ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ: ಕುತೂಹಲಕಾರಿ ಅಂಕಿ ಅಂಶಗಳ ನೋಟ

hyderabad india vs west indies series facts and statistics

ಹೈದರಾಬಾದ್, ಅಕ್ಟೋಬರ್ 15: ಭಾರತ-ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಯಾವ ರೋಮಾಂಚನಕಾರಿ ತಿರುವುಗಳಿಲ್ಲದೆಯೇ ನಿರೀಕ್ಷೆಯಂತೆ ನೀರಸವಾಗಿ ಮುಕ್ತಾಯವಾಗಿದೆ.

ಎರಡನೆಯ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಕೊಂಚ ಹೋರಾಟದ ಮನೋಭಾವ ತೋರಿಸಿದ್ದು ಬಿಟ್ಟರೆ ಕೆರಿಬಿಯನ್ ತಂಡದ ಆಟಗಾರರು ಸಂಪೂರ್ಣವಾಗಿ ಸೋತು ಶರಣಾದರು.

'18ರ ಹರೆಯದಲ್ಲಿ ಪೃಥ್ವಿಯ ಶೇ. 10ರಷ್ಟೂ ಆಡುವವರು ನಮ್ಮಲ್ಲಿ ಇರಲಿಲ್ಲ' '18ರ ಹರೆಯದಲ್ಲಿ ಪೃಥ್ವಿಯ ಶೇ. 10ರಷ್ಟೂ ಆಡುವವರು ನಮ್ಮಲ್ಲಿ ಇರಲಿಲ್ಲ'

ಅನನುಭವಿಗಳಿಂದ ಕೂಡಿದ ದುರ್ಬಲ ವೆಸ್ಟ್‌ ಇಂಡೀಸ್ ವಿರುದ್ಧ ತವರು ನೆಲದಲ್ಲಿ ಗೆದ್ದಿದ್ದು ಭಾರತದ ಪಾಲಿಗೆ ದೊಡ್ಡ ಸಾಧನೆ ಎನಿಸದಿದ್ದರೂ, ದಾಖಲೆಗಳ ವಿಚಾರದಲ್ಲಿ ಭಾರತಕ್ಕೆ ಈ ಸರಣಿ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಜತೆಗೆ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸಿದ್ಧತೆ ನಡೆಸಲು ಅನುಕೂಲವಾಗಿದೆ.

ಟೆಸ್ಟ್ ಸರಣಿ ಸುಲಭವಾಗಿ ಭಾರತಕ್ಕೆ ಒಲಿದಿದ್ದರೂ ಮುಂಬರುವ ಏಕದಿನ ಮತ್ತು ಟಿ20 ಸರಣಿಯಲ್ಲಿ ಗೆಲ್ಲುವುದು ಸುಲಭವಲ್ಲ. ವೇಗದ ಕ್ರಿಕೆಟ್‌ನಲ್ಲಿ ಪಳಗಿರುವ ವಿಂಡೀಸ್ ಕಲಿಗಳು ಈ ಹಿಂದೆ ನಡೆದ ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಭಾರತದ ಬೌಲರ್‌ಗಳನ್ನು ಹೀನಾಮಾನ ದಂಡಿಸಿದ್ದನ್ನು ಮರೆಯುವಂತಿಲ್ಲ. ಹೀಗಾಗಿ ಏಕದಿನ ಹಾಗೂ ಟಿ20 ಸರಣಿ ರೋಚಕ ಎನಿಸಬಹುದು.

