ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs Eng 5ನೇ ಟೆಸ್ಟ್: ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ಗೆ ಜಸ್ಪ್ರೀತ್ ಬುಮ್ರಾ ನಾಯಕ; ಬೆಂಬಲಕ್ಕೆ ನಿಂತ ಮಾಜಿ ಬೌಲರ್

Ind vs Eng: Former Bowler Zaheer Khan Backs Jasprit Bumrah Who Captain For The 5th Test Against England

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಅವರು ಕೆಲವು ದಿನಗಳ ಹಿಂದೆ ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು. ಈವರೆಗೂ ಅವರ ನೆಗೆಟಿವ್ ವರದಿ ಬರದ ಕಾರಣ ಜುಲೈ 1ರಂದು ಪ್ರಾರಂಭವಾಗುವ ಇಂಗ್ಲೆಂಡ್ ವಿರುದ್ಧ ಮರುನಿಗದಿಪಡಿಸಲಾದ ಐದನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ.

Ind vs Eng; 5ನೇ ಟೆಸ್ಟ್‌ನಿಂದ ರೋಹಿತ್ ಶರ್ಮಾ ಔಟ್; ಭಾರತವನ್ನು ಮುನ್ನಡೆಸಲಿದ್ದಾರೆ ಈ ವೇಗಿ

ಕಪಿಲ್ ದೇವ್ ಬಳಿಕ ಭಾರತದ ವೇಗಿಯೊಬ್ಬರು ಟೆಸ್ಟ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಇದೇ ಮೊದಲು. ಇನ್ನು ಇದೇ ವೇಳೆ ಆಟದ ಸುದೀರ್ಘ ಸ್ವರೂಪದಲ್ಲಿ ರಾಷ್ಟ್ರೀಯ ತಂಡಕ್ಕೆ ಸಂಭಾವ್ಯ ಚೊಚ್ಚಲ ನಾಯಕತ್ವದ ಪಂದ್ಯಕ್ಕೂ ಮುಂಚಿತವಾಗಿ ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಅವರು ಜಸ್ಪ್ರೀತ್ ಬುಮ್ರಾ ಅವರಲ್ಲಿ ನಂಬಿಕೆಯನ್ನು ಇರಿಸಿದ್ದಾರೆ.

ನಾಯಕ ರೋಹಿತ್ ಶರ್ಮಾಗೆ ಕೊರೊನಾ ವೈರಸ್

ನಾಯಕ ರೋಹಿತ್ ಶರ್ಮಾಗೆ ಕೊರೊನಾ ವೈರಸ್

ಕೆಎಲ್ ರಾಹುಲ್ ಅವರ ತೊಡೆಸಂದು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ನಾಯಕ ರೋಹಿತ್ ಶರ್ಮಾ ಅವರು ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂಗ್ಲೆಂಡ್ ವಿರುದ್ಧದ ಅಂತಿಮ ಪಂದ್ಯಕ್ಕೆ ಭಾರತವು ತಮ್ಮ ಅತ್ಯುತ್ತಮ ತಂಡವನ್ನು ಒಟ್ಟುಗೂಡಿಸಲು ಈ ಕ್ಷಣದವರೆಗೂ ಹೆಣಗಾಡುತ್ತಿದೆ. ಈ ಸಮಯದಲ್ಲಿ ತಂಡದ ಉಪನಾಯಕ ಜಸ್ಪ್ರೀತ್ ಬುಮ್ರಾ ಅವರು ನಾಯಕನ ಸ್ಥಾನಕ್ಕೆ ಸ್ವಯಂಚಾಲಿತವಾಗಿ ಆಯ್ಕೆಯಾಗಿದ್ದಾರೆ.

"ಜಸ್ಪ್ರೀತ್ ಬುಮ್ರಾ ಅವರು ಬರ್ಮಿಂಗ್‌ಹ್ಯಾಮ್ ಟೆಸ್ಟ್‌ನಲ್ಲಿ ಅತ್ಯಂತ ಗಮನಹರಿಸಬೇಕಾದ ಆಟಗಾರರಾಗಿರುತ್ತಾರೆ. ರೋಹಿತ್ ಶರ್ಮಾಗೆ ಕೋವಿಡ್ ಸೋಂಕು ಕಾಣಿಸಿಕೊಂಡ ನಂತರ, ತಂಡದ ಆಡಳಿತವು ಜಸ್ಪ್ರೀತ್ ಬುಮ್ರಾ ನಾಯಕತ್ವ ವಹಿಸಬೇಕಾಗಬಹುದು ಎಂದು ಯೋಚಿಸಿದ್ದಾರೆ. ಅವರು ಸ್ವಲ್ಪ ಉದ್ವೇಗ ಹೊಂದಿರಬೇಕು, ಆದರೆ ಹೆಚ್ಚುವರಿ ಜವಾಬ್ದಾರಿ ಈ ಮಟ್ಟದ ಆಟಗಾರನಿಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ".

