ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Test Ranking: 10ರೊಳಗೆ ಜಸ್‌ಪ್ರೀತ್‌ ಬೂಮ್ರಾ, ಕೆಳ ಕುಸಿದ ವಿರಾಟ್ ಕೊಹ್ಲಿ

ICC Test Ranking: Jasprit Bumrah returns to top 10, Virat Kohli slips

ದುಬೈ: ಇಂಗ್ಲೆಂಡ್ ವಿರುದ್ಧದ ಆರಂಭಿಕ ಟೆಸ್ಟ್‌ ಬಳಿಕ ಭಾರತದ ವೇಗಿ ಜಸ್‌ಪ್ರೀತ್ ಬೂಮ್ರಾ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ 10ರೊಳಗಿನ ಶ್ರೇಯಾಂಕಕ್ಕೆ ವಾಪಸ್ಸಾಗಿದ್ದಾರೆ. ಆದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 5ನೇ ಸ್ಥಾನಕ್ಕೆ ಕುಸಿತ ಕಂಡಿದ್ದಾರೆ. ನ್ಯಾಟಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ಬೂಮ್ರಾ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಮೆಲಕ್ಕೇರಲು ಸಾಧ್ಯವಾಗಿದೆ.

ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ 4 ಕ್ರಿಕೆಟಿಗರ ಪಟ್ಟಿಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಗೆದ್ದಿರುವ 4 ಕ್ರಿಕೆಟಿಗರ ಪಟ್ಟಿ

ಕಳೆದ ಸೆಪ್ಟೆಂಬರ್‌ನಲ್ಲಿ ಟೆಸ್ಟ್‌ ವೃತ್ತಿ ಬದುಕಿನಲ್ಲಿ ಅತ್ಯುತ್ತಮ ಮೂರನೇ ಶ್ರೇಯಾಂಕಕ್ಕೆ ಏರಿದ್ದ ಜಸ್‌ಪ್ರೀತ್‌ ಬೂಮ್ರಾ ಆ ಬಳಿಕ ಮತ್ತೆ 10ಕ್ಕಿಂತ ಕೆಳಗಿನ ಸ್ಥಾನಕ್ಕೆ ಕುಸಿತ ಕಂಡಿದ್ದು. ಬುಧವಾರ (ಆಗಸ್ಟ್ 11) ಪ್ರಕಟವಾಗಿರುವ ಐಸಿಸಿ ಟೆಸ್ಟ್‌ ನೂತನ ರ್‍ಯಾಂಕಿಂಗ್‌ನಲ್ಲಿ ಬೂಮ್ರಾ ಬೌಲರ್‌ಗಳಲ್ಲಿ ಮತ್ತೆ 9ನೇ ಸ್ಥಾನಕ್ಕೆ ಏರಿಕೆ ಕಂಡಿದ್ದಾರೆ.

