ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ನಲ್ಲಿ ಮುಖಾಮುಖಿ : ಭಾರತದ ವಿರುದ್ಧ ಕಿವೀಸ್ ಮೇಲುಗೈ

ICC Cricket World Cup : Head to head between India and New Zealand

ಈ ವಿಶ್ವಕಪ್ ನಲ್ಲಿ ಇಲ್ಲಿಯವರೆಗೆ ಅಜೇಯವಾಗುಳಿದಿರುವ ಎರಡೇ ತಂಡಗಳಾದ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಇಂದು ನಡೆಯಲಿರುವ ಮಹತ್ವದ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದಾನೆ. ಅಲ್ಲೂ ಕಪ್ಪೆಗಳೆರಡು ಗಪ್ ಚಿಪ್ ಆಗಿ ಮದುವೆ ಮಾಡಿಕೊಂಡು ಬಿಟ್ಟವಾ? ಏನು ಕಥೆ?

ತಮಾಷೆಯ ಮಾತು ಹಾಗಿರಲಿ, ಇವೆರಡು ಬಲಿಷ್ಠ ತಂಡಗಳ ನಡುವಿನ ರೋಚಕ ಹಣಾಹಣಿಯನ್ನು ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಸಜ್ಜಾಗಿದ್ದಾರೆ. ನ್ಯೂಜಿಲೆಂಡ್ ಈಗಾಗಲೆ ಈ ವಿಶ್ವಕಪ್ ನಲ್ಲಿ 3 ಬಾರಿ ಗೆದ್ದಿದ್ದರೆ, ಭಾರತ 2 ಪಂದ್ಯಗಳಲ್ಲಿ ಗೆಲುವನ್ನು ದಾಖಲಿಸಿದೆ.

ಭಾರತ vs ಕಿವೀಸ್: ಪಂದ್ಯ ವೀಕ್ಷಿಸುವ ಕ್ರಿಕೆಟ್ ಪ್ರಿಯರ ಆಸೆಗೆ ತಣ್ಣೀರಾ?!ಭಾರತ vs ಕಿವೀಸ್: ಪಂದ್ಯ ವೀಕ್ಷಿಸುವ ಕ್ರಿಕೆಟ್ ಪ್ರಿಯರ ಆಸೆಗೆ ತಣ್ಣೀರಾ?!

ಇವೆರಡು ರಾಷ್ಟ್ರಗಳ ನಡುವಿನ ಪಂದ್ಯವನ್ನು ಕುತೂಹಲದಿಂದ ನೋಡಲು ಹಲವಾರು ಕಾರಣಗಳಿವೆ. ಏಕೆಂದರೆ, ಅಭ್ಯಾಸ ಪಂದ್ಯದಲ್ಲಿಯೇ ಭಾರತವನ್ನು ನ್ಯೂಜಿಲೆಂಡ್ ಸೋಲಿಸಿ ತನ್ನ ತಾಕತ್ತನ್ನು ತೋರಿಸಿತ್ತು. ಆರಂಭದಲ್ಲಿ ಭಾರತ ಸಪ್ಪೆಯಾಗಿ ಕಂಡರೂ, ಪಂದ್ಯಾವಳಿ ಶುರುವಾದ ನಂತರ ತನ್ನ ಸಾಮರ್ಥ್ಯವೇನೆಂದು ತೋರಿಸಿದೆ.

ಎರಡರ ನಡುವಿನ ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ ದಾಖಲೆಗಳನ್ನು ಗಮನಿಸಿದರೆ, ಭಾರತ ಅಲ್ಪ ಮೇಲುಗೈ ಸಾಧಿಸಿದ್ದರೂ, ಐಸಿಸಿ ವಿಶ್ವಕಪ್ ಪಂದ್ಯಾವಳಿಯನ್ನು ಪರಿಗಣನೆಗೆ ತೆಗೆದುಕೊಂಡರೆ, ನ್ಯೂಜಿಲೆಂಡ್ ತಂಡ ಭಾರತಕ್ಕಿಂತ ಒಂದು ಕೈ ಮೇಲಿದೆ.

