ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SA 1st ODI: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ ತಂಡದ ಸಂಭಾವ್ಯ 11 ಆಟಗಾರರು

South africa

ಟಿ20 ಸರಣಿಯಲ್ಲಿ ಸೋತು ಮುಗ್ಗರಿಸಿರುವ ದಕ್ಷಿಣ ಆಫ್ರಿಕಾ ಅಂತಿಮ ಚುಟುಕು ಪಂದ್ಯವನ್ನ ಗೆದ್ದು ಜಯದ ಹಾದಿಗೆ ಮರಳಿದೆ. ಟಿ20 ವಿಶ್ವಕಪ್‌ಗೂ ಮುನ್ನ ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ಭಾರತವನ್ನ ಎದುರಿಸಲಿದ್ದು, ಕಳೆದ ಟಿ20 ಸರಣಿಯಲ್ಲಿ ಎದುರಿಸಿದ ತಂಡಕ್ಕಿಂದ ವಿಭಿನ್ನವಾಗಿದೆ.

ಟಿ20 ಸರಣಿಯನ್ನ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2-1 ಅಂತರದಲ್ಲಿ ಗೆಲವು ಸಾಧಿಸಿತು. ಆದ್ರೀಗ ಏಕದಿನ ಸರಣಿಯಲ್ಲಿ ಭಾರತವನ್ನ ಶಿಖರ್ ಧವನ್ ಮುನ್ನಡೆಸಲಿದ್ದು, ಟೆಂಬಾ ಬವುಮಾ ಭಾರತದ ಎರಡನೇ ರೂಪದ ಟೀಂ ಇಂಡಿಯಾವನ್ನ ಎದುರಿಸಲಿದ್ದಾರೆ.

ಅಕ್ಟೋಬರ್ 6ರಂದು ಲಕ್ನೋದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಉಭಯ ತಂಡಗಳು ಮುಖಾಮುಖಿಯಾಗಲಿದ್ದು, ದಕ್ಷಿಣ ಆಫ್ರಿಕಾ ತನ್ನ ಮರ್ಯಾದೆ ಉಳಿಸಿಕೊಳ್ಳಲು ಈ ಸರಣಿಯನ್ನಾದ್ರೂ ಗೆಲ್ಲಬೇಕೆಂದು ಗುರಿಯಿಟ್ಟಿದೆ. ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸಂಭಾವ್ಯ ಹನ್ನೊಂದು ಆಟಗಾರರು ಯಾರು ಎಂಬುದನ್ನ ಈ ಕೆಳಗೆ ಕಾಣಬಹುದು.

ಕ್ವಿಂಟನ್ ಡಿಕಾಕ್

ಕ್ವಿಂಟನ್ ಡಿಕಾಕ್

ಸ್ಫೋಟಕ ಎಡಗೈ ಬ್ಯಾಟರ್‌ ಹಾಗೂ ವಿಕೆಟ್ ಕೀಪರ್ ಕ್ವಿಂಟನ್ ಡಿಕಾಕ್ ಮೊದಲ ಏಕದಿನ ಪಂದ್ಯದಲ್ಲಿ ಓಪನರ್ ಆಗಿ ಕಣಕ್ಕಿಳಿಯಲಿದ್ದಾರೆ. ಕಳೆದ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿರುವ ಕ್ವಿಂಟನ್ ಡಿಕಾಕ್ 2 ಪಂದ್ಯಗಳಲ್ಲಿ 69ರ ಬ್ಯಾಟಿಂಗ್ ಸರಾಸರಿಯಲ್ಲಿ 138 ರನ್ ಕಲೆಹಾಕಿದರು. ಇಷ್ಟಲ್ಲದೆ ಎರಡು ಅರ್ಧಶತಕ ಕೂಡ ದಾಖಲಿಸಿದ ಕ್ವಿಂಟನ್ ಡಿಕಾಕ್ ಅಜೇಯ 69 ರನ್ ಕಲೆಹಾಕಿದರು.

ರೀಜಾ ಹೆಂಡ್ರಿಕ್ಸ್‌

ರೀಜಾ ಹೆಂಡ್ರಿಕ್ಸ್‌

ಮೊದಲ ಏಕದಿನ ಪಂದ್ಯಕ್ಕೆ ದಕ್ಷಿಣ ಆಫ್ರಿಕಾ ಮತ್ತೊಬ್ಬ ಓಪನರ್ ಆಗಿ ರೀಜಾ ಹೆಂಡ್ರಿಕ್ಸ್‌ ಕಣಕ್ಕಿಳಿಬಹುದು. ಕಳೆದ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಸ್ಕ್ವಾಡ್‌ನಲ್ಲಿದ್ರೂ ಸಹ ಒಂದು ಪಂದ್ಯದಲ್ಲೂ ಆಡುವ ಅವಕಾಶ ಸಿಗಲಿಲ್ಲ. ಏಕದಿನ ಕ್ರಿಕೆಟ್ ಫಾರ್ಮೆಟ್‌ನಲ್ಲಿ ಈತ ಉತ್ತಮ ರೆಕಾರ್ಡ್‌ ಹೊಂದಿದ್ದು, 24 ಪಂದ್ಯಗಳಲ್ಲಿ 565 ರನ್ ಕಲೆಹಾಕಿದ್ದಾರೆ.