ಆಕಸ್ಮಿಕ ಯೋಜನೆಗಳನ್ನು ಹೊಂದುವ ಬಗ್ಗೆ ದ್ರಾವಿಡ್ ಮಾತು

ಆಕಸ್ಮಿಕ ಯೋಜನೆಗಳನ್ನು ಹೊಂದುವ ಬಗ್ಗೆ ದ್ರಾವಿಡ್ ಮಾತು

ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ರೋಹಿತ್ ಶರ್ಮಾ ಪಂದ್ಯವನ್ನು ಆಡದಿದ್ದಲ್ಲಿ ಆಕಸ್ಮಿಕ ಯೋಜನೆಗಳನ್ನು ಹೊಂದುವ ಬಗ್ಗೆ ಮಾತನಾಡಿದ್ದಾರೆ ಮತ್ತು ಮೂರನೇ ಕ್ರಮಾಂಕದ ಚೇತೇಶ್ವರ ಪೂಜಾರ ಅವರನ್ನು ಆರಂಭಿಕ ಸ್ಥಾನವನ್ನು ವಹಿಸಿಕೊಳ್ಳುವಂತೆ ಕೇಳಬಹುದು. ಚೇತೇಶ್ವರ ಪೂಜಾರ ಕೌಂಟಿ ಕ್ರಿಕೆಟ್‌ನಲ್ಲಿ ಆಡಿದ್ದಾರೆ ಎಂದು ತಿಳಿಸಿದ ಜಹೀರ್ ಖಾನ್, ಅಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ಪೂಜಾರ ರಾಷ್ಟ್ರೀಯ ತಂಡದಲ್ಲಿ ಪುನರಾಗಮನಕ್ಕೆ ಕಾರಣವಾಯಿತು ಎಂದರು.

ಕವರ್ ಬ್ಯಾಟರ್ ಆಗಿ ಮಯಾಂಕ್ ಅಗರ್ವಾಲ್

ಕವರ್ ಬ್ಯಾಟರ್ ಆಗಿ ಮಯಾಂಕ್ ಅಗರ್ವಾಲ್

"ರೋಹಿತ್ ಶರ್ಮಾ ಅವರ ಕವರ್ ಬ್ಯಾಟರ್ ಆಗಿ ಮಯಾಂಕ್ ಅಗರ್ವಾಲ್ ಅವರನ್ನು ಟೆಸ್ಟ್‌ಗೆ ತಂಡಕ್ಕೆ ಸೇರಿಸಲಾಗಿದ್ದು, ರೋಹಿತ್ ಶರ್ಮಾ ಸರಿಯಾದ ಸಮಯಕ್ಕೆ ಚೇತರಿಸಿಕೊಳ್ಳದಿದ್ದರೆ ತಂಡವು ಚೇತೇಶ್ವರ ಪೂಜಾರ ಅವರನ್ನು ಇನ್ನಿಂಗ್ಸ್ ತೆರೆಯಲು ಕೇಳುತ್ತದೆ ಎಂದು ನಾನು ಭಾವಿಸುತ್ತೇನೆ. ಅವರು ಇತ್ತೀಚೆಗೆ ಈ ಪರಿಸ್ಥಿತಿಗಳಲ್ಲಿ ಕೌಂಟಿ ಕ್ರಿಕೆಟ್ ಆಡಿದ್ದರು ಮತ್ತು ಅವರು ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಆರಂಭಿಕರಲ್ಲಿ ಒಬ್ಬರಾಗಬಹುದು ಎಂದು ನಾನು ನಂಬುತ್ತೇನೆ," ಎಂದು ಮಾಜಿ ವೇಗಿ ಜಹೀರ್ ಖಾನ್ ಹೇಳಿದರು.

ಭಾರತ ಮೊದಲ ಬಾರಿಗೆ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ನ್ಯೂಜಿಲೆಂಡ್ ವಿರುದ್ಧದ ಪ್ರಚಂಡ ವೈಟ್ ವಾಶ್ ಗೆಲುವಿನ ನಂತರ ಇಂಗ್ಲೆಂಡ್ ತಂಡಕ್ಕೆ ಬಲ ಬಂದಿದೆ.

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯಕ್ಕೆ ಭಾರತದ ಸಂಭಾವ್ಯ ತಂಡ

ರೋಹಿತ್ ಶರ್ಮಾ (ನಾಯಕ), ಜಸ್ಪ್ರೀತ್ ಬುಮ್ರಾ (ಸಂಭಾವ್ಯ ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಮೊಹದ್ ಸಿರಾಜ್ , ಉಮೇಶ್ ಯಾದವ್, ಪ್ರಸಿದ್ಧ್ ಕೃಷ್ಣ, ಮಯಾಂಕ್ ಅಗರ್ವಾಲ್

Story first published: Thursday, June 30, 2022, 17:24 [IST]
Other articles published on Jun 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X