ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಇನ್ನು ಒಂದೆರಡು ದಿನಗಳಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಆರ್‌ಸಿಬಿ ಸೇರಿಕೊಳ್ಳಲಿದ್ದಾರೆ'

Glenn Maxwell will join RCB camp in Dubai in two or three days, says Mike Hesson

ದುಬೈ: ಕಡ್ಡಾಯ ಕ್ವಾರಂಟೈನ್ ಪೂರ್ಣಗೊಳಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಭಾನುವಾರ (ಸೆಪ್ಟೆಂಬರ್‌ 5) ದುಬೈಯಲ್ಲಿ ಅಭ್ಯಾಸ ಶಿಬಿರ ಆರಂಭಿಸಿದೆ. ಸೆಪ್ಟೆಂಬರ್ 19ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ 14ನೇ ಆವೃತ್ತಿಯ ದ್ವಿತೀಯ ಹಂತಕ್ಕೆ ಆರ್‌ಸಿಬಿ ಫುಟ್ಬಾಲ್ ಆಡುವ ಮೂಲಕ ತಯಾರಿ ಶುರು ಮಾಡಿದೆ.

ಭಾರತ vs ಇಂಗ್ಲೆಂಡ್: ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್‌ ಬೂಮ್ರಾಭಾರತ vs ಇಂಗ್ಲೆಂಡ್: ಕಪಿಲ್ ದೇವ್ ದಾಖಲೆ ಸರಿಗಟ್ಟಿದ ಜಸ್‌ಪ್ರೀತ್‌ ಬೂಮ್ರಾ

ಆರ್‌ಸಿಬಿ ಆರಂಭಿಕ ಅಭ್ಯಾಸ ಶಿಬಿರದ ಬಗ್ಗೆ ಮುಖ್ಯ ಕೋಚ್ ಮೈಕ್ ಹೆಸನ್ ಅಪ್‌ಡೇಟ್ ನೀಡಿದ್ದಾರೆ. ಸೆಪ್ಟೆಂಬರ್‌ 6, 8 ಮತ್ತು 10ರಂದು ಆರ್‌ಸಿಬಿ ಜಿಮ್ ಅಭ್ಯಾಸ ನಡೆಸಲಿದೆ ಎಂದು ಹೆಸನ್ ತಿಳಿಸಿದ್ದಾರೆ. ಆರಂಭಿಕ ಹಂತದಲ್ಲಿ ಬೇರೆ ಬೇರೆ ತಂಡಗಳಾಗಿ ವಿಭಾಜಿಸಿ ಅಭ್ಯಾಸ ನಡೆಸಲಾಗಿತ್ತು. ಆದರೆ ಈ ಬಾರಿ ಒಂದೇ ತಂಡವಾಗಿ ಆರ್‌ಸಿಬಿ ಅಭ್ಯಾಸ ನಡೆಸುತ್ತಿದೆ ಎಂದು ಹೆಸನ್ ಮಾಹಿತಿ ನೀಡಿದ್ದಾರೆ.

ಸೆಪ್ಟೆಂಬರ್‌ 7, 9 ಮತ್ತು 11ರಂದು ಆರ್‌ಸಿಬಿ ಕೌಶಲಾಭ್ಯಸ ನಡೆಸಲಿದೆ. ಇದು ಮುಂದೆ ಪರಿಶ್ರಮದ ಅಭ್ಯಾಸಕ್ಕೆ ಪೂರಕವಾಗಿರಲಿದೆ. ಆ ಬಳಿಕ ನೀವು ಸ್ಟ್ರೆಂತ್ ಆ್ಯಂಡ್ ಕಂಡೀಶನಿಂಗ್ ಅಭ್ಯಾಸ ನಡೆಸಿ ಫಿಟ್ನೆಸ್ ನತ್ತ ಮರಳಲು ಸಾಧ್ಯವಾಗುತ್ತದೆ ಎಂದು ಹೆಸನ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಅದ್ಭುತ ಗೆಲುವು, ಸರಣಿಯಲ್ಲಿ 2-1 ಮುನ್ನಡೆಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಅದ್ಭುತ ಗೆಲುವು, ಸರಣಿಯಲ್ಲಿ 2-1 ಮುನ್ನಡೆ

"ಈಗ ಎಬಿ ಡಿ ವಿಲಿಯರ್ಸ್ ವಿಮಾನ ನಿಲ್ದಾಣದಲ್ಲಿದ್ದಾರೆ. ಅವರು ಶೀಘ್ರ ತಂಡ ಸೇರಿಕೊಳ್ಳಲಿದ್ದಾರೆ. ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಒಂದೆರಡು ದಿನಗಳಲ್ಲಿ ಕ್ಯಾಂಪ್‌ ಸೇರಿಕೊಳ್ಳಲಿದ್ದಾರೆ. ಆಸ್ಟ್ರೇಲಿಯಾದ ಕೈಲ್ ಜೇಮಿಸನ್ 10ರ ವೇಳೆಗೆ ಆರ್‌ಸಿಬಿ ಸೇರಿಕೊಳ್ಳಲಿದ್ದಾರೆ. ಸುಮಾರು 11 ಮಂದಿ ನಾಳೆಯೊಳಗೆ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ," ಎಂದು ಹೆಸನ್ ವಿವರಿಸಿದ್ದಾರೆ.

T-20 ವಿಶ್ವಕಪ್ ಲಿಸ್ಟ್ ನಲ್ಲಿ ಯಾರು In,ಯಾರು Out? | Oneindia Kannada

ಸೆಪ್ಟೆಂಬರ್‌ 19ರಂದು ಆರಂಭಗೊಳ್ಳುವ ಐಪಿಎಲ್ ದ್ವಿತೀಯ ಹಂತದ ಟೂರ್ನಿ ಅಕ್ಟೋಬರ್‌ 15ರಂದು ಕೊನೆಗೊಳ್ಳಲಿದೆ. ಐಪಿಎಲ್ ಆರಂಭಿಕ ಆವೃತ್ತಿಯಲ್ಲಿ ಆರ್‌ಸಿಬಿ ತಂಡ ಐಪಿಎಲ್ ಅಂಕಪಟ್ಟಿಯಲ್ಲಿ ತೃತೀಯ ಸ್ಥಾನದಲ್ಲಿತ್ತು. 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದು 2ರಲ್ಲಿ ಸೋತು -0.171 ರೇಟಿಂಗ್ ಪಾಯಿಂಟ್ಸ್‌ ಕಲೆ ಹಾಕಿತ್ತು. ಸೆಪ್ಟೆಂಬರ್‌ 20ರಂದು ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿವೆ. ಭಾರತದಲ್ಲಿ ಆರಂಭಗೊಂಡಿದ್ದ ಐಪಿಎಲ್ ಟೂರ್ನಿ ಕೋವಿಡ್ ಕಾರಣದಿಂದಾಗಿ ಅರ್ಧಕ್ಕೆ ನಿಲ್ಲಿಸಲ್ಪಟ್ಟಿತ್ತು. 29 ಪಂದ್ಯಗಳು ಆರಂಭಿಕ ಹಂತದಲ್ಲಿ ನಡೆದಿದ್ದವು. ಇನ್ನುಳಿದ 31 ಪಂದ್ಯಗಳು ಯುಎಇಯಲ್ಲಿ ನಡೆಯಲಿದೆ.

Story first published: Tuesday, September 7, 2021, 0:05 [IST]
Other articles published on Sep 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X