ಆತ ಬೇರೆ ಗ್ರಹದಿಂದ ಬಂದವನಂತೆ ಬ್ಯಾಟ್‌ ಬೀಸುತ್ತಿದ್ದಾನೆ: ಆಕಾಶ್ ಚೋಪ್ರಾ

ಟೀಂ ಇಂಡಿಯಾದ ಸ್ಫೋಟಕ ಬ್ಯಾಟರ್‌, ಭಾರತದ ಮಿಸ್ಟರ್ 360 ಎಂದೇ ಖ್ಯಾತಿ ಪಡೆದಿರುವ ಸೂರ್ಯಕುಮಾರ್ ಯಾದವ್, ನ್ಯೂಜಿಲೆಂಡ್ ವಿರುದ್ಧ ಟಿ20 ಸರಣಿ ಗೆಲ್ಲಲು ಕೀ ಪ್ಲೇಯರ್ ಆಗಿ ಗುರುತಿಸಿಕೊಂಡರು.

ನೇಪಿಯರ್‌ನಲ್ಲಿ ನಡೆದ ಟಿ20 ಪಂದ್ಯದಲ್ಲಿ ಮಳೆಯಿಂದಾಗಿ ಡಿಎಲ್‌ಎಸ್‌ ನಿಯಮದನ್ವಯ ಪಂದ್ಯ ಟೈನಲ್ಲಿ ಅಂತ್ಯಗೊಂಡಿದ್ದು, ಟೀಂ ಇಂಡಿಯಾ ಮೂರು ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಅಂತಿಮ ಪಂದ್ಯದಲ್ಲಿ 10 ಎಸೆತಗಳಲ್ಲಿ 13 ರನ್ ಕಲೆಹಾಕಿದ ಸೂರ್ಯಕುಮಾರ್, ಸರಣಿಯಲ್ಲಿ ಅತಿ ಹೆಚ್ಚು ರನ್‌ ಕಲೆಹಾಕಿದ ಬ್ಯಾಟರ್ (124) ಆಗಿ ಹೊರಹೊಮ್ಮಿದ್ದಲ್ಲದೆ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಪಡೆದುಕೊಂಡರು.

ಸೂರ್ಯಕುಮಾರ್ ಕುರಿತು ಹೊಗಳಿದ ಆಕಾಶ್ ಚೋಪ್ರಾ

ಸೂರ್ಯಕುಮಾರ್ ಕುರಿತು ಹೊಗಳಿದ ಆಕಾಶ್ ಚೋಪ್ರಾ

''ಆ ದೇವರಿಗೆ ಮಾತ್ರ ಗೊತ್ತು, ಸೂರ್ಯಕುಮಾರ್ ಯಾದವ್ ಎಂಬ ಸರ್‌ನೇಮ್ ಯಾವ ಗ್ರಹದಿಂದ ಬಂದಿರಬಹುದು ಎಂದು. ಆತನ ಬ್ಯಾಟಿಂಗ್ ಶೈಲಿ ಬದಲಾಗಿದೆ. ಅದನ್ನು ನೋಡಲು ಅದ್ಭುತವಾಗಿದೆ. ಆತನ ಬ್ಯಾಟಿಂಗ್ ನೋಡಿದ್ರೆ, ಮೊದಲು ತಮ್ಮ ತಲೆಗೆ ಹೊಕ್ಕುವುದು ಜಸ್ಟ್ ವಾವ್ ಎಂಬುದಾಗಿದೆ'' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಮೌಂಟ್‌ ಮೌಂಗನ್ಯುಯಿಯಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ 55 ಎಸೆತಗಳಲ್ಲಿ 111 ರನ್ ಸಿಡಿಸುವ ಮೂಲಕ ಅಜೇಯರಾಗಿ ಉಳಿದರು. ಈ ಇನ್ನಿಂಗ್ಸ್‌ನಲ್ಲಿ ಸೂರ್ಯ 11 ಬೌಂಡರಿ ಮತ್ತು 7 ಸಿಕ್ಸರ್‌ ಸಿಡಿಸಿದರು.

IPL 2023:ಈ ಎಡಗೈ ವೇಗಿಗಳಿಗೆ ಮಿನಿ ಹರಾಜಿನಲ್ಲಿ ಖುಲಾಯಿಸುತ್ತಾ ಅದೃಷ್ಟ ?

ಆತ ಭಾರತದ ಸಾರ್ವಕಾಲಿಕ ಬೆಸ್ಟ್ ಟಿ20 ಬ್ಯಾಟ್ಸ್‌ಮನ್: ಆಕಾಶ್ ಚೋಪ್ರಾ

ಆತ ಭಾರತದ ಸಾರ್ವಕಾಲಿಕ ಬೆಸ್ಟ್ ಟಿ20 ಬ್ಯಾಟ್ಸ್‌ಮನ್: ಆಕಾಶ್ ಚೋಪ್ರಾ

ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ನೋಡಿದ ಬಳಿಕ ಪ್ರತಿಯೊಬ್ಬ ಭಾರತೀಯ ಆಶ್ಚರ್ಯಗೊಂಡಿದ್ದಾನೆ ಮತ್ತು ಆತ ಸಾರ್ವಕಾಲಿಕ ಬೆಸ್ಟ್ ಟಿ20 ಬ್ಯಾಟ್ಸ್‌ಮನ್ ಆಗಿರಬಹುದು ಎಂದು ಹೇಳುತ್ತಿದ್ದಾರೆ ಎಂದು ಆಕಾಶ್ ಚೋಪ್ರಾ ಉಲ್ಲೇಖಿಸಿದ್ದಾರೆ.

