ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಮುಂದಿನ ಆವೃತ್ತಿಗೆ ಮುನ್ನ ಹರಾಜಿಗೆ ಬಿಡುಗಡೆಯಾದರೆ ಕೋಟಿ ಕೋಟಿ ಬಾಚಲಿದ್ದಾರೆ ಈ 5 ಆಟಗಾರರು!

If These 5 cricketers released ahead of next year IPL they will get huge amount in Upcoming auction

ಇಂಡಿಯನ್ ಪ್ರೀಮಿಯರ್ ಲೀಗ್ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಅತಿ ದೊಡ್ಡ ಟಿ20 ಲೀಗ್ ಎನಿಸಿಕೊಂಡಿದೆ. ಕ್ರಿಕೆಟ್ ಲೋಕದ ಸ್ಟಾರ್ ಆಟಗಾರರ ಜೊತೆಗೆ ಸ್ಥಳೀಯ ಆಟಗಾರರಿಗೆ ಕೂಡ ಈ ಟೂರ್ನಿಯಲ್ಲಿ ಆಡುವ ಅವಕಾಶ ದೊರೆಯುತ್ತದೆ. ಇಂಥಾ ಅವಕಾಶವನ್ನು ಎರಡೂ ಕೈಗಳೊಂದ ಬಾಚಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಂಡ ಅದೆಷ್ಟೋ ಆಟಗಾರರಿದ್ದಾರೆ. ಇನ್ನು ಪ್ರತಿ ಆವೃತ್ತಿಯ ಆರಂಭಕ್ಕೂ ಮುನ್ನ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಸುತ್ತದೆ. ಈ ಸಂದರ್ಭದಲ್ಲಿ ತಂಡಗಳಿಗೆ ತಮ್ಮ ಸ್ಕ್ವಾಡ್‌ಗಳನ್ನು ಮತ್ತಷ್ಟು ಬಲಗೊಳಿಸುವ ಅವಕಾಶ ದೊರೆಯುತ್ತದೆ.

ಇದೀಗ 2022ರ ಆವರತ್ತಿಯ ಐಪಿಎಲ್ ಟೂರ್ನಿ ಮುಕ್ತಾಯದ ಬಳಿಕ ಈ ಆವೃತ್ತಿಯ ಪ್ರದರ್ಶನವನ್ನು ಗಮನಿಸಿಕೊಂಡು ಐಪಿಎಲ್ ಫ್ರಾಂಚೈಸಿಗಳು ಯಾವೆಲ್ಲಾ ಆಟಗಾರರನ್ನು ಹರಾಜಿಗೆ ಬಿಡುಗಡೆಗೊಳಿಸಬಹುದು ಎಂಬ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿರುತ್ತದೆ. ಈ ಆವೃತ್ತಿಯಲ್ಲಿ ನಿರೀಕ್ಷಿತ ಪ್ರದರ್ಶನವನ್ನು ನೀಡಲು ವಿಫಲವಾದ ಆಟಗಾರರು ಹರಾಜಿಗೆ ಬಿಡುಗಡೆಯಾಗುವುದು ಖಚಿತ. ಇದರಲ್ಲಿ ಕೆಲ ಆಟಗಾರರು ಈ ಹಿಂದೆ ತಮ್ಮ ಸಾಮರ್ಥ್ಯವನ್ನು ಕೆಲ ಸಂದರ್ಭಗಳಲ್ಲಿ ಪ್ರದರ್ಶಿಸಿದ್ದಾರೆ. ಹೀಗಾಘಿ ಇತರ ಫ್ರಾಂಚೈಸಿಗಳಿಂದ ಹೆಚ್ಚಿನ ಬೇಡಿಕೆಯನ್ನು ಪಡೆಯುವುದು ಶತಸಿದ್ಧ.

