ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ಶ್ರೇಯಾಂಕ: ನಂಬರ್ 1 ಸ್ಥಾನದಿಂದ ಕೆಳಗಿಳಿದ ರೂಟ್, ಅಗ್ರ ಪಟ್ಟ ಅಲಂಕರಿಸಿದ ಲ್ಯಾಬುಶೈನ್

ICC test Ranking: Australian batter Labuschagne replaces Joe Root as No.1 batsmen

ಐಸಿಸಿ ಟೆಸ್ಟ್ ಶ್ರೇಯಾಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆಯಾಗಿದೆ. ಆಸ್ಟ್ರೇಲಿಯಾದ ಯುವ ದಾಂಡಿಗ ಮಾರ್ನಾಸ್ ಲ್ಯಾಬುಶೈನ್ ಟೆಸ್ಟ್ ಮಾದರಿಯ ನಂಬರ್ 1 ಬ್ಯಾಟರ್ ಎನಿಸಿದ್ದಾರೆ. ಮೊದಲ ಶ್ರೇಯಾಂಕದಲ್ಲಿದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಶಸ್ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡ ಆಘಾತಕಾರಿ ಪ್ರದರ್ಶನ ನೀಡಿದ್ದು ಎರಡು ಪಂದ್ಯದಲ್ಲಿ ಕೂಡ ಸೋಲು ಕಂಡಿದ್ದು ಸರಣಿಯಲ್ಲಿ ಭಾರೀ ಹಿನ್ನಡೆ ಅನುಭವಿಸುತ್ತಿದ್ದಾರೆ. ಈ ಸರಣಿಯ ಎರಡನೇ ಪಂದ್ಯದಲ್ಲಿ ಆಸ್ಟ್ರೇಲಿಯಾದ ಲ್ಯಾಬುಶೈನ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ 103 ಹಾಗೂ ಎರಡನೇ ಇನ್ನಿಂಗ್ಸ್‌ನಲ್ಲಿ 51 ರನ್‌ ಬಾರಿಸಿದ್ದಾರೆ. ಈ ಪ್ರದರ್ಶನದ ಕಾರಣದಿಂದಾಗಿ ಶ್ರೇಯಾಂಕಪಟ್ಟಿಯಲ್ಲಿ ಅತ್ಯುನ್ನತ ಸಾಧನೆ ಮಾಡಿದ್ದಾರೆ.

ಭಾರತ vs ದ.ಆಫ್ರಿಕಾ: ಸೆಂಚುರಿಯನ್ ಟೆಸ್ಟ್‌ಗೆ ದ.ಆಫ್ರಿಕಾದ ಸಂಭಾವ್ಯ ಆಡುವ ಬಳಗ ಹೀಗಿದೆಭಾರತ vs ದ.ಆಫ್ರಿಕಾ: ಸೆಂಚುರಿಯನ್ ಟೆಸ್ಟ್‌ಗೆ ದ.ಆಫ್ರಿಕಾದ ಸಂಭಾವ್ಯ ಆಡುವ ಬಳಗ ಹೀಗಿದೆ

ಇನ್ನು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಪಾಲಿಗೆ 2021 ಅತ್ಯಂತ ಯಶಸ್ವಿ ವರ್ಷ ಎನಿಸಿಕೊಂಡಿದೆ. ಹಾಗಿದ್ದರೂ ಆಸ್ಟ್ರೇಲಿಯಾ ನೆಲದಲ್ಲಿ ಜೋ ರೂಟ್ ಪರದಾಟವನ್ನು ನಡೆಸುತ್ತಿದ್ದು ಆಸಿಸ್ ಮೈದಾನದಲ್ಲಿ ಮೊದಲ ಶತಕವನ್ನು ಬಾರಿಸಲು ಪರದಾಟ ನಡೆಸುತ್ತಿದ್ದಾರೆ. ಆದರೆ 2021ರಲ್ಲಿ ಜೋ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಆಟಗಾರ ಎಂಬುದು ಗಮನಾರ್ಹ ಸಂಗತಿ. ಈ ಕ್ಯಾಲೆಂಡರ್ ವರ್ಷದಲ್ಲಿ ರೂಟ್ ಒಟ್ಟು 14 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಇದರಲ್ಲಿ 1630 ರನ್‌ಗಳಿಸಿದ್ದಾರೆ. ಅದರಲ್ಲೂ ವರ್ಷಾರಂಭದಲ್ಲಿ ಶ್ರೀಲಂಕಾ ಹಾಗೂ ಭಾರತ ಪ್ರವಾಸದಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದ ರೂಟ್ ಭಾರತದ ವಿರುದ್ಧ ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ದ್ವಿಶತಕವನ್ನು ಕೂಡ ಬಾರಿಸಿದ್ದಾರೆ.

