ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಸೀಸ್ ಮೇಲೆ ಪಾಕಿಗೆ ಜಯ, ಭಾರತದ ಶ್ರೇಯಾಂಕ ಕುಸಿತ

By Mahesh
ICC Test Rankings: Pakistan jump to 3rd; India 6th
ಅಬುಧಾಬಿ, ಅ.4: ಸುಮಾರು 20 ವರ್ಷಗಳ ನಂತರ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದು ಬೀಗುತ್ತಿರುವ ಪಾಕಿಸ್ತಾನ ತಂಡ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದರೆ ಟೀಂ ಇಂಡಿಯಾ ಆರನೇ ಸ್ಥಾನಕ್ಕೆ ಕುಸಿದಿದೆ.

ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡವನ್ನು 356 ರನ್‌ಗಳಿಂದ ಹೀನಾಯವಾಗಿ ಸೋಲಿಸಿದ ಪಾಕಿಸ್ತಾನ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡು ಐತಿಹಾಸಿಕ ಸಾಧನೆ ಮಾಡಿದೆ. ಆಸ್ಟ್ರೇಲಿಯಾ ತಂಡ ಕಳೆದ 34 ವರ್ಷಗಳಲ್ಲಿ ಅತ್ಯಂತ ಹೀನಾಯ ಸೋಲು ಇದಾಗಿದೆ.

ಪಾಕ್ ತಂಡ ಆಸ್ಟ್ರೇಲಿಯಕ್ಕೆ ಗೆಲ್ಲಲು 603 ರನ್ ಕಠಿಣ ಸವಾಲು ನೀಡಿತ್ತು. ಐದನೇ ದಿನದಾಟದಲ್ಲಿ ಆಸ್ಟ್ರೇಲಿಯಾ ತಂಡ ಉಳಿಸಿಕೊಂಡಿದ್ದ ಎಲ್ಲಾ ಆರು ವಿಕೆಟ್‌ಗಳನ್ನು ಕಬಳಿಸಿದ ಪಾಕಿಸ್ತಾನ 20 ವರ್ಷಗಳ ನಂತರ ಕಾಂಗರೂ ಪಡೆಯ ವಿರುದ್ಧ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿದೆ..

ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಎರಡು ಶತಕಗಳನ್ನು ಸಿಡಿಸಿದ ಪಾಕ್ ನಾಯಕ ಮಿಸ್ಬಾವುಲ್ ಹಕ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು. ಮಿಸ್ಬಾ ಎರಡನೆ ಇನಿಂಗ್ಸ್‌ನಲ್ಲಿ ಕೇವಲ 56 ಎಸೆತಗಳಲ್ಲಿ ವೇಗದ ಟೆಸ್ಟ್ ಶತಕವನ್ನು ಸಿಡಿಸಿ ವೆಸ್ಟ್‌ಇಂಡೀಸ್ ದಂತಕತೆ ವಿವಿಯನ್ ರಿಚರ್ಡ್ಸ್ ದಾಖಲೆಯನ್ನು ಸರಿಗಟ್ಟಿದ್ದರು.

ಎರಡನೆ ಇನಿಂಗ್ಸ್‌ನಲ್ಲಿ 246 ರನ್‌ಗೆ ಆಲೌಟಾದ ಆಸ್ಟ್ರೇಲಿಯ ತಂಡಕ್ಕೆ ಪಾಕ್‌ನ ಝುಲ್ಫಿಕರ್ ಬಾಬರ್(5-120) ಯಾಸಿರ್ ಷಾ(3-44) ಮತ್ತೊಮ್ಮೆ ಸಿಂಹಸ್ವಪ್ನರಾದರು.

ಆಸ್ಟ್ರೇಲಿಯ ಪ್ರಥಮ ಇನಿಂಗ್ಸ್ 67.2 ಓವರ್‌ಗಳಲ್ಲಿ 261 ರನ್
ಪಾಕಿಸ್ತಾನ ದ್ವಿತೀಯ ಇನಿಂಗ್ಸ್: 293/3 ಡಿಕ್ಲೇರ್
ಆಸ್ಟ್ರೇಲಿಯ ದ್ವಿತೀಯ ಇನಿಂಗ್ಸ್246 ರನ್‌ಗೆ ಆಲೌಟ್

ಐಸಿಸಿ ಶ್ರೇಯಾಂಕ: 2007ರ ಜನವರಿ ನಂತರ ಇದು ಪಾಕಿಸ್ತಾನದ ಅತ್ಯಂತ ದೊಡ್ಡ ಸಾಧನೆಯಾಗಿದೆ. 2007ರಲ್ಲಿ ದಕ್ಷಿಣ ಆಫ್ರಿಕಾವನ್ನು 2-1 ಅಂತರದಲ್ಲಿ ಸೋಲಿಸಿದ್ದರು. ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ (ನವೆಂಬರ್ 3, 2014ಕ್ಕೆ ಅನ್ವಯವಾಗುವಂತೆ) ಹೀಗಿದೆ:
1. ದಕ್ಷಿಣ ಆಫ್ರಿಕಾ 124
2. ಆಸ್ಟ್ರೇಲಿಯಾ 117 (-6)
3. ಪಾಕಿಸ್ತಾನ 105 (+9)
4. ಇಂಗ್ಲೆಂಡ್ 104
5. ಶ್ರೀಲಂಕಾ 101
6. ಭಾರತ 96
7. ನ್ಯೂಜಿಲೆಂಡ್ 93
8. ವೆಸ್ಟ್ ಇಂಡೀಸ್ 75
9. ಜಿಂಬಾವೆ 39
10. ಬಾಂಗ್ಲಾದೇಶ 19

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X