ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆಣಕಿದ ಇಂಗ್ಲೆಂಡ್ ಆಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದ ಕೆಎಲ್ ರಾಹುಲ್

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ 1-0 ಅಂತರದ ಮುನ್ನಡೆಯನ್ನು ಸಾಧಿಸಿದೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲನೇ ಪಂದ್ಯ ನಾಟಿಂಗ್ಹ್ಯಾಮ್ ಟ್ರೆಂಟ್ ಬ್ರಿಡ್ಜ್ ಕ್ರೀಡಾಂಗಣದಲ್ಲಿ ನಡೆಯಿತು, ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಭಾರತದ ಪರ 84 ರನ್ ಗಳಿಸಿ ಉತ್ತಮ ಆಟವನ್ನಾಡಿದರು. ಆದರೆ ಮಳೆಯ ಕಾಟಕ್ಕೆ ಸಿಲುಕಿದ ಮೊದಲನೇ ಪಂದ್ಯ ಯಾವುದೇ ಫಲಿತಾಂಶವಿಲ್ಲದೆ ನೀರಸ ಡ್ರಾನಲ್ಲಿ ಅಂತ್ಯವಾಯಿತು.

'ಅವರಿಗೂ ನಮಗೂ ವ್ಯತ್ಯಾಸವಿದೆ'; ಸೋತ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಜೋ ರೂಟ್!'ಅವರಿಗೂ ನಮಗೂ ವ್ಯತ್ಯಾಸವಿದೆ'; ಸೋತ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಜೋ ರೂಟ್!

ನಂತರ ಕ್ರಿಕೆಟ್ ಕಾಶಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 151 ರನ್‌ಗಳ ಭರ್ಜರಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಟೆಸ್ಟ್ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ 129 ರನ್ ಬಾರಿಸಿ ದಾಖಲೆಯ ಶತಕ ನಿರ್ಮಿಸಿದ ಕೆಎಲ್ ರಾಹುಲ್ ಎರಡನೇ ಇನ್ನಿಂಗ್ಸ್‌ನಲ್ಲಿ ಮಂಕಾದರು. ಆದರೂ ಸಹ ಮೊದಲನೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿ ಭಾರತ ತಂಡದ ಆಪದ್ಭಾಂಧವನಾಗಿ ನಿಂತ ಕೆಎಲ್ ರಾಹುಲ್ ಎರಡನೇ ಟೆಸ್ಟ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಮೊಹಮ್ಮದ್ ಶಮಿಯನ್ನು ಹೊಗಳಲು ಹೋಗಿ ವಿರಾಟ್ ಕೊಹ್ಲಿಯನ್ನು ಅವಮಾನಿಸಿದ ಸೆಹ್ವಾಗ್!ಮೊಹಮ್ಮದ್ ಶಮಿಯನ್ನು ಹೊಗಳಲು ಹೋಗಿ ವಿರಾಟ್ ಕೊಹ್ಲಿಯನ್ನು ಅವಮಾನಿಸಿದ ಸೆಹ್ವಾಗ್!

ಹೀಗೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಕೆಎಲ್ ರಾಹುಲ್ ಎರಡನೇ ಪಂದ್ಯದುದ್ದಕ್ಕೂ ಟೀಮ್ ಇಂಡಿಯಾ ಆಟಗಾರರನ್ನು ಇಂಗ್ಲೆಂಡ್ ತಂಡದ ಆಟಗಾರರು ಕೆಣಕಿದ್ದಕ್ಕೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಾರೆ. ಪಂದ್ಯ ಮುಗಿದ ನಂತರ ಪಂದ್ಯದ ಕುರಿತು ತಮ್ಮ ಅನುಭವವನ್ನು ಹಂಚಿಕೊಂಡ ಕೆಎಲ್ ರಾಹುಲ್ ಎದುರಾಳಿಗಳಿಗೆ ತಮ್ಮ ತಂಡದ ಆಟಗಾರರನ್ನು ಕೆಣಕಬೇಡಿ ಎಂದು ಈ ಕೆಳಕಂಡಂತೆ ಎಚ್ಚರಿಕೆ ನೀಡಿದ್ದಾರೆ.

