ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ 2019: ರೋಹಿತ್ ಶರ್ಮಾ ಅಪ್ಪಿ ಅಭಿನಂದಿಸಿದ ವಿರಾಟ್ ಕೊಹ್ಲಿ

ICC World Cup 2019: Virat Kohli gives huge compliment to Rohit Sharma

ಸೌತಾಂಪ್ಟನ್, ಜೂನ್ 6: ಏಕದಿನ ಕ್ರಿಕೆಟ್‌ನಲ್ಲಿ 23 ಶತಕ ಬಾರಿಸಿ ಭಾರತದ ಕ್ರಿಕೆಟಿಗರಲ್ಲಿ ಅತ್ಯಧಿಕ ಶತಕಕ್ಕಾಗಿ ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿರುವ, 3 ದ್ವಿಶತಕದ ವಿಶ್ವ ದಾಖಲೆ ಹೊಂದಿರುವ 'ಹಿಟ್ ಮ್ಯಾನ್' ರೋಹಿತ್ ಶರ್ಮಾ ಅವರನ್ನು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅಪ್ಪಿ ಅಭಿನಂದಿಸಿದ್ದಾರೆ.

ವಿಶ್ವಕಪ್‌: ಸೌರವ್‌ ಗಂಗೂಲಿ ದಾಖಲೆ ಮುರಿದ 'ಹಿಟ್‌ಮ್ಯಾನ್‌' ರೋಹಿತ್‌!ವಿಶ್ವಕಪ್‌: ಸೌರವ್‌ ಗಂಗೂಲಿ ದಾಖಲೆ ಮುರಿದ 'ಹಿಟ್‌ಮ್ಯಾನ್‌' ರೋಹಿತ್‌!

ಸೌತಾಂಪ್ಟನ್‌ನಲ್ಲಿ ಬುಧವಾರ (ಜೂನ್ 5) ನಡೆದ ವಿಶ್ವಕಪ್ 2019ರ ಆರಂಭಿಕ ಪಂದ್ಯದಲ್ಲೇ ಭಾರತ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ 6 ವಿಕೆಟ್ ಜಯ ಸಾಧಿಸಿತು. ಪಂದ್ಯದಲ್ಲಿ ಅಜೇಯ ಶತಕ ಬಾರಿಸಿದ್ದ ರೋಹಿತ್ ಶರ್ಮಾ (122 ರನ್, 144 ಎಸೆತ) ತಂಡದ ಗೆಲುವಿಗೆ ಕಾರಣರಾಗಿದ್ದರು. ಪಂದ್ಯ ಗೆಲ್ಲುತ್ತಲೇ ಮೈದಾನಕ್ಕಾಗಮಿಸಿದ ಕೊಹ್ಲಿ, ರೋಹಿತ್ ಅವರನ್ನು ಅಪ್ಪಿ ಅಭಿನಂದಿಸಿದರು.

ಐಸಿಸಿ ಬಿಡುಗಡೆ ಮಾಡಿದ ಕಿಂಗ್‌ ಕೊಹ್ಲಿ ಚಿತ್ರಕ್ಕೆ ಅಭಿಮಾನಿಗಳ ಬೇಸರಐಸಿಸಿ ಬಿಡುಗಡೆ ಮಾಡಿದ ಕಿಂಗ್‌ ಕೊಹ್ಲಿ ಚಿತ್ರಕ್ಕೆ ಅಭಿಮಾನಿಗಳ ಬೇಸರ

'ವಿಶ್ವಕಪ್ ಆರಂಭಿಕ ಪಂದ್ಯದಲ್ಲಿನ ಒತ್ತಡವನ್ನು ದೃಷ್ಟಿಕೋನದಲ್ಲಿಟ್ಟು ಹೇಳೋದಾದ್ರೆ ನನಗನ್ನಿಸಿದಂತೆ ಇದು ಶರ್ಮಾ ಅವರ ಅತ್ಯುತ್ತಮ ಏಕದಿನ ಇನ್ನಿಂಗ್ಸ್. ಬ್ಯಾಟ್ಸ್ಮನ್‌ ಆಗಿ ನೀವು ಮೈದಾನಕ್ಕಿಳಿದಾಗ ಕೆಲ ಬೌನ್ಸರ್‌ನಂತ ಎಸೆತಗಳನ್ನೂ ತಾಳ್ಮೆಯಿಂದ ಎದುರಿಸಿ ಆಡೋದು ಸುಲಭವಲ್ಲ' ಎಂದು ಪಂದ್ಯದ ಬಳಿಕ ಮಾತನಾಡಿದ ಕೊಹ್ಲಿ ಹೇಳಿದರು.

ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ 8 ರನ್‌ಗೆ ವಿಕೆಟ್ ನೀಡಿದಾಗ ಭಾರತ ಆಘಾತ ಅನುಭವಿಸಿತ್ತು. ಆದರೆ ಕ್ರೀಸಿಗಂಟಿನಿಂತ ರೋಹಿತ್ ಪಂದ್ಯ ಗೆಲ್ಲಿಸಿಕೊಟ್ಟರು. ಅಲ್ಲದೆ ಎಂಎಸ್ ಧೋನಿ 34, ಕೆಎಲ್ ರಾಹುಲ್ 26, ಕೊಹ್ಲಿ 18 ರನ್‌ ಮತ್ತು ಯುಜುವೇಂದ್ರ ಚಾಹಲ್ 4, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್‌ಬೂಮ್ರಾ ತಲಾ 2 ವಿಕೆಟ್ ಕೂಡ ಗೆಲುವಿನಲ್ಲಿ ಗಮನಾರ್ಹವಾಗಿತ್ತು.

ಕ್ರಿಕೆಟ್‌: ಭಾರತ vs ದ.ಆಫ್ರಿಕಾ ನಡುವಣ 5 ಅದ್ಭುತ ODI ಪಂದ್ಯಗಳಿವುಕ್ರಿಕೆಟ್‌: ಭಾರತ vs ದ.ಆಫ್ರಿಕಾ ನಡುವಣ 5 ಅದ್ಭುತ ODI ಪಂದ್ಯಗಳಿವು

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ದಕ್ಷಿಣ ಆಫ್ರಿಕಾ ಎದುರು ಚಾಹಲ್, ಜೂಮ್ರಾ, ಭುವಿ ಮಾರಕ ಬೌಲಿಂಗ್ ಪ್ರದರ್ಶಿದರು. ಆಫ್ರಿಕಾ, ಫಾ ಡು ಪ್ಲೆಸಿಸ್ 38, ಡೇವಿಡ್ ಮಿಲ್ಲರ್ 31, ಆಂಡಿಲೆ ಫೆಹ್ಲುಕ್ವೇವೊ 34, ಕ್ರಿಸ್ ಮೋರಿಸ್ 42, ಕಾಗಿಸೋ ರಬಾಡಾ 31 ರನ್‌ನೊಂದಿಗೆ 227 ರನ್ ಬಾರಿಸಿತ್ತು. ಗುರಿ ಬೆನ್ನಟ್ಟಿದ ಭಾರತ 47.3 ಓವರ್‌ನಲ್ಲಿ 6 ವಿಕೆಟ್ ಕಳೆದು 230 ರನ್ ಮಾಡಿತು.

Story first published: Thursday, June 6, 2019, 10:25 [IST]
Other articles published on Jun 6, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X