25.68ರ ಬ್ಯಾಟಿಂಗ್ ಸರಾಸರಿಯಲ್ಲಿ ಬ್ಯಾಟ್ ಬೀಸಿರುವ ಈತ 1 ಶತಕ ಮತ್ತು 3 ಅರ್ಧಶತಕ ದಾಖಲಿಸಿದ್ದಾರೆ.

ಜನ್ನೆಮನ್ ಮಲನ್

ಜನ್ನೆಮನ್ ಮಲನ್

ದಕ್ಷಿಣ ಆಫ್ರಿಕಾದ ಮತ್ತೋವ ಸ್ಫೋಟಕ ಬ್ಯಾಟರ್ ಜನ್ನೆಮನ್ ಮಲನ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ. ಕಳೆದ ಟಿ20 ಸರಣಿಯಲ್ಲಿ ತಂಡದಲ್ಲಿ ಸ್ಥಾನ ಪಡೆಯದ ಈತ ಏಕದಿನ ಸ್ಕ್ವಾಡ್‌ನಲ್ಲಿ ಅವಕಾಶ ಪಡೆದಿದ್ದಾರೆ. ಈ ಬಲಗೈ ಬ್ಯಾಟರ್ 20 ಏಕದಿನ ಪಂದ್ಯಗಳಲ್ಲಿ 896 ರನ್ ಕಲೆಹಾಕಿದ್ದಾರೆ. ಅದೂ ಕೂಡ 52.71ರ ಬ್ಯಾಟಿಂಗ್ ಸರಾಸರಿಯಲ್ಲಿ 3 ಶತಕ ಹಾಗೂ 4 ಅರ್ಧಶತಕ ದಾಖಲಿಸಿದ್ದಾರೆ.

Ind vs SA: ಟೀಮ್ ಇಂಡಿಯಾದಲ್ಲಿ ಸ್ಥಾನ ಭದ್ರಪಡಿಸಲು ಮತ್ತೊಂದು ಅವಕಾಶ ಪಡೆದ ಆಟಗಾರರು

ಏಡನ್ ಮಕ್ರಾಮ್

ಏಡನ್ ಮಕ್ರಾಮ್

ಭರ್ಜರಿ ಫಾರ್ಮ್‌ನಲ್ಲಿರುವ ದಕ್ಷಿಣ ಆಫ್ರಿಕಾದ ಬ್ಯಾಟರ್ ಏಡೆನ್ ಮಕ್ರಾಮ್ ಮಧ್ಯಮ ಕ್ರಮಾಂಕದಲ್ಲಿ ದಕ್ಷಿಣ ಆಫ್ರಿಕಾಗೆ ಬಲ ತುಂಬಲಿದ್ದಾರೆ. ಟಿ20 ಸರಣಿಯಲ್ಲಿ ಸಾಧಾರಣ ಪ್ರದರ್ಶನ ನೀಡಿರುವ ಈತ 2 ಇನ್ನಿಂಗ್ಸ್‌ನಲ್ಲಿ 134 ಸ್ಟ್ರೈಕ್‌ರೇಟ್‌ನಲ್ಲಿ 58 ರನ್ ಕಲೆಹಾಕಿದ್ರು. ದಕ್ಷಿಣ ಆಫ್ರಿಕಾದ ಟಾಪ್ ಆರ್ಡರ್ ವೈಫಲ್ಯಗೊಂಡ್ರೆ ತಂಡಕ್ಕೆ ಆಧಾರವಾಗುವ ಸಾಮರ್ಥ್ಯ ಇವರಲ್ಲಿದೆ.

ಟೆಂಬಾ ಬವುಮಾ

ಟೆಂಬಾ ಬವುಮಾ

ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ಮುನ್ನಡೆಸಿದ್ದ ಟೆಂಬಾ ಬವುಮಾ ಏಕದಿನ ಸರಣಿಯಲ್ಲಿ ತಂಡದ ನೇತೃತ್ವ ವಹಿಸಲಿದ್ದಾರೆ. ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಟೆಂಬಾ ಕಳೆದ 3 ಪಂದ್ಯಗಳಿಂದ ಗಳಿಸಿದ್ದು ಕೇವಲ 3 ರನ್‌ಗಳು. ಮೊದಲೆರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ಟೆಂಬಾ 3ನೇ ಪಂದ್ಯದಲ್ಲಿ ಗಳಿಸಿದ್ದು 3 ರನ್.

