ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಾನು 'ಗೇ' ಅಲ್ಲ ಎಂದ ಆಸ್ಟ್ರೇಲಿಯಾ ಕ್ರಿಕೆಟಿಗ ಜೇಮ್ಸ್‌ ಫಾಕ್ನರ್‌

I am not gay, clarifies James Faulkner

ಮೆಲ್ಬೋರ್ನ್‌, ಏಪ್ರಿಲ್‌ 30: ಸಾಮಾಜಿಕ ಜಾಲತಾಣದಲ್ಲಿ ತಾವು ಸಲಿಂಗಿ ಎಂಬುದರ ಸೂಚನೆ ನೀಡುವ ಪೋಸ್ಟ್‌ ಮಾಡಿ ಸಾಕಷ್ಟು ಸುದ್ದಿಯಾಗಿದ್ದ ಆಸ್ಟ್ರೇಲಿಯಾದ ಆಲ್‌ರೌಂಡರ್‌ ಜೇಮ್ಸ್‌ ಫಾಕ್ನರ್‌ ಇದೀಗ ಯೂ-ಟರ್ನ್‌ ಹೊಡೆದಿದ್ದು, ತಾವು ಗೇ ಅಲ್ಲ ಈ ಕುರಿತಾಗಿ ತಪ್ಪು ಗ್ರಹಿಕೆಯಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಆಸ್ಟ್ರೇಲಿಯಾದ ಈ ಖ್ಯಾತ ಕ್ರಿಕೆಟಿಗ ಸಲಿಂಗಕಾಮಿಯಂತೆ
ಸೋಮವಾರ ರಾತ್ರಿ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಒಂದನ್ನು ಹಾಕಿದ್ದ ಫಾಕ್ನರ್‌, ತಮ್ಮ ಬಾಯ್‌ಫ್ರೆಂಡ್‌ ಜೊತೆಗೆ ಊಟ ಮಾಡುತ್ತಿದ್ದು, 5 ವರ್ಷಗಳ ಬಾಂಧವ್ಯವನ್ನು ಸಂಭ್ರಮಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಜೊತೆಗೆ 'ಟುಗೆದರ್‌ ಫಾರ್‌ 5 ಯಿಯರ್ಸ್‌' ಎಂದು ಹ್ಯಾಷ್‌ ಟ್ಯಾಗ್‌ ಕೂಡ ಬಳಕೆ ಮಾಡಿದ್ದರು. ಚಿತ್ರದಲ್ಲಿ ಫಾಕ್ನರ್‌ ಅವರ ತಾಯಿ ಮತ್ತು ಸ್ನೇಹಿತ ರಾಬ್‌ ಜೂಬ್‌ ಇದ್ದರು.

 ಕ್ರಿಕೆಟ್‌ ಜಗತ್ತಿನಲ್ಲಿ ಮತ್ತೊಂದು ಸಲಿಂಗಿ ಮದುವೆ! ಕ್ರಿಕೆಟ್‌ ಜಗತ್ತಿನಲ್ಲಿ ಮತ್ತೊಂದು ಸಲಿಂಗಿ ಮದುವೆ!

"Birthday dinner with the boyfriend @robjubbsta and my mother @roslyn_carol_faulkner #togetherfor5years," ಎಂದು ಫಾಕ್ನರ್‌ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದರು.

 ಶ್ರೀಲಂಕಾ ಬಾಂಬ್‌ ಬ್ಲಾಸ್ಟ್‌: ಕೂದಲೆಳೆ ಅಂತರದಲ್ಲಿ ಪಾರಾದ ಕುಂಬ್ಳೆ! ಶ್ರೀಲಂಕಾ ಬಾಂಬ್‌ ಬ್ಲಾಸ್ಟ್‌: ಕೂದಲೆಳೆ ಅಂತರದಲ್ಲಿ ಪಾರಾದ ಕುಂಬ್ಳೆ!