ವೆಸ್ಟ್ ಇಂಡೀಸ್ ವಿರುದ್ಧ 'ಸರಣಿ ಶ್ರೇಷ್ಠ' ಪೃಥ್ವಿ ಮುರಿದ ದಾಖಲೆಗಳು ವೆಸ್ಟ್ ಇಂಡೀಸ್ ವಿರುದ್ಧ 'ಸರಣಿ ಶ್ರೇಷ್ಠ' ಪೃಥ್ವಿ ಮುರಿದ ದಾಖಲೆಗಳು

ಅದಕ್ಕೂ ಮುನ್ನ ಹೈದರಾಬಾದ್ ಟೆಸ್ಟ್ ಪಂದ್ಯ ಹಾಗೂ ಒಟ್ಟಾರೆ ಸರಣಿಯ ಕೆಲವು ವಿಶಿಷ್ಟ ದಾಖಲೆ ಹಾಗೂ ಅಂಕಿ ಅಂಶಗಳನ್ನು ನೋಡೋಣ...

ಭಾರತಕ್ಕೆ ಹತ್ತು ವಿಕೆಟ್ ಜಯ

ಭಾರತಕ್ಕೆ ಹತ್ತು ವಿಕೆಟ್ ಜಯ

Vs ಪಾಕಿಸ್ತಾನ, ಮುಂಬೈ, 1952
Vs ಪಾಕಿಸ್ತಾನ, ಚೆನ್ನೈ, 1980
Vs ನ್ಯೂಜಿಲೆಂಡ್, ಹೈದರಾಬಾದ್, 1988
Vs ಇಂಗ್ಲೆಂಡ್, ಮೊಹಾಲಿ, 2001
Vs ಜಿಂಬಾಬ್ವೆ, ಹರಾರೆ, 2005
Vs ನ್ಯೂಜಿಲೆಂಡ್, ಹ್ಯಾಮಿಲ್ಟನ್, 2009
Vs ಬಾಂಗ್ಲಾದೇಶ, ಮಿರ್‌ಪುರ್, 2010
Vs ವೆಸ್ಟ್ ಇಂಡೀಸ್, ಹೈದರಾಬಾದ್, 2018

ಭಾರತದ ಕಳೆದ 10 ತವರಿನ ಸರಣಿಗಳು

ಭಾರತದ ಕಳೆದ 10 ತವರಿನ ಸರಣಿಗಳು

ಆಸ್ಟ್ರೇಲಿಯಾ ವಿರುದ್ಧ 4-0 ಗೆಲುವು, 2012/13
ವೆಸ್ಟ್ ಇಂಡೀಸ್ ವಿರುದ್ಧ 2-0 ಗೆಲುವು, 2013/14
ದಕ್ಷಿಣ ಆಫ್ರಿಕಾ ವಿರುದ್ಧ 3-0 ಗೆಲುವು, 2015/16
ನ್ಯೂಜಿಲೆಂಡ್ ವಿರುದ್ಧ 3-0 ಗೆಲುವು, 2016/17
ಇಂಗ್ಲೆಂಡ್ ವಿರುದ್ಧ 4-0 ಗೆಲುವು, 2016/17
ಬಾಂಗ್ಲಾದೇಶ ವಿರುದ್ಧ 1-0 ಗೆಲುವು, 2016/17
ಆಸ್ಟ್ರೇಲಿಯಾ ವಿರುದ್ಧ 2-1 ಗೆಲುವು, 2016/17
ಶ್ರೀಲಂಕಾ ವಿರುದ್ಧ 1-0 ಗೆಲುವು, 2017/18
ಅಫ್ಘಾನಿಸ್ತಾನ ವಿರುದ್ಧ 1-0 ಗೆಲುವು, 2018
ವೆಸ್ಟ್ ಇಂಡೀಸ್ ವಿರುದ್ಧ 2-0 ಗೆಲುವು, 2018/19

