ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ICC Women's T20 World Cup: ಭಾರತ vs ಪಾಕಿಸ್ತಾನ ಪಂದ್ಯ, ಪೂರ್ಣ ತಂಡಗಳು, ಲೈವ್ ಸ್ಟ್ರೀಮಿಂಗ್

ICC Womens T20 World Cup: India vs Pakistan Match, Time Table, Full Squads And Live Streaming

ಐಸಿಸಿ 2023ರ ಮಹಿಳಾ ಟಿ20 ವಿಶ್ವಕಪ್ ಶುಕ್ರವಾರ, ಫೆಬ್ರವರಿ 10ರಿಂದ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ಪ್ರಾರಂಭವಾಗಲಿದೆ. ಫೆಬ್ರವರಿ 10ರಿಂದ 26ರ ನಡುವೆ 10 ಮಹಿಳಾ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ.

ಟಿ20 ವಿಶ್ವಕಪ್ ಪಂದ್ಯಾವಳಿಯ ಎಂಟನೇ ಆವೃತ್ತಿಯನ್ನು ದಕ್ಷಿಣ ಆಫ್ರಿಕಾದ ಕೇಪ್ ಟೌನ್, ಪರ್ಲ್ ಮತ್ತು ಗ್ಕೆಬರ್ಹಾ ಮೂರು ಸ್ಥಳಗಳಲ್ಲಿ ಆಡಲಾಗುತ್ತದೆ.

ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ತಂಡವು 2020ರ ಮಹಿಳಾ ಟಿ20 ವಿಶ್ವಕಪ್‌ನ ಫೈನಲಿಸ್ಟ್ ತಂಡಗಳನ್ನು ಸೋಲಿಸಿದ ನಂತರ ದಕ್ಷಿಣ ಆಫ್ರಿಕಾದಲ್ಲಿ ಪ್ರಶಸ್ತಿ ಎತ್ತಿಹಿಡಿಯುವ ಭರವಸೆ ಹೊಂದಿದೆ.

IND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯIND-W vs SA-W T20 Tri-series Final: ಭಾರತ ವನಿತೆಯರ ವಿರುದ್ಧ ದಕ್ಷಿಣ ಆಫ್ರಿಕಾಗೆ ಜಯ

ಭಾರತ ತಂಡದಲ್ಲಿ ದೀಪ್ತಿ ಶರ್ಮಾ, ರೇಣುಕಾ ಸಿಂಗ್ ಮತ್ತು ರಾಧಾ ಯಾದವ್ ಸೇರಿದಂತೆ ಸ್ಪಿನ್ ಮತ್ತು ವೇಗದ ಬೌಲಿಂಗ್‌ನ ಉತ್ತಮ ಮಿಶ್ರಣವನ್ನು ಹೊಂದಿದೆ. ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ ಅವರಂತಹ ಅತ್ಯುತ್ತಮ ಬ್ಯಾಟಿಂಗ್ ಲೈನ್‌ಅಪ್ ತಂಡಕ್ಕೆ ಪ್ರಮುಖರಾಗಿದ್ದಾರೆ.

ಇನ್ನು ಈ ಟಿ20 ವಿಶ್ವಕಪ್‌ನಲ್ಲಿ ಒಂದೇ ಗುಂಪಿನಲ್ಲಿರುವ ಭಾರತ ಮಹಿಳೆಯರು ಮತ್ತು ಪಾಕಿಸ್ತಾನ ಮಹಿಳೆಯರ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ. ಫೆಬ್ರವರಿ 12ರಂದು ಕೇಪ್ ಟೌನ್‌ನಲ್ಲಿ ಬಿಸ್ಮಾ ಮರೂಫ್ ನಾಯಕತ್ವದ ಪಾಕಿಸ್ತಾನ ಮತ್ತು ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮುಖಾಮುಖಿಯಾಗಲಿವೆ.

