ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐರ್ಲೆಂಡ್ ವಿರುದ್ಧ ಅರ್ಷ್‌ದೀಪ್ ಬದಲು ಉಮ್ರಾನ್ ಮಲ್ಲಿಕ್‌ಗೆ ಅವಕಾಶ ಸಿಕ್ಕಿದ್ದೇಗೆ?

Umran malik
ಉಮ್ರಾನ್ ಮಲ್ಲಿಕ್ ಗೆ ಕೊನೆ ಓವರನ್ನ ಕೊಡದೇ ಇದ್ದಿದ್ರೆ ಟೀಮ್ ಇಂಡಿಯಾ ಸೋಲ್ತಿತ್ತಾ?| OneIndia Kannada

ಮಂಗಳವಾರ ನಡೆದ ಐರ್ಲೆಂಡ್ ವಿರುದ್ಧದ ಅಂತಿಮ ಟಿ20ಯಲ್ಲಿ 226 ರನ್ ಗಳ ಬೃಹತ್ ಗುರಿಯ ಸಮೀಪ ಬಂದು ಟೀಂ ಇಂಡಿಯಾವನ್ನು ಸೋಲಿಸಲು ಆತಿಥೇಯ ಐರ್ಲೆಂಡ್ ಸಾಕಷ್ಟು ಶಮಿಸಿತು. ಆದ್ರೆ 20 ಓವರ್‌ನಲ್ಲಿ ಬೌಲಿಂಗ್‌ ಮಾಡಿದ ಕಾಶ್ಮೀರದ ಸೆನ್ಷೇಷನ್ ಉಮ್ರಾನ್ ಮಲ್ಲಿಕ್‌ 17ರನ್‌ಗಳನ್ನ ಡಿಫೆಂಡ್ ಮಾಡಿಕೊಳ್ಳುವ ಮೂಲಕ ಭಾರತವನ್ನ ಸೋಲಿನಿಂದ ಪಾರು ಮಾಡಿದರು.

ಅಂತಿಮ ಓವರ್‌ನಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ಉಮ್ರಾನ್ ಮಲ್ಲಿಕ್ ತನ್ನ ಬೌಲಿಂಗ್ ಕೋಟಾದಲ್ಲಿ 4 ಓವರ್‌ಗೆ 41ರನ್ ನೀಡಿ 1 ವಿಕೆಟ್ ಪಡೆದರು. ಅಂತಿಮ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಉಮ್ರಾನ್‌ಗೆ ಬೌಲಿಂಗ್ ಕೊಡುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಆದ್ರೆ ನೀಡಿದ ಜವಾಬ್ದಾರಿಯನ್ನ ಯಶಸ್ವಿಯಾಗಿ ನಿಭಾಯಿಸಿದ ಉಮ್ರಾನ್ ಮಲ್ಲಿಕ್ 12 ರನ್‌ಗಳನ್ನಷ್ಟೇ ನೀಡಿದರು. ಈ ಮೂಲಕ ಟೀಂ ಇಂಡಿಯಾ 4 ರನ್‌ಗಳ ರೋಚಕ ಗೆಲುವು ಸಾಧಿಸಿತು.

ಐಪಿಎಲ್‌ನಲ್ಲಿ ಮಿಂಚಿನ ವೇಗದ ಬೌಲಿಂಗ್‌ ಮಾಡಿದ್ದ ಮಲ್ಲಿಕ್

ಐಪಿಎಲ್‌ನಲ್ಲಿ ಮಿಂಚಿನ ವೇಗದ ಬೌಲಿಂಗ್‌ ಮಾಡಿದ್ದ ಮಲ್ಲಿಕ್

ಸನ್ ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಪ್ರವೇಶಿಸಿದ್ದ ಉಮ್ರಾನ್ ಮಲಿಕ್ ಸತತವಾಗಿ 150 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಆರಂಭದಲ್ಲಿ ಕೊಂಚ ಕಷ್ಟಪಟ್ಟರೂ ಸಹ, ನಂತರ ನಿಖರ ಬೌಲಿಂಗ್ ಮೂಲಕ ವಿಕೆಟ್ ಉರುಳಿಸಿದರು. ಉಮ್ರಾನ್ 14 ಪಂದ್ಯಗಳಲ್ಲಿ 22 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 5 ವಿಕೆಟ್‌ಗಳ ಸಾಧನೆಯೂ ಸೇರಿದೆ.

