ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್: 10 ತಂಡಗಳು, ಒಂದು ಕನಸು, ನನಸಿನೆಡೆಗಿನ ಓಟ ಶುರುವಾಗಿದೆ..

By R Kaushik
ICC World Cup 2019: 10 teams. One dream. Chase begins

ಲಂಡನ್, ಮೇ 29: 1999ರಲ್ಲಿ ಕರೆನ್ಸಿಯಾಗಿ ಯೂರೋ ಸ್ಥಾಪನೆಯಾಯಿತು, ನೈಜೀರಿಯಾ ಮಿಲಿಟರಿ ಆಡಳಿತವನ್ನು ಕೊನೆಗೊಳಿಸಿತು, ಸ್ಕಾಟಿಷ್ ಪಾರ್ಲಿಮೆಂಟ್ ಅಧಿಕೃತವಾಗಿ ತೆರೆಯಲ್ಪಟ್ಟಿತು, ಮತ್ತು ಯುನೈಟೆಡ್ ಸ್ಟೇಟ್ಸ್ ಪನಾಮ ಕಾಲುವೆಯ ಸಂಪೂರ್ಣ ಆಡಳಿತವನ್ನು ಪನಾಮ ಸರ್ಕಾರಕ್ಕೆ ವಹಿಸಿತು. 1999ರಲ್ಲಿ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯನ್ನು ಇಂಗ್ಲೆಂಡ್ ಕೊನೆಯದಾಗಿ ಆಯೋಜಿಸಿತ್ತು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು ಮೈಖೇಲ್ ಕನ್ನಡದ 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಕಳೆದ 20 ವರ್ಷಗಳಿಂದ ಜಗತ್ತು ಗಣಣೀಯವಾಗಿ ಬದಲಾಗಿದೆ. ಕ್ರಿಕೆಟ್ ಜಗತ್ತಿಗೂ ಈ ಬದಲಾವಣೆಯ ಗಾಳಿ ಹಬ್ಬಿದೆ. ಚೆಂಡು-ದಾಂಡಿನ ಈ ಆಟ ಟಿ20, ಡೇ-ನೈಟ್, ಪಿಂಕ್‌ಬಾಲ್ ಟೆಸ್ಟ್ ಕ್ರಿಕೆಟ್ ಕ್ರಾಂತಿಗೆ ನಾಂದಿ ಹಾಡಿದೆ. ಅಲ್ಲದೆ ಡಿಸಿಶನ್ ರಿವ್ಯೂ ಸಿಸ್ಟಮ್‌ ಕೂಡ ಕ್ರಿಕೆಟ್ ರಂಗಕ್ಕೆ ಲಗ್ಗೆಯಿಟ್ಟಿದೆ.

ಬ್ಯಾಟಿಂಗ್ ಮಾಡುತ್ತಲೇ ಬಾಂಗ್ಲಾಕ್ಕೆ ಧೋನಿ ಫೀಲ್ಡಿಂಗ್ ಸಲಹೆ: ವಿಡಿಯೋಬ್ಯಾಟಿಂಗ್ ಮಾಡುತ್ತಲೇ ಬಾಂಗ್ಲಾಕ್ಕೆ ಧೋನಿ ಫೀಲ್ಡಿಂಗ್ ಸಲಹೆ: ವಿಡಿಯೋ

24 ವರ್ಷಗಳ ಬಳಿಕ ವಿಶ್ವಶ್ರೇಷ್ಠ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಸಚಿನ್ ತೆಂಡೂಲ್ಕರ್ ಅವರು ವಿರಾಟ್ ಕೊಹ್ಲಿಗೆ ಬಿಟ್ಟುಕೊಟ್ಟಿದ್ದಾರೆ. ಆದರೆ ಈಗಲೂ ಏಕದಿನ ಕ್ರಿಕೆಟ್‌ನಲ್ಲಿ ಇಂಥದ್ದೇ ತಂಡ ಅತ್ಯುನ್ನತ ತಂಡವೆಂದೇನೂ ಇಲ್ಲ. ಚಾಂಪಿಯನ್ ಪಟ್ಟ ಏರಿಳಿವಾಗುತ್ತಲೇ ಇರುತ್ತದೆ. ಇಂದು ವಿಶ್ವಕಪ್‌ನಲ್ಲಿ ಗೆಲ್ಲುವ ತಂಡ ಮುಂದಿನ ನಾಲ್ಕುವರ್ಷಗಳ ಕಾಲ ಚಾಂಪಿಯನ್ ಪಟ್ಟದಲ್ಲಿ ಬೀಗಲಿದೆ.

ಗುರುವಾರ (ಮೇ 30) ಇಂಗ್ಲೆಂಡ್ ಕೇಂದ್ರ ಲಂಡನ್‌ನ ಓವಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಉದ್ಘಾಟನಾ ಪಂದ್ಯ ನಡೆಯಲಿದೆಯಲ್ಲ? ಅದು ಬರೀ 12ನೇ ಆವೃತ್ತಿಯ ವಿಶ್ವಕಪ್ ಟೂರ್ನಿಯ ಆರಂಭವಷ್ಟೇ ಅಲ್ಲ, ಬದಲಿಗೆ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಚೊಚ್ಚಲ ವಿಶ್ವಕಪ್ ಗೆಲುವಿನ ಎಡೆಗಿನ ಕನಸಿನ ಪಯಣದ ಆರಂಭವೂ ಹೌದು. ಗೆಲ್ಲೋ ತಂಡ ವಿಶ್ವಕಪ್ ಕಪ್ ನನಸಿಗೆ ಸಮೀಪವಾಗಲಿದೆ.

