ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ಎದುರು ಸೆಮಿಫೈನಲ್‌ನಲ್ಲಿ ಆಡುವ ತಂಡ ಹೆಸರಿಸಿದ ವಾಘನ್

ICC World Cup: Michael Vaughan predicts England’s semi-final opponents

ಲಂಡನ್, ಜುಲೈ 4: ಬುಧವಾರ (ಜುಲೈ 3) ನ್ಯೂಜಿಲೆಂಡ್ ತಂಡವನ್ನು 119 ರನ್‌ನಿಂದ ಸೋಲಿಸಿರುವ ಇಂಗ್ಲೆಂಡ್, 1992ರ ಬಳಿಕ ಇದೇ ಮೊದಲ ಬಾರಿಗೆ ವಿಶ್ವಕಪ್‌ ಸೆಮಿಫೈನಲ್‌ಗೆ ಪ್ರವೇಶಿಸಿದೆ. ಟೂರ್ನಿಯ ಮಧ್ಯ ಭಾಗದಲ್ಲಿ ಏರಿಳಿತಗಳನ್ನು ಕಂಡ ಇಯಾನ್ ಮಾರ್ಗನ್ ಬಳಗ ಕಡೆಗೂ ಪ್ರಶಸ್ತಿ ಸುತ್ತಿನೆಡೆಗಿನ ಸೆಣಸಾಟಕ್ಕೆ ಸಜ್ಜಾಗಿದೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾಘನ್, ಈ ಬಾರಿಯ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಯಾವ ತಂಡ ಆಡಲಿದೆ ಎಂಬುದನ್ನು ಊಹಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಆತಿಥೇಯ ಇಂಗ್ಲೆಂಡ್ ಮತ್ತು ಭಾರತ ತಂಡಗಳು ಕಾದಾಡಲಿವೆ ಎಂದು ವಾಘನ್ ಹೇಳಿದ್ದಾರೆ.

ICC World Cup: Michael Vaughan predicts England’s semi-final opponents

ಇಂಗ್ಲೆಂಡ್ ಎದುರು ಕಿವೀಸ್‌ಗೆ ಸೋಲು: ಸೆಮಿಫೈನಲ್ ಲೆಕ್ಕಾಚಾರವೇನು!?ಇಂಗ್ಲೆಂಡ್ ಎದುರು ಕಿವೀಸ್‌ಗೆ ಸೋಲು: ಸೆಮಿಫೈನಲ್ ಲೆಕ್ಕಾಚಾರವೇನು!?

'ಅದ್ಭುತ ಪ್ರದರ್ಶನ. ಕಳೆದ ಕೆಲ ದಿನಗಳಿಂದ ಇಂಗ್ಲೆಂಡ್ ಮಾನಸಿಕವಾಗಿ ಬಲಿಷ್ಠವಾಗಿತ್ತು. ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್ ತಂಡ ಭಾರತವನ್ನು ಎದುರುಗೊಳ್ಳಲಿದೆ' ಎಂದು ವಾಘನ್ ಟ್ವೀಟ್ ಮಾಡಿದ್ದರು. ಬರ್ಮಿಂಗ್‌ಹ್ಯಾಮ್‌ನ ಎಜ್ ಬಾಸ್ಟನ್ ನಲ್ಲಿ ನಡೆಯುವ 2ನೇ ಸೆಮಿಫೈನಲ್‌ನಲ್ಲಿ ವಿಶ್ವಕಪ್ ಅಂಕಪಟ್ಟಿಯ 2 ಮತ್ತು 3ನೇ ಸ್ಥಾನಿ ತಂಡಗಳು ಕಾದಾಡಲಿವೆ.

ರೋಹಿತ್‌ ಬ್ಯಾಟಿಂಗ್‌ ಕುರಿತಾಗಿ ಮಾತನಾಡಿದ ವಿರಾಟ್‌ ಕೊಹ್ಲಿರೋಹಿತ್‌ ಬ್ಯಾಟಿಂಗ್‌ ಕುರಿತಾಗಿ ಮಾತನಾಡಿದ ವಿರಾಟ್‌ ಕೊಹ್ಲಿ

ವಿಶ್ವಕಪ್‌ ಸದ್ಯದ ಅಂಕಪಟ್ಟಿಯಲ್ಲಿ ಆಸ್ಟ್ರೇಲಿಯಾ, ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳು ಕ್ರಮವಾಗಿ 1ರಿಂದ 4ನೇ ಸ್ಥಾನಗಳಲ್ಲಿವೆ. ಹೀಗಾಗಿ ವಾಘನ್ ಪ್ರಕಾರ, ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ನಲ್ಲಿ ನಡೆಯುವ ಮೊದಲ ಸೆಮಿಫೈನಲ ಪಂದ್ಯದಲ್ಲಿ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಕಾದಾಡಿದರೆ, ಬರ್ಮಿಂಗ್‌ಹ್ಯಾಮ್‌ನಲ್ಲಿ ಇಂಗ್ಲೆಂಡ್-ಭಾರತ ಪಂದ್ಯವನ್ನಾಡಲಿದೆ.

ಮಾಂಜ್ರೆಕರ್‌ಗೆ ಖಡಕ್ಕಾಗಿ ಬಿಸಿ ಮುಟ್ಟಿಸಿದ ಸರ್‌ ರವೀಂದ್ರ ಜಡೇಜಾ!ಮಾಂಜ್ರೆಕರ್‌ಗೆ ಖಡಕ್ಕಾಗಿ ಬಿಸಿ ಮುಟ್ಟಿಸಿದ ಸರ್‌ ರವೀಂದ್ರ ಜಡೇಜಾ!

ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಗೆಲುವು ದಾಖಲಿಸುವ ಮುನ್ಸೂಚನೆ ದೊರೆತ ಬೆನ್ನಲ್ಲೇ ಅಂದರೆ ಜುಲೈ 3ರಂದು ವಾಘನ್ ಹೀಗೆ ಟ್ವೀಟ್ ಮಾಡಿದ್ದರು. ವಿಶ್ವಕಪ್‌ ಗ್ರೂಪ್ ಹಂತದ ಸ್ಪರ್ಧೆಗಳು ಇನ್ನೂ ಬಾಕಿಯಿವೆ. ಸೆಮಿಫೈನಲ್ ಪ್ರವೇಶಿಸಿರುವ ತಂಡಗಳಲ್ಲಿ ಆಸ್ಟ್ರೇಲಿಯಾ ತಂಡ ನ್ಯೂಜಿಲೆಂಡ್ ಸವಾಲು ಸ್ವೀಕರಿಸಿದರೆ, ಭಾರತ-ಶ್ರೀಲಂಕಾ ತಂಡಗಳು ಕೊನೇ ಪಂದ್ಯವನ್ನಾಡಲಿವೆ.

Story first published: Thursday, July 4, 2019, 17:02 [IST]
Other articles published on Jul 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X