ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಬೇಸಗೆಯಲ್ಲಿ ಕೊಹ್ಲಿಗಿಂತ ವಿಲಿಯಮ್ಸನ್ ಹೆಚ್ಚು ರನ್ ಗಳಿಸುತ್ತಾರೆ: ವಾನ್

I think Kane Williamson may score a few more runs than Virat Kohli this summer: Michael Vaughan

ಸಿಡ್ನಿ: ವಿಶ್ವದಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂಬ ಚರ್ಚೆ ನಡೆಯುತ್ತಲೇ ಇದೆ. ಹೆಚ್ಚಿನವರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಲ್ಲಿ ಅತ್ಯುತ್ತಮ ಆಟಗಾರ ಎನ್ನುತ್ತಿದ್ದಾರೆ. ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್, ಈ ಬಾರಿ ವಿಶ್ವ ಶ್ರೇಷ್ಠ ಕೊಹ್ಲಿಗಿಂತ ಕೇನ್ ವಿಲಿಯಮ್ಸನ್ ಸ್ವಲ್ಪ ಹೆಚ್ಚು ರನ್ ಗಳಿಸುತ್ತಾರೆ ಎಂದಿದ್ದಾರೆ.

ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!ತಪ್ಪು ಸರಿಪಡಿಸದಿದ್ದರೆ ಭಾರತೀಯ ಮಹಿಳಾ ತಂಡಕ್ಕೆ ಕಂಟಕ ಪಕ್ಕ!

ಐಪಿಎಲ್ ಅರ್ಧಕ್ಕೆ ನಿಲುಗಡೆಯಾಗಿರುವುದರಿಂದ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ ಪಂದ್ಯಕ್ಕೆ ತಯಾರಾಗುತ್ತಿವೆ. ಇತ್ತಂಡಗಳ ನಡುವಿನ ಈ ಪ್ರತಿಷ್ಠಿತ ಪಂದ್ಯದಲ್ಲಿ ವಿಲಿಯಮ್ಸನ್ ಹೆಚ್ಚು ಮೇಲುಗೈ ಸಾಧಿಸಲಿದ್ದಾರೆ ಎಂದು ವಾನ್ ಹೇಳಿದ್ದಾರೆ. ಜೂನ್ 18ರಿಂದ 22ರ ವರೆಗೆ ಟೆಸ್ಟ್‌ ಚಾಂಪಿಯನ್‌ಶಿಪ್‌ ನಡೆಯಲಿದೆ.

ಇದಕ್ಕೂ ಮುನ್ನ ವಾನ್, ಕೇನ್ ವಿಲಿಯಮ್ಸನ್ ಒಂದು ವೇಳೆ ಭಾರತೀಯನಾಗಿರುತ್ತಿದ್ದರೆ ಅವರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಮತ್ತು ಗಳಿಕೆ ಕೊಹ್ಲಿಯಷ್ಟೇ ಇರುತ್ತಿತ್ತು. ಬರೀ ಜನಪ್ರಿಯತೆ ವಿಚಾರದಲ್ಲಿ ಅಲ್ಲ, ಕ್ರಿಕೆಟ್‌ನಲ್ಲೂ ವಿಲಿಯಮ್ಸನ್ ಬೆಸ್ಟ್‌ ಬ್ಯಾಟ್ಸ್‌ಮನ್‌ ಅನ್ನಿಸಿಕೊಳ್ಳುತ್ತಿದ್ದರು ಎಂದು ಹೇಳಿಕೆ ನೀಡಿದ್ದರು.

ಗೋವಾ ಟ್ರಿಪ್ ಹೊರಟಿದ್ದ ಪೃಥ್ವಿ ಶಾ ಕಾರು ತಡೆದ ಪೊಲೀಸರು, ಮುಂದೇನಾಯ್ತು?ಗೋವಾ ಟ್ರಿಪ್ ಹೊರಟಿದ್ದ ಪೃಥ್ವಿ ಶಾ ಕಾರು ತಡೆದ ಪೊಲೀಸರು, ಮುಂದೇನಾಯ್ತು?

'ಬಹಳಷ್ಟು ಕ್ರಿಕೆಟ್ ಪಂಡಿತರು ಕೊಹ್ಲಿ ಬಗ್ಗೆ ಬೊಬ್ಬೆ ಹೊಡೆಯುತ್ತಿರುತ್ತಾರೆ. ಆತನಿಗೆ ಅದು ಇಷ್ಟವಾಗುತ್ತದೋ ಇಲ್ಲವೋ ಗೊತ್ತಿಲ್ಲ. ಕಳೆದ ಸಾರಿ ಇಂಗ್ಲೆಂಡ್‌ಗೆ ಬಂದಿದ್ದಾಗ ಕೊಹ್ಲಿ ಯಶಸ್ವಿ ಆಗಿದ್ದರು. ಅದರೆ ರನ್ ವಿಚಾರದಲ್ಲಿ ಕೊಹ್ಲಿ ಪರದಾಡಿದ್ದರು. ಈ ಬೇಸಗೆಯಲ್ಲಿ ಕೊಹ್ಲಿಗಿಂತ ವಿಲಿಯಮ್ಸನ್ ಹೆಚ್ಚು ರನ್ ಗಳಿಸುತ್ತಾರೆ ಎಂದು ನಾನು ಬೇಕಾದರೆ ಬೆಟ್ ಕಟ್ಟುತ್ತೇನೆ,' ಎಂದು ಸ್ಪಾರ್ಕ್ ಸ್ಪೋರ್ಟ್ಸ್ ಜೊತೆ ವಾನ್ ಹೇಳಿಕೊಂಡಿದ್ದಾರೆ.

Story first published: Saturday, May 15, 2021, 13:22 [IST]
Other articles published on May 15, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X