ವಿಶ್ವಕಪ್ : ಪಾಕಿಸ್ತಾನವನ್ನು ಬಗ್ಗುಬಡಿದು ಫೈನಲ್ ತಲುಪಿದ ಭಾರತ

Posted By:
ICC U-19 World Cup Semi Final : India beat Pakistan to reach Final

ಹಗೇಲ್ ಓವಲ್, ಜನವರಿ 30: ಐಸಿಸಿ ಅಂಡರ್ 19 ವಿಶ್ವಕಪ್ ನ ಸೆಮಿಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತದ ಯುವ ಪಡೆ ಭರ್ಜರಿ ಜಯ ದಾಖಲಿಸಿದೆ.

278ರನ್ ಗುರಿ ಬೆನ್ನು ಹತ್ತಿದ ಪಾಕಿಸ್ತಾನಕ್ಕೆ ಭಾರತದ ವೇಗಿ ಇಶಾನ್ ಪೊರೆಲ್ ಮಾರಕವಾದರು. ಆರಂಭದ ನಾಲ್ಕು ವಿಕೆಟ್ ಗಳನ್ನು ಕಿತ್ತ ಇಶಾನ್ ಅವರು ಪಾಕಿಸ್ತಾನದ ಬ್ಯಾಟ್ಸ್ ಮನ್ ಗಳನ್ನು ಕಾಡಿದರು.

ಇಶಾನ್ 6 ಓವರ್ ಗಳಲ್ಲಿ 17ರನ್ನಿತ್ತು 4 ವಿಕೆಟ್ ಕಿತ್ತರೆ, ಸ್ಪಿನ್ನರ್ ಶಿವ ಸಿಂಗ್ ಹಾಗೂ ರಿಯಾನ್ ಪರಾಗ್ ತಲಾ 2 ವಿಕೆಟ್ ಪಡೆದರು. ವೇಗಿಗಳಾದ ಶಿವಂ ಮಾವಿ ಹಾಗೂ ಕಮಲೇಶ್ ನಾಗರ್ ಕೋಟಿ ರನ್ ನಿಯಂತ್ರಿಸಿದರು.

ಅಂಡರ್ 19 ವರ್ಲ್ಡ್‌ಕಪ್ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತಕ್ಕೆ ಶುಭ್ ಮನ್ ಗಿಲ್ ಆಸರೆಯಾದರು. ಅರಂಭಿಕ ಆಟಗಾರರಾದ ನಾಯಕ ಪೃಥ್ವಿ ಶಾ 41 ರನ್ ಹಾಗೂ ಮನ್ಜೋತ್ ಕಾಲ್ರಾ 47 ರನ್ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು.

ಸ್ಕೋರ್ ಕಾರ್ಡ್

ನಂತರ ಬಂದ ಶುಭ್ ಮನ್ ಗಿಲ್ 94 ಎಸೆತಗಳಲ್ಲಿ 102ರನ್ (7 ಬೌಂಡರಿ) ಬಾರಿಸಿ ಅಜೇಯರಾಗಿ ಉಳಿದರು. ಪಾಕಿಸ್ತಾನ ಪರ ಮೊಹಮ್ಮದ್ ಮೂಸಾ 4 ಹಾಗೂ ಅರ್ಷದ್ ಇಕ್ಬಾಲ್ 3 ವಿಕೆಟ್ ಗಳಿಸಿದರು.

ಶನಿವಾರದಂದು ಅಂತಿಮ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೆಣೆಸಲಿದೆ. ಮೂರು ಬಾರಿ ಚಾಂಪಿಯನ್ ಭಾರತಕ್ಕೆ ಇದು 6ನೇ ಫೈನಲ್ ಪ್ರವೇಶವಾಗಿದೆ.

Story first published: Tuesday, January 30, 2018, 9:18 [IST]
Other articles published on Jan 30, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