'ನೀವು ಒಬ್ಬನನ್ನು ಕೆಣಕಿದರೆ ನಾವು ಹನ್ನೊಂದು ಜನ ನಿಲ್ಲುತ್ತೇವೆ'

'ನೀವು ಒಬ್ಬನನ್ನು ಕೆಣಕಿದರೆ ನಾವು ಹನ್ನೊಂದು ಜನ ನಿಲ್ಲುತ್ತೇವೆ'

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ವೇಳೆ ಎರಡೂ ತಂಡಗಳ ನಡುವಿನ ಆಟಗಾರರ ಮಧ್ಯೆ ನಡೆದ ಮಾತಿನ ಚಕಮಕಿಯ ಕುರಿತು ಮಾತನಾಡಿರುವ ಕೆ ಎಲ್ ರಾಹುಲ್ 'ನಮ್ಮ ತಂಡದ ಆಟಗಾರರನ್ನು ಕೆಣಕಬೇಡಿ. ನೀವು ಒಬ್ಬನನ್ನು ಕೆಣಕಿದರೆ ನಮ್ಮ ತಂಡದ ಎಲ್ಲಾ 11 ಆಟಗಾರರು ನಿಮ್ಮ ವಿರುದ್ಧ ತಿರುಗಿ ಬೀಳುತ್ತೇವೆ' ಎಂದು ಆಂಗ್ಲರಿಗೆ ಎಚ್ಚರಿಕೆ ನೀಡಿದರು.

ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ರಾಹುಲ್

ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ರಾಹುಲ್

ಪ್ರಸ್ತುತ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತದ ಪರ ಆರಂಭಿಕ ಆಟಗಾರನಾಗಿ ಮಯಾಂಕ್ ಅಗರ್ವಾಲ್ ಅಥವಾ ಶುಬ್ ಮನ್ ಗಿಲ್ ಕಣಕ್ಕಿಳಿಯಬೇಕಿತ್ತು. ಆದರೆ ಇವರಿಬ್ಬರೂ ಸಹ ಗಾಯಕ್ಕೊಳಗಾದ ಕಾರಣ ಕೆಎಲ್ ರಾಹುಲ್ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡರು. ಹೀಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ ರಾಹುಲ್ ಮೊದಲನೇ ಪಂದ್ಯದಲ್ಲಿ 84 ಮತ್ತು ಎರಡನೇ ಪಂದ್ಯದ ಮೊದಲನೇ ಇನ್ನಿಂಗ್ಸ್‌ನಲ್ಲಿ ಭರ್ಜರಿ 129 ರನ್ ಬಾರಿಸಿ ಮಿಂಚಿದರು. ಹಾಗೂ ಎರಡನೇ ಟೆಸ್ಟ್ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಸಹ ಕೆಎಲ್ ರಾಹುಲ್ ಭಾಜನರಾದರು. ಹೀಗೆ ಮೊದಲೆರಡೂ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡು ಇದೀಗ ಭಾರತ ಟೆಸ್ಟ್ ತಂಡದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.

WTC ಪಾಯಿಂಟ್ ಟೇಬಲ್ನಲ್ಲಿ 14 ಅಂಕ ಪಡೆದ್ರೂ ಟೀಮ್ ಇಂಡಿಯಾಗಿಲ್ಲ ಅಗ್ರ ಸ್ಥಾನ | Oneindia Kannada
ಆಂಗ್ಲರಿಗೆ ಮೈಕಲ್ ವಾನ್ ಕೂಡ ಎಚ್ಚರಿಕೆ ನೀಡಿದರು

ಆಂಗ್ಲರಿಗೆ ಮೈಕಲ್ ವಾನ್ ಕೂಡ ಎಚ್ಚರಿಕೆ ನೀಡಿದರು

ಹೀಗೆ ಭಾರತ ತಂಡದ ಆಟಗಾರರನ್ನು ಕೆಣಕಿದ ಇಂಗ್ಲೆಂಡ್ ಆಟಗಾರರಿಗೆ ಕೆಎಲ್ ರಾಹುಲ್ ಮಾತ್ರವಲ್ಲದೆ ಇಂಗ್ಲೆಂಡ್ ತಂಡದ ಮಾಜಿ ಕ್ರಿಕೆಟಿಗ ಮೈಕಲ್ ವಾನ್ ಕೂಡ ಎಚ್ಚರಿಕೆ ನೀಡಿದ್ದಾರೆ. ಭಾರತೀಯರು ಬಲಿಷ್ಠವಾಗಿದ್ದರೆ, ಬೆಂಕಿಯಂತಿರುವ ಅವರನ್ನು ಕೆಣಕುವುದು ಬೇಡ ಎಂದು ಆಂಗ್ಲ ಕ್ರಿಕೆಟಿಗರಿಗೆ ಮೈಕಲ್ ವಾನ್ ಎಚ್ಚರಿಕೆ ನೀಡಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Tuesday, August 17, 2021, 19:07 [IST]
Other articles published on Aug 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X