''ಮತ್ತೆ ಆತ ಲೆಗ್ ಸೈಡ್‌ ಕಡೆಗೆ ಸ್ಕೂಪ್ ಶಾಟ್ ಹೊಡೆಯುತ್ತಾನೆ, ಆತನ ಕಾಲುಗಳನ್ನ ಬಳಸಿ ಮತ್ತು ಓವರ್ ಕವರ್ಸ್‌ ಮೇಲೆ ಬೌಂಡರಿ ಸಿಡಿಸುತ್ತಾನೆ. ಅದ್ರೆ ಆತ ಅತ್ಯದ್ಭುತ ಪ್ಲೇಯರ್. ಆತ ಬ್ಯಾಟಿಂಗ್ ಮಾಡುವುದನ್ನು ನೋಡಿದ್ರೆ, ಭಾರತದ ಸಾರ್ವಕಾಲಿಕ ಬೆಸ್ಟ್ ಬ್ಯಾಟ್ಸ್‌ಮನ್ ಈತನೇ ಎಂಬ ದೊಡ್ಡ ಪ್ರಶ್ನೆ ಎದುರಾಗಿದೆ'' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಐಪಿಎಲ್ ಮಿನಿ ಹರಾಜಿನ ದಿನಾಂಕ ಬದಲಿಸಿ ಎಂದು ಪಟ್ಟು ಹಿಡಿದ ಫ್ರಾಂಚೈಸಿಗಳು: ವರದಿ

ಇಷ್ಟು ಬೇಗ ಆತನ ಕುರಿತು ನಿರ್ಧರಿಸುವುದು ಸರಿಯಲ್ಲ ಎಂದ ಆಕಾಶ್ ಚೋಪ್ರಾ

ಇಷ್ಟು ಬೇಗ ಆತನ ಕುರಿತು ನಿರ್ಧರಿಸುವುದು ಸರಿಯಲ್ಲ ಎಂದ ಆಕಾಶ್ ಚೋಪ್ರಾ

ಸೂರ್ಯಕುಮಾರ್ ಯಾದವ್ ಕುರಿತು ಎದುರಾಗಿರುವ ಪ್ರಶ್ನೆಗಳಿಗೆ ಆಕಾಶ್ ಚೋಪ್ರಾ ಉತ್ತರಿಸಿದ್ದು, ಆತನೇ ಟಿ20 ಕ್ರಿಕೆಟ್‌ನ ಬೆಸ್ಟ್ ಬ್ಯಾಟ್ಸ್‌ಮನ್ ಎಂದು ಈಗಲೇ ಹೇಳುವುದು ಸರಿಯಲ್ಲ ಎಂದಿದ್ದಾರೆ. ಮುಂಬೈ ಇಂಡಿಯನ್ಸ್ ಪ್ಲೇಯರ್ ಕ್ರಿಕೆಟ್‌ ಮೈದಾನದ ಯಾವುದೇ ಮೂಲೆಗೆ ಚೆಂಡನ್ನು ಅಟ್ಟುವ ಸಾಮರ್ಥ್ಯ ಹೊಂದಿದ್ದಾರೆ.

''ನೀವು ಆ ರೀತಿಯಾದ ಪ್ರಶ್ನೆಯನ್ನು ಈಗ ಕೇಳುವುದು ಸರಿಯಲ್ಲ, ಆದ್ರೆ ಆತ ಬ್ಯಾಟಿಂಗ್ ಮಾಡುತ್ತಿರುವ ರೀತಿಯನ್ನ ಗಮನಿಸಿದ್ರೆ, ಆ ರೀತಿಯ ಪ್ರಶ್ನೆ ಉದ್ಭವಿಸುತ್ತದೆ. ಯಾವ ರೀತಿಯ ಬ್ಯಾಟಿಂಗ್ ಮಾಡಬೇಕು ಎಂಬುದನ್ನ ತೋರಿಸಿಕೊಡುತ್ತಿದ್ದಾನೆ ಮತ್ತು ಅದೇ ರೀತಿಯಲ್ಲಿ ಆಡುತ್ತಿದ್ದರೆ ಯಶಸ್ಸು ಸಾಧಿಸುವುದು ಖಂಡಿತ'' ಎಂದು ಸೂರ್ಯಕುಮಾರ್ ಯಾದವ್ ಕುರಿತು ಆಕಾಶ್ ಚೋಪ್ರಾ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, November 23, 2022, 16:58 [IST]
Other articles published on Nov 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X