ಓಪನರ್ ಆಗಿ ಸಕ್ಸಸ್ ಕಾಣಲು ಸಾಧ್ಯವಾಗದ ಕಾರಣ ಟೆಂಬಾ ಬವುಮಾ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಸಾಧ್ಯತೆಯಿದೆ.

IND vs SA 1st ODI: ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಆಡುವ 11ರ ಬಳಗ; ಪಾಟಿದಾರ್, ಮುಕೇಶ್ ಪದಾರ್ಪಣೆ?

ಡೇವಿಡ್ ಮಿಲ್ಲರ್‌

ಡೇವಿಡ್ ಮಿಲ್ಲರ್‌

ದಕ್ಷಿಣ ಆಫ್ರಿಕಾ ಸ್ಫೋಟಕ ಬ್ಯಾಟರ್, ಎಕ್ಸ್ ಫ್ಯಾಕ್ಟರ್ ಡೇವಿಡ್ ಮಿಲ್ಲರ್ ಐದು ಅಥವಾ ಆರನೇ ಕ್ರಮಾಂಕದಲ್ಲಿ ಎಂದಿನಂತೆ ಬ್ಯಾಟ್ ಮಾಡಲಿದ್ದಾರೆ. ಟಿ20 ಸರಣಿಯಲ್ಲಿ ಅದ್ಭುತ ಪ್ರರ್ದನ ನೀಡಿದ ಮಿಲ್ಲರ್ ಎರಡನೇ ಟಿ20 ಪಂದ್ಯದಲ್ಲಿ ಅಜೇಯ ಶತಕ ಸಿಡಿಸಿ ಮಿಂಚಿದ್ರೂ ಸಹ ತಂಡವನ್ನ ಗೆಲುವಿನ ದಡ ತಲುಪಿಸಲು ಸಾಧ್ಯವಾಗಲಿಲ್ಲ.

ಆದ್ರೆ ಮಿಲ್ಲರ್ 3 ಪಂದ್ಯಗಳಿಂದ 125 ರನ್ ಕಲೆಹಾಕಿದ್ದು, ಕೆಳಕ್ರಮಾಂಕದಲ್ಲಿ ಪ್ರಮುಖ ಬ್ಯಾಟರ್ ಆಗಿದ್ದಾರೆ.

ವೇಯ್ನ್ ಪರ್ನೆಲ್

ವೇಯ್ನ್ ಪರ್ನೆಲ್

ಭಾರತ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ವೇಯ್ನ್ ಪರ್ನೆಲ್ ಆಲ್‌ರೌಂಡರ್ ಆಗಿ ಗುರುತಿಸಿಕೊಳ್ಳಲಿದ್ದಾರೆ. ಪರ್ನೆಲ್ ಒಂದು ಇನ್ನಿಂಗ್ಸ್‌ನಲ್ಲಿ 24 ರನ್ ಕಲೆಹಾಕಿದ್ದಲ್ಲದೆ 2 ವಿಕೆಟ್ ಸಹ ಕಬಳಿಸಿದ್ರು.

ಹರಿಣಗಳ ಎಡಗೈ ಬೌಲರ್ 54.50ರ ಬೌಲಿಂಗ್ ಸರಾಸರಿಯಲ್ಲಿ 9.08ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದು ಏಕದಿನ ಸರಣಿಯಲ್ಲಿ ಮಿಂಚುವ ವಿಶ್ವಾಸ ಹೊಂದಿದ್ದಾರೆ.

T20 World Cup 2022: ಟಿ20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾ ಪ್ರಯಾಣ ಬೆಳೆಸಿದ ಟೀಂ ಇಂಡಿಯಾ

ಡ್ವೇನ್ ಪ್ರಿಟೋರಿಯಸ್

ಡ್ವೇನ್ ಪ್ರಿಟೋರಿಯಸ್

ಡ್ವೇನ್ ಪ್ರಿಟೋರಿಯಸ್ ದಕ್ಷಿಣ ಆಫ್ರಿಕಾದ ಮತ್ತೊಬ್ಬ ಆಲ್‌ರೌಂಡರ್ ಆಗಿ ಮಿಂಚಬಹುದು. ಬಲಗೈ ವೇಗಿ ತಾನು ಆಡಿದ ಏಕೈಕ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಪ್ರಿಟೋರಿಯಸ್ ಮೂರನೇ ಟಿ20 ಪಂದ್ಯದಲ್ಲಿ 7.42 ಎಕಾನಮಿಯಲ್ಲಿ 3 ವಿಕೆಟ್ ಕಬಳಿಸಿದರು. ಈತ ಅಂತಿಮ ಟಿ20 ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿರುವ ಕಾರಣ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಪಡೆಯುವ ಸಾಧ್ಯತೆ ಹೊಂದಿದ್ದಾರೆ.

