ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಎಲಿಮಿನೇಟರ್ ಪಂದ್ಯದ ಸೋಲಿನ ನಂತರ ಭಾವನಾತ್ಮಕ ಪೋಸ್ಟ್ ಹಾಕಿದ ಮ್ಯಾಕ್ಸ್‌ವೆಲ್

Glenn Maxwell praised Virat Kohli and AB De Villiers through his Instagram post after eliminator match

ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಳೆದ ಕೆಲ ಆವೃತ್ತಿಗಳಿಗೆ ಹೋಲಿಸಿದರೆ ಅತ್ಯುತ್ತಮ ಪ್ರದರ್ಶನವನ್ನೇ ನೀಡಿತು ಎಂದು ಹೇಳಬಹುದು. ಟೂರ್ನಿಯ ಲೀಗ್ ಹಂತದಲ್ಲಿ ಒಟ್ಟು 14 ಪಂದ್ಯಗಳನ್ನಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ಪಂದ್ಯಗಳಲ್ಲಿ ಜಯಗಳಿಸಿ, 5 ಪಂದ್ಯಗಳನ್ನು ಸೋಲುವುದರ ಮೂಲಕ 18 ಅಂಕಗಳನ್ನು ಪಡೆದುಕೊಂಡಿತು. ಅಷ್ಟೇ ಅಲ್ಲದೆ ಲೀಗ್ ಹಂತದಲ್ಲಿನ ತನ್ನ ಇನ್ನೂ ಕೆಲ ಪಂದ್ಯಗಳು ಬಾಕಿ ಇರುವಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಧಿಕೃತವಾಗಿ ಪ್ಲೇ ಆಫ್ ಪ್ರವೇಶವನ್ನು ಮಾಡಿತ್ತು. ಕಳೆದ ಕೆಲ ಆವೃತ್ತಿಗಳಲ್ಲಿ ಪ್ಲೇ ಆಫ್ ಹಂತವನ್ನು ಪ್ರವೇಶಿಸಲು ಉಳಿದ ತಂಡಗಳ ಪಂದ್ಯಗಳ ಮೇಲೆ ಅವಲಂಬಿತವಾಗುತ್ತಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಆವೃತ್ತಿಯಲ್ಲಿ ನೇರವಾಗಿ ಪ್ಲೇ ಆಫ್ ಪ್ರವೇಶಿಸುವ ಮೂಲಕ ಯಶಸ್ಸಿನ ಹಾದಿಗೆ ಮರಳಿತ್ತು.

ಐಪಿಎಲ್ ಯುಎಇ ಚರಣದಲ್ಲಿ ಆರ್‌ಸಿಬಿಗೆ ಕೈಕೊಟ್ಟು 'ಫ್ಲಾಪ್ ಸ್ಟಾರ್' ಆದ ಸ್ಟಾರ್ ಬ್ಯಾಟ್ಸ್‌ಮನ್‌ ಇವರೇ!ಐಪಿಎಲ್ ಯುಎಇ ಚರಣದಲ್ಲಿ ಆರ್‌ಸಿಬಿಗೆ ಕೈಕೊಟ್ಟು 'ಫ್ಲಾಪ್ ಸ್ಟಾರ್' ಆದ ಸ್ಟಾರ್ ಬ್ಯಾಟ್ಸ್‌ಮನ್‌ ಇವರೇ!

ಹೀಗೆ ನೇರವಾಗಿ ಪ್ಲೇ ಆಫ್ ಸುತ್ತಿಗೆ ಆರ್ಹತೆಯನ್ನು ಪಡೆದುಕೊಂಡಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಕ್ಟೋಬರ್ 11ರ ಸೋಮವಾರದಂದು ನಡೆದ ಪ್ರಸಕ್ತ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಅಂತಿಮ ಹಂತದಲ್ಲಿ ಸೋಲುವುದರ ಮೂಲಕ ಟೂರ್ನಿಯಿಂದ ಹೊರಬಿತ್ತು. ಈ ಸೋಲಿನ ಮೂಲಕ ವಿರಾಟ್ ಕೊಹ್ಲಿ ನಾಯಕನಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ಟ್ರೋಫಿ ಎತ್ತಿಹಿಡಿಯಬೇಕೆಂಬ ಹಲವಾರು ಅಭಿಮಾನಿಗಳ ಕನಸು ಕನಸಾಗಿಯೇ ಉಳಿದುಬಿಟ್ಟಿತು.

ಇನ್ನು ಈ ಸೋಲಿನ ಕುರಿತಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ತಮ್ಮ ಅಧಿಕೃತ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಶೇಷವಾದ ಪೋಸ್ಟ್ ಹಾಕಿದ್ದು ತನ್ನನ್ನು ಖರೀದಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ಟೂರ್ನಿಯುದ್ದಕ್ಕೂ ತಮ್ಮ ಕುರಿತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ ತೋರಿಸಿದ ಕಾಳಜಿ ಮತ್ತು ನೋಡಿಕೊಂಡ ರೀತಿಯ ಕುರಿತು ಸಂತಸವನ್ನು ಕೂಡ ಗ್ಲೆನ್ ಮ್ಯಾಕ್ಸ್‌ವೆಲ್ ವ್ಯಕ್ತಪಡಿಸಿದ್ದಾರೆ.

ತಮ್ಮಈ ಇನ್ ಸ್ಟಾಗ್ರಾಂ ಪೋಸ್ಟ್‌ನಲ್ಲಿ ಇನ್ನೂ ಮುಂದುವರಿದು ಬರೆದುಕೊಂಡಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್ ದಿಗ್ಗಜರಾದ ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಜೊತೆ ಒಂದೇ ತಂಡದ ಪರ ಆಟವಾಡಿದ್ದು ಎಂದೂ ಮರೆಯಲಾಗದಂತಹ ನೆನಪಾಗಿ ಉಳಿಯುತ್ತವೆ ಎಂದು ಬರೆದುಕೊಂಡಿದ್ದಾರೆ. ಈ ಬರಹದ ಜೊತೆ ಪ್ರಸಕ್ತ ಸಾಲಿನ ಐಪಿಎಲ್ ಟೂರ್ನಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೊನೆಯ ಚಿತ್ರ, ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ ಅವರ ಜೊತೆಗಿನ ತಮ್ಮ ಚಿತ್ರಗಳು ಮತ್ತು ತಮ್ಮ ಪ್ರತ್ಯೇಕ ಚಿತ್ರಗಳನ್ನು ಕೂಡ ಗ್ಲೆನ್ ಮ್ಯಾಕ್ಸ್‌ವೆಲ್ ಹಂಚಿಕೊಂಡಿದ್ದಾರೆ.

Story first published: Wednesday, October 13, 2021, 22:27 [IST]
Other articles published on Oct 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X