ಸ್ಮಿತ್ ಗೆ ಒಂದು ಪಂದ್ಯದ ನಿಷೇಧ, ಬ್ಯಾನ್ ಕ್ರಾಫ್ಟ್ ಗೆ ದಂಡ

ಬೆಂಗಳೂರು, ಮಾರ್ಚ್ 26: ಚೆಂಡು ವಿರೂಪ ಪ್ರಕರಣದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ, ಉಪ ನಾಯಕನ ತಲೆದಂಡವಾಗಿದೆ.ಇದರ ಬೆನ್ನಲ್ಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕ್ರಮ ಕೈಗೊಂಡಿದ್ದು, ಸ್ಮಿತ್ ಗೆ ಒಂದು ಪಂದ್ಯದ ನಿಷೇಧ ಹಾಗೂ ಪೂರ್ಣ ಪ್ರಮಾಣ ಪಂದ್ಯದ ವೇತನವನ್ನು ಕಡಿತಗೊಳಿಸಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಕೇಪ್ ಟೌನ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರ ಬ್ಯಾನ್ಕ್ರೋಫ್ಟ್ ಚೆಂಡು ವಿರೂಪಗೊಳಿಸಿರುವುದು ದೃಢಪಟ್ಟಿತ್ತು.
ಚೆಂಡು ವಿರೂಪಗೊಳಿಸಿದ ಆಟಗಾರ ಕ್ಯಾಮರಾನ್ ಬ್ಯಾಂಕ್ರಾಫ್ಟ್ ಅವರಿಗೆ ಪಂದ್ಯದ ಸಂಭಾವನೆಯ ಶೇ 75ರಷ್ಟು ದಂಡ ವಿಧಿಸಲಾಗಿದೆ. ಮೂರು ನಕಾರಾತ್ಮಕ ಪಾಯಿಂಟ್‌ಗಳನ್ನು ಕಡಿತಗೊಳಿಸಲಾಗಿದೆ.
ಗಾಯದ ಮೇಲೆ ಬರೆ ಎಳೆದಂತೆ, ಮೂರನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಹೀನಾಯ ಸೋಲು ಕಂಡಿದೆ. ಪಂದ್ಯಕ್ಕೂ ಮುನ್ನವೇ ನಾಯಕ ಸ್ಮಿತ್ ಹಾಗೂ ಉಪ ನಾಯಕ ಡೇವಿಡ್ ವಾರ್ನರ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಟಿಮ್ ಪೈ ತಾತ್ಕಾಲಿಕವಾಗಿ ನಾಯಕರಾಗಿ ಕಣಕ್ಕಿಳಿದಿದ್ದರು.
ಆದರೆ, ದಕ್ಷಿಣ ಆಫ್ರಿಕಾದ ವೇಗಿ ಮಾರ್ನೆ ಮಾರ್ಕೆಲ್ 23/5 ಬೌಲಿಂಗ್ ದಾಳಿಗೆ ನಲುಗಿದ ಆಸ್ಟ್ರೇಲಿಯಾ 322 ರನ್‌ಗಳಿಂದ ಸೋತಿದೆ. ನಾಲ್ಕನೇ ದಿನವಾದ ಭಾನುವಾರದಂದು 430 ರನ್‌ಗಳ ಗುರಿ ಬೆನ್ನತ್ತಿದ ಪ್ರವಾಸಿ ತಂಡ 107 ರನ್‌ಗಳಿಗೆ ಆಲೌಟ್ ಆಗಿ, ಸೋಲು ಕಂಡಿತು.
ದಕ್ಷಿಣ ಆಫ್ರಿಕಾ ವಿರುದ್ಧದ 3ನೇ ಟೆಸ್ಟ್ ಪಂದ್ಯದ 3ನೇ ದಿನದಾಟದ ವೇಳೆ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್ಮನ್ ಕ್ಯಾಮರೂನ್ ಬ್ಯಾಂಕ್ರಾಫ್ಟ್ ಅವರು ಸಣ್ಣ ಚಿಪ್ ಬಳಸಿ ಚೆಂಡನ್ನು ವಿರೂಪಗೊಳಿಸಲು ಯತ್ನಿಸಿದ ವಿಡಿಯೋ ಈಗ ಕ್ರಿಕೆಟ್ ಜಗತ್ತನ್ನು ಬೆಚ್ಚಿ ಬೀಳಿಸಿದೆ. ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವನ್ ಸ್ಮಿತ್, ಇದರಲ್ಲಿ ಕೋಚ್ಗಳ ಪಾತ್ರವಿಲ್ಲ. ಆಟಗಾರರು ಮಾತ್ರವೇ ಇದರಲ್ಲಿದ್ದಾರೆ. ಬ್ಯಾಂಕ್ರಾಫ್ಟ್ ವರ್ತನೆಗೆ ವಿಷಾದವಿದೆ ಎಂದು ಹೇಳಿದ್ದಾರೆ. ಆದರೆ, ಚೆಂಡು ವಿರೂಪ ಪ್ರಕರಣಕ್ಕಾಗಿ ನಾಯಕತ್ವದಿಂದ ಕೆಳಗಿಳಿಯುವುದಿಲ್ಲ ಎಂದಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications