ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕಾಏಕಿ ಮೈದಾನಕ್ಕೆ ನುಗ್ಗುತ್ತಿದ್ದ ಜಾರ್ವೊಗೆ ಬಂದ ದುಸ್ಥಿತಿ ಹೇಗಿದೆ ನೋಡಿ

IND vs ENG: Jarvo arrested after colliding with Jonny Bairstow on field

ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ 3 ಪಂದ್ಯಗಳು ಈಗಾಗಲೇ ಮುಗಿದಿದ್ದು ಎರಡೂ ತಂಡಗಳು ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸುವುದರ ಮೂಲಕ ಸರಣಿಯಲ್ಲಿ ಸಮಬಲ ಕಾಯ್ದುಕೊಂಡಿವೆ.

ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಟೀಮ್ ಇಂಡಿಯಾ, ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಹೀನಾಯವಾಗಿ ಸೋಲು ಕಂಡಿತು. ಹೀಗೆ 3 ಟೆಸ್ಟ್ ಪಂದ್ಯಗಳು ಮುಗಿದ ಬಳಿಕ 1-1 ಸಮಬಲವನ್ನು ಸಾಧಿಸಿರುವ ಎರಡೂ ತಂಡಗಳು ಸದ್ಯ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ನಿರತವಾಗಿವೆ.

ಒಂದೆಡೆ ಎರಡೂ ತಂಡಗಳು ಸಹ ಪಂದ್ಯವನ್ನು ಗೆಲ್ಲಲು ಯೋಜನೆಗಳನ್ನು ಹಾಕಿಕೊಂಡು ಮೈದಾನದಲ್ಲಿ ಕಷ್ಟಪಟ್ಟು ಆಟವನ್ನು ಆಡುತ್ತಿದ್ದರೆ, ಡೇನಿಯಲ್ ಜಾರ್ವೋಸ್ ಎಂಬ ಯೂಟ್ಯೂಬರ್ ಏಕಾಏಕಿ ಮೈದಾನಕ್ಕೆ ನುಗ್ಗುವುದರ ಮೂಲಕ ಕೆಲ ಕಾಲ ಪಂದ್ಯ ಸ್ಥಗಿತವಾಗುವಂತೆ ಮಾಡುತ್ತಿದ್ದ. ಟೀಮ್ ಇಂಡಿಯಾದ ಟೆಸ್ಟ್ ಜೆರ್ಸಿ ಧರಿಸಿ ನಾನೂ ಕೂಡ ಟೀಮ್ ಇಂಡಿಯಾದ ಆಟಗಾರ, ನನಗೂ ಸಹ ಆಟವಾಡಲು ಅವಕಾಶವನ್ನು ಕೊಡಿ ಎಂದು ಏಕಾಏಕಿ ಮೈದಾನಕ್ಕೆ ನುಗ್ಗಿ ಕೆಲಕಾಲ ಗೊಂದಲದ ವಾತಾವರಣವನ್ನು ಸೃಷ್ಟಿಸುತ್ತಿದ್ದ ಜಾರ್ವೊ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಮತ್ತೆ ಟೀಮ್ ಇಂಡಿಯಾ ಸೇರಿ ಎಂದು ಧೋನಿ ಮನವೊಲಿಸಲು ಮುಂದಾದ ರವಿಶಾಸ್ತ್ರಿಗೆ ಸಿಕ್ಕ ಉತ್ತರವಿದು!ಮತ್ತೆ ಟೀಮ್ ಇಂಡಿಯಾ ಸೇರಿ ಎಂದು ಧೋನಿ ಮನವೊಲಿಸಲು ಮುಂದಾದ ರವಿಶಾಸ್ತ್ರಿಗೆ ಸಿಕ್ಕ ಉತ್ತರವಿದು!

ಸದ್ಯ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಂದು ಜಾರ್ವೊ ಮೈದಾನಕ್ಕೆ ನುಗ್ಗಿದ್ದರು. ಏಕಾಏಕಿ ಮೈದಾನಕ್ಕೆ ಎಂಟ್ರಿ ಕೊಟ್ಟ ಜಾರ್ವೊ ಭಾರತ ತಂಡದ ಪರ ಬೌಲಿಂಗ್ ಮಾಡಲು ಓಡಿಬಂದು ನಾನ್ ಸ್ಟ್ರೈಕ್ ಕೊನೆಯಲ್ಲಿ ನಿಂತಿದ್ದ ಜಾನಿ ಬೈರ್ ಸ್ಟೋಗೆ ಡಿಕ್ಕಿ ಕೂಡ ಹೊಡೆದಿದ್ದರು. ಈ ಘಟನೆ ನಡೆದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಜಾರ್ವೊ ವಿರುದ್ಧ ಅಸಮಾಧಾನಗಳು ಸಹ ವ್ಯಕ್ತವಾಗತೊಡಗಿದವು. ಏನೋ ಒಮ್ಮೆಯಾದರೆ ಸರಿ ಪ್ರತಿ ಪಂದ್ಯದಲ್ಲಿಯೂ ಈ ರೀತಿ ಮೈದಾನಕ್ಕೆ ಪ್ರವೇಶಿಸುವುದು ಸರಿಯಲ್ಲ ಎಂದು ಹಲವಾರು ಹಿರಿಯ ಮತ್ತು ಮಾಜಿ ಕ್ರಿಕೆಟಿಗರು ಜಾರ್ವೊ ವಿರುದ್ಧ ಕಿಡಿಕಾರಿದರು.