ಬೌಲಿಂಗ್‌ ರ್‍ಯಾಂಕಿಂಗ್‌ ನಂ.1 ಸ್ಥಾನದಲ್ಲಿ ಪ್ಯಾಟ್ ಕಮಿನ್ಸ್
ನ್ಯಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್ ಸ್ಟೇಡಿಯಂನಲ್ಲಿ ನಡೆದಿದ್ದ ಮೊದಲನೇ ಟೆಸ್ಟ್‌ನಲ್ಲಿ ಜಸ್‌ಪ್ರೀತ್‌ ಬೂಮ್ರಾ ಇಂಗ್ಲೆಂಡ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ 46 ರನ್ನಿಗೆ 4 ವಿಕೆಟ್ ಮುರಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ 64 ರನ್ನಿಗೆ 5 ವಿಕೆಟ್‌ ಕಬಳಿಸಿದ್ದರು. ಒಟ್ಟು 110 ರನ್ನಿಗೆ ಬೂಮ್ರಾ 9 ವಿಕೆಟ್‌ ಪಡೆದಿದ್ದರು. ಹೀಗಾಗಿಯೇ ಟೆಸ್ಟ್‌ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಬೂಮ್ರಾ ಏರಿಕೆ ಕಂಡಿದ್ದಾರೆ. ಸದ್ಯದ ಟೆಸ್ಟ್‌ ಬೌಲರ್‌ಗಳ ರ್‍ಯಾಂಕಿಂಗ್‌ನಲ್ಲಿ ಮೊದಲನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್, ದ್ವಿತೀಯ ಸ್ಥಾನದಲ್ಲಿ ಭಾರತದ ಆರ್‌ ಅಶ್ವಿನ್, ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಟಿಮ್ ಸೌಥೀ, ನಾಲ್ಕನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಝಲ್ವುಡ್, ಐದನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ನೀಲ್ ವ್ಯಾಗ್ನರ್, ಆರನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಕಾಗಿಸೊ ರಬಾಡ, ಏಳನೇ ಸ್ಥಾನದಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್, ಎಂಟನೇ ಸ್ಥಾನದಲ್ಲಿ ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್, ಒಂಭತ್ತನೇ ಸ್ಥಾನದಲ್ಲಿ ಭಾರತದ ಜಸ್‌ಪ್ರೀತ್‌ ಬೂಮ್ರಾ, 10ನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಇದ್ದಾರೆ.

ಶಕೀಬ್ ಅಲ್ ಹಸನ್, ಸ್ಟಫಾನಿ ಟೇಲರ್‌ಗೆ ಜುಲೈ ತಿಂಗಳ ಐಸಿಸಿ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿಶಕೀಬ್ ಅಲ್ ಹಸನ್, ಸ್ಟಫಾನಿ ಟೇಲರ್‌ಗೆ ಜುಲೈ ತಿಂಗಳ ಐಸಿಸಿ ಪ್ಲೇಯರ್ ಆಫ್‌ ದ ಮಂಥ್ ಪ್ರಶಸ್ತಿ

ಕಳಪೆ ಬ್ಯಾಟಿಂಗ್‌ನಿಂದ ಕೆಳ ಕುಸಿದ ವಿರಾಟ್ ಕೊಹ್ಲಿ
ಇಂಗ್ಲೆಂಡ್ ವಿರುದ್ಧದ ಮೊದಲನೇ ಟೆಸ್ಟ್‌ನಲ್ಲಿ ಟೆಸ್ಟ್‌ ರ್‍ಯಾಂಕಿಂಗ್‌ ಮಾಜಿ ನಂ.1 ಆಟಗಾರ ವಿರಾಟ್ ಕೊಹ್ಲಿ ಈ ಮೊದಲು 4ನೇ ಸ್ಥಾನದಲ್ಲಿದ್ದರು. ಆದರೆ ಆರಂಭಿಕ ಪಂದ್ಯದಲ್ಲಿ ಕೊಹ್ಲಿ 0 ರನ್‌ಗೆ ಜೇಮ್ಸ್ ಆ್ಯಂಡರ್ಸನ್‌ಗೆ ವಿಕೆಟ್ ನೀಡಿದ್ದರು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಕೊಹ್ಲಿಗೆ ಬ್ಯಾಟಿಂಗ್‌ ಮಾಡಲಾಗಲಿಲ್ಲ. ಕಾರಣ ಮಳೆಯ ಕಾರಣ ಪಂದ್ಯಕ್ಕೆ ಅಡಚಣೆಯಾಗಿ ಐದನೇ ದಿನದ ಅವಧಿ ಪೂರ್ಣಗೊಳ್ಳುವಾಗ ಭಾರತ ಇನ್ನೂ ದ್ವಿತೀಯ ಇನ್ನಿಂಗ್ಸ್‌ ಆಡುತ್ತಿತ್ತು. ಹೀಗಾಗಿ ಪಂದ್ಯ ಡ್ರಾ ಅನ್ನಿಸಿಕೊಂಡಿತು. ಅಂದ್ಹಾಗೆ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಸದ್ಯ ಮೊದಲನೇ ಸ್ಥಾನದಲ್ಲಿ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್, ದ್ವಿತೀಯ ಸ್ಥಾನದಲ್ಲಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮಾರ್ನಸ್ ಲ್ಯಬುಶೇನ್, ನಾಲ್ಕನೇ ಸ್ಥಾನದಲ್ಲಿ ಇಂಗ್ಲೆಂಡ್‌ನ ಜೋ ರೂಟ್, ಐದನೇ ಸ್ಥಾನದಲ್ಲಿ ಭಾರತದ ವಿರಾಟ್ ಕೊಹ್ಲಿ, ಆರನೇ ಸ್ಥಾನದಲ್ಲಿ ಭಾರತದ ರೋಹಿತ್ ಶರ್ಮಾ, ಏಳನೇ ಸ್ಥಾನದಲ್ಲಿ ಭಾರತದ ಯುವ ಬ್ಯಾಟ್ಸ್‌ಮನ್ ರಿಷಭ್ ಪಂತ್, ಎಂಟನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಒಂಭತ್ತನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಕ್ವಿಂಟನ್ ಡಿ ಕಾಕ್, 10ನೇ ಸ್ಥಾನದಲ್ಲಿ ನ್ಯೂಜಿಲೆಂಡ್‌ನ ಹೆನ್ರಿ ನಿಕೋಲ್ಸ್ ಸ್ಥಾನ ಪಡೆದುಕೊಂಡಿದ್ದಾರೆ.