ಕಗಿಸೊ ರಬಾಡ

ಕಗಿಸೊ ರಬಾಡ

ದಕ್ಷಿಣ ಆಫ್ರಿಕಾದ ಪ್ರಮುಖ ಪೇಸ್ ಬೌಲರ್ ಕಗಿಸೊ ರಬಾಡ ಟಿ20 ಸರಣಿಯಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾದರು. 3 ಪಂದ್ಯಗಳಲ್ಲಿ 48.50 ಸರಾಸರಿಯಲ್ಲಿ ರಬಾಡ ಗಳಿಸಿದ್ದು ಕೇವಲ 2 ವಿಕೆಟ್‌. ಈತನ ಬೌಲಿಂಗ್ ಸರಾಸರಿ 48.50 ಮತ್ತು ಎಕಾನಮಿ 8.08 ದಕ್ಷಿಣ ಆಫ್ರಿಕಾಗೆ ನುಂಗಲಾರದ ತುತ್ತಾಯಿತು. ಆದ್ರೆ ಏಕದಿನ ಸರಣಿಯಲ್ಲಿ ರಬಾಡ ಹರಿಣಗಳ ಬೌಲಿಂಗ್ ನೊಗ ಹೊರಲಿದ್ದಾರೆ.

ಎರ್ನಿಕ್ ನೊರ್ಕಿಯಾ

ಎರ್ನಿಕ್ ನೊರ್ಕಿಯಾ

ದಕ್ಷಿಣ ಆಫ್ರಿಕಾ ವೇಗದ ಬೌಲರ್ ಎರ್ನಿಕ್ ನೊರ್ಕಿಯಾ ಆಫ್ರಿಕಾ ಬೌಲಿಂಗ್ ಬತ್ತಳಿಕೆಯ ಮತ್ತೊಂದು ಅಸ್ತ್ರ. ಈ ಬಲಗೈ ಬೌಲರ್ 2 ಟಿ20 ಪಂದ್ಯಗಳಲ್ಲಿ ಪಡೆದಿದ್ದು ಕೇವಲ 1 ವಿಕೆಟ್. 73.00 ಬೌಲಿಂಗ್ ಸರಾಸರಿ ಮತ್ತು 12ಕ್ಕೂ ಹೆಚ್ಚು ಎಕಾನಮಿಯಲ್ಲಿ ಬೌಲಿಂಗ್ ಮಾಡಿದ ನೊರ್ಕಿಯಾ ಲುಂಗಿ ಎನ್‌ಗಿಡಿಗಿಂತ ದುಬಾರಿಯಾದ್ರೂ ಸಹ ಉತ್ತಮ ಬೌಲರ್ ಆಗಿದ್ದಾರೆ.

ಲುಂಗಿ ಎನ್‌ಗಿಡಿ ಎಕಾನಮಿ 14+ ಮಟ್ಟದಲ್ಲಿ ಬೌಲಿಂಗ್ ಮಾಡುವ ಮೂಲಕ ಸಾಕಷ್ಟು ಟೀಕೆಗೆ ಒಳಗಾಗಿದ್ದಾರೆ.

ಕೇಶವ್ ಮಹಾರಾಜ

ಕೇಶವ್ ಮಹಾರಾಜ

ದಕ್ಷಿಣ ಆಫ್ರಿಕಾದಲ್ಲಿ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿರುವ ಸ್ಪಿನ್ನರ್ ಕೇಶವ ಮಹಾರಾಜ, ಆಫ್ರಿಖಾದ ಪ್ರಮುಖ ಪ್ಲೇಯರ್ ಆಗಿದ್ದಾರೆ. ಎಡಗೈ ಸ್ಪಿನ್ನರ್ ಕಳೆದ ಟಿ20 ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. 3 ಪಂದ್ಯಗಳಲ್ಲಿ 4 ವಿಕೆಟ್ ಪಡೆದಿರುವ ಈತ 19.50 ಸರಾಸರಿ ಮತ್ತು 7.09 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಈತ ಉತ್ತಮ ಫಾರ್ಮ್‌ನಲ್ಲಿದ್ದು ಟೀಂ ಇಂಡಿಯಾ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟರ್‌ಗಳನ್ನ ಕಾಡಲು ರೆಡಿಯಾಗಿದ್ದಾರೆ.

Story first published: Thursday, October 6, 2022, 10:42 [IST]
Other articles published on Oct 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X