ವಿಶ್ವಕಪ್: ರೋಹಿತ್, ಧವನ್ ಫಾರ್ಮ್ ಬಗ್ಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ!ವಿಶ್ವಕಪ್: ರೋಹಿತ್, ಧವನ್ ಫಾರ್ಮ್ ಬಗ್ಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ!

1992ರಲ್ಲಿ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆಸಲಾದ ರೌಂಡ್ ರಾಬಿನ್ ಮಾದರಿಯ ಬಳಿಕ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ರೌಂಡ್ ರಾಬಿನ ಮಾದರಿಯಲ್ಲಿ ವಿಶ್ವಕಪ್ ನಡೆಸಲಾಗುತ್ತಿದೆ. ಲೀಗ್ ಹಂತದ ಸ್ಪರ್ಧೆಗಳಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದುಕೊಳ್ಳುವ ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿವೆ. ಅಂದರೆ ಟ್ರೋಫಿಯಾಸೆಯನ್ನು ಉಳಿಸಿಕೊಳ್ಳಲಿವೆ. ಇನ್ನುಳಿದ ತಂಡಗಳ ಟ್ರೋಫಿ ಕನಸು ಕಮರಲಿದೆ.

ಅಗ್ರ ನಾಲ್ಕರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕನ್ನೋ ತಂಡಗಳ ಸ್ಥಿತಿಗತಿಗಳು ಪಂದ್ಯದಿಂದ ಪಂದ್ಯಕ್ಕೆ ನಿರ್ಧಾರಗೊಳ್ಳುತ್ತಾ ಹೋಗುತ್ತವೆ. ಆದರೆ ತಂಡಗಳ ವಿಶ್ವಾಸ ಹೆಚ್ಚುವಲ್ಲಿ ಆಟಗಾರ ದೈಹಿಕ ಆರೋಗ್ಯ, ಮಾನಸಿಕ ಸ್ಥಿರತೆಗಳು ಹೆಚ್ಚು ಪರಿಣಾಮಕಾರಿ. ಇವುಗಳ ಪ್ರಾಮುಖ್ಯತೆಯನ್ನು ಅರಿತು ಮುನ್ನಡೆಯುವ ತಂಡ ಪ್ರಶಸ್ತಿ ಸುತ್ತಿನೆಡೆಗೆ ಲಗ್ಗೆಯಿಡಲಿದೆ.

ಸಚಿನ್ ಪ್ರಕಾರ ವಿರಾಟ್ ಕೊಹ್ಲಿ ಬಳಗದ ಬಲುದೊಡ್ಡ ಶಕ್ತಿ ಯಾವುದು ಗೊತ್ತ?!ಸಚಿನ್ ಪ್ರಕಾರ ವಿರಾಟ್ ಕೊಹ್ಲಿ ಬಳಗದ ಬಲುದೊಡ್ಡ ಶಕ್ತಿ ಯಾವುದು ಗೊತ್ತ?!

ಕಾದಾಟಕ್ಕಿಳಿದಿರುವ ಹತ್ತು ತಂಡಗಳಲ್ಲಿ ವೆಸ್ಟ್ ಇಂಡೀಸ್ 1975, 1979ರಲ್ಲಿ, ಭಾರತ ತಂಡ 1983, 2011ರಲ್ಲಿ, ಆಸ್ಟ್ರೇಲಿಯಾ 1987, 1999, 2003, 2007, 2015ರಲ್ಲಿ, ಪಾಕಿಸ್ತಾ 1992ರಲ್ಲಿ ಮತ್ತು ಶ್ರೀಲಂಕಾ 1996ರಲ್ಲಿ ಪ್ರಶಸ್ತಿ ಗೆದ್ದಿವೆ. ಹಾಗಂತ ಈ ತಂಡಗಳಲ್ಲಿ ಮತ್ತೆ ಟ್ರೋಫಿ ಗೆಲ್ಲೋ ಹಂಬಲಿಕೆ ನಿಂತಿಲ್ಲ. ಅದರ ಜೊತೆಗೆ ಟ್ರೋಫಿಯೇ ಗೆಲ್ಲದ ಇಂಗ್ಲೆಂಡ್, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ಅಫ್ಘಾನಿಸ್ತಾನ ತಂಡಗಗಳೂ ಪ್ರಶಸ್ತಿ ಕನಸಿಗೆ ಜೋತು ಬಿದ್ದಿವೆ. ಹತ್ತೂ ತಂಡಗಳ ಕನಸು ನನಸಾಗಿಸುವೆಡೆಗಿನ ಓಟ ಶುರುವಾಗಿದೆ..

(ಸುಮಾರು 20 ವರ್ಷಗಳಿಂದಲೂ ಕ್ರಿಕೆಟ್ ಬರವಣಿಗಾಗಿ ಗುರುತಿಸಿಕೊಂಡಿರುವ ಆರ್ ಕೌಶಿಕ್ ಅವರು ಲಂಡನ್‌ನಲ್ಲಿದ್ದು, ಇದು 7ನೇ ಬಾರಿಗೆ ವಿಶ್ವಕಪ್ ಟೂರ್ನಿ ಕವರ್ ಮಾಡುತ್ತಿದ್ದಾರೆ, ವಿಶೇಷ ಲೇಖನಗಳನ್ನು ಬರೆಯುತ್ತಿದ್ದಾರೆ)

Story first published: Monday, June 3, 2019, 17:40 [IST]
Other articles published on Jun 3, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X