IND vs SA: ಮೊದಲ ಟಿ20 ಪಂದ್ಯಕ್ಕೆ ಭಾರತದ ಆಡುವ 11ರ ಬಳಗ ಆಯ್ಕೆ ಮಾಡಿದ ರವಿಶಾಸ್ತ್ರಿIND vs SA: ಮೊದಲ ಟಿ20 ಪಂದ್ಯಕ್ಕೆ ಭಾರತದ ಆಡುವ 11ರ ಬಳಗ ಆಯ್ಕೆ ಮಾಡಿದ ರವಿಶಾಸ್ತ್ರಿ

ಹಾಗಾದರೆ ಮುಂದಿನ ಐಪಿಎಲ್ ಆವೃತ್ತಿಗೆ ಮುನ್ನ ಹರಾಜಿಗೆ ಮುಡುಗಡೆಯಾಗಿ ಕೋಟಿ ಕೋಟಿ ಮೊತ್ತವನ್ನು ಪಡೆಯಬಹುದಾದ ಆ ಐವರು ಆಟಗಾರರು ಯಾರು? ಮುಂದೆ ಓದಿ..

ಶಾರೂಕ್ ಖಾನ್

ಶಾರೂಕ್ ಖಾನ್

ಚೆನ್ನೈ ಮೂಲದ ಭರವಸೆಯ ಆಟಗಾರ ಶಾರೂಖ್ ಖಾನ್ ಈ ಭಾರಿಯ ಆವೃತ್ತಿಯಲ್ಲಿ ಮಿಂಚಲು ವಿಫಲವಾಗಿದ್ದಾರೆ. ಶಾರೂಕ್ ಖಾನ್ ಮೇಲೆ ಹೆಚ್ಚಿನ ನಿರೀಕ್ಷೆಯಿದ್ದರೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪಂಜಾಬ್ ಕಿಂಗ್ಸ್ ತಂಡ ಮುಂದಿನ ಆವೃತ್ತಿಗೆ ಮುನ್ನ ಹರಾಜಿಗೆ ಬಿಡುಗಡೆಗೊಳಿಸುವ ಸಾಧ್ಯತೆಯಿದೆ. ಆದರೆ ದೇಶೀಯ ಕ್ರಿಕೆಟ್‌ನಲ್ಲಿ ಅದರಲ್ಲೂ ಚುಟುಕು ಮಾದರಿಯಲ್ಲಿ ಶಾರೂಕ್ ಖಾನ್ ತಮ್ಮ ಸಾಮರ್ಥ್ಯವನ್ನು ಈಗಾಗಲೇ ಪ್ರದರ್ಶಿಸಿದ್ದಾರೆ. ಕಳೆದ ಎರಡು ಆವೃತ್ತಿಯ ಸಯ್ಯದ್ ಮುಶ್ತಾಕ್ ಅಲಿ ಟೂರ್ನಿಯಲ್ಲಿ ತಮಿಳುನಾಡು ಪರವಾಗಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿರುವ ಶಾರೂಕ್ ಖಾನ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಲು ಇತರ ತಂಡಗಳೂ ಕಾಯುತ್ತಿರುವುದು ಸುಳ್ಳಲ್ಲ. ದೊಡ್ಡ ಹೊಡೆತಗಳಿಗೆ ಹೆಸರಾಗಿರುವ ಶಾರೂಕ್ ಖಾನ್ ಮುಂದಿನ ಆವೃತ್ತಿಗೆ ಮುನ್ನ ಹರಾಜು ಪಟ್ಟಿಗೆ ಬಿಡುಗಡೆಯಾದರೆ ಕೋಟಿ ಕೋಟಿ ಮೊತ್ತವನ್ನು ಬಾಚಿಕೊಳ್ಳುವುದರಲ್ಲಿ ಅನುಮಾನವಿಲ್ಲ.