ಐಪಿಎಲ್‌ನಲ್ಲಿ ಮಿಂಚಿನ ದಾಳಿ ನಡೆಸುತ್ತಿದ್ದ ಉಮ್ರಾನ್‌ರ ಈ ಪ್ರದರ್ಶನದಿಂದಲೇ ಟೀಂ ಇಂಡಿಯಾದ ಕರೆ ಬಂತು. ತವರು ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ 5 ಟಿ20 ಸರಣಿಗೆ ಆಯ್ಕೆಯಾದರೂ ಸಹ, ಅದರೊಂದಿಗೆ ಅವರ ಅಂತಾರಾಷ್ಟ್ರೀಯ ಟಿ20 ಚೊಚ್ಚಲ ಪ್ರವೇಶ ಭದ್ರವಾಗಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರನ್ನು ಬೆಂಚ್‌ಗೆ ಸೀಮಿತಗೊಳಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧ ಅವಕಾಶ ಸಿಕ್ಕಿರಲಿಲ್ಲ

ದಕ್ಷಿಣ ಆಫ್ರಿಕಾ ವಿರುದ್ಧ ಅವಕಾಶ ಸಿಕ್ಕಿರಲಿಲ್ಲ

ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಉಮ್ರಾನ್ ಮಲಿಕ್ ಒಂದೇ ಒಂದು ಪಂದ್ಯವನ್ನೂ ಆಡಿರಲಿಲ್ಲ. ಬೆಂಚ್ ಕಾಯಿಸುವುದೇ ಆದಲ್ಲಿ ಆತನಿಗೆ ಏಕೆ ಸ್ಕ್ವಾಡ್‌ನಲ್ಲಿ ಸೇರಿಸಿಕೊಳ್ಳಬೇಕಿತ್ತು ಎಂದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಉಮ್ರಾನ್ ಬದಲಿಗೆ ಅನುಭವಿ ಬೌಲರ್‌ಗಳಾದ ಹರ್ಷಲ್ ಪಟೇಲ್ ಮತ್ತು ಅವೇಶ್ ಖಾನ್ ಅವರನ್ನು ದ್ರಾವಿಡ್ ನೆಚ್ಚಿಕೊಂಡರು.

ಉಮ್ರಾನ್ ಇನ್ನೂ ಅಂತರಾಷ್ಟ್ರೀಯ ಕ್ರಿಕೆಟ್ ಆಡಲು ಸಿದ್ಧವಿಲ್ಲ ಎಂದು ಹೇಳಿದ್ದರು. ಹೀಗೆ ದಕ್ಷಿಣ ಆಫ್ರಿಕಾ ವಿರುದ್ಧ ಒಂದೇ ಒಂದು ಪಂದ್ಯವನ್ನು ಆಡದ ಉಮ್ರಾನ್ ಮಲಿಕ್ ಅವರನ್ನು ಐರ್ಲೆಂಡ್ ಪ್ರವಾಸಕ್ಕೂ ಆಯ್ಕೆಗಾರರು ಆಯ್ಕೆ ಮಾಡಿದ್ರು. ಏತನ್ಮಧ್ಯೆ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇಂಗ್ಲೆಂಡ್ ಪ್ರವಾಸಕ್ಕಾಗಿ ಭಾರತೀಯ ಹಿರಿಯ ತಂಡವನ್ನು ಕರೆದೊಯ್ದಿದ್ದರ ಪರಿಣಾಮ, ವಿವಿಎಸ್ ಲಕ್ಷ್ಮಣ್ ಐರ್ಲೆಂಡ್ ಪ್ರವಾಸದಲ್ಲಿ ಟೀಂ ಇಂಡಿಯಾಗೆ ಮಾರ್ಗದರ್ಶನ ನೀಡಿದರು.

ಭಾರತ vs ಇಂಗ್ಲೆಂಡ್: ಮಹತ್ವದ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರಾ ರೋಹಿತ್? ಇಂದು ಅಂತಿಮ ನಿರ್ಧಾರ

ವಿವಿಎಸ್ ಲಕ್ಷ್ಮಣ್ ಅವಕಾಶ ನೀಡಿದ್ರು!

ವಿವಿಎಸ್ ಲಕ್ಷ್ಮಣ್ ಅವಕಾಶ ನೀಡಿದ್ರು!

