ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs BAN 1st Test: ಪದಾರ್ಪಣೆ ಮಾಡಿ 2 ವರ್ಷಗಳ ನಂತರ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಶುಭಮನ್ ಗಿಲ್

IND vs BAN 1st Test: Team India Opner Shubman Gill Scored Maiden Test Century

23 ವರ್ಷದ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರು ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಬಾಂಗ್ಲಾದೇಶ ವಿರುದ್ಧ ಬಾರಿಸಿದರು. ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 2 ವರ್ಷಗಳ ನಂತರ ಆಟದ ಸುದೀರ್ಘ ಸ್ವರೂಪದಲ್ಲಿ ಚೊಚ್ಚಲ ಶತಕ ಗಳಿಸಿ ಸಂಭ್ರಮಿಸಿದರು.

ಶುಕ್ರವಾರ, ಡಿಸೆಂಬರ್ 16ರಂದು ಚಟ್ಟೋಗ್ರಾಮ್‌ನಲ್ಲಿ ಬಾಂಗ್ಲಾದೇಶ ವಿರುದ್ಧದ 2 ಪಂದ್ಯಗಳ ಸರಣಿಯ ಮೊದಲ ಟೆಸ್ಟ್‌ನ ಭಾರತದ ಎರಡನೇ ಇನ್ನಿಂಗ್ಸ್‌ನ 3ನೇ ದಿನದಂದು ಶುಭಮನ್ ಗಿಲ್ 100ರ ಗಡಿ ದಾಟಿದರು.

IPL 2023: ಮಿನಿ ಹರಾಜಿನಲ್ಲಿ ಈ ಕನ್ನಡಿಗ ಸೇರಿದಂತೆ 3 ಆಟಗಾರರ ಮೇಲೆ ಕಣ್ಣಿಟ್ಟ ಆರ್‌ಸಿಬಿIPL 2023: ಮಿನಿ ಹರಾಜಿನಲ್ಲಿ ಈ ಕನ್ನಡಿಗ ಸೇರಿದಂತೆ 3 ಆಟಗಾರರ ಮೇಲೆ ಕಣ್ಣಿಟ್ಟ ಆರ್‌ಸಿಬಿ

ಗಾಯಗೊಂಡಿದ್ದ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಇನ್ನಿಂಗ್ಸ್ ತೆರೆಯುವ ಅವಕಾಶವನ್ನು ಪಡೆದ ಶುಭಮನ್ ಗಿಲ್, ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 20 ರನ್‌ ಗಳಿಸಿ, ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಂ ಬೌಲಿಂಗ್‌ನಲ್ಲಿ ಔಟಾಗಿದ್ದರು.

90ರ ದಶಕದ ನಂತರ ಜನಿಸಿದ ಮೊದಲ ಭಾರತದ ಆರಂಭಿಕ ಆಟಗಾರ

90ರ ದಶಕದ ನಂತರ ಜನಿಸಿದ ಮೊದಲ ಭಾರತದ ಆರಂಭಿಕ ಆಟಗಾರ

ಗಮನಾರ್ಹ ಅಂಶವೆಂದರೆ, ಬ್ರಿಸ್ಬೇನ್‌ನ ಗಬ್ಬಾದಲ್ಲಿ ಶುಭಮನ್ ಗಿಲ್ ಜನವರಿ 2021ರಲ್ಲಿ ಮೊದಲ ಬಾರಿಗೆ ಟೆಸ್ಟ್‌ನಲ್ಲಿ 90ರ ದಶಕದ ನಂತರ ಜನಿಸಿದ ಮೊದಲ ಭಾರತದ ಆರಂಭಿಕ ಆಟಗಾರರಾಗಿದ್ದರು. ಈ ವೇಳೆ ಶುಭಮನ್ ಗಿಲ್ ಭಾರತಕ್ಕೆ ಬಿರುಸಿನ ಆರಂಭವನ್ನು ನೀಡಿದ್ದರು, ಆಸ್ಟ್ರೇಲಿಯಾ ದಾಳಿಯನ್ನು ಸಮರ್ಪಕವಾಗಿ ಎದುರಿಸಿದರು.

ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ನಾಥನ್ ಲಿಯಾನ್ ನೇತೃತ್ವದ ಆಸ್ಟ್ರೇಲಿಯಾದ ಬೌಲಿಂಗ್ ದಾಳಿಯನ್ನು ಚೇತೇಶ್ವರ ಪೂಜಾರ ಜೊತೆಗೂಡಿ 328 ರನ್‌ಗಳ ಐತಿಹಾಸಿಕ ಚೇಸ್‌ಗೆ ಅತ್ಯುತ್ತಮ ಅಡಿಪಾಯ ಹಾಕಿದರು.

ಜಿಂಬಾಬ್ವೆ ವಿರುದ್ಧ 130 ರನ್ ಬಾರಿಸಿ ಚೊಚ್ಚಲ ಏಕದಿನ ಶತಕ

ಜಿಂಬಾಬ್ವೆ ವಿರುದ್ಧ 130 ರನ್ ಬಾರಿಸಿ ಚೊಚ್ಚಲ ಏಕದಿನ ಶತಕ

ಗಬ್ಬಾ ಟೆಸ್ಟ್‌ನಲ್ಲಿ 146 ಎಸೆತಗಳನ್ನು ಎದುರಿಸಿದ ನಂತರ ಶುಭಮನ್ ಗಿಲ್ 91 ರನ್ ಗಳಿಸಿ ನಾಥನ್ ಲಿಯಾನ್‌ಗೆ ವಿಕೆಟ್ ಒಪ್ಪಿಸಿದ್ದರು. ಈ ವೇಳೆ ಭಾರತವು ಆಸ್ಟ್ರೇಲಿಯಾದ ಕೋಟೆಯನ್ನು ಭೇದಿಸಲು ಮತ್ತು ಐತಿಹಾಸಿಕ ಸರಣಿ ವಿಜಯವನ್ನು ಸಾಧಿಸಲು ಸಹಾಯ ಮಾಡಿತು.

