ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದೆದುರು ಫಿಕ್ಸ್ ಗೆ ಆಫರ್: ಪಾಕ್ ಆಟಗಾರ ಅಕ್ಮಲ್ ಪ್ರಶ್ನಿಸಿದ ಐಸಿಸಿ!

ICC to question Umar Akmal over match-fixing claims

ಇಸ್ಲಮಾಬಾದ್, ಆಗಸ್ಟ್ 3: ಮ್ಯಾಚ್ ಫಿಕ್ಸಿಂಗ್ ವಿಚಾರವಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಾಕಿಸ್ತಾನ ಆಟಗಾರ ಉಮರ್ ಅಕ್ಮಲ್ ಅವರನ್ನು ಪ್ರಶ್ನಿಸಿದೆ. ವಿಶ್ವಕಪ್ ಪಂದ್ಯದಲ್ಲಿ ಮ್ಯಾಚ್ ಫಿಕ್ಸ್ ಮಾಡುವಂತೆ ತನಗೆ ಆಫರ್ ಬಂದಿತ್ತು ಎಂಬ ಅಕ್ಮಲ್ ಹೇಳಿಕೆಯ ವಿಚಾರವಾಗಿ ಐಸಿಸಿ ಪ್ರಶ್ನೆ ಮಾಡಿದೆ.

ವಿರಾಟ್ ಕೊಹ್ಲಿ-ಜೇಮ್ಸ್ ಆಂಡರ್ಸನ್ ಯುದ್ಧದಲ್ಲಿ ಗೆದ್ದಿದ್ದು ಯಾರು?ವಿರಾಟ್ ಕೊಹ್ಲಿ-ಜೇಮ್ಸ್ ಆಂಡರ್ಸನ್ ಯುದ್ಧದಲ್ಲಿ ಗೆದ್ದಿದ್ದು ಯಾರು?

ಪಾಕಿಸ್ತಾನದ ಸಮಾ ಟಿವಿ ಚಾನೆಲ್ ಗೆ ಅಕ್ಮಲ್ ಸಂದರ್ಶನ ನೀಡಿದ್ದರು. ಈ ವೇಳೆ, ವಿಶ್ವಕಪ್ ಪಂದ್ಯಾಟಕ್ಕಾಗಿ ಭಾರತದೆದುರು ಆಟ ಇದ್ದಾಗೆಲ್ಲಾ ತಾನು ಮಾಚ್ ಫಿಕ್ಸ್ ಮಾಡಬೇಕು ಎಂಬುದಾಗಿ ತನಗೆ ಆಫರ್ ಬಂದಿತ್ತು ಎಂದು ಅಕ್ಮಲ್ ಹೇಳಿದ್ದರು. ಈ ವಿಚಾರವಾಗಿ ಐಸಿಸಿಯ ಭ್ರಷ್ಟಾಚಾರ ನಿಗ್ರಹ ದಳಕ್ಕೆ ಯಾಕೆ ನೀವು ಮಾಹಿತಿ ನೀಡಲಿಲ್ಲ ಎಂದು ಐಸಿಸಿ ಅಕ್ಮಲ್ ಅವರನ್ನು ಪ್ರಶ್ನಿಸಿದೆ.

ಮಾಹಿತಿಯೊಂದರ ಪ್ರಕಾರ ಅಕ್ಮಲ್, 'ಬುಕ್ಕಿಗಳು ನನಗೆ ವಿಶ್ವಕಪ್ ಪಂದ್ಯದ ವೇಳೆ ಎರಡು ಎಸೆತಗಳಿಗಾಗಿ 0.2 ಮಿಲಿಯನ್ ಡಾಲರ್ ಆಮಿಷವೊಡ್ಡಿದ್ದರು. ಇಂಥದ್ದೇ ಆಮಿಷ ನನಗೆ 2015ರ ವಿಶ್ವಕಪ್ ಪಂದ್ಯದಲ್ಲೂ ಬಂದಿತ್ತು' ಎಂದು ಹೇಳಿಕೊಂಡಿದ್ದರು ಎನ್ನಲಾಗಿದೆ.

ಟೆಸ್ಟ್ ನಲ್ಲಿ 36 ಮತ್ತು ಏಕದಿನದಲ್ಲಿ 35 ಸರಾಸರಿ ರನ್ ಸಾಧನೆ ಹೊಂದಿರುವ ಅಕ್ಮಲ್ ಗೆ ಬುಕ್ಕಿಗಳು ಎಸೆತಗಳಿಗೆ ಹೊಡೆಯದಿದ್ದರೆ ಅಥವಾ ಔಟಾದರೆ ಹಣ ನೀಡುವ ಭರವಸೆ ನೀಡಿದ್ದರಂತೆ. ಅಡಿಲೇಡ್ ನಲ್ಲಿ ನಡೆದಿದ್ದ ಕಳೆದ ವಿಶ್ವಕಪ್ ಗ್ರೂಪ್ ಪಂದ್ಯವೊಂದರಲ್ಲಿ ಅಕ್ಮಲ್ ಅವರು ಭಾರತದ ಸ್ಪಿನ್ನರ್ ರವೀಂದ್ರ ಜಡೇಜಾ ಅವರಿಗೆ ವಿಕೆಟ್ ಒಪ್ಪಿಸಿದ್ದರು. ಕಾಕತಾಳೀಯವೆಂದರೆ ಪಾಕಿಸ್ತಾನ ಆ ಪಂದ್ಯವನ್ನು 76 ರನ್ ಗಳಿಂದ ಸೋತಿತ್ತು!

Story first published: Friday, August 3, 2018, 19:00 [IST]
Other articles published on Aug 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X