ಟಿ20 ಕ್ರಿಕೆಟ್: ಒಂದೇ ಪಂದ್ಯದಲ್ಲಿ ಯುವರಾಜ್ ಸಿಂಗ್ ಎರಡು ದಾಖಲೆ ಸರಿಗಟ್ಟಿದ ಜಜೈ

ಸತತವಾಗಿ ಹೆಚ್ಚು ತವರಿನ ಸರಣಿ ಗೆದ್ದವರು

ಸತತವಾಗಿ ಹೆಚ್ಚು ತವರಿನ ಸರಣಿ ಗೆದ್ದವರು

10 ಆಸ್ಟ್ರೇಲಿಯಾ, 1994/95-2000/01
10 ಆಸ್ಟ್ರೇಲಿಯಾ, 2004-2008/09
10 ಭಾರತ, 2012/13-ಇಲ್ಲಿಯವರೆಗೆ

ತಂಡವೊಂದರ ವಿರುದ್ಧ ಸೋಲದೆ ಸತತ ಗೆಲುವು

ತಂಡವೊಂದರ ವಿರುದ್ಧ ಸೋಲದೆ ಸತತ ಗೆಲುವು

47 ಇಂಗ್ಲೆಂಡ್ Vs ನ್ಯೂಜಿಲೆಂಡ್, 1930-75
30 ಇಂಗ್ಲೆಂಡ್ Vs ಪಾಕಿಸ್ತಾನ, 1961-82
29 ವೆಸ್ಟ್ ಇಂಡೀಸ್ Vs ಇಂಗ್ಲೆಂಡ್, 1976-88
24 ಆಸ್ಟ್ರೇಲಿಯಾ Vs ದಕ್ಷಿಣ ಆಫ್ರಿಕಾ, 1911-52
24 ವೆಸ್ಟ್ ಇಂಡೀಸ್ Vs ಭಾರತ, 1948-71
22 ಪಾಕಿಸ್ತಾನ Vs ಭಾರತ, 1980-99
22 ಆಸ್ಟ್ರೇಲಿಯಾ Vs ನ್ಯೂಜಿಲೆಂಡ್, 1993-11
21 ಭಾರತ Vs ವೆಸ್ಟ್ ಇಂಡೀಸ್, 2002-18*

ಹೈದರಾಬಾದ್ ಟೆಸ್ಟ್: ಭಾರತಕ್ಕೆ ಹತ್ತು ವಿಕೆಟ್ ಭರ್ಜರಿ ಜಯ

ಭಾರತದ ನೆಲದಲ್ಲಿ ಹತ್ತು ವಿಕೆಟ್

ಭಾರತದ ನೆಲದಲ್ಲಿ ಹತ್ತು ವಿಕೆಟ್

ತವರು ನೆಲದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತದ ಮೂವರು ವೇಗಿಗಳ ಮಾತ್ರ ಹತ್ತು ವಿಕೆಟ್ ಪಡೆದಿದ್ದಾರೆ. ಅವರಲ್ಲಿ ಕಪಿಲ್ ದೇವ್ ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ಪಂದ್ಯವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಕಿತ್ತಿರುವುದು ಜಾವಗಲ್ ಶ್ರೀನಾಥ್. ಈ ಸಾಲಿಗೆ ಮೂರನೆಯವರಾಗಿ ಉಮೇಶ್ ಯಾದವ್ ಸೇರಿಕೊಂಡಿದ್ದಾರೆ.
11/146 ಕಪಿಲ್ ದೇವ್ Vs ಪಾಕಿಸ್ತಾನ 1980
10/135 ಕಪಿಲ್ ದೇವ್ Vs ವೆಸ್ಟ್ ಇಂಡೀಸ್ 1983
13/132 ಜಾವಗಲ್ ಶ್ರೀನಾಥ್ Vs ಪಾಕಿಸ್ತಾನ 1999
10/133 ಉಮೇಶ್ ಯಾದವ್ Vs ಹೈದರಾಬಾದ್ 2018

ಹತ್ತು ವಿಕೆಟ್ ಪಡೆದ ಭಾರತದ ವೇಗಿಗಳು

ಹತ್ತು ವಿಕೆಟ್ ಪಡೆದ ಭಾರತದ ವೇಗಿಗಳು

ಕಪಿಲ್ ದೇವ್ (ಎರಡು ಬಾರಿ)
ಚೇತನ್ ಶರ್ಮಾ
ವೆಂಕಟೇಶ್ ಪ್ರಸಾದ್
ಜಾವಗಲ್ ಶ್ರೀನಾಥ್
ಇರ್ಫಾನ್ ಪಠಾಣ್ (ಎರಡು ಬಾರಿ)
ಇಶಾಂತ್ ಶರ್ಮಾ
ಜಹೀರ್ ಖಾನ್
ಉಮೇಶ್ ಯಾದವ್

ಭಾರತದಲ್ಲಿ ಅರ್ಧಶತಕ+ಐದು ವಿಕೆಟ್

ಭಾರತದಲ್ಲಿ ಅರ್ಧಶತಕ+ಐದು ವಿಕೆಟ್

ವೆಸ್ಟ್ ಇಂಡೀಸ್‌ನ ನಾಯಕ ಜೇಸನ್ ಹೋಲ್ಡರ್ ಮೊದಲ ಇನ್ನಿಂಗ್ಸ್‌ನಲ್ಲಿ 52 ರನ್ ಗಳಿಸಿದರೆ, ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ 56 ರನ್ ನೀಡಿ 5 ವಿಕೆಟ್ ಕಿತ್ತರು. ಭಾರತ ಪ್ರವಾಸ ಕೈಗೊಂಡ ವಿದೇಶಿ ವೇಗದ ಬೌಲರ್‌ಗಳು ಟೆಸ್ಟ್‌ನಲ್ಲಿ ಅರ್ಧಶತಕ ಗಳಿಸಿರುವುದು ಮತ್ತು ಐದು ವಿಕೆಟ್ ಕಬಳಿಸಿರುವುದು ಇದು ಐದನೇ ನಿದರ್ಶನ.

ಬ್ರೂಸ್ ಟೇಲರ್ ಕೋಲ್ಕತಾ, 1965
ಜಾನ್ ಲಿವರ್, ದೆಹಲಿ, 1976
ಇಯಾನ್ ಬಾಥಮ್, ಮುಂಬೈ, 1980
ಮಾಲ್ಕಂ ಮಾರ್ಷಲ್, ಕೋಲ್ಕತಾ, 1983
ಜೇಸನ್ ಹೋಲ್ಡರ್, ಹೈದರಾಬಾದ್, 2018

ರಿಷಬ್ ಪಂತ್-ದ್ರಾವಿಡ್

ರಿಷಬ್ ಪಂತ್-ದ್ರಾವಿಡ್

ಮೊದಲ ಟೆಸ್ಟ್‌ನಲ್ಲಿ 92 ರನ್ ಗಳಿಸಿ ಔಟಾಗಿದ್ದ ವಿಕೆಟ್ ಕೀಪರ್ ರಿಷಬ್ ಪಂತ್, ಎರಡನೆಯ ಟೆಸ್ಟ್‌ನ ಇನ್ನಿಂಗ್ಸ್‌ನಲ್ಲಿಯೂ ಅದೇ ಮೊತ್ತಕ್ಕೆ ಔಟಾದರು. ಭಾರತದ ಬ್ಯಾಟ್ಸ್‌ಮನ್‌ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ 90+ ರನ್ ಗಳಿಸಿ ಔಟಾಗಿರುವುದು ಇದು ಎರಡನೆಯ ನಿದರ್ಶನ. ಈ ಹಿಂದೆ ರಾಹುಲ್ ದ್ರಾವಿಡ್ 1997ರಲ್ಲಿ ಶ್ರೀಲಂಕಾ ವಿರುದ್ಧ 92 & 93 ರನ್ ಗಳಿಸಿದ್ದರು.

Story first published: Monday, October 15, 2018, 16:03 [IST]
Other articles published on Oct 15, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X