ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019 ಟಿಕೆಟ್ ಖರೀದಿ : ಎಲ್ಲಿ? ಯಾವಾಗ? ಹೇಗೆ?

By Mahesh
 ICC Cricket World Cup 2019: A fan guide to when, where and how to buy tickets

ಬೆಂಗಳೂರು, ಆಗಸ್ಟ್ 02: ಐಸಿಸಿ ಕ್ರಿಕೆಟ್ ವಿಶ್ವಕಪ್ 2019ಕ್ಕಾಗಿ ಸಾರ್ವಜನಿಕ ಬ್ಯಾಲೆಟ್ ವ್ಯವಸ್ಥೆ ಮೂಲಕ ಅಭಿಮಾನಿಗಳಿಗೆ ಟಿಕೆಟ್ ಹಂಚಲು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ನಿರ್ಧರಿಸಿದೆ.

ವಿಶ್ವಕಪ್ 2019 ಟಿಕೆಟ್ ಖರೀದಿ : ಎಲ್ಲಿ? ಯಾವಾಗ? ಹೇಗೆ? ಇಲ್ಲಿದೆ ವಿವರಣೆ;

ಐಸಿಸಿ ವಿಶ್ವಕಪ್ ವೇಳಾಪಟ್ಟಿ ಐಸಿಸಿ ವಿಶ್ವಕಪ್ ವೇಳಾಪಟ್ಟಿ

ಸಾರ್ವಜನಿಕ ಬ್ಯಾಲೆಟ್ ವ್ಯವಸ್ಥೆ ಆರಂಭ ತೆರೆಯಲಾಗುತ್ತದೆ?
ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ಸಾರ್ವಜನಿಕ ಬ್ಯಾಲೆಟ್ ವ್ಯವಸ್ಥೆ ಆಗಸ್ಟ್ 01ರಿಂದ ಆರಂಭಗೊಂಡಿದೆ. ಎಲ್ಲಾ ಮನವಿಗೂ ಸಮಾನ ಆದ್ಯತೆ ಸಿಗಲಿದ್ದು, ಮೊದಲು ಬಂದವರಿಗೆ ಆದ್ಯತೆ ಎಂಬ ಸ್ಥಿತಿ ಇಲ್ಲ.

ಈ ವ್ಯವಸ್ಥೆ ಎಲ್ಲಿ ತನಕ ಜಾರಿಯಲ್ಲಿರುತ್ತದೆ?
ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ಬ್ಯಾಲೆಟ್ ವ್ಯವಸ್ಥೆಯು ಆಗಸ್ಟ್ 29, 2018ರ ಸಂಜೆ ತನಕ ತೆರೆದಿರುತ್ತದೆ.

ವಿಶ್ವಕಪ್ 2019 : ಜೂನ್ 16ಕ್ಕೆ ಭಾರತ-ಪಾಕಿಸ್ತಾನ ಪಂದ್ಯ ವಿಶ್ವಕಪ್ 2019 : ಜೂನ್ 16ಕ್ಕೆ ಭಾರತ-ಪಾಕಿಸ್ತಾನ ಪಂದ್ಯ

ಐಸಿಸಿ ಕ್ರಿಕೆಟ್ ವಿಶ್ವಕಪ್ 2019 ಬ್ಯಾಲೆಟ್ ವ್ಯವಸ್ಥೆಯಲ್ಲಿ ಭಾಗವಹಿಸುವುದು ಹೇಗೆ?
* ಕ್ರಿಕೆಟ್ ವಿಶ್ವಕಪ್ 19ರ ಅಧಿಕೃತ ವೆಬ್ ತಾಣದಲ್ಲಿ ನೋಂದಾಯಿಸಿಕೊಳ್ಳಬೇಕು. ಮೊದಲೇ ಖಾತೆ ಇದ್ದರೆ ಮತ್ತೊಮ್ಮೆ ನೋಂದಾಯಿಸುವುದು ಬೇಡ.
* ಮೈ ಅಪ್ಲಿಕೇಷನ್ ವಿಭಾಗದಲ್ಲಿ ಹೊಸ ಅಪ್ಲಿಕೇಷನ್ ಸೃಷ್ಟಿಸಿ, ಎಲ್ಲಾ 48 ಪಂದ್ಯಗಳ ಟಿಕೆಟ್ ಗೆ ಅನುಮತಿ ಪಡೆಯಬಹುದು.
* ಪಂದ್ಯ ಹಾಗೂ ಎಷ್ಟು ಟಿಕೆಟ್ ಬೇಕೋ ಆಯ್ಕೆ ಮಾಡಿಕೊಂಡು, ಟಿಕೆಟ್ ಬುಕ್ ಮಾಡಿ.

ಎಷ್ಟು ಪಂದ್ಯಗಳಿಗೆ ಬುಕ್ ಮಾಡಬಹುದು?
ಒಬ್ಬರು ಎಷ್ಟು ಟಿಕೆಟ್ ಬೇಕಾದರೂ ಬುಕ್ ಮಾಡಬಹುದು. ಬ್ಯಾಲೆಟ್ ಮೂಲಕವೇ ಅರ್ಜಿ ಸಲ್ಲಿಸಬೇಕು. ಪ್ರತಿ ಮ್ಯಾಚ್ ಪುಟದಲ್ಲಿ ಟಿಕೆಟ್ ಬಗ್ಗೆ ಮಾಹಿತಿ ಇರುತ್ತದೆ.

ಟಿಕೆಟ್ ಖಾತ್ರಿ ಯಾವಾಗ ಸಿಗಲಿದೆ?
ಸಾರ್ವಜನಿಕ ಬ್ಯಾಲೆಟ್ ನಲ್ಲಿ ಅರ್ಜಿ ಹಾಕಿದವರಿಗೆ ಸೆಪ್ಟೆಂಬರ್ ಅಂತ್ಯದೊಳಗೆ ಟಿಕೆಟ್ ಖಾತ್ರಿ ಬಗ್ಗೆ ಮಾಹಿತಿ ಸಿಗಲಿದೆ.

Story first published: Thursday, August 2, 2018, 15:55 [IST]
Other articles published on Aug 2, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X