ಹೌದು, ಐಪಿಎಲ್‌ನಲ್ಲಿ ಎಸ್‌ಆರ್‌ಎಚ್ ಪರ ಆಡಿದ್ದ ಉಮ್ರಾನ್ ಮಲ್ಲಿಕ್‌ಗೆ ವಿವಿಎಸ್ ಕೃಪಾಕಟಾಕ್ಷ ಇದ್ದೇ ಇದೆ. ಎನ್‌ಸಿಎ ನಿದೇರ್ಶಕರಾಗಿರುವ ವಿವಿಎಸ್ ಐರ್ಲೆಂಡ್ ಪ್ರವಾಸದ ಸಮಯದಲ್ಲಿ ಭಾರತ ತಂಡಕ್ಕೆ ತರಬೇತುದಾರರಾಗಿದ್ದರು. ಉಮ್ರಾನ್ ಮಲಿಕ್ ಅವರ ಸಾಮರ್ಥ್ಯವನ್ನು ಚೆನ್ನಾಗಿ ಅರಿತಿರುವ ಲಕ್ಷ್ಮಣ್, ಐರ್ಲೆಂಡ್ ವಿರುದ್ಧದ ಮೊದಲ ಟಿ20ಯಲ್ಲಿ ಅವಕಾಶ ನೀಡಲಾಗಿತ್ತು. ಮೊದಲ ಪಂದ್ಯದಲ್ಲಿ ದೊಡ್ಡ ಪ್ರಭಾವ ಬೀರದ ಉಮ್ರಾನ್‌ ಕೇವಲ ಒಂದು ಓವರ್ ಬೌಲಿಂಗ್ ಮಾಡಿದ್ರೂ ಸಹ ಎರಡನೇ ಟಿ20ಯಲ್ಲಿ ಅವಕಾಶ ನೀಡಿದರು. ಪಂದ್ಯದಲ್ಲಿ ಮುಕ್ತವಾಗಿ ಬೌಲಿಂಗ್ ಮಾಡಿದ ಉಮ್ರಾನ್ ವಿಕೆಟ್ ಪಡೆದು ಅಂತಿಮ ಓವರ್ ಬೌಲ್ ಮಾಡಿ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು.

15 ವರ್ಷಗಳ ಹಿಂದಿನ ಸಚಿನ್ ತೆಂಡೂಲ್ಕರ್‌ ದಾಖಲೆ ಮುರಿದ ದೀಪಕ್ ಹೂಡಾ

ಐಪಿಎಲ್‌ಗೆ ಉಮ್ರಾನ್ ಮಲ್ಲಿಕ್ ಪ್ರವೇಶ ಹೇಗಾಯ್ತು?

ಐಪಿಎಲ್‌ಗೆ ಉಮ್ರಾನ್ ಮಲ್ಲಿಕ್ ಪ್ರವೇಶ ಹೇಗಾಯ್ತು?

ಕಳೆದ ವರ್ಷ ಸನ್ ರೈಸರ್ಸ್ ಹೈದರಾಬಾದ್ ತಂಡದ ಮೆಂಟರ್ ಆಗಿದ್ದಾಗ ಲಕ್ಷ್ಮಣ್ ಉಮ್ರಾನ್ ಬೌಲಿಂಗ್ ಮಾಡುವುದನ್ನು ಸೂಕ್ಷ್ಮವಾಗಿ ಗಮನಿಸಿದ್ದರು. ಇರ್ಫಾನ್ ಪಠಾಣ್ ಅವರ ಸೂಚನೆಯೊಂದಿಗೆ ಉಮ್ರಾನ್ ಅವರನ್ನು ನೆಟ್ ಬೌಲರ್ ಆಗಿ ಕರೆತಂದವರು ಅವರು. ಟಿ. ನಟರಾಜನ್ ಗಾಯಗೊಂಡು ಲೀಗ್‌ನಿಂದ ಹಿಂದೆ ಸರಿದು ಫೈನಲ್‌ನಲ್ಲಿ ಆಡಿದರು. ಈ ಸಮಯದಲ್ಲಿ ನೆಟ್ ಬೌಲರ್ ಉಮ್ರಾನ್ ಮಲ್ಲಿಕ್‌ಗೆ ಎಸ್‌ಆರ್‌ಎಚ್ ವೇದಿಕೆ ನೀಡಿತು. ಅಲ್ಲದೆ ಅಂತರಾಷ್ಟ್ರೀಯ ಕ್ರಿಕೆಟ್‌ಗೂ ದಾರಿ ಮಾಡಿಕೊಟ್ಟಿತು.

ಐರ್ಲೆಂಡ್ ಪ್ರವಾಸದಲ್ಲಿ ಲಕ್ಷ್ಮಣ್ ಬದಲಿಗೆ ದ್ರಾವಿಡ್ ಕೋಚ್ ಆಗಿದ್ದರೆ ಉಮ್ರಾನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಸ್ವಲ್ಪ ದಿನ ಕಾಯಬೇಕಾಗಿತ್ತು.

Story first published: Wednesday, June 29, 2022, 14:50 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X