ಆಲ್ ರೌಂಡರ್‌ಗಳು ಮತ್ತು ತಂಡಗಳ ರ್‍ಯಾಂಕಿಂಗ್
ಟೆಸ್ಟ್‌ ಕ್ರಿಕೆಟ್ ಆಲ್ ರೌಂಡರ್‌ಗಳ ರ್‍ಯಾಂಕಿಂಗ್‌ನಲ್ಲಿ ವೆಸ್ಟ್‌ ಇಂಡೀಸ್‌ನ ಜೇಸನ್ ಹೋಲ್ಡರ್ ಮೊದಲನೇ ಸ್ಥಾನದಲ್ಲಿದ್ದಾರೆ. ದ್ವಿತೀಯ ಸ್ಥಾನದಲ್ಲಿ ಭಾರತ ರವೀಂದ್ರ ಜಡೇಜಾ, ಮೂರನೇ ಸ್ಥಾನದಲ್ಲಿ ಬೆನ್ ಸ್ಟೋಕ್ಸ್, ನಾಲ್ಕನೇ ಸ್ಥಾನದಲ್ಲಿ ಆರ್ ಅಶ್ವಿನ್, ಐದನೇ ಸ್ಥಾನದಲ್ಲಿ ಬಾಂಗ್ಲಾ ದೇಶದ ಶಕೀಬ್ ಅಲ್ ಹಸನ್ ಇದ್ದಾರೆ. ಇನ್ನು ತಂಡಗಳಲ್ಲಿ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದೆ. ಅನಂತರದ ಸ್ಥಾನಗಳಲ್ಲಿ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ಪಾಕಿಸ್ತಾನ ತಂಡಗಳಿವೆ. ಭಾರತ-ಇಂಗ್ಲೆಂಡ್ ಟೆಸ್ಟ್‌ ಸರಣಿ ಮುಕ್ತಾಯವಾಗುತ್ತಲೇ ಮತ್ತೆ ರ್‍ಯಾಂಕಿಂಗ್‌ನಲ್ಲಿ ಏರುಪೇರಾಗಲಿದೆ. ಆಗಸ್ಟ್ 12ರ ಗುರುವಾರ ಭಾರತ-ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ ಪಂದ್ಯ ಲಾರ್ಡ್ಸ್‌ನಲ್ಲಿ ನಡೆಯಲಿದೆ.

Story first published: Thursday, August 12, 2021, 0:26 [IST]
Other articles published on Aug 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X