ಹೌದು, ಭಾರತ ಮತ್ತು ಇಂಗ್ಲೆಂಡ್ ನಡುವೆ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮೊದಲ ಬಾರಿಗೆ ಮೈದಾನಕ್ಕೆ ನುಗ್ಗಿದ ಜಾರ್ವೊ ನಂತರ ಭಾರತ ಮತ್ತು ಇಂಗ್ಲೆಂಡ್ ನಡುವೆ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ತೃತೀಯ ಟೆಸ್ಟ್ ಪಂದ್ಯಕ್ಕೂ ಸಹ ಅಡ್ಡಿಯನ್ನುಂಟು ಮಾಡಿದ್ದರು. ಇದೀಗ ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ನಡೆಯುತ್ತಿರುವ ಓವಲ್ ಕ್ರೀಡಾಂಗಣಕ್ಕೂ ನುಗ್ಗಿರುವ ಜಾರ್ವೊ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ವೈಯಕ್ತಿಕ ಜಗಳದಿಂದ ಅಶ್ವಿನ್‌ಗೆ ಕೊಹ್ಲಿ ತಂಡದಲ್ಲಿ ಸ್ಥಾನ ನೀಡುತ್ತಿಲ್ಲ ಎಂದು ಹೇಳಿಕೆ ನೀಡಿದ ಕ್ರಿಕೆಟಿಗ!ವೈಯಕ್ತಿಕ ಜಗಳದಿಂದ ಅಶ್ವಿನ್‌ಗೆ ಕೊಹ್ಲಿ ತಂಡದಲ್ಲಿ ಸ್ಥಾನ ನೀಡುತ್ತಿಲ್ಲ ಎಂದು ಹೇಳಿಕೆ ನೀಡಿದ ಕ್ರಿಕೆಟಿಗ!

Shardhul Thakur ಬಗ್ಗೆ ಟ್ವಿಟರ್ ಏನು ಹೇಳುತ್ತಿದೆ ಗೊತ್ತಾ | Oneindia Kannada

ಜಾರ್ವೊ ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಮೈದಾನಕ್ಕೆ ನುಗ್ಗಿದ ನಂತರ ಆತನಿಗೆ ಹೆಡಿಂಗ್ಲೆ ಕ್ರಿಕೆಟ್ ಮೈದಾನ ಪ್ರವೇಶಿಸುವಂತಿಲ್ಲ ಎಂದು ಅಜೀವ ನಿಷೇಧವನ್ನು ಹೇರಲಾಗಿತ್ತು. ಆದರೂ ಸಹ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಜಾರ್ವೊ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿಲ್ಲ. ಹೀಗಾಗಿಯೇ ಆತ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿಯೂ ಸಹ ಮೈದಾನಕ್ಕೆ ನುಗ್ಗಿದ್ದು ಹಲವಾರು ಮಾಜಿ ಕ್ರಿಕೆಟಿಗರು ಭದ್ರತೆಯ ಪ್ರಶ್ನೆಯನ್ನು ಹಾಕಿದ್ದಾರೆ, ಅಲ್ಲದೆ ಕೊರೋನಾ ವೈರಸ್ ಇರುವ ಈ ಸಂದರ್ಭದಲ್ಲಿ ಈ ರೀತಿಯ ಹುಚ್ಚಾಟಗಳು ಬೇಕಿಲ್ಲ ಎಂದು ಕಿಡಿಕಾರಿದ್ದಾರೆ. ಹೀಗೆ ಪ್ರತಿ ಪಂದ್ಯಕ್ಕೂ ಅಕ್ರಮವಾಗಿ ಮೈದಾನಕ್ಕೆ ನುಗ್ಗುತ್ತಿದ್ದ ಜಾರ್ವೊ ಪೊಲೀಸರ ಅತಿಥಿಯಾಗಿದ್ದು ಮುಂದಿನ ದಿನಗಳಲ್ಲಿ ಇಂಗ್ಲೆಂಡ್‌ನ ಎಲ್ಲಾ ಕ್ರೀಡಾಂಗಣಗಳಲ್ಲೂ ಜಾರ್ವೊಗೆ ನಿಷೇಧ ಹೇರುವ ಸಾಧ್ಯತೆಗಳಿವೆ.

Story first published: Saturday, September 4, 2021, 13:50 [IST]
Other articles published on Sep 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X