ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಎಬಿಡಿಯನ್ನು ನೆನಪಿಸುತ್ತದೆ; ರವಿಶಾಸ್ತ್ರಿ

IND vs NZ: Suryakumar Yadavs Batting is Similar To AB de Villiers Says Ravi Shastri

ಭಾರತ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅವರಂತೆಯೇ ಆಡುತ್ತಿದ್ದಾರೆ ಎಂದು ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ, ನವೆಂಬರ್ 27ರಂದು ಹ್ಯಾಮಿಲ್ಟನ್‌ನ ಸೆಡನ್ ಪಾರ್ಕ್‌ನಲ್ಲಿ ರದ್ದುಗೊಂಡ ಎರಡನೇ ಏಕದಿನ ಪಂದ್ಯದಲ್ಲಿ 32 ವರ್ಷದ ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ವಿರುದ್ಧ 25 ಎಸೆತಗಳಲ್ಲಿ 34 ರನ್ ಗಳಿಸಿದರು.

ಬಲಗೈ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಆರಂಭದಲ್ಲಿ ದೊಡ್ಡ ಹೊಡೆತಗಳನ್ನು ಆಡಲಿಲ್ಲ. ಆದರೆ ಪರಿಸ್ಥಿತಿಗಳ ಅಳತೆ ಮತ್ತು ಬ್ಲ್ಯಾಕ್ ಕ್ಯಾಪ್ಸ್ ಬೌಲಿಂಗ್ ದಾಳಿಯನ್ನು ಅರಿತ ನಂತರ ಸ್ಫೋಟಕ ಬ್ಯಾಟಿಂಗ್‌ಗೆ ಇಳಿದರು.

IND vs NZ 2nd ODI: ಮಳೆಯಿಂದ 2ನೇ ಏಕದಿನ ಪಂದ್ಯ ರದ್ದು; ಸರಣಿಯಲ್ಲಿ ನ್ಯೂಜಿಲೆಂಡ್ ಮುನ್ನಡೆIND vs NZ 2nd ODI: ಮಳೆಯಿಂದ 2ನೇ ಏಕದಿನ ಪಂದ್ಯ ರದ್ದು; ಸರಣಿಯಲ್ಲಿ ನ್ಯೂಜಿಲೆಂಡ್ ಮುನ್ನಡೆ

2021ರ ಟಿ20 ವಿಶ್ವಕಪ್ ನಂತರ ಭಾರತ ತಂಡದ ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿದ ರವಿಶಾಸ್ತ್ರಿ, ಸೂರ್ಯಕುಮಾರ್ ಯಾದವ್ ಅವರು ಅಸಾಮಾನ್ಯ ಪ್ರದೇಶಗಳಲ್ಲಿ ಶಾಟ್‌ಗಳನ್ನು ಆಡುವುದರಿಂದ ಎದುರಾಳಿ ಬೌಲರ್‌ಗಳ ನಿದ್ದೆಗಡಿಸುತ್ತಾರೆ ಎಂದು ಅಭಿಪ್ರಾಯಪಟ್ಟರು.

"ಸೂರ್ಯಕುಮಾರ್ ಯಾದವ್ ಅತ್ಯುತ್ತಮ ಟಿ20 ಆಟಗಾರರಲ್ಲದಿದ್ದರೂ, ವಿಶ್ವದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರು. ಅವರು ವಿನಾಶಕಾರಿ ಬ್ಯಾಟ್ಸ್‌ಮನ್ ಆಗಿದ್ದಾರೆ. 30-40 ಎಸೆತಗಳನ್ನು ಎದುರಿಸಿದರೆ ಸಾಕು ಪಂದ್ಯವನ್ನು ಗೆಲ್ಲಿಸುತ್ತಾನೆ, ಏಕೆಂದರೆ ಸೂರ್ಯಕುಮಾರ್ ಆ ವೇಗದಲ್ಲಿ ಸ್ಕೋರ್ ಮಾಡುತ್ತಾನೆ. ಅವನು ಆಡುವ ರೀತಿಯ ಹೊಡೆತಗಳಿಂದ ಎದುರಾಳಿಗಳನ್ನು ನಿರಾಶೆಗೊಳಿಸುತ್ತಾನೆ," ಎಂದು ರವಿಶಾಸ್ತ್ರಿ ಹೇಳಿದರು.