ಇನ್ನು ಆಸ್ಟ್ರೇಲಿಯಾದ ಅಗ್ರ ಕ್ರಮಾಂಕದ ಆಟಗಾರ ಲ್ಯಾಬುಶೈನ್ ಈವರೆಗೆ ಆಸ್ಟ್ರೇಲಿಯಾ ಪರವಾಗಿ 20 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 6 ಶತಕ ಸೇರಿದಂತೆ ಒಟ್ಟು 2113 ರನ್‌ ಗಳಿಸಿದ್ದಾರೆ. 2018ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ ಲ್ಯಾಬುಶೈನ್ ಟೆಸ್ಟ್ ಮಾದರಿಯಲ್ಲಿ ಮಿಂಚುತ್ತಲೇ ಬಂದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಮಡಕ್ಕೆ ಲ್ಯಾಬುಶೈನ್ ನೀಡುತ್ತಿರುವ ಕೊಡುಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಸ್ಟ್ರೇಲಿಯಾದ ಪ್ರಮುಖ ಆಟಗಾರ ಸ್ಟೀವ್ ಸ್ಮಿತ್ ಅವರೊಂದಿಗೆ ಹೋಲಿಕೆಯನ್ನು ಮಾಡಲಾಗುತ್ತಿದೆ.

ರೋಹಿತ್‌ ವೇಗದ ಟಿ20 ಶತಕಕ್ಕೆ ಇಂದಿಗೆ 4 ವರ್ಷ: ಇನ್ನೂ ಯಾರಿಂದಲೂ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!ರೋಹಿತ್‌ ವೇಗದ ಟಿ20 ಶತಕಕ್ಕೆ ಇಂದಿಗೆ 4 ವರ್ಷ: ಇನ್ನೂ ಯಾರಿಂದಲೂ ದಾಖಲೆ ಮುರಿಯಲು ಸಾಧ್ಯವಾಗಿಲ್ಲ!

ಟಾಪ್ 10ರಲ್ಲಿ ಸ್ಥಾನ ಉಳಿಸಿಕೊಂಡ ಕೊಹ್ಲಿ, ರೋಹಿತ್: ಇನ್ನು ಮೊದಲ ಎರಡು ಸ್ಥಾನಗಳಲ್ಲಿ ಬದಲಾವಣೆಗಳು ಆಗಿರುವುದು ಬಿಟ್ಟರೆ ಟಾಪ್ 10 ಶ್ರೇಯಾಂಕಪಟ್ಟಿಯಲ್ಲಿ ಉಳಿದಂತೆ ಯಾವ ಬದಲಾವಣೆ ಕೂಡ ಆಗಿಲ್ಲ. ಸ್ಟೀವ್ ಸ್ಮಿತ್, ಕೇನ್ ವಿಲಿಯಮ್ಸನ್, ರೋಹಿತ್ ಶರ್ಮಾ, ಡೇವಿಡ್ ವಾರ್ನರ್, ವಿರಾಟ್ ಕೊಹ್ಲಿ, ದಿಮುತ್ ಕರುಣಾರತ್ನೆ, ಬಾಬರ್ ಅಜಮ್ ಮತ್ತು ಟ್ರಾವಿಸ್ ಹೆಡ್ ಟಾಪ್ 10ರಲ್ಲಿರುವ ಉಳಿದ ಆಟಗಾರರಾಗಿದ್ದಾರೆ.

ಇನ್ನು ಬೌಲರ್‌ಗಳ ಶ್ರೇಯಾಂಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಆಡದಿದ್ದರೂ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇನ್ನು ಭಾರತದ ಪರವಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಲು ಸನಿಹದಲ್ಲಿರುವ ಆರ್ ಅಶ್ವಿನ್ ಈ ಶ್ರೇಯಾಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ

South Africa ನಾಯಕ ಪ್ರಕಾರ India ಗೆಲ್ಲೋದು ಸುಲಭವಲ್ಲ | Oneindia Kannada

ಇನ್ನು ಆಸ್ಟ್ರೇಲಿಯಾ ತಂಡ 2021ನ್ನು ಸ್ಮರಣೀಯವಾಗಿ ಅಂತ್ಯಗೊಳಿಸುವ ನಿರೀಕ್ಷೆಯಿದೆ. ಟೆಸ್ಟ್ ತಂಡದ ಬ್ಯಾಟರ್‌ಗಳ ಹಾಗೂ ಬೌಲರ್‌ಗಳ ಶ್ರೇಯಾಂಕಪಟ್ಟಿಯಲ್ಲಿ ಆಸ್ಟ್ರೇಲಿಯಾದ ಅಗ್ರಸ್ಥಾನದಲ್ಲಿರುವುದು ಇದಕ್ಕೆ ಕಾರಣ. ಇನ್ನು ಆಶಸ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಆತ್ಮವಿಶ್ವಾಸದಲ್ಲಿಯೂ ಆಸಿಸ್ ತಂಡವಿದೆ.

Story first published: Wednesday, December 22, 2021, 17:50 [IST]
Other articles published on Dec 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X