ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯ ಅಭ್ಯಾಸ ನೋಡಿ ನಾಚಿಕೆಯಾಗಿತ್ತು: ತಮೀಮ್ ಇಕ್ಬಾಲ್

I was ashamed seeing Virat Kohli train says Tamim Iqbal

ಧಾಕಾ, ಜೂನ್ 3: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಫಿಟ್ನೆಸ್ ಅಭ್ಯಾಸ ನೋಡಿ ನನಗೆ ನಾಚಿಕೆಯಾಗಿತ್ತು ಎಂದು ಬಾಂಗ್ಲಾದೇಶದ ಆರಂಭಿಕ ಬ್ಯಾಟ್ಸ್‌ಮನ್ ತಮೀಮ್ ಇಕ್ಬಾಲ್ ಹೇಳಿದ್ದಾರೆ. ಈ ಘಟನೆ ಸುಮಾರು 2-3 ವರ್ಷಗಳಿಗೆ ಹಿಂದೆ ನಡೆದಿತ್ತು. ಕೊಹ್ಲಿಯಷ್ಟೇ ವಯಸ್ಸಾಗಿರುವಾಗ ತಾನೇಕೆ ಅವರಂತೆ ಫಿಟ್ನೆಸ್ ಕಾಯ್ದುಕೊಳ್ಳಬಾರದು ಎಂದು ಆವತ್ತು ನಾನು ಯೋಚಿಸಿದ್ದೆ ಎಂದು ಇಕ್ಬಾಲ್ ಘಟನೆ ಸ್ಮರಿಸಿಕೊಂಡಿದ್ದಾರೆ.

ಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳುಏಕದಿನದಲ್ಲಿ ವೇಗದ 10,000 ರನ್ ದಾಖಲೆ ಬರೆದ ಟಾಪ್ 5 ಬ್ಯಾಟ್ಸ್‌ಮನ್‌ಗಳು

ಕವರ್ ಡ್ರೈವ್, ರಿಸ್ಟಿ ಫ್ಲಿಕ್ಸ್ ಸಾಮಾರ್ಥ್ಯದಿಂದ ವಿರಾಟ್ ಕೊಹ್ಲಿ ಎಲ್ಲಾ ಮಾದರಿಗಳಲ್ಲಿ ಸುಲಭವಾಗಿ ರನ್ ಗಳಿಸುತ್ತಿದ್ದಾರೆ. ಮುಖ್ಯವಾಗಿ ಚೇಸಿಂಗ್‌ ಟೋಟಲ್‌ ಅನ್ನು ಟೀಮ್ ಇಂಡಿಯಾ ಸುಲಭವಾಗಿ ತಲುಪೋದೇ ಇಂಥ ಬ್ಯಾಟ್ಸ್‌ಮನ್‌ಗಳ ನೆರವಿನಿಂದ. ಉತ್ತಮ ಫಿಟ್ನೆಸ್‌ ಕಾರಣಕ್ಕಾಗಿಯೇ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಸಾಲಿನಲ್ಲಿ ಕೊಹ್ಲಿ ಗುರುತಿಸಿಕೊಂಡಿದ್ದಾರೆ.

ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟದತ್ತ ಕರೆದೊಯ್ದಿದ್ದು 'ಈತ' ಎಂದ ಯೂಸುಫ್ ಪಠಾಣ್ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟದತ್ತ ಕರೆದೊಯ್ದಿದ್ದು 'ಈತ' ಎಂದ ಯೂಸುಫ್ ಪಠಾಣ್

ಕೊಹ್ಲಿಯ ಫಿಟ್ನೆಸ್ ಅನ್ನು ತಮೀಮ್ ಇಕ್ಬಾಲ್ ಶ್ಲಾಘಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ ಪಂದ್ಯಕ್ಕೂ ಮುನ್ನ ಕೊಹ್ಲಿ ಹೇಗೆ ತಯಾರಿ ನಡೆಸುತ್ತಾರೆ, ಫಿಟ್ನೆಸ್ ತಂದುಕೊಳ್ಳುತ್ತಾರೆ ಎಂದು ಒಮ್ಮೆ ಇಕ್ಬಾಲ್ ನೋಡಿದ್ದರಂತೆ. ಆವತ್ತು ಇಕ್ಬಾಲ್‌ಗೆ ತುಂಬಾ ನಾಚಿಕೆಯಾಗಿತ್ತಂತೆ.

