
ಟೀಂ ಇಂಡಿಯಾಕ್ಕ ಹ್ಯಾಮಿಲ್ಟನ್ ಆತಂಕ
ಹ್ಯಾಮಿಲ್ಟನ್‌ನ ಸೆಡೆನ್ ಪಾರ್ಕ್‌ನಲ್ಲಿ ಎರಡನೇ ಏಕದಿನ ಪಂದ್ಯ ನಡೆಯಲಿದ್ದು, ಈ ಮೈದಾನದಲ್ಲಿ ಭಾರತದ ಕಳಪೆ ದಾಖಲೆ ಹೊಂದಿದೆ. 1981ರಿಂದ ಈ ಮೈದಾನದಲ್ಲಿ ಭಾರತ ತಂಡ ಇದುವರೆಗೂ ನ್ಯೂಜಿಲೆಂಡ್ ವಿರುದ್ಧ 7 ಏಕದಿನ ಪಂದ್ಯಗಳನ್ನಾಡಿದ್ದು, 1 ಪಂದ್ಯದಲ್ಲಿ ಮಾತ್ರ ಜಯಗಳಿಸಿದೆ. 2020ರಲ್ಲಿ ಭಾರತ ಇಲ್ಲಿ ತನ್ನ ಕೊನೆಯ ಏಕದಿನ ಪಂದ್ಯವನ್ನಾಡಿತ್ತು.
2009ರಲ್ಲಿ ಧೋನಿ ನೇತೃತ್ವದಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಜಯ ಸಾಧಿಸಿದ್ದು ಬಿಟ್ಟರೆ ಇಲ್ಲಿ ಮತ್ತೆ ಭಾರತ ನ್ಯೂಜಿಲೆಂಡ್ ವಿರುದ್ಧ ಗೆದ್ದಿಲ್ಲ. ಐಸಿಸಿ ಪಂದ್ಯಾವಳಿಗಳಲ್ಲಿ ಭಾರತ ಹ್ಯಾಮಿಲ್ಟನ್ ಮೈದಾನದಲ್ಲಿ ಜಿಂಬಾಬ್ವೆ ಮತ್ತು ಐರ್ಲೆಂಡ್ ವಿರುದ್ಧ ಆಡಿದ್ದು, ಆ ಪಂದ್ಯಗಳಲ್ಲಿ ಜಯ ಸಾಧಿಸಿದೆ.
ಏಷ್ಯಾಕಪ್‌ಗೆ ಭಾರತ ತಂಡ ಬರದಿದ್ದರೆ, 2023ರ ವಿಶ್ವಕಪ್‌ನಲ್ಲಿ ಪಾಕ್ ಭಾಗವಹಿಸಲ್ಲ; ಪಿಸಿಬಿ ಮುಖ್ಯಸ್ಥ

ಹ್ಯಾಮಿಲ್ಟನ್ ಪಿಚ್, ಹವಾಮಾನ
ಟಿ20 ಸರಣಿ ವೇಳೆಯಲ್ಲಿ ಮಳೆ ಮೂರು ಪಂದ್ಯಗಳಿಗೆ ಅಡ್ಡಿಪಡಿಸಿತ್ತು. ಮೊದಲನೇ ಪಂದ್ಯ ಮಳೆಯಿಂದಾಗಿ ರದ್ದಾದರೆ, ಮೂರನೇ ಪಂದ್ಯ ಮಳೆಯ ಕಾರಣ ಡಿಎಲ್‌ಎಸ್ ಪ್ರಕಾರ ಟೈನಲ್ಲಿ ಅಂತ್ಯವಾಗಿತ್ತು. ಆಕ್ಲೆಂಡ್‌ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಮಾತ್ರ ಮಳೆ ಅಡ್ಡಿಯಾಗಲಿಲ್ಲ.
ಆದರೆ, ಹ್ಯಾಮಿಲ್ಟನ್‌ನಲ್ಲಿ ನಡೆಯುವ ಎರಡನೇ ಏಕದಿನ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡುವ ಸಾಧ್ಯತೆ ಇದೆ. ವ್ಯಾಪಕ ಮಳೆಯ ಮುನ್ಸೂಚನೆ ಇಲ್ಲದಿದ್ದರೂ, ಕಡಿಮೆ ಪ್ರಮಾಣದಲ್ಲಿ ಮಳೆ ಬೀಳುವ ಸಾಧ್ಯತೆ ಇದೆ.
ಹ್ಯಾಮಿಲ್ಟನ್‌ನ ಸೆಡೆನ್ ಪಾರ್ಕ್ ಪಿಚ್ ಬ್ಯಾಟಿಂಗ್‌ಗೆ ಅನುಕೂಲಕರವಾಗಿದೆ. ಏಕದಿನ ಪಂದ್ಯದಲ್ಲಿ ಈ ಮೈದಾನದ ಸರಾಸರಿ ಸ್ಕೋರ್ 240 ಆಗಿದೆ. ಇತ್ತೀಚೆಗೆ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 333 ರನ್ ಗಳಿಸಿತ್ತು. ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯ ಕೂಡ ಹೈ ಸ್ಕೋರಿಂಗ್ ಗೇಮ್ ಆಗುವ ಸಾಧ್ಯತೆ ಇದೆ.

ಎರಡೂ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಸಂಜು ಸ್ಯಾಮ್ಸನ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಅರ್ಶ್ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ನ್ಯೂಜಿಲೆಂಡ್: ಫಿನ್ ಅಲೆನ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಟಾಮ್ ಲ್ಯಾಥಮ್, ಡೇರಿಲ್ ಮಿಚೆಲ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಆಡಮ್ ಮಿಲ್ನೆ, ಮ್ಯಾಟ್ ಹೆನ್ರಿ, ಟಿಮ್ ಸೌಥಿ, ಲಾಕಿ ಫರ್ಗುಸನ್