತಮ್ ಗಂಭೀರ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಮೇಲೆ ಇನ್ನೂ ಸಾಕಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. 'ಈವರೆಗೂ ರೋಹಿತ್ ಶರ್ಮಾ 4 ಕಪ್‌ ಗೆದ್ದಿದ್ದಾರೆ, ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುಂಬೈ 6-7ರ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಫಲಿತಾಂಶದಲ್ಲಿ ಧೋನಿ ಮುಂದಿರಬಹುದು

ಫಲಿತಾಂಶದಲ್ಲಿ ಧೋನಿ ಮುಂದಿರಬಹುದು

ಒಟ್ಟಾರೆ ಫಲಿತಾಂಶವನ್ನು ನೋಡಿದರೆ ಚೆನ್ನೈ ನಾಯಕ ಧೋನಿ ಉತ್ತಮ ಅನಿಸಬಹುದು, ಆದರೆ ಸಂಪೂರ್ಣ ನಾಯಕನಾಗಿ ನೋಡಿದಾಗಿ ಶರ್ಮಾ ಅತ್ಯುತ್ತಮ ಎನಿಸುತ್ತಾರೆ, ಒತ್ತಡದಲ್ಲಿ ಅವರು ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, April 19, 2020, 13:45 [IST]
Other articles published on Apr 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X