2028ರ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೆ ಬಿಡ್ ಸಲ್ಲಿಸುವುದನ್ನು ಖಚಿತಪಡಿಸಿದ ಐಸಿಸಿ

ಕ್ರಿಕೆಟ್ ಪ್ರೇಮಿಗಳು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯಾವಳಿಯನ್ನು ಕೂಡ ನೋಡುವ ಕಾಲ ಸನ್ನಿಹಿತವಾದಂತಿದೆ. ಇದಕ್ಕೆ ಕಾರಣ ಐಸಿಸಿ ತೆಗೆದುಕೊಂಡಿರುವ ನಿರ್ಧಾರ. 2028ರಲ್ಲಿ ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್‌ಅನ್ನು ಕೂಡ ಸೇರ್ಪಡೆಗೊಳಿಸಬೇಕೆಂದು ಐಸಿಸಿ ಬಯಸಿದ್ದು ಇದಕ್ಕೆ ಸಂಬಂಧಿಸಿದಂತೆ ಬಿಡ್ ಸಲ್ಲಿಸಲು ಐಸಿಸಿ ಮುಂದಾಗಿದೆ. ಈ ಬಗ್ಗೆ ಮಂಗಳವಾರ ಐಸಿಸಿ ಖಚಿತಪಡಿಸಿದೆ.

ಕಳೆದ ಹಲವು ವರ್ಷಗಳಿಮದ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಬಗ್ಗೆ ಐಸಿಸಿ ಒಲವು ವ್ಯಕ್ತಪಡಿಸಿದ್ದು ಈ ಬಗ್ಗೆ ಪ್ರಯತ್ನಗಳನ್ನು ನಡೆಸಿಕೊಂಡು ಬಂದಿತ್ತು. ಆದರೆ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ ಎನಿಸಿರುವ ಭಾರತೀಯ ಕ್ರಿಕೆಟ್ ನಿಯಂತ್ರಣಾ ಮಂಡಳಿ ಇದರಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರಲಿಲ್ಲ. ಆದರೆ ಈಗ ಬಿಸಿಸಿಐ ಕೂಡ ತನ್ನ ನಿಲುವನ್ನು ಬದಲಾಯಿಸಿಕೊಂಡಿದೆ. ಸೋಮವಾರ ಈ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಪ್ರತಿಕ್ರಿಯಿಸಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಂಡರೆ ಭಾರತ ಆದರಲ್ಲಿ ಸ್ಪರ್ಧಿಸಲಿದೆ ಎಂದಿದ್ದರು. ಈ ಬೆಳವಣಿಗೆಯ ಮರುದಿನವೇ ಐಸಿಸಿ ಕೂಡ ಒಲಿಂಪಿಕ್ಸ್‌ನಲ್ಲಿ ಬಿಡ್ ಸಲ್ಲಿಸುವುದನ್ನು ಖಚಿತಪಡಿಸಿದೆ.

ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ನ ಸೇರ್ಪಡೆಗಾಗಿ ಪೂರಕ ಕಾರ್ಯಗಳನ್ನು ನಡೆಸುವ ನಿಟ್ಟಿನಲ್ಲಿ ಐಸಿಸಿ ಕಾರ್ಯಪಡೆಯೊಂದನ್ನು ರಚನೆ ಮಾಡಿಕೊಂಡಿದೆ. ಈ ಮೂಲಕ 2028ರ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗೊಳಿಸಲು ಸಾಕಷ್ಟು ಉತ್ಸುಕತೆಯಿಂದ ಮುಂದಾಗಿದೆ. ಈ ಬಗ್ಗೆ ಐಸಿಸಿ ಮುಖ್ಯಸ್ಥ ಗ್ರೇಗ್ ಬಾರ್ಕ್ಲೇ ಪ್ರತಿಕ್ರಿಯಿಸಿದ್ದು "ಈ ಬಿಡ್‌ನ ಹಿಂದೆ ನಮ್ಮ ಕ್ರೀಡೆ ಒಟ್ಟಾಗಿದೆ. ಈ ಮೂಲಕ ಭವಿಷ್ಯದಲ್ಲಿ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಭಾಗವಾಗುವುದನ್ನು ನೋಡಲು ನಾವು ಬಯಸುತ್ತೇವೆ. ನಾವು ವಿಶ್ವಾದ್ಯಂತ 100 ಕೋಟಿಗೂ ಅಧಿಕ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿದ್ದೇವೆ. ಇದರಲ್ಲಿ 90 ಶೇಕಡಾದಷ್ಟು ಜನರು ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ಅನ್ನು ನೋಡಲು ಬಯಸುತ್ತಾರೆ" ಎಂದಿದ್ದಾರೆ.

ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್ಟಿ20 ವಿಶ್ವಕಪ್‌ ತಂಡದಿಂದ ದಿಗ್ಗಜ ಆಟಗಾರನಿಗೆ ಕೊಕ್ ನೀಡಿದ ನ್ಯೂಜಿಲೆಂಡ್

ಕ್ರಿಕೆಟ್ ಅತ್ಯಂತ ಹೆಚ್ಚು ಅಭಿಮಾನಿಗಳ ಬಳಗವನ್ನು ಹೊಂದಿರುವ ಕ್ರೀಡೆ ಎಂಬುದು ಅತ್ಯಂತ ಸ್ಪಷ್ಟವಾಗುತ್ತದೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಏಷ್ಯಾದಲ್ಲಿಯೇ 92 ಶೇಕಡಾದಷ್ಟು ಅಭಿಮಾನಿಗಳನ್ನು ಕ್ರಿಕೆಟ್ ಹೊಂದಿದೆ. ಯುಎಸ್‌ಎಯಲ್ಲಿ 3 ಕೋಟಿಯಷ್ಟು ಕ್ರಿಕೆಟ್ ಪ್ರೇಮಿಗಳಿದ್ದಾರೆ. ಈ ಎಲ್ಲಾ ಕ್ರಿಕೆಟ್ ಪ್ರೇಮಿಗಳಿಗೆ ಈ ಮೂಲಕ ತಮ್ಮ ನೆಚ್ಚಿನ ಆಟಗಾರರು ಒಲಿಂಪಿಕ್ಸ್ ಪದಕಕ್ಕಾಗಿ ಸ್ಪರ್ಧಿಸುವುದನ್ನು ನೋಡುವ ಅವಕಾಶ ದೊರೆಯುತ್ತದೆ" ಎಂದು ಐಸಿಸಿ ಮುಖ್ಯಸ್ಥ ಗ್ರೇಗ್ ಬಾರ್ಕ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

ಈ ಮೂಲಕ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗುವ ಸಾಧ್ಯತೆ ದಟ್ಟವಾಗಿದೆ. ಇದರಲ್ಲಿ ಅವಕಾಶ ದೊರೆತರೆ 8 ತಂಡಗಳ ಮಧ್ಯೆ ಪದಕಕ್ಕಾಗಿ ಕದನ ನಡೆಯುವ ಸಾಧ್ಯತೆಯಿದೆ. ಈ ಮೂಲಕ ಒಲಿಂಪಿಕ್ಸ್‌ಗೆ ಕ್ರಿಕೆಟ್ ಮರು ಸೇರ್ಪಡೆಯಾಗಲು ವೇದಿಕೆ ಸಜ್ಜಾದಂತಾಗುತ್ತದೆ. ವಿಶ್ವದಲ್ಲಿ ಅತಿ ಹೆಚ್ಚು ಆಡುವ ಕ್ರೀಡೆಗಳ ಪೈಕಿ ಕ್ರಿಕೆಟ್ ಕೂಡ ಒಂದಾಗಿದ್ದರೂ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಇಲ್ಲದಿರುವುದು ಕ್ರಿಕೆಟ್ ಪ್ರೇಮಿಗಳ ನಿರಾಸೆಗೆ ಕಾರಣವಾಗಿತ್ತು. ಲಾಸ್ ಏಂಜಲೀಸ್ ಈ ನಿರಾಸೆಯನ್ನು ಅಂತ್ಯಗೊಳಿಸುವ ಸಾಧ್ಯತೆಯಿದೆ.

ಲಾಸ್ ಏಂಜಲೀಸ್‌ನಲ್ಲಿ ನಡೆಯುವ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಆಟಕ್ಕೆ ಅವಕಾಶ ದೊರೆತರೆ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಎರಡನೇ ಬಾರಿಗೆ ಆಡುವ ಅವಕಾಶ ಪಡೆದುಕೊಂಡಂತಾಗುತ್ತದೆ. 1900ನೇ ಇಸವಿಯಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಕೂಡ ಕ್ರಿಕೆಟ್ ಸ್ಪರ್ಧೆಯಲ್ಲಿತ್ತು. ಈ ಸಂದರ್ಭದಲ್ಲಿ ಕೇವಲ 2 ಕ್ರಿಕೆಟ್ ತಂಡಗಳು ಮಾತ್ರವೇ ಕ್ರಿಕೆಟ್‌ನಲ್ಲಿ ಪದಕ್ಕಾಗಿ ಭಾಗವಹಿಸಿದ್ದವು. ಫ್ರಾನ್ಸ್ ಹಾಗೂ ಗ್ರೇಟ್ ಬ್ರಿಟನ್ ತಂಡಗಳು ಪದಕಕ್ಕಾಗಿ ಸ್ಪರ್ಧೆಗಿಳಿದಿದ್ದವು. ಸೀಮಿತ ಓವರ್‌ಗಳ ಕ್ರಿಕೆಟ್‌ನ ಕಲ್ಪನೆಯಿಲ್ಲದ ಆ ದಿನಗಳಲ್ಲಿ ಎರಡು ದಿನಗಳ ಕ್ರಿಕೆಟ್ ಪಂದ್ಯವನ್ನು ಒಲಿಂಪಿಕ್ಸ್‌ನಲ್ಲಿ ಆಯೋಜಿಸಲಾಗಿತ್ತು. ಇದರಲ್ಲಿ ಗ್ರೇಟ್ ಬ್ರಿಟನ್ ಗೆದ್ದು ಚಿನ್ನದ ಪದಕ ಗಳಿಸಿದ್ದರೆ ಫ್ರಾನ್ಸ್ ಸೋಲು ಕಂಡು ಬೆಳ್ಳಿಯ ಪದಕವನ್ನು ಗಳಿಸಿತ್ತು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Tuesday, August 10, 2021, 16:24 [IST]
Other articles published on Aug 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X