1
43661

ವಿಶ್ವಕಪ್ ನಲ್ಲಿ ಒಟ್ಟು 7 ಪಂದ್ಯಗಳು ನ್ಯೂಜಿಲೆಂಡ್ ಮತ್ತು ಭಾರತದ ನಡುವೆ ನಡೆದಿದ್ದರೆ, ಅವುಗಳಲ್ಲಿ 4ರಲ್ಲಿ ಕಿವೀಸ್ ಜಯ ಸಾಧಿಸಿದ್ದಾರೆ, ಭಾರತ 3ರಲ್ಲಿ ವಿಜಯಿಯಾಗಿದೆ. ಒಟ್ಟಾರೆಯಾಗಿ ಎರಡೂ ರಾಷ್ಟ್ರಗಳ ನಡುವೆ ನಡೆದಿರುವ ಏಕದಿನ ಪಂದ್ಯಗಳಲ್ಲಿ ಇಲ್ಲಿಯವರೆಗೆ ಭಾರತ 55ರಲ್ಲಿ ಗೆದ್ದಿದೆ.

ಆದರೆ, ಇತ್ತೀಚೆಗೆ ನಡೆದಿರುವ ಕಳೆದ 5 ಪಂದ್ಯಗಳಲ್ಲಿ ಗಮನಿಸಿದರೆ, ಭಾರತ ನಾಲ್ಕರಲ್ಲಿ ನ್ಯೂಜಿಲೆಂಡ್ ಅನ್ನು ಸದೆಬಡಿದು, ಒಂದರಲ್ಲಿ ಮಾತ್ರ ಸೋತಿದೆ. ಈ ಎಲ್ಲ ಪಂದ್ಯಗಳು ನಡೆದಿದ್ದು ನ್ಯೂಜಿಲೆಂಡ್ ನಲ್ಲಿಯೇ ಎಂಬುದು ಗಮನಾರ್ಹ. ವಿರಾಟ್ ಕೊಹ್ಲಿ ಪಡೆ ಯಾವುದೇ ತಂಡವಿರಲಿ ಸದೆಬಡಿಯಲು ಸಜ್ಜಾಗಿದೆ.

ವಿಶ್ವಕಪ್ 2019: ಹೊಸ ಆರಂಭದ ಮುನ್ನುಡಿ ಬರೆಯುವರಾ ಕೆಎಲ್ ರಾಹುಲ್? ವಿಶ್ವಕಪ್ 2019: ಹೊಸ ಆರಂಭದ ಮುನ್ನುಡಿ ಬರೆಯುವರಾ ಕೆಎಲ್ ರಾಹುಲ್?

ಭಾರತದ ತಂಡದ ಆತ್ಮವಿಶ್ವಾಸ ಉತ್ತಮ ಮಟ್ಟದಲ್ಲಿದೆ ಎನ್ನುವಷ್ಟರಲ್ಲಿ, ಎಡಗೈ ಹೆಬ್ಬೆರಳಿಗೆ ಆರಂಭಿಕ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಗಾಯ ಮಾಡಿಕೊಂಡಿರುವುದು ಚಿಂತೆಯ ವಿಷಯವಾಗಿದೆ. ಅವರ ಸ್ಥಾನದಲ್ಲಿ ಬೆಂಚ್ ಅಲಂಕರಿಸಿದ್ದ ಕೆಎಲ್ ರಾಹುಲ್ ಅವರು ಆಡುವ ಸಾಧ್ಯತೆ ದಟ್ಟವಾಗಿದೆ. ಇದು ರಾಹುಲ್ ಅವರಿಗೆ ಕೂಡಿ ಬಂದ ಅದ್ಭುತ ಅವಕಾಶ.

ಅಲ್ಲದೆ, ಸ್ಫೋಟಕ ಆಟಗಾರ ಮತ್ತು ವಿಕೆಟ್ ಕೀಪರ್ ರಿಶಬ್ ಪಂತ್ ಅವರನ್ನೂ ಇಂಗ್ಲೆಂಡಿಗೆ ಕರೆಯಿಸಿಕೊಳ್ಳಲಾಗಿದೆ. ಶಿಖರ್ ಧವನ್ ಅವರು ಹೆಚ್ಚೂಕಡಿಮೆ ಮೂರು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಉತ್ತಮ ಫಾರಂನಲ್ಲಿರುವ ಮತ್ತು ಅಟ್ಯಾಕಿಂಗ್ ಆಗಿ ಆಡುವ ಶಿಖರ್ ಧವನ್ ಆದಷ್ಟು ಬೇಗನೆ ಚೇತರಿಸಿಕೊಳ್ಳಲಿ ಎಂದು ಕ್ರಿಕೆಟ್ ಪ್ರೇಮಿಗಳು ಪ್ರಾರ್ಥಿಸುತ್ತಿದ್ದಾರೆ.


{headtohead_cricket_3_4}

Story first published: Thursday, June 13, 2019, 15:49 [IST]
Other articles published on Jun 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X