IND vs NZ: Suryakumar Yadavs Batting is Similar To AB de Villiers Says Ravi Shastri

"ಸೂರ್ಯಕುಮಾರ್ ಯಾದವ್ ತಮ್ಮ ಅತ್ಯುತ್ತಮ ಆಟದಿಂದಾಗಿ ಎಬಿ ಡಿವಿಲಿಯರ್ಸ್ ಅವರಂತೆಯೇ ಕಾಣುತ್ತಾರೆ. ಎಬಿಡಿ ವಿಶೇಷ ಇನ್ನಿಂಗ್ಸ್‌ಗಳಲ್ಲಿ ಆಡಿದಾಗ ಅವರು ಎದುರಾಳಿಗಳನ್ನು ಹಿಮ್ಮೆಟ್ಟಿಸುತ್ತಿದ್ದರು ಮತ್ತು ಸೂರ್ಯಕುಮಾರ್ ಅದನ್ನು ಮಾಡುತ್ತಾರೆ," ಎಂದು ರವಿಶಾಸ್ತ್ರಿ ಪ್ರೈಮ್ ವಿಡಿಯೋಗೆ ತಿಳಿಸಿದ್ದಾರೆ.

IND vs NZ 2nd ODI: ಆಡುವ 11ರ ಬಳಗದಿಂದ ಸಂಜು ಸ್ಯಾಮ್ಸನ್ ಮತ್ತೆ ಡ್ರಾಪ್; ಫ್ಯಾನ್ಸ್ ಗರಂIND vs NZ 2nd ODI: ಆಡುವ 11ರ ಬಳಗದಿಂದ ಸಂಜು ಸ್ಯಾಮ್ಸನ್ ಮತ್ತೆ ಡ್ರಾಪ್; ಫ್ಯಾನ್ಸ್ ಗರಂ

ಮೌಂಟ್ ಮೌಂಗನುಯಿಯ ಬೇ ಓವಲ್‌ನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಸ್ಫೋಟಕ ಶತಕ ಗಳಿಸಿದರು. ನಂತರ ಸೂರ್ಯಕುಮಾರ್ ಯಾದವ್ ಆಕ್ಲೆಂಡ್‌ನ ಈಡನ್ ಪಾರ್ಕ್‌ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಳಪೆಯಾಗಿ ಔಟಾದರು.

ಇದೇ ವೇಳೆ ಸೂರ್ಯಕುಮಾರ್ ಯಾದವ್ ಅವರು ಆಡುವ ದಿಟ್ಟ ಹೊಡೆತಗಳನ್ನು ಹೊಡೆಯುವಾಗ ಒಂದೋ ಎರಡೋ ಇನ್ನಿಂಗ್ಸ್‌ಗಳಲ್ಲಿ ವಿಫಲರಾಗುತ್ತಾರೆ ಎಂದು ರವಿಶಾಸ್ತ್ರಿ ಹೇಳಿದರು.

World Cup 2023: ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಎಚ್ಚರಿಕೆಗೆ ಖಡಕ್ ತಿರುಗೇಟು ಕೊಟ್ಟ ಕ್ರೀಡಾ ಸಚಿವWorld Cup 2023: ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಎಚ್ಚರಿಕೆಗೆ ಖಡಕ್ ತಿರುಗೇಟು ಕೊಟ್ಟ ಕ್ರೀಡಾ ಸಚಿವ

"ಸೂರ್ಯಕುಮಾರ್ ಯಾದವ್ ಅವರ ಸರಾಸರಿಗಳ ಸಂಖ್ಯೆ ಮತ್ತು ಆಟವನ್ನು ನೋಡಿದರೆ, ಅವರು ಎಂತಹ ಇನ್ನಿಂಗ್ಸ್ ಹೊಂದಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಅವರು 15-20 ರನ್‌ಗಳ ಗಡಿಯನ್ನು ದಾಟಿದರೆ, ಮುಂದೆ ದೊಡ್ಡ ಇನ್ನಿಂಗ್ಸ್ ಆಡುವುದರಲ್ಲಿ ಎರಡು ಮಾತಿಲ್ಲ," ಎಂದು ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಹೇಳಿದರು.

"ಸೂರ್ಯಕುಮಾರ್ ಯಾದವ್ ತನ್ನ ಸಾಮರ್ಥ್ಯ ಮತ್ತು ಆಕ್ರಮಣಕಾರಿ ಪ್ರವೃತ್ತಿಯನ್ನು ಬೆಂಬಲಿಸುತ್ತೇನೆ. ಪ್ರತಿ ಸಲವೂ ಆಕ್ರಮಣಕಾರಿಯಾಗಲು ಸಾಧ್ಯವಿಲ್ಲ, ಆಗ ವಿಫಲಗೊಳ್ಳುತ್ತಾನೆ. ಆದರೆ ಅವರು ಆಡಿದಾಗ ಅದ್ಭುತವಾಗಿರುತ್ತಾನೆ," ಎಂದು ಅವರು ಹೇಳಿದರು.

Story first published: Sunday, November 27, 2022, 16:08 [IST]
Other articles published on Nov 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X