ಆದರೆ, ಇದೀಗ ಯೂ-ಟರ್ನ್‌ ಹೊಡೆದಿರುವ 29 ವರ್ಷದ ಆಲ್‌ರೌಂಡರ್‌, ಸೋಮವಾರ ರಾತ್ರಿಯ ತಮ್ಮ ಇನ್‌ಸ್ಟಾಗ್ರಾಮ್‌ ಪೋಸ್ಟನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾನು ಗೇ ಅಲ್ಲ. ಆತ ನನ್ನ ಅತ್ಯುತ್ತಮ ಸ್ನೇಹಿತ ಎಂದಿದ್ದಾರೆ.

 ಬಿಸಿಸಿಐಗೆ ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಬ್ಲ್ಯಾಕ್‌ಮೇಲ್‌ ಮೇಲ್‌! ಬಿಸಿಸಿಐಗೆ ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಬ್ಲ್ಯಾಕ್‌ಮೇಲ್‌ ಮೇಲ್‌!

"ಕಳೆದ ರಾತ್ರಿ ನನ್ನ ಪೋಸ್ಟನ್ನು ತಪ್ಪಾಗಿ ಗ್ರಹಿಸಲಾಗಿದೆ. ನಾನು ಗೇ ಅಲ್ಲ. ಇನ್ನು ಎಲ್‌ಜಿಬಿಟಿ ಸಮುದಾಯಕ್ಕೆ ಇಷ್ಟು ಬೆಂಬಲ ಕಂಡು ಸಂತಸವಾಗಿದೆ. ಪ್ರೀತಿ ಎಂದಿಗೂ ಪ್ರೀತಿಯೇ ಎಂಬುದನ್ನು ಮರೆಯಬಾರದು. ಅಂದಹಾಗೆ @ರಾಬ್‌ಜೂಬ್‌ ನನ್ನ ಆತ್ಮೀಯ ಸ್ನೇಹಿತ. ಕಳೆದ ರಾತ್ರಿ ನಾವಿಬ್ಬರು ಒಂದೇ ಮನೆಯಲ್ಲಿ 5 ವರ್ಷ ಕಾಲ ಕಳೆದುದರ ಸಂಭ್ರಮ ಆಚರಿಸಿದೆವು,'' ಎಂದು ಎಡಗೈ ವೇಗಿ ತಮ್ಮ ಮತ್ತೊಂದು ಇನ್‌ಸ್ಟಾಗ್ರಾಮ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ.

 ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಬಂಧನ, ಬಿಡುಗಡೆ ಮೊಹಮ್ಮದ್‌ ಶಮಿ ಪತ್ನಿ ಹಸೀನ್‌ ಜಹಾನ್‌ ಬಂಧನ, ಬಿಡುಗಡೆ

ಅನುಭವಿ ಆಟಗಾರ ಆಸ್ಟ್ರೇಲಿಯಾ ತಂಡದ ಪರ 69 ಏಕದಿನ ಮತ್ತು 24 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿದ್ದಾರೆ. ಫಾಕ್ನರ್‌, 2017ರ ಫೆ.22ರಂದು ಕೊನೆಯ ಬಾರಿ ಆಸ್ಟ್ರೇಲಿಯಾ ತಂಡದ ಪರ ಟಿ20 ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು. 2015ರ ವಿಶ್ವಕಪ್‌ ಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಆಸ್ಟ್ರೇಲಿಯಾ 7 ವಿಕೆಟ್‌ ಜಯ ದಾಖಲಿಸಿದ ಪಂದ್ಯದಲ್ಲಿ ಫಾಕ್ನರ್‌ ಪಂದ್ಯಶ್ರೇಷ್ಠ ಗೌರವ ಪಡೆದುಕೊಂಡಿದ್ದರು.

Story first published: Tuesday, April 30, 2019, 12:34 [IST]
Other articles published on Apr 30, 2019
Read in English:
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X