ಮಸಾಜ್ ವೇಳೆ ಗೇಲ್ 'ಗುಪ್ತಾಂಗ' ಪ್ರದರ್ಶನ, ಏನಿದು ಆರೋಪ?

Posted By:

ಸಿಡ್ನಿ, ಅಕ್ಟೋಬರ್ 23: ವೆಸ್ಟ್ ಇಂಡೀಸ್ ನ ದೈತ್ಯ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅವರ ಮೈದಾನದ ಹೊರಗಿನ ಚಟುವಟಿಕೆ ಯಾವಾಗಲೂ ಚರ್ಚೆಗೆ ಗ್ರಾಸವಾಗುತ್ತದೆ. ಮೋಜು, ಮಸ್ತಿಯ ಜೀವನಕ್ಕೆ ಹೆಸರಾದ ಗೇಲ್ ಅವರು ಮಸಾಜ್ ಮಾಡಿಸಿಕೊಳ್ಳಲು ಹೋದಾಗ ಮಹಿಳಾ ಥೆರಪಿಸ್ಟ್ ಮುಂದೆ ತಮ್ಮ ಗುಪ್ತಾಂಗ ಪ್ರದರ್ಶಿಸಿದರು ಎಂದು ಆರೋಪಿಸಲಾಗಿದೆ.

ಕಾಂಡೋಮ್ ಜಾಹಿರಾತಿನಲ್ಲಿ ಬ್ರಾವೋ, ಗೇಲ್ ಸಕತ್ ಸ್ಟೆಪ್!

ಫೇಸ್ ಫಾಕ್ಸ್ ಮೀಡಿಯಾ ನ್ಯೂಸ್ ಪೇಪರ್, ದಿ ಸಿಡ್ನಿ ಮಾರ್ನಿಂಗ್ ಹೆರಾಲ್ಡ್, ದಿ ಏಜ್ ಹಾಗೂ ದಿ ಕೆನ್ ಬೆರಾ ಟೈಮ್ಸ್ ಮುಂತಾದ ಮಾಧ್ಯಮಗಳು ಮಾಡಿರುವ ಸರಣಿ ವರದಿಗಳನ್ನು ಗೇಲ್ ಪರ ವಕೀಲರು ಅಲ್ಲಗೆಳೆದಿದ್ದಾರೆ.

Gayle denies exposing private parts to female therapist

2015ರ ವಿಶ್ವಕಪ್ ವೇಳೆ ಡ್ರೆಸಿಂಗ್ ರೂಮಿನಲ್ಲಿ ಈ ಘಟನೆ ನಡೆದಿದ್ದು, ಮಸಾಜ್ ಮಾಡಲು ಬಂದಿದ್ದ ಮಹಿಳಾ ಥೆರಪಿಸ್ಟ್ ಅವರಿಗೆ ಗೇಲ್ ಅವರು ತಮ್ಮ ದೇಹ ಸಿರಿ ಪ್ರದರ್ಶಿಸಿದ್ದರು ಎನ್ನಲಾಗಿದೆ.

ಗೇಲ್ ಮತ್ತೊಮ್ಮೆ ಪತ್ರಕರ್ತೆಗೆ ಪೋಲಿ ಪ್ರಶ್ನೆ ಕೇಳಿದ್ನಂತೆ!

ನ್ಯೂ ಸೌಥ್ ವೇಲ್ಸ್ ಸುಪ್ರೀಂಕೋರ್ಟ್ ನಲ್ಲಿ ಈ ಪ್ರಕರಣ ಜಾರಿಯಲ್ಲಿದ್ದು, ಗೇಲ್ ಮೇಲಿನ ಆರೋಪಗಳೆಲ್ಲವೂ ನಿರಾಧಾರವಾಗಿದ್ದು, ಗೇಲ್ ಅವರ ಘನತೆ, ಗೌರವಕ್ಕೆ ಧಕ್ಕೆ ತರಲು ಮಾಡಿರುವ ಹುನ್ನಾರ ಎಂದು ಗೇಲ್ ಪರ ಬ್ಯಾರಿಸ್ಟರ್ ಬ್ರೂಸ್ ಮೆಕ್ ಕ್ಲಿನ್ಟೋಕ್ ಹೇಳಿದ್ದಾರೆ.

ಆರೋಹಿ ಗೂಗ್ಲಿಗೆ ಕ್ರಿಸ್ ಗೇಲ್ ಬೋಲ್ಡ್

ಈ ವರದಿಗಳು ಬಂದ ಕೆಲ ದಿನಗಳಲ್ಲೇ ಗೇಲ್ ಅವರು ಟಿವಿ ವರದಿಗಾರ್ತಿಯೊಬ್ಬರ ಕ್ಷಮೆಯಾಚಿಸಿದ ಪ್ರಸಂಗ ನಡೆದಿತ್ತು. ಟಿವಿ ವರದಿಗಾರ್ತಿ ಲೈವ್ ಕವರೇಜ್ ನಲ್ಲಿದ್ದಾಗ 'ಡ್ರಿಂಕ್ಸ್ ಗೆ ಹೋಗೋನ ಬಾ' ಎಂದು ಗೇಲ್ ನಗುತ್ತಾ ಕರೆದಿದ್ದರು.

ನಂತರ 'ನಾಚಿಕೊಳ್ಳಬೇಡ' ಎಂಬರ್ಥದಲ್ಲಿ ಮಾತನಾಡಿದ್ದು ಸಾಕಷ್ಟು ವೈರಲ್ ಆಗಿತ್ತು. ನಂತರ ಈ ಬಗ್ಗೆ ಗೇಲ್ ಕ್ಷಮೆ ಯಾಚಿಸಿದ್ದರು. ಈಗ ಮಸಾಜ್ ವಿವಾದ ಗೇಲ್ ಗೆ ಅಂಟಿಕೊಂಡಿದ್ದು, ಇದರಿಂದ ಹೊರಬರಲು ಗೇಲ್ ಯತ್ನಿಸುತ್ತಿದ್ದಾರೆ.

Story first published: Monday, October 23, 2017, 13:06 [IST]
Other articles published on Oct 23, 2017
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