ದೇವದತ್ ಪಡಿಕ್ಕಲ್

ದೇವದತ್ ಪಡಿಕ್ಕಲ್

21ರ ಹರೆಯದ ಎಡಗೈ ಆಟಗಾರ ದೇವದತ್ ಪಡಿಕ್ಕಲ್ ಕರ್ನಾಟಕದ ಆಟಗಾರ. ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಪಡಿಕ್ಕಲ್. ಐಪಿಎಲ್‌ನಲ್ಲಿಯೂ ಈ ಹಿಂದಿನ ಎರಡು ಆವೃತ್ತಿಗಳಲ್ಲಿ ಆರ್‌ಸಿಬಿ ಪರವಾಗಿ ಆಡಿ ಅದ್ಭುತ ಪ್ರದರ್ಶನ ನೀಡಿ ತಮ್ಮಲ್ಲಿನ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ ಪಡಿಕ್ಕಲ್. ಆದರೆ ಈ ಬಾರಿಯ ಆವೃತ್ತಿಯಲ್ಲಿ ದೇವದತ್ ಪಡಿಕ್ಕಲ್ ರಾಜಸ್ಥಾನ್ ರಾಯಲ್ಸ್ ತಂಡದ ಪರವಾಗಿ ದೊಡ್ಡ ಮಟ್ಟದ ಪ್ರದರ್ಶನ ನೀಡಲು ವಿಫಲವಾದರು.ಈ ಬಾರಿಯ ಆರ್‌ಆರ್ ಪರವಾಗಿ ತಮ್ಮ ಆರಂಭಿಕ ಕ್ರಮಾಂಕವನ್ನು ಬಿಟ್ಟು ನಾಲ್ಕನೇ ಕ್ರಮಾಂಕದಲ್ಲಿ ಆಡಲಿಳಿದರು. ಆದರೆ ಇದರಲ್ಲಿ ಹೆಚ್ಚಿನ ರನ್ ಕಲೆ ಹಾಕಲು ಪಡಿಕ್ಕಲ್‌ಗೆ ಸಾಧ್ಯವಾಗಲಿಲ್ಲ. ಈ ಆವೃತ್ತಿಯಲ್ಲಿ ಕೇವಲ 22.12ರ ಸರಾಸರಿಯಲ್ಲಿ 376 ರನ್‌ಗಳನ್ನು ಮಾತ್ರವೇ ಗಳಿಸಿರುವ ಪಡಿಕ್ಕಲ್ ಅವರಿಂದ ಒಂದು ಅರ್ಧ ಶತಕ ಮಾತ್ರವೇ ದಾಖಲಾಗಿದೆ. ಹೀಗಾಗಿ ಹರಾಜಿಗೆ ಬಿಡುಗಡೆಗೊಳಿಸಿದರೆ ಮತ್ತೆ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಪಡೆಯುವುದರಲ್ಲಿ ಅನುಮಾನವಿಲ್ಲ.

ಅಬ್ದುಲ್ ಸಮದ್

ಅಬ್ದುಲ್ ಸಮದ್

ಜಮ್ಮು ಕಾಶ್ಮೀರ ಮೂಲದ ಬಲಗೈ ಆಟಗಾರ ಅಬ್ದುಲ್ ಸಮದ್ ಈ ಭಾಗದಿಂದ ಐಪಿಎಲ್‌ನಲ್ಲಿ ಆಡುತ್ತಿರುವ ಕೇವಲ ನಾಲ್ಕನೇ ಆಟಗಾರನಾಗಿದ್ದಾರೆ. ತಮ್ಮ ದೊಡ್ಡ ದೊಡ್ಡ ಹೊಡೆತಗಳಿಗೆ ಸಮದ್ ಖ್ಯಾತರಾಗಿದ್ದಾರೆ. 13 ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಸಮದ್ ಮೂರು ಶತಕ ಹಾಗೂ ನಾಳ್ಕು ಅರ್ಧ ಶತಕ ಗಳಿಸಿ ಮಿಂಚಿದ್ದಾರೆ. ಅಲ್ಲದೆ ಬೌಲಿಂಗ್‌ನಲ್ಲಿಯೂ ಮಿಂಚಬಲ್ಲ ಸಾಮರ್ಥ್ಯ ಈ ಆಟಗಾರನಲ್ಲಿದೆ. ಐಪಿಎಲ್‌ನಲ್ಲಿಯೂ ಸಿಕ್ಕ ಅವಕಾಶದಲ್ಲಿ ಮಿಂಚಿರುವ ಸಮದ್‌ಗೆ ಹೆಚ್ಚಿನ ಅವಕಾಶಗಳೂ ದೊರೆತಿಲ್ಲ. 2022ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರೀಟೈನ್ ಮಾಡಿಕೊಂಡಿದ್ದರೂ ಇತ್ತೀಚಿನ ಪಂದ್ಯಗಳಲ್ಲಿ ಉತ್ತಮ ಫಾರ್ಮ್ ಪ್ರದರ್ಶಿಸದ ಕಾರಣ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದರು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಹರಾಜಿಗೆ ಬರುವ ಸಾಧ್ಯತೆಯಿದ್ದು ಈ ಆಟಗಾರ ಕೂಡ ಹರಾಜಿನಲ್ಲಿ ದೊಡ್ಡ ಮೊತ್ತವನ್ನು ಗಳಿಸಿಕೊಳ್ಳುವ ಸಾಧ್ಯತೆಯಿದೆ.

