Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ಅಪರೂಪದ ದಾಖಲೆ ಬರೆದ ಏಕಮಾತ್ರ ಕ್ರಿಕೆಟರ್ ಶಕೀಬ್ ಅಲ್ ಹಸನ್!

ICC World Cup: Bangladesh all-rounder Shakib Al Hasan scripts history

ಲಂಡನ್, ಜುಲೈ 3: ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ ನಡೆಯುತ್ತಿರುವ ಐಸಿಸಿ ವಿಶ್ವಕಪ್‌ 2019ರಲ್ಲಿ ಬಾಂಗ್ಲಾದೇಶ ಪರ ಅದ್ಭುತ ಪ್ರದರ್ಶನ ನೀಡುತ್ತಿರುವ ಶಕೀಬ್ ಅಲ್ ಹಸನ್, ವಿಶ್ವಕಪ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಮಂಗಳವಾರ (ಜುಲೈ 2) ನಡೆದ ಭಾರತ-ಬಾಂಗ್ಲಾ ಪಂದ್ಯದಲ್ಲಿ ಶಕೀಬ್ ಅಪರೂಪದ ಮೈಲಿಗಲ್ಲು ಸ್ಥಾಪಿಸಿದರು.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ವಿಶ್ವಕಪ್ ಆವೃತ್ತಿಯೊಂದರಲ್ಲಿ 500+ ರನ್ ಮತ್ತು 10 ವಿಕೆಟ್ ಪಡೆದ ಮೊದಲ ಕ್ರಿಕೆಟಿಗರಾಗಿ ಶಕೀಬ್ ಅಲ್ ಹಸನ್ ಇತಿಹಾಸ ಸೃಷ್ಠಿಸಿದ್ದಾರೆ. ಮಂಗಳವಾರದ ಪಂದ್ಯದಲ್ಲಿ ಶಕೀಬ್ ಅವರು ಯುವ ಬ್ಯಾಟ್ಸ್ಮ್ ರಿಷಬ್ ಪಂತ್ ಅವರ ವಿಕೆಟ್ ಕೆಡವುವ ಮೂಲಕ 10 ವಿಕೆಟ್‌ ದಾಖಲೆ ಪೂರೈಸಿಕೊಂಡರು.

ಎಜ್‌ಬಾಸ್ಟನ್‌ನಲ್ಲಿ 74 ಎಸೆತಗಳಿಗೆ 66 ರನ್ ಬಾರಿಸಿದ್ದ ಶಕೀಬ್ ಅಲ್ ಹಸನ್, 10 ಓವರ್‌ಗಳಲ್ಲಿ 41 ರನ್‌ ನೀಡಿ 1 ವಿಕೆಟ್ ಪಡೆದಿದ್ದರು. ಈ ಸಾಧನೆಯೊಂದಿಗೆ ಶಕೀಬ್, ವಿಶ್ವಕಪ್ ಒಟ್ಟು ಅತ್ಯಧಿಕ ರನ್‌ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲೂ ಗುರುತಿಸಿಕೊಂಡಿದ್ದಾರೆ. ವಿಶ್ವಕಪ್‌ನಲ್ಲಿ ಹೀಗೆ ಆಲ್ ರೌಂಡರ್ ಸಾಧನೆ ಮೆರೆದ ಮೊದಲ ಕ್ರಿಕೆಟರ್ ಶಕೀಬ್.

ಅತ್ಯಧಿಕ ರನ್‌ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ರೋಹಿತ್ ಶರ್ಮಾ 7 ಇನ್ನಿಂಗ್ಸ್‌ಗಳಲ್ಲಿ 544 ರನ್ ಬಾರಿಸಿದ್ದರೆ, ಶಕೀಬ್ ಅವರು 7 ಇನ್ನಿಂಗ್ಸ್‌ಗಳಲ್ಲಿ ಶರ್ಮಾಗಿಂತ 2 ರನ್ ಕಡಿಮೆ ಅಂದರೆ 542 ರನ್ ಗಳಿಸಿದ್ದಾರೆ. ಈ ಯಾದಿಯಲ್ಲಿ ತೃತೀಯ ಸ್ಥಾನದಲ್ಲಿರುವ ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ) 516 ರನ್ ಕಲೆ ಹಾಕಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾ, ರೋಹಿತ್ ಶರ್ಮಾಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಅಂಬಾಟಿ ರಾಯುಡು 104, ಕೆಎಲ್ ರಾಹುಲ್ 77, ರಿಷಬ್ ಪಂತ್ 48, ಎಂಎಸ್ ಧೋನಿ 35 ರನ್ ಬೆಂಬಲದೊಂದಿಗೆ 314 ರನ್ ಬಾರಿಸಿತ್ತು. ಗುರಿ ಬೆಂಬತ್ತಿದ ಬಾಂಗ್ಲಾ, ಶಕೀಬ್ 66, ಮೊಹಮ್ಮದ್ ಸೌಫುದ್ದೀನ್ 51 ರನ್ ಹೊರತಾಗಿಯೂ 286 ರನ್ ಬಾರಿಸಿ 28 ರನ್‌ನಿಂದ ಸೋತಿತು.

Story first published: Wednesday, July 3, 2019, 16:56 [IST]
Other articles published on Jul 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+