 ಜಾರ್ಜ್ ಅಂತ್ಯಕ್ರಿಯೆಯ ವೆಚ್ಚ ಭರಿಸಲು ಮುಂದಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್ ಜಾರ್ಜ್ ಅಂತ್ಯಕ್ರಿಯೆಯ ವೆಚ್ಚ ಭರಿಸಲು ಮುಂದಾದ ಬಾಕ್ಸರ್ ಫ್ಲಾಯ್ಡ್ ಮೇವೆದರ್

ಸಂಜಯ್ ಮಂಜ್ರೇಕರ್ ಜೊತೆ ಇಎಸ್‌ಪಿಎನ್ ಕ್ರಿಕ್‌ಇನ್ಫೋನಲ್ಲಿ ಮಾತನಾಡುತ್ತಾ ಇಕ್ಬಾಲ್, 'ಇದನ್ನು ಹೇಳಿಕೊಳ್ಳಲು ನನಗೇನೂ ನಾಚಿಕೆಯಿಲ್ಲ. ಸುಮಾರು 2-3 ವರ್ಷಗಳ ಹಿಂದೆ ಕೊಹ್ಲಿ ಓಡಿ ಅಭ್ಯಾಸ ಮಾಡುತ್ತಿದ್ದುದು ನೋಡಿ ನನಗೆ ನಾಚಿಕೆಯಾಗಿತ್ತು. ಈ ವ್ಯಕ್ತಿಗೆ ಬಹುಶಃ ನನ್ನಷ್ಟೇ ವಯಸ್ಸು. ಆದರೆ ನಾನು ಈತನ ಅರ್ಧಕ್ಕೂ ಅಭ್ಯಾಸ ನಡೆಸುತ್ತಿಲ್ಲ ಎಂದು ಆವತ್ತು ಅನ್ನಿಸಿತ್ತು,' ಎಂದು ವಿವರಿಸಿದರು.

ನೆಚ್ಚಿನ ಆಲ್‌ ಟೈಮ್ ಒಡಿಐ ತಂಡ ಪ್ರಕಟಿಸಿದ ಶ್ರೀಶಾಂತ್, ದಾದಾ ನಾಯಕನೆಚ್ಚಿನ ಆಲ್‌ ಟೈಮ್ ಒಡಿಐ ತಂಡ ಪ್ರಕಟಿಸಿದ ಶ್ರೀಶಾಂತ್, ದಾದಾ ನಾಯಕ

'ಇಂಡಿಯನ್ ಕಾಮೆಂಟೇಟರ್ ಜೊತೆ ಮಾತನಾಡುತ್ತಿದ್ದೇನೆ ಅನ್ನೋ ಕಾರಣಕ್ಕೆ ನಾನಿದನ್ನು ಹೇಳುತ್ತಿಲ್ಲ. ಭಾರತ ನಮ್ಮ ನೆರೆಯ ದೇಶ. ಅಲ್ಲಿ ಏನು ನಡೆದರೂ ಅದು ನಮಗೂ ಪ್ರಭಾವ ಬೀರುತ್ತದೆ. ಕೊಹ್ಲಿಯಿಂದಾಗಿ ಟೀಮ್ ಇಂಡಿಯಾದ ಅಭ್ಯಾಸದಲ್ಲಿ ಗಣನೀಯ ಬದಲಾವಣೆಯಾಗಿದೆ. ಅದಿನ್ನು ಬಾಂಗ್ಲಾಕ್ಕೂ ಪ್ರಭಾವ ಬೀರಲಿದೆ,' ಎಂದು ಇಕ್ಬಾಲ್ ಹೇಳಿದ್ದಾರೆ.

Story first published: Wednesday, June 3, 2020, 16:25 [IST]
Other articles published on Jun 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X