2020ರ ಬಾಕ್ಸಿಂಗ್ ಡೇ ಟೆಸ್ಟ್‌ನಲ್ಲಿ ಶುಭಮನ್ ಗಿಲ್ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದರು. ಇನ್ನು ಆಗಸ್ಟ್ 2022ರಲ್ಲಿ ಗಿಲ್ ಅವರು ಜಿಂಬಾಬ್ವೆ ವಿರುದ್ಧ ಹರಾರೆಯಲ್ಲಿ ಕೇವಲ 97 ಎಸೆತಗಳಲ್ಲಿ 130 ರನ್ ಬಾರಿಸಿ ಚೊಚ್ಚಲ ಏಕದಿನ ಶತಕವನ್ನು ಬಾರಿಸಿದರು.

12ನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕ

12ನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕ

ಇನ್ನು ಮೊದಲ ಟೆಸ್ಟ್ ಪಂದ್ಯದ ಕುರಿತು ಮಾತನಾಡುವುದಾದರೆ, ಕುಲದೀಪ್ ಯಾದವ್ ಅವರ 5 ವಿಕೆಟ್ ಗೊಂಚಲು ಪ್ರವಾಸಿ ಭಾರತ ತಂಡ ಬಾಂಗ್ಲಾದೇಶವನ್ನು 3ನೇ ದಿನದ ಬೆಳಗಿನ ಅವಧಿಯಲ್ಲಿ 150 ರನ್‌ಗಳಿಗೆ ಆಲೌಟ್ ಮಾಡಲು ಸಹಾಯ ಮಾಡಿತು. ಇದರಿಂದ ಭಾರತಕ್ಕೆ 254 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿ, ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿತು.

ಟೀ ವಿರಾಮದ ನಂತರ ಶುಭಮನ್ ಗಿಲ್ ಅವರು ಮೂರು ಅಂಕಿಗಳ ಸ್ಕೋರ್ ಗಳಿಸಿದರು. ಆರಂಭದಲ್ಲಿ ಆಶ್ಚರ್ಯಕರವಾಗಿ ಬೌಲ್ ಮಾಡುತ್ತಿದ್ದ ಬಾಂಗ್ಲಾದೇಶದ ಅರೆಕಾಲಿಕ ಬೌಲರ್‌ಗಳನ್ನು ದಂಡಿಸಿದರು. ಶುಭಮನ್ ಗಿಲ್ ಅವರು ಲಿಟನ್ ದಾಸ್ ಬೌಲಿಂಗ್‌ನಲ್ಲಿ ಬೃಹತ್ ಸಿಕ್ಸರ್‌ನೊಂದಿಗೆ 90ರ ಗಡಿ ಪ್ರವೇಶಿಸಿದರು. ಅವರು ಬೌಂಡರಿಯೊಂದಿಗೆ ಶತಕದ ಗಡಿ ತಲುಪಿದರು ಮತ್ತು ತಮ್ಮ 12ನೇ ಟೆಸ್ಟ್ ಪಂದ್ಯದಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದರು.

ಶುಭಮನ್ ಗಿಲ್ 110 ರನ್‌ಗಳಿಗೆ ಔಟಾದರು

ಶುಭಮನ್ ಗಿಲ್ 110 ರನ್‌ಗಳಿಗೆ ಔಟಾದರು

ಮೆಹಿದಿ ಹಸನ್ ಮಿರಾಜ್ ಅವರ ಓವರ್‌ನಲ್ಲಿ ಡೀಪ್ ಮಿಡ್ ವಿಕೆಟ್‌ನಲ್ಲಿ ಕ್ಯಾಚ್ ನೀಡಿದ ಶುಭಮನ್ ಗಿಲ್ 110 ರನ್‌ಗಳಿಗೆ ಔಟಾದರು. ಅವರ ಇನ್ನಿಂಗ್ಸ್‌ನಲ್ಲಿ ಗಿಲ್ ಅವರು 10 ಬೌಂಡರಿ ಮತ್ತು 3 ಸಿಕ್ಸರ್‌ಗಳನ್ನು ಬಾರಿಸಿದರು. ಆರಂಭದಲ್ಲಿ ನಾಯಕ ಕೆಎಲ್ ರಾಹುಲ್ ಅವರೊಂದಿಗೆ 70 ರನ್ ಆರಂಭಿಕ ಜೊತೆಯಾಟ ನೀಡಿದರು.

ಅನಂತರ ಚೇತೇಶ್ವರ ಪೂಜಾರ ಅವರೊಂದಿಗೆ 2ನೇ ವಿಕೆಟ್‌ಗೆ 100ಕ್ಕೂ ಅಧಿಕ ಜೊತೆಯಾಟ ನೀಡಿದರು. ಚೇತೇಶ್ವರ ಪೂಜಾರ ಕೂಡ ಶತಕ ಗಳಿಸಿದರು ಮತ್ತು ಭಾರತದ 2ನೇ ಇನ್ನಿಂಗ್ಸ್ ಮುನ್ನಡೆಯನ್ನು 500ರ ಗಡಿ ದಾಟಿಸಿದರು.

Story first published: Friday, December 16, 2022, 17:01 [IST]
Other articles published on Dec 16, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X