IND vs AUS: ಪ್ರಸ್ತುತ ಹಾರ್ದಿಕ್ ಪಾಂಡ್ಯ 'ಅನ್ಯಗ್ರಹ'ದಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ; ಮಾಜಿ ಕ್ರಿಕೆಟಿಗ

ಮೊಹಾಲಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಟೀಂ ಇಂಡಿಯಾ ನಾಲ್ಕು ವಿಕೆಟ್‌ಗಳಿಂದ ಸೋತಿರಬಹುದು. ಆದರೆ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡದ ಸ್ಟಾರ್ ನಿಸ್ಸಂದೇಹವಾಗಿ ಮತ್ತೊಮ್ಮೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಆಗಿದ್ದಾರೆ.

ಗುಜರಾತ್ ಟೈಟನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಭಾರತೀಯ ಇನ್ನಿಂಗ್ಸ್‌ನ ಕೊನೆಯ ಮೂರು ಎಸೆತಗಳಲ್ಲಿ ಸತತ ಮೂರು ಸಿಕ್ಸರ್‌ಗಳು ಸೇರಿದಂತೆ 30 ಎಸೆತಗಳಲ್ಲಿ ಅದ್ಭುತ 71 ರನ್ ಗಳಿಸಿ ಮೊದಲು ಬ್ಯಾಟಿಂಗ್ ಮಾಡಿದ ನಂತರ ತಮ್ಮ ತಂಡವನ್ನು 208ರ ಗಡಿ ತಲುಪಿಸಿದರು.

ಟಿ20 ವಿಶ್ವಕಪ್‌ನ ಭಾರತ ತಂಡದಲ್ಲಿ ಈ IPL ತಂಡಗಳ ಆಟಗಾರರಿಲ್ಲ; ಮುಂಬೈ, ಆರ್‌ಸಿಬಿ ಮೇಲುಗೈ!ಟಿ20 ವಿಶ್ವಕಪ್‌ನ ಭಾರತ ತಂಡದಲ್ಲಿ ಈ IPL ತಂಡಗಳ ಆಟಗಾರರಿಲ್ಲ; ಮುಂಬೈ, ಆರ್‌ಸಿಬಿ ಮೇಲುಗೈ!

ಭಾರತದ ಮಾಜಿ ಬ್ಯಾಟ್ಸ್‌ಮನ್ ಸಂಜಯ್ ಮಂಜ್ರೇಕರ್ ಅವರು ಹಾರ್ದಿಕ್ ಪಾಂಡ್ಯ ಅವರು ಸಂಪೂರ್ಣವಾಗಿ "ವಿಭಿನ್ನ ಗ್ರಹ'ದಲ್ಲಿರುವಂತೆ ಬ್ಯಾಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಪ್ರಸ್ತುತ ಬೇರೆ ಗ್ರಹದಲ್ಲಿ ಆಡುತ್ತಿರುವ ಹಾರ್ದಿಕ್ ಪಾಂಡ್ಯ

ಪ್ರಸ್ತುತ ಬೇರೆ ಗ್ರಹದಲ್ಲಿ ಆಡುತ್ತಿರುವ ಹಾರ್ದಿಕ್ ಪಾಂಡ್ಯ

"ಏಷ್ಯಾ ಕಪ್‌ನಲ್ಲಿ ನಾವು ಯೋಚಿಸಿದ್ದೇವೆ, ಬಹುಶಃ ಅವರು ತಮ್ಮ ಮೋಜೋವನ್ನು ಸ್ವಲ್ಪಮಟ್ಟಿಗೆ ಕಳೆದುಕೊಂಡಿರಬಹುದು ಮತ್ತು ಅವರು ಬೇಗನೆ ಫಾರ್ಮ್‌ಗೆ ಬರುತ್ತಾರೆ ಎಂದು ನಾವು ಭಾವಿಸಿದ್ದೇವು. ಆದರೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ನಾವು ನೋಡಿದ ರೀತಿಯ ಬ್ಯಾಟಿಂಗ್ ಫಾರ್ಮ್‌ನಲ್ಲಿ ಒಂದು ರೀತಿಯ ಬಂಪ್ ಆಗಿತ್ತು," ಎಂದರು.