ಡ್ವೇಯ್ನ್ ಪ್ರಿಟೋರಿಯಸ್

ಡ್ವೇಯ್ನ್ ಪ್ರಿಟೋರಿಯಸ್

ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಡ್ವೇಯ್ನ್ ಪ್ರಿಟೀರಿಯಸ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಬೌಲಿಂಗ್ ಮಾತ್ರವಲ್ಲದೆ ಬ್ಯಾಟಿಂಗ್‌ನಲ್ಲಿಯೂ ಕೊಡುಗೆ ನೀಡುವ ಸಾಮರ್ಥ್ಯವಿರುವ ಪ್ರಿಟೋರಿಯಸ್ ಕಳೆದ ಆವೃತ್ತಿಯಲ್ಲಿ ಆರಂಭದಲ್ಲಿ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಲು ವಿಫಲವಾಗಿದ್ದರು. 2016ರಲ್ಲಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪದಾರ್ಪಣೆ ಮಾಡಿರುವ ಪ್ರಿಟೋರಿಯಸ್ 2019ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಭಾಗವಾಗಿದ್ದರು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಸಿಎಸ್‌ಕೆ ತಂಡ ಈ ಆಟಗಾರನನ್ನು ಹೊರಗಿಡುವ ಪ್ರಯತ್ನ ನಡೆಸಿದರೆ ಇತರ ತಂಡಗಳು ಪೈಪೋಟಿ ನಡೆಸುವುದರಲ್ಲಿ ಅನುಮಾನವಿಲ್ಲ.

ಕಾರ್ತಿಕ್ ತ್ಯಾಗಿ

ಕಾರ್ತಿಕ್ ತ್ಯಾಗಿ

ಉತ್ತರ ಪ್ರದೇಶ ಮೂಲದ ವೇಗದ ಬೌಲರ್ ಕಾರ್ತಿಕ್ ತ್ಯಾಗಿ 2020ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ತಮಡದ ಭಾವಗವಾಗಿದ್ದರು. ಈ ಹಂತದಲ್ಲಿಯೇ ತನ್ನ ವೇಗ ಹಾಗೂ ಹೊಸ ಚೆಂಡನ್ನು ಅದ್ಭುತವಾಗಿ ಬಳಸುವ ನೈಪುಣ್ಯತೆಯನ್ನು ಪ್ರದರ್ಶಿಸಿ ಗಮನಸೆಳೆದಿದ್ದರು. ಆದರೆ ಈ ವರ್ಷದ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡಿದ್ದ ಕಾರ್ತಿಕ್ ತ್ಯಾಗಿ ಆಡಿರುವ 6 ಪಂದ್ಯಗಳಲ್ಲಿ 5 ವಿಕೆಟ್ ಪಡೆಯಲು ಮಾತ್ರವೇ ಸಮರ್ಥವಾಗಿದ್ದರು. ಹೀಗಾಗಿ ಮುಂದಿನ ಆವೃತ್ತಿಗೆ ಕಾರ್ತಿಕ್ ತ್ಯಾಗಿ ಮತ್ತೆ ಹರಾಜಿಗೆ ಬಿಡುಗಡೆಯಾದರೆ ಅಚ್ಚರಿಯಿಲ್ಲ. ಆದರೆ ಹರಾಜಿನಲ್ಲಿ ಇತರ ತಂಡಗಳು ಯುವ ವೇಗಿಯನ್ನು ತಮ್ಮ ತಂಡಕ್ಕೆ ಸೇರ್ಪಡೆಗೊಳಿಸಲು ಪೈಪೋಟಿಗೆ ಇಳಿಯುವುದರಲ್ಲಿ ಅನುಮಾನವಿಲ್ಲ.

Story first published: Monday, June 6, 2022, 11:16 [IST]
Other articles published on Jun 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X