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಪಂದ್ಯಗಳು

ಐಸಿಸಿ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತದ ಪಂದ್ಯಗಳು

ಫೆಬ್ರವರಿ 12 - ಭಾರತ vs ಪಾಕಿಸ್ತಾನ (ಕೇಪ್ ಟೌನ್)

ಫೆಬ್ರವರಿ 15 - ಭಾರತ vs ವೆಸ್ಟ್ ಇಂಡೀಸ್ (ಕೇಪ್ ಟೌನ್)

ಫೆಬ್ರವರಿ 18 - ಭಾರತ vs ಇಂಗ್ಲೆಂಡ್ (ಗ್ಕೆಬರ್ಹಾ)

ಫೆಬ್ರವರಿ 20 - ಭಾರತ vs ಐರ್ಲೆಂಡ್ (ಗ್ಕೆಬರ್ಹಾ)

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023ರ ಗುಂಪುಗಳ ವಿವರ

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023ರ ಗುಂಪುಗಳ ವಿವರ

ಗುಂಪು 1: ಆಸ್ಟ್ರೇಲಿಯಾ, ಬಾಂಗ್ಲಾದೇಶ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ

ಗುಂಪು 2: ಇಂಗ್ಲೆಂಡ್, ಭಾರತ, ಐರ್ಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್

ಐಸಿಸಿ ಮಹಿಳಾ ಟಿ20 ವಿಶ್ವಕಪ್ 2023ರ ಟಿವಿ ಮತ್ತು ಲೈವ್ ಸ್ಟ್ರೀಮಿಂಗ್ ವಿವರ

2023ರ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರಪ್ರಸಾರ ಮಾಡಲಾಗುತ್ತದೆ ಮತ್ತು ಡಿಸ್ನಿ+ ಹಾಟ್‌ಸ್ಟಾರ್‌ ಅಪ್ಲಿಕೇಶನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿ ವೀಕ್ಷಿಸಬಹುದು.

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಭಾರತ vs ಪಾಕಿಸ್ತಾನ ಪೂರ್ಣ ತಂಡಗಳು

ಐಸಿಸಿ ಮಹಿಳಾ ಟಿ20 ವಿಶ್ವಕಪ್ ಭಾರತ vs ಪಾಕಿಸ್ತಾನ ಪೂರ್ಣ ತಂಡಗಳು

ಭಾರತ: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಯಾಸ್ತಿಕಾ ಭಾಟಿಯಾ, ರಿಚಾ ಘೋಷ್, ಜೆಮಿಮಾ ರೋಡ್ರಿಗಸ್, ಹರ್ಲೀನ್ ಡಿಯೋಲ್, ದೀಪ್ತಿ ಶರ್ಮಾ, ದೇವಿಕಾ ವೈದ್ಯ, ರಾಧಾ ಯಾದವ್, ರೇಣುಕಾ ಸಿಂಗ್ ಠಾಕೂರ್, ಅಂಜಲಿ ಸರ್ವಾಣಿ, ಪೂಜಾ ವಸ್ತ್ರಾಕರ್, ರಾಜೇಶ್ವರಿ ಗಾಯಕ್ವಾಡ್

ಮೀಸಲು ಆಟಗಾರ್ತಿಯರು: ಸಬ್ಬಿನೇನಿ ಮೇಘನಾ, ಸ್ನೇಹ್ ರಾಣಾ, ಮೇಘನಾ ಸಿಂಗ್.

ಪಾಕಿಸ್ತಾನ: ಬಿಸ್ಮಾ ಮರೂಫ್ (ನಾಯಕಿ), ಐಮೆನ್ ಅನ್ವರ್, ಅಲಿಯಾ ರಿಯಾಜ್, ಆಯೇಶಾ ನಸೀಮ್, ಸದಾಫ್ ಶಮಾಸ್, ಫಾತಿಮಾ ಸನಾ, ಜವೇರಿಯಾ ಖಾನ್, ಮುನೀಬಾ ಅಲಿ, ನಶ್ರಾ ಸಂಧು, ನಿದಾ ದಾರ್, ಒಮೈಮಾ ಸೊಹೈಲ್, ಸಾದಿಯಾ ಇಕ್ಬಾಲ್, ಸಿದ್ರಾ ಅಮೀನ್, ಸಿದ್ರಾ ನವಾಜ್, ತುಬಾ ಹಸನ್.

ಮೀಸಲು ಆಟಗಾರ್ತಿಯರು: ಗುಲಾಮ್ ಫಾತಿಮಾ, ಕೈನಾತ್ ಇಮ್ತಿಯಾಜ್.

Story first published: Friday, February 3, 2023, 13:18 [IST]
Other articles published on Feb 3, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X