"ಹಾರ್ದಿಕ್ ಪಾಂಡ್ಯ ಬ್ಯಾಟ್‌ನಿಂದ ಬರುವ ಹೊಡೆತಗಳು ಮತ್ತು ಪ್ರಭಾವ ಮತ್ತು ಮತ್ತೆ ನಾವು ಪ್ರಸ್ತುತ ಬೇರೆ ಗ್ರಹದಲ್ಲಿ ಆಡುತ್ತಿರುವ ಹಾರ್ದಿಕ್ ಪಾಂಡ್ಯಗೆ ಮರಳಿದ್ದೇವೆ," ಎಂದು SPORTS18ನ ದೈನಂದಿನ ಕ್ರೀಡಾ ಸುದ್ದಿ ಶೋ 'ಸ್ಪೋರ್ಟ್ಸ್ ಓವರ್ ದ ಟಾಪ್'ನಲ್ಲಿ ಸಂಜಯ್ ಮಂಜ್ರೇಕರ್ ಹೇಳಿದರು.

ಯುಜ್ವೇಂದ್ರ ಚಹಾಲ್ 3.2 ಓವರ್‌ಗಳಲ್ಲಿ 42 ರನ್‌

ಯುಜ್ವೇಂದ್ರ ಚಹಾಲ್ 3.2 ಓವರ್‌ಗಳಲ್ಲಿ 42 ರನ್‌

"ಕೆಲವು ಗುಣಮಟ್ಟದ ಬೌಲಿಂಗ್ ವಿರುದ್ಧ ಕ್ಲಾಸ್ ಬ್ಯಾಟಿಂಗ್ ಆಡಿದ್ದು, ಇದನ್ನು ಗಮನಿಸುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಭಾರತ ಮೊದಲು ಬ್ಯಾಟ್ ಮಾಡಿದ ಕಾರಣ, ಪಂದ್ಯದ ದ್ವಿತೀಯಾರ್ಧದಲ್ಲಿ ಅದು ಸುಲಭವಾಗಿರಲಿಲ್ಲ. ಹಾಗಾಗಿ, ಹಾರ್ದಿಕ್ ಪಾಂಡ್ಯಗೆ ಹ್ಯಾಟ್ಸ್‌ಆಫ್‌ ಎಂದು ಅವರು ತಿಳಿಸಿದ್ದಾರೆ.

ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಲೆಗ್-ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಸ್ವಲ್ಪ ದಣಿದಿದ್ದಾರೆ ಎಂದು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟಿದ್ದಾರೆ. ಯುಜ್ವೇಂದ್ರ ಚಹಾಲ್ ಅವರ ಸ್ಪೆಲ್‌ನಲ್ಲಿ ಕೇವಲ 3.2 ಓವರ್‌ಗಳಲ್ಲಿ 42 ರನ್‌ಗಳನ್ನು ಸೋರಿಕೆ ಮಾಡಿದರು.

ತಂಡದಲ್ಲಿ ಮೂವರು ಸ್ಪಿನ್ನರ್‌ಗಳಿದ್ದಾರೆ

ತಂಡದಲ್ಲಿ ಮೂವರು ಸ್ಪಿನ್ನರ್‌ಗಳಿದ್ದಾರೆ

"ತುಂಬಾ ಪಂದ್ಯಗಳಲ್ಲಿ ನೀವು ಯುಜ್ವೇಂದ್ರ ಚಹಾಲ್‌ರನ್ನು ನೋಡಿದರೆ, ಚೆನ್ನಾಗಿ ಆಡುತ್ತಿದ್ದ. ಆದರೆ ಸ್ವಲ್ಪ ಸಮಯದವರೆಗೆ ಕೈಬಿಟ್ಟ ನಂತರ ಅವನು ಹೇಗೆ ಹಿಂದಿರುಗಿದನು. ಆಸ್ಟ್ರೇಲಿಯಾಕ್ಕೆ ಹೋಗುವಾಗ ಅವರು ಸ್ವಲ್ಪ ವಿರಾಮ ಪಡೆದಾಗ ಚೆನ್ನಾಗಿರುತ್ತಾರೆ. ಆದರೆ ನಾನು ಯಾವಾಗಲೂ ಸ್ಪಿನ್ ವಿಭಾಗದಲ್ಲಿ ಎಕ್ಸ್-ಫ್ಯಾಕ್ಟರ್ ಅನ್ನು ಬಯಸುತ್ತೇನೆ ಮತ್ತು ಆಸ್ಟ್ರೇಲಿಯಕ್ಕೆ ಘೋಷಿಸಲಾದ ತಂಡದ ಬಗ್ಗೆ ಅದು ನನಗೆ ಕಾಳಜಿ ವಹಿಸುವ ಏಕೈಕ ವಿಷಯವಾಗಿದೆ," ಎಂದರು.

"ಅಕ್ಷರ್ ಪಟೇಲ್, ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಾಲ್ ಮೂವರು ಸ್ಪಿನ್ನರ್‌ಗಳಿದ್ದಾರೆ. ಟಿ20 ಪಂದ್ಯಗಳನ್ನು ಗೆಲ್ಲಲು ಅಗತ್ಯವಿರುವ ಮಧ್ಯಮ ಓವರ್‌ಗಳಲ್ಲಿ ನಾಟಕ ನಡೆಯುವುದನ್ನು ನಾನು ನೋಡುತ್ತಿಲ್ಲ," ಎಂದು ಸಂಜಯ್ ಮಂಜ್ರೇಕರ್ ಅಭಿಪ್ರಾಯಪಟ್ಟರು.

ಹರ್ಷಲ್ ಪಟೇಲ್ ನಾಲ್ಕು ಓವರ್‌ಗಳಲ್ಲಿ 49 ರನ್‌

ಹರ್ಷಲ್ ಪಟೇಲ್ ನಾಲ್ಕು ಓವರ್‌ಗಳಲ್ಲಿ 49 ರನ್‌

ಯುಜ್ವೇಂದ್ರ ಚಹಾಲ್ ಹೊರತಾಗಿ, ಆಲ್‌ರೌಂಡರ್ ಹರ್ಷಲ್ ಪಟೇಲ್ ಕೂಡ ಗಾಯದಿಂದ ವಾಪಸಾಗುವಾದ ಪಂದ್ಯದಲ್ಲಿ ಅತ್ಯಂತ ದುಬಾರಿಯಾದರು. ಅವರ ನಾಲ್ಕು ಓವರ್‌ಗಳಲ್ಲಿ 49 ರನ್‌ಗಳನ್ನು ಸೋರಿಕೆ ಮಾಡಿದರು.

"ಹರ್ಷಲ್ ಪಟೇಲ್ ನಾವು ಹಲವಾರು ವರ್ಷಗಳಿಂದ ನೋಡುತ್ತಿರುವ ವ್ಯಕ್ತಿ. ಐಪಿಎಲ್‌ನಲ್ಲೂ ನಾವು ಅವರನ್ನು ನೋಡಿದ್ದೇವೆ. ಅವನ ನಿಧಾನಗತಿಯ ಚೆಂಡು ನಿಜವಾಗಿಯೂ ನಿಧಾನವಾದಾಗ ಆಡಲು ತುಂಬಾ ಕಷ್ಟಕರವಾಗುತ್ತವೆ. ಕಳೆದ ಬಾರಿ ಅವರ ನಿಧಾನಗತಿಯ ಚೆಂಡುಗಳು ಗಂಟೆಗೆ 120 ಕಿಮೀ ವೇಗದಲ್ಲಿ ಹೋಗುತ್ತಿದ್ದವು. ಆಸ್ಟ್ರೇಲಿಯಾದಲ್ಲಿ ನಿಧಾನಗತಿಯ ಬೌಲಿಂಗ್ ಸಹಕಾರಿಯಾಗುವುದಿಲ್ಲ. ಹಾಗಾಗಿ ಹರ್ಷಲ್‌ನ ಕೌಶಲ್ಯದ ಬಗ್ಗೆ ಭಾರತವು ಗಮನಹರಿಸುವ ಮತ್ತೊಂದು ವಿಷಯವಾಗಿದೆ," ಎಂದು ಸಂಜಯ್ ಮಂಜ್ರೇಕರ್ ತಿಳಿಸಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, September 22, 2022, 17:32 [IST]
Other